ಎಲಾನ್ ಮಸ್ಕ್, ಮಾರ್ಕ್ ಜುಕರ್ ಬರ್ಗ್ ವೈರತ್ವ ಮರೆತು ಸ್ನೇಹಿತರಾದ್ರಾ? ವೈರಲ್ ಆಯ್ತು ಇಬ್ಬರ ಈ ಫೋಟೋ

ವಿಶ್ವದ ಶ್ರೀಮಂತ ಉದ್ಯಮಿಗಳಾದ ಎಲಾನ್ ಮಸ್ಕ್  ಹಾಗೂ ಮಾರ್ಕ್ ಜುಕರ್ ಬರ್ಗ್ ಬದ್ಧ ವೈರತ್ವ ಮರೆತು ಸ್ನೇಹಿತರಂತೆ ಬೀಚ್ ನಲ್ಲಿ ಮೋಜು-ಮಸ್ತಿ ಮಾಡುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಸೃಷ್ಟಿರುವ ಈ ಫೋಟೋಗಳಿಗೆ 'ಗುಡ್ ಎಂಡಿಂಗ್' ಎಂಬ ಶೀರ್ಷಿಕೆ ನೀಡಿ ಟ್ವಿಟ್ಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.

AI Generated Good Ending Pics Of Elon Musk Mark Zuckerberg Go Viral Twitter Boss Reacts anu

Business Desk: ವಿಶ್ವದ ಶ್ರೀಮಂತ ಉದ್ಯಮಿಗಳು ಹಾಗೂ ಪ್ರಸಿದ್ಧ ಟೆಕ್ ಕಂಪನಿಗಳ ಮುಖ್ಯಸ್ಥರಾಗಿರುವ ಎಲಾನ್ ಮಸ್ಕ್ ಹಾಗೂ ಮಾರ್ಕ್ ಜುಕರ್ ಬರ್ಗ್ ಇಬ್ಬರೂ ವೈರತ್ವದ ಮೂಲಕವೇ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಇಬ್ಬರು ಉದ್ಯಮಿಗಳಿಗೆ ಒಬ್ಬರ ಮುಖ ಇನ್ನೊಬ್ಬರಿಗೆ ನೋಡಿದರಾಗದು, ಅಷ್ಟು ಬದ್ಧ ವೈರತ್ವ. ಕೇಜ್ ಮ್ಯಾಚ್ ಚಾಲೆಂಜ್ ಗೆ ಸಂಬಂಧಿಸಿ ಇಬ್ಬರೂ ಪ್ರತಿಕ್ರಿಯಿಸಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇನ್ನು ಮೆಟಾ ಸಂಸ್ಥೆ ಟ್ವಿಟ್ಟರ್ ಗೆ ಪ್ರತಿಸ್ಪರ್ಧಿಯಾಗಿ 'ಥ್ರೆಡ್ಸ್ ' ಪ್ರಾರಂಭಿಸಿದ್ದು ಇಬ್ಬರ ನಡುವಿನ ವೈರತ್ವಕ್ಕೆ ಮತ್ತಷ್ಟು ಬೆಂಕಿ ಸುರಿದಿತ್ತು. ಮೆಟಾದ ಈ ಕ್ರಮವನ್ನು ಖಂಡಿಸಿದ್ದ ಮಸ್ಕ್,  'ಟ್ವಿಟ್ಟರ್ ವ್ಯಾಪಾರ ರಹಸ್ಯಗಳು ಹಾಗೂ ಇತರ ಬೌದ್ಧಿಕ ಆಸ್ತಿಯನ್ನು ಜುಕರ್ ಬರ್ಗ್ ದುರ್ಬಳಕೆ ಮಾಡಿಕೊಂಡಿದ್ದಾರೆ' ಎಂದು ಆರೋಪಿಸಿದ್ದರು. ಅಲ್ಲದೆ, ಥ್ರೆಡ್ಸ್‌ ವಿರುದ್ಧ ಕೇಸ್‌ ಹಾಕೋದಾಗಿಯೂ ಬೆದರಿಸಿದ್ದರು.  ಈ ನಡುವೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಟ್ವಿಟ್ಟರ್ ಬಳಕೆದಾರರೊಬ್ಬರು ಎಲಾನ್ ಮಸ್ಕ್ ಹಾಗೂ ಮಾರ್ಕ್ ಜುಕರ್ ಬರ್ಗ್ ನಡುವೆ ವೈರತ್ಯ ಕೊನೆಯಾಗಿ ಉತ್ತಮ ಸಂಬಂಧ ಏರ್ಪಟ್ಟಿರುವ ಮಾದರಿಯ ಚಿತ್ರವನ್ನು ರಚಿಸಿದ್ದಾರೆ. ಈ ಚಿತ್ರ ಅಥವಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

'ಸರ್ ಡಾಗೆ ಆಫ್ ದಿ ಕಾಯಿನ್' ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಎಐ ಆಧಾರಿತ ಎಲಾನ್ ಮಸ್ಕ್ ಹಾಗೂ ಮಾರ್ಕ್ ಜುಕರ್ ಬರ್ಗ್ ಫೋಟೋಗಳನ್ನು ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ. ಕಡಲ ಕಿನಾರೆಯಲ್ಲಿ ಈ ಇಬ್ಬರು ಬಿಲಿಯನೇರ್ ರಜೆಯನ್ನು ಮಜಾ ಮಾಡುವ ರೀತಿಯಲ್ಲಿ ಫೋಟೋಗಳನ್ನು ಸೃಷ್ಟಿಸಲಾಗಿದೆ.  ಈ ಇಬ್ಬರೂ ಕ್ಯಾಷುಯಲ್  ಟಿ-ಶರ್ಟ್ಸ್ ಹಾಗೂ ಡೆನಿಮ್ಸ್ ಧರಿಸಿಕೊಂಡು ಈ ಇಬ್ಬರೂ ಬೀಚ್ ನಲ್ಲಿ ಕೈ-ಕೈ ಹಿಡಿದುಕೊಂಡು ಓಡುತ್ತಿರುವ, ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಇನ್ನೆರಡು ಫೋಟೋಗಳಲ್ಲಿ ಈ ಇಬ್ಬರೂ ಪ್ರತ್ಯೇಕವಾಗಿ ನೀರಿನಲ್ಲಿ ಆಟವಾಡುತ್ತಿರುವಂತೆ ಚಿತ್ರಿಸಲಾಗಿದೆ. ಈ ಫೋಟೋಗಳನ್ನು 'ದಿ ಗುಡ್ ಎಂಡಿಂಗ್' ಎಂಬ ಶೀರ್ಷಿಕೆಯಡಿಯಲ್ಲಿ ಹೃದಯ ಇಮೋಜಿ ಜೊತೆಗೆ ಟ್ವೀಟ್ ಮಾಡಲಾಗಿದೆ. 

ಈ ಫೋಟೋಗಳನ್ನು ಹಂಚಿಕೊಂಡ ಬಳಿಕ ಏಳು ಮಿಲಿಯನ್ ಜನರು ವೀಕ್ಷಿಸಿದ್ದಾರೆ ಹಾಗೂ 1.3ಲಕ್ಷ ಜನರು ಲೈಕ್ ಮಾಡಿದ್ದಾರೆ. ಇನ್ನು ಈ ಟ್ವೀಟ್ ಗೆ ಟ್ವಿಟ್ಟರ್ ಹಾಗೂ ಟೆಸ್ಲಾ ಸಿಇಒ ಎಲಾನ್ ಮ್ಸಕ್ ಸ್ವತಃ ಪ್ರತಿಕ್ರಿಯಸಿರೋದು ವಿಶೇಷ. ಈ ಪೋಸ್ಟ್ ಗೆ ನಗುವ ಇಮೋಜಿ ಬಳಸಿ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಮಿಮ್ಸ್ ಗೆ ಇವರಿಬ್ಬರೂ ಒಟ್ಟಿಗೆ ಸೇರಿ ಇದೇ ರೀತಿಯ ಫೋಟೋ ಶೂಟ್ ಮಾಡಬೇಕು ಎಂದು ಒಬ್ಬರು ಟ್ವಿಟ್ಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು 'ಸಿರಿ, ಲವ್ ಲೈಕ್ ದಿಸ್ ಬೈ ನತಾಶ ಬೆಡ್ಡಿಂಗ್ ಫೀಲ್ಡ್ ಪ್ಲೇ ಮಾಡು' ಎಂದು ಹೇಳಿದ್ದಾರೆ. 'ಇದು ಅತ್ಯಂತ ಸೂಕ್ತವಾದ ಅಂತ್ಯ ಎಂಬುದು ನನ್ನ ನಂಬಿಕೆ ಕೂಡ' ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. 'ವ್ಹಾವ್ ಕಪಲ್ ಗೋಲ್ಸ್' ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದರು. 

ಥ್ರೆಡ್ಸ್‌ ಲಾಂಚ್‌ ಬಳಿಕ ಕಂಗಾಲಾದ ಎಲಾನ್‌ ಮಸ್ಕ್‌: ಟ್ವಿಟ್ಟರ್‌ ಖರೀದಿಗೆ ಒತ್ತಾಯಿಸಿದ ಕಾನೂನು ಸಂಸ್ಥೆ ಮೇಲೆ ಕೇಸ್‌!

ಇನ್ನು ಎಲಾನ್‌ ಮಸ್ಕ್‌ ಒಡೆತನದ ಎಕ್ಸ್ ಕಾರ್ಪ್ ಕಂಪನಿ, ಟ್ವಿಟ್ಟರ್‌ ಅನ್ನು 44 ಬಿಲಿಯನ್‌ ಡಾಲರ್‌ಗೆ ಖರೀದಿಸಲು ಸಹಾಯ ಮಾಡಿದ ವಾಚ್‌ಟೆಲ್ ಲಾ ಫರ್ಮ್‌ ಪಡೆದ $90 ಮಿಲಿಯನ್ ಶುಲ್ಕದ ಹೆಚ್ಚಿನ ಭಾಗವನ್ನು ವಾಪಸ್‌ ಪಡೆಯಲು ಬಯಸಿದೆ ಎಂದು ತಿಳಿದುಬಂದಿದೆ. ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಖರೀದಿಯನ್ನು ಪೂರ್ಣಗೊಳಿಸಲು ಒತ್ತಾಯಿಸಲಾಗುತ್ತದೆ ಎಂದು ಸಂತೋಷಪಟ್ಟ ಮಾಜಿ ಟ್ವಿಟ್ಟರ್‌ ಕಾರ್ಯನಿರ್ವಾಹಕರ ಬಳಿ ಭಾರಿ ಶುಲ್ಕ ಸ್ವೀಕರಿಸುವ ಮೂಲಕ ವಾಚ್‌ಟೆಲ್ ಪರಿಸ್ಥಿತಿಯ ಲಾಭವನ್ನು ಪಡೆದಿದೆ ಎಂದು ಟ್ವಿಟ್ಟರ್‌ ಸಿಇಒ ಆರೋಪಿಸಿದ್ದಾರೆ. 


 

Latest Videos
Follow Us:
Download App:
  • android
  • ios