TRAI ನಿರ್ದೇಶನದಂತೆ ಬಿಡುಗಡೆಯಾದ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್‌ಗಳು ಏರ್‌ಟೆಲ್ ಆಪ್ ಹಾಗೂ ಥರ್ಡ್ ಪಾರ್ಟಿ ಆಪ್‌ಗಳಲ್ಲಿ ಕಾಣಿಸುತ್ತಿಲ್ಲ. ಗ್ರಾಹಕರಿಗೆ ಈ ಪ್ಲಾನ್‌ಗಳು ಲಭ್ಯವಾಗದೆ ಇರುವುದು TRAI ನಿಯಮಗಳ ಉಲ್ಲಂಘನೆ ಎಂಬ ಆರೋಪ ಕೇಳಿಬಂದಿದೆ.

ನವದೆಹಲಿ: TRAI ನಿರ್ದೇಶನದ ಮೇರೆಗೆ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಕಡಿಮೆ ಬೆಲೆಯ ಕಾಲಿಂಗ್ ಪ್ಲಾನ್‌ಗಳನ್ನು ಪರಿಚಯಿಸಿವೆ. ಆದರೆ ಕಡಿಮೆ ಬೆಲೆಯ ಪ್ಲಾನ್ ಪ್ರಯೋಜನ ಗ್ರಾಹಕರಿಗೆ ಲಭ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಗ್ರಾಹಕರು ಥರ್ಡ್ ಪಾರ್ಟಿ ಆಪ್‌ಗಳಾದ Phonepe ಅಥವಾ Gpay ಮೂಲಕ ರೀಚಾರ್ಜ್ ಮಾಡಿಕೊಳ್ಳುತ್ತಾರೆ. ಆದ್ರೆ ಈ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ Airtel ನ ಕೆಲ ಪ್ಲಾನ್‌ಗಳು ಕಾಣಿಸಲ್ಲ. ಇಷ್ಟು ಮಾತ್ರವಲ್ಲ ಈ ಕಡಿಮೆ ಬೆಲೆಯ ಪ್ಲಾನ್‌ಗಳು Airtel ನ ಅಧಿಕೃತ ಆಪ್‌ನಲ್ಲಿಯೂ ಕಾಣಿಸುತ್ತಿಲ್ಲ ಎಂದು ವರದಿಯಾಗಿದೆ.

Airtelನಿಂದ ಗ್ರಾಹಕರಿಗೆ ಮೋಸ?

ಒಂದು ವೇಳೆ ಕಡಿಮೆ ಬೆಲೆಯ ಪ್ಲಾನ್‌ ಮೊತ್ತವನ್ನು ಹಾಕಿ ಸರ್ಚ್ ಮಾಡಿದ್ರೂ ಇದು ಗ್ರಾಹಕರಿಗೆ ಗೋಚರಿಸುವುದಿಲ್ಲ. ಕೆಲ ದಿನಗಳ ಹಿಂದೆ TRAI ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಕಡಿಮೆ ಬೆಲೆಯ ಕಾಲಿಂಗ್ ಪ್ಲಾನ್ ಬಿಡುಗಡೆಗೊಳಿಸುವಂತೆ ಸೂಚಿಸಿತ್ತು. ಈ ಸೂಚನೆ ಮೇರೆಗೆ ಹೊಸ ಪ್ಲಾನ್‌ಗಳನ್ನು ಬಿಡುಗಡೆಗೊಳಿಸಲಾಗಿತ್ತು. ಆದ್ರೆ Airtel ಆಪ್ ಮತ್ತು ಥರ್ಡ್ ಪಾರ್ಟಿ ಆಪ್‌ಗಳಲ್ಲಿ ಕಡಿಮೆ ಬೆಲೆಯ ಯಾವುದೇ ಪ್ಲಾನ್‌ಗಳು ಕಾಣಿಸುತ್ತಿಲ್ಲ. ಆಪ್ ಜೊತೆ ತಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಈ ಪ್ಲಾನ್‌ ಕಾಣಿಸಬೇಕು ಎಂದು TRAI ಹೇಳಿತ್ತು. ಆದ್ರೆ ಇಲ್ಲಿಯೂ Airtelನಿಂದ ಗ್ರಾಹಕರಿಗೆ ಮೋಸವಾಗುತ್ತಿದೆ ಎಂದು NBT ವರದಿ ಮಾಡಿದೆ.

TRAI ನಿಯಮಗಳ ಉಲ್ಲಂಘನೆ?

Airtel ಟೆಲಿಕಾಂ ಕಂಪನಿ 185, 203 ಮತ್ತು 206 ರೂಪಾಯಿಯ ಕಾಲಿಂಗ್ ಪ್ಲಾನ್ ಬಿಡುಗಡೆಗೊಳಿಸಿತ್ತು. ಆದ್ರೆ ಈ ಮೂರು ಪ್ಲಾನ್‌ಗಳು ಏರ್‌ಟೆಲ್ ವೆಬ್‌ಸೈಟ್, ಏರ್‌ಟೆಲ್ ಆಪ್ ಮತ್ತು ಥರ್ಡ್ ಪಾರ್ಟಿ ಆಪ್‌ಗಳಲ್ಲಿ ಕಾಣಿಸುತ್ತಿಲ್ಲ. ಗ್ರಾಹಕರು ಸರ್ಚಿಂಗ್ ಬಾಕ್ಸ್‌ನಲ್ಲಿ ಅಮೌಂಟ್ ಹಾಕಿ ಹುಡುಕಿದರೂ ಗ್ರಾಹಕರಿಗೆ ಈ ಪ್ಲಾನ್‌ಗಳು ಸಿಗುತ್ತಿಲ್ಲ. ಈ ಮೂಲಕ ಏರ್‌ಟೆಲ್ ಕಂಪನಿ TRAI ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪ ಕೇಳಿ ಬಂದಿದೆ.

TRAI-ಆದೇಶಿತ ಯೋಜನೆಗಳು ಜಿಯೋದ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಎರಡರಲ್ಲೂ ಸ್ಪಷ್ಟವಾಗಿ ಗೋಚರಿಸುತ್ತವೆ, ಆದರೆ ಪ್ರಸ್ತುತ ಏರ್‌ಟೆಲ್‌ನಲ್ಲಿ ಕಾಣಿಸುತ್ತಿರೋದು ಬಹುದೊಡ್ಡ ಚರ್ಚೆಯ ವಿಷಯವಾಗಿದೆ.

Airtel ಕಡಿಮೆ ಬೆಲೆಯ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳೋದು ಹೇಗೆ?

  • ಮೊದಲು ಏರ್‌ಟೆಲ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • ನಂತರ ಅಲ್ಲಿ ಸೂಚಿಸಲಾಗುವ ಸ್ಥಳದಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ. ಅಲ್ಲಿ ನಿಮಗೆ ಎಲ್ಲಾ ಪ್ಲಾನ್‌ಗಳು ಗೋಚರಿಸುತ್ತವೆ.
  • ವೆಬ್‌ಸೈಟ್‌ನಲ್ಲಿ ಕಾಣಿಸುವ TRAI-mandated ಸೆಕ್ಷನ್ ಮೇಲೆ ಕ್ಲಿಕ್ಕಿಸಿ. ಇಲ್ಲಿ ನಿಮಗೆ ಎಲ್ಲಾ ಕಡಿಮೆ ಬೆಲೆಯ ಪ್ಲಾನ್‌ಗಳು ಗೋಚರಿಸುತ್ತವೆ.
  • ಈಗ ಸರ್ಚ್ ಬಾರ್‌ನಲ್ಲಿ 185, 203 ಮತ್ತು 206 ರೂಪಾಯಿಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಿ.
  • ನಂತರ ಸೂಚಿಸಿದ ಮೊತ್ತವನ್ನು ಯುಪಿಐ ಅಥವಾ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಿ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಿ.