Twitter down: ಒಂದೇ ತಿಂಗಳಲ್ಲಿ 2ನೇ ಬಾರಿಗೆ ಟ್ವಿಟರ್ ಡೌನ್!
ಟ್ವಿಟರ್‌ನಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಿದ್ದರೂ, ನಿರೀಕ್ಷೆ ಮಾಡಿದಷ್ಟು ಆದಾಯ ಕಂಪನಿಯಿಂದ ಬರುತ್ತಿಲ್ಲ ಎಂದು ಮಾಲೀಕ ಎಲಾನ್ ಮಸ್ಕ್ ಹೇಳಿದ ದಿನವೇ, ಟ್ವಿಟರ್ ವಿಶ್ವದಾದ್ಯಂತ ಡೌನ್ ಆಗಿದೆ.
ಬೆಂಗಳೂರು (ಜು.16): ಎಲಾನ್ ಮಸ್ಕ್ ಒಡೆತನದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಸೇವೆಯಲ್ಲಿ ವಿಶ್ವದಾದ್ಯಂತ ವ್ಯತ್ಯಯವಾಗುದೆ. ಡೌನ್‌ಡಿಟೆಕ್ಟರ್ ಪ್ರಕಾರ, ಪ್ರಪಂಚದಾದ್ಯಂತ ಲಕ್ಷಕ್ಕೂ ಅಧಿಕ ಜನರು ತಮ್ಮ ಟ್ವಿಟರ್ ಖಾತೆಯನ್ನು ನೋಡಲು ಸಾಧ್ಯವಾಗಿತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಆದರೆ, ಟ್ವಿಟರ್ ಮಾತ್ರ ಈವರೆಗೂ ಈ ಸಮಸ್ಯೆಯನ್ನು ಒಪ್ಪಿಕೊಂಡಿಲ್ಲ. ಟ್ವಿಟರ್ ಇಂದಿಗೂ ನಷ್ಟದಲ್ಲಿರುವ ಕಂಪನಿಯೇ ಆಗಿದೆ. ಕಂಪನಿಗೆ ನಗದು ಹರಿವಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದ್ದು, ಜಾಹೀರಾತಿನ ಆದಾಯದಲ್ಲಿ ಶೇ.50ರಷ್ಟು ಕುಸಿತವಾಗಿದೆ ಎಂದು ಎಲಾನ್ ಮಸ್ಕ್ ಹೇಳಿದ ದಿನವೇ ಟ್ವಿಟರ್ ಡೌನ್ ಆಗಿರುವುದು ವಿಶೇಷವಾಗಿದೆ. ಇದು ಒಂದೇ ತಿಂಗಳಲ್ಲಿ ಟ್ವಿಟರ್ ಸೇವೆಯಲ್ಲಿ 2ನೇ ಬಾರಿಗೆ ವ್ಯತ್ಯಯವಾಗಿದೆ. ಟ್ವಿಟರ್ ಡೌನ್ ಆಗಿರುವ ವಿಚಾರ ಸ್ವತಃ ಟ್ವಿಟರ್‌ನಲ್ಲಿಯೇ ಭಾರತದಾದ್ಯಂತ 5ನೇ ಸ್ಥಾನದಲ್ಲಿತ್ತು. ರಾತ್ರಿ 7.50ರ ವೇಳೆಗೆ ದೊಡ್ಡ ಪ್ರಮಾಣದಲ್ಲಿ ಟ್ವಿಟರ್ ಡೌನ್ ಆಗಿತ್ತು ಎಂದು ಡೌನ್ ಡಿಟೆಕ್ಟರ್ ವರದಿ ಮಾಡಿದೆ. ಇನ್ನು ಸಮಸ್ಯೆ ಆಗಿರುವ ಬಳಕೆದಾರರ ಬಗ್ಗೆ ಹೇಳುವುದಾದರೆ, ಶೇ. 59ರಷ್ಟು ಮಂದಿ ಅಪ್ಲಿಕೇಶನ್‌ನಲ್ಲಿ ಸಮಸ್ಯೆ ಆಗಿದೆ ಎಂದು ಹೇಳಿದ್ದರೆ. ಶೇ. 31ರಷ್ಟು ಮಂದಿ ಟ್ವಿಟರ್‌ಅನ್ನು ವೆಬ್‌ಸೈಟ್ ಮೂಲಕ ಲಾಗಿನ್ ಮಾಡೋದು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ. ಶೇ. 10ರಷ್ಟು ಮಂದಿ ಸರ್ವರ್ ಕನೆಕ್ಷನ್ ಸಮಸ್ಯೆ ಇದೆ ಎಂದಿದ್ದಾರೆ.
ಇನ್ನು ಟ್ವಿಟರ್ ತನ್ನ ಸಮಸ್ಯೆಗೆ ತನ್ನ ಪಾಪ್ಯುಲರ್ ಸಂದೇಶವಾಗಿರುವ, 'ಕೆನಾಟ್ ರಿಟ್ರೈವ್ ಟ್ವೀಟ್ಸ್ ಎಟ್ ದಿಸ್ ಟೈಮ್, ಪ್ಲೀಸ್ ಟ್ರೈ ಅಗೇನ್ ಲೇಟರ್' ಅನ್ನು ತೋರಿಸುತ್ತಿದೆ ಎಂದು ಬಳಕೆದಾರರು ಹೇಳಿದ್ದಾರೆ.
ಶನಿವಾರ ಟ್ವಿಟರ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಮಾಲೀಕ ಎಲಾನ್ ಮಸ್ಕ್, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್ ಇನ್ನೂ ನಷ್ಟದ ಕಂಪನಿಯಾಗಿ ಉಳಿದಿದೆ ಎಂದಿದ್ದರು. ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮಸ್ಕ್, 'ಜಾಹೀರಾತು ಆದಾಯದಲ್ಲಿ ಸುಮಾರು 50% ಕುಸಿತ ಮತ್ತು ಹೆಚ್ಚಿನ ಸಾಲದಿಂದಾಗಿ ಕಂಪನಿಯ ನಗದು ಹರಿವು ಇನ್ನೂ ನಕಾರಾತ್ಮಕವಾಗಿಯೇ ಉಳಿದಿದೆ ಎಂದಿದ್ದರು. ಬೇರೆ ಯಾವುದನ್ನಾದರೂ ಸಾಧಿಸುವ ಮೊದಲು ನಾವು ಧನಾತ್ಮಕ ನಗದು ಹರಿವನ್ನು ತಲುಪಬೇಕು. ಹಾಗಿದ್ದರೂ, ಜಾಹೀರಾತಿನ ಆದಾಯದ ಕುಸಿತವು ಯಾವ ಸಮಯದಲ್ಲಿ ಉಂಟಾಗುತ್ತದೆ ಎಂಬುದನ್ನು ಮಸ್ಕ್ ಸ್ಪಷ್ಟವಾಗಿ ಹೇಳಲಿಲ್ಲ. 2021 ರಲ್ಲಿ $5.1 ಶತಕೋಟಿಯಿಂದ 2023 ರಲ್ಲಿ ಟ್ವಿಟರ್ ಸುಮಾರು $3 ಬಿಲಿಯನ್ ಆದಾಯವನ್ನು ಗಳಿಸುವ ಹಾದಿಯಲ್ಲಿದೆ ಎಂದು ಮಸ್ಕ್ ಈ ಹಿಂದೆ ಹೇಳಿದ್ದರು.
ಎಲಾನ್ ಮಸ್ಕ್, ಮಾರ್ಕ್ ಜುಕರ್ ಬರ್ಗ್ ವೈರತ್ವ ಮರೆತು ಸ್ನೇಹಿತರಾದ್ರಾ? ವೈರಲ್ ಆಯ್ತು ಇಬ್ಬರ ಈ ಫೋಟೋ
ಆದಾಯವನ್ನು ಹೆಚ್ಚಿಸಲು ಮಸ್ಕ್ ಟ್ವಿಟರ್‌ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ್ದಾರೆ. ಅವರು ತಮ್ಮ ಪ್ಲಾಟ್‌ಫಾರ್ಮ್‌ನಿಂದ ಗಳಿಸಲು ಜಾಹೀರಾತುದಾರರನ್ನು ಮಾತ್ರ ಅವಲಂಬಿಸಲು ಬಯಸುವುದಿಲ್ಲ. ಈ ಕಾರಣಕ್ಕಾಗಿ, ಅವರು ವಿಶ್ವಾದ್ಯಂತ ನೀಲಿ ಟಿಕ್ ಸಬ್‌ಸ್ಕ್ರಪ್ಶನ್ ಯೋಜನೆಯನ್ನು ಪ್ರಾರಂಭಿಸಿದರು. ಇತ್ತೀಚೆಗೆ, ಅವರು ಟ್ವಿಟರ್‌ನಲ್ಲಿ ಪೋಸ್ಟ್‌ಗಳನ್ನು ಓದಲು ದೈನಂದಿನ ಮಿತಿಯನ್ನು ನಿಗದಿಪಡಿಸಿದ್ದರು. ಟಿಕ್ ಮಾರ್ಕ್ ಹೊಂದಿರುವವರು ಈಗ ಒಂದು ದಿನದಲ್ಲಿ ಕೇವಲ 10,000 ಪೋಸ್ಟ್‌ಗಳನ್ನು ಓದಬಹುದು. ಟಿಕ್ ಇರದ ಬಳಕೆದಾರರು ಒಂದು ಸಾವಿರ ಪೋಸ್ಟ್‌ಗಳನ್ನು ಓದಬಹುದು, ಆದರೆ ಹೊಸ ಬಳಕೆದಾರರು ದಿನಕ್ಕೆ 500 ಪೋಸ್ಟ್‌ಗಳನ್ನು ಮಾತ್ರ ಓದಬಹುದು ಎಂದು ತಿಳಿಸಿದ್ದರು.
ಪರ್ಫೆಕ್ಟ್ ಫಿಗರ್‌ಗಾಗಿ ಫೋಟೋ ಎಡಿಟ್ ಮಾಡಿದ ಜಾನ್ವಿ ಕಪೂರ್ ಟ್ರೋಲ್!