2027ರಲ್ಲಿ ಒಟ್ಟು ಐದು ಗ್ರಹಣಗಳು ಸಂಭವಿಸಲಿವೆ. ಇದರಲ್ಲಿ ಎರಡು ಸೂರ್ಯಗ್ರಹಣ ಮತ್ತು ಮೂರು ಚಂದ್ರಗ್ರಹಣಗಳು ಸೇರಿವೆ. ಭಾರತದಲ್ಲಿ ಈ ಗ್ರಹಣಗಳ ಗೋಚರತೆ ಮತ್ತು ವಿಶೇಷತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
2027ರಲ್ಲಿ ಒಟ್ಟು ಐದು ಬಾರಿ ಗ್ರಹಣ ಸಂಭವಿಸಲಿದೆ. ಎರಡು ಬಾರಿ ಸೂರ್ಯಗ್ರಹಣ ಮತ್ತ ಮೂರು ಬಾರಿ ಚಂದ್ರಗ್ರಹಣ ಜರುಗಲಿದೆ. ಭಾರತದಲ್ಲಿ ಈ ಗ್ರಹಣಗಳ ಗೋಚರತೆ ಮತ್ತು ಸೂತಕ ಅವಧಿಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.
6 ಫೆಬ್ರವರಿ 2027
2027ರ ಮೊದಲ ಗ್ರಹಣ ಫೆಬ್ರವರಿ 6ರಂದು ಸಂಭವಿಸಲಿದ್ದು, ಈ ವೇಳೆ ಚಂದ್ರನು ಸೂರ್ಯನ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಸೂರ್ಯನ ಸುತ್ತ ಪ್ರಕಾಶಮಾನವಾದ ಉಂಗುರ ಆಕಾರ ಸೃಷ್ಟಿಯಾಗಲಿರೋ ಕಾರಣ ಇದನ್ನು ಬೆಂಕಿಯ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಆದ್ರೆ ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಸುಮಾರು 7 ನಿಮಿಷ 51 ಸೆಕೆಂಡುಗಳವರೆಗೆ ಇರುತ್ತದೆ (ಬ್ರೆಜಿಲ್ ಕರಾವಳಿಯ ಸಮೀಪ), ಇದು ಸಾಮಾನ್ಯ ಆನ್ಯುಲರ್ ಗ್ರಹಣಗಳಿಗಿಂತ ಸಾಕಷ್ಟು ದೀರ್ಘವಾಗಿದೆ.
21ನೇ ಫೆಬ್ರವರಿ 2027
2027ರ ಎರಡನೇ ಫೆಬ್ರವರಿ 21ರಂದು ಸಂಭವಿಸಲಿದೆ. ಇದು ಪೆನಂಬ್ರಲ್ ಚಂದ್ರಗ್ರಹಣವಾಗಿದ್ದು, ಚಂದ್ರನು ಭೂಮಿಯ ಹೊರಗಿನ ನೆರಳಿನ ಮೂಲಕ ಹಾದುಹೋಗುತ್ತದೆ. ಈ ಕಾರಣದಿಂದ ಚಂದ್ರನ ಹೊಳಪನ್ನು ಕ್ಷೀಣಗೊಳಿಸುತ್ತದೆ. ಯುನಿವರ್ಸಲ್ ಟೈಮ್ (UT) ಪ್ರಕಾರ ಇದು ಫೆಬ್ರವರಿ 20ರ ರಾತ್ರಿ 21:12 ಗಂಟೆಗೆ ಆರಂಭವಾಗಿ, ಫೆಬ್ರವರಿ 21ರ 01:13 ಗಂಟೆಗೆ ಕೊನೆಗೊಳ್ಳುತ್ತದೆ. ಈ ಗ್ರಹಣವನ್ನು ಬರಿಗಣ್ಣಿನಿಂದ ಅಥವಾ ಬೈನಾಕ್ಯುಲರ್ ಮೂಲಕ ಸುರಕ್ಷಿತವಾಗಿ ವೀಕ್ಷಿಸಬಹುದು
18ನೇ ಜುಲೈ 2027
ಇದು ವರ್ಷದ ಮೂರನೇ ಗ್ರಹಣವಾಗಿದ್ದು, ಪೆನಂಬ್ರಲ್ ಚಂದ್ರಗ್ರಹಣವೂ ಆಗಿರುತ್ತದೆ. ಭೂಮಿಯ ಮಸುಕಾದ ನೆರಳು ಚಂದ್ರನ ಮೇಲೆ ಬೀಳುವ ಮೂಲಕ ಖಗೋಳ ವಿದ್ಯಮಾನ ಜರಗುತ್ತದೆ. ಈ ರೀತಿಯ ಗ್ರಹಣವನ್ನು ಸಾಮಾನ್ಯವಾಗಿ ಸುಲಭವಾಗಿ ಪತ್ತೆಹಚ್ಚಲಾಗುವುದಿಲ್ಲ. ದಕ್ಷಿಣ ಮತ್ತು ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ಪ್ರದೇಶಗಳಲ್ಲಿ ಚಂದ್ರನು ಗೋಚರಿಸುವ ಸ್ಥಳಗಳಲ್ಲಿ ಇದು ಕಾಣಿಸುತ್ತದೆ; ಪೂರ್ವ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ಚಂದ್ರೋದಯದ ಸಮಯದಲ್ಲಿ ಕಾಣಬಹುದು. ಗರಿಷ್ಠ ಗ್ರಹಣವು ಸುಮಾರು 16:02 UT (ಭಾರತೀಯ ಕಾಲಮಾನದ ಪ್ರಕಾರ ರಾತ್ರಿ ಸುಮಾರು 9:32 ರ ಸುಮಾರಿಗೆ) ಸಂಭವಿಸುತ್ತದೆ.
2ನೇ ಆಗಸ್ಟ್ 2027
2027ರ ನಾಲ್ಕನೇ ಗ್ರಹಣ ಇದಾಗಿದ್ದು, ಇದು ಸಂಪೂರ್ಣ ಮತ್ತು ಮಹತ್ವದ ಸೂರ್ಯಗ್ರಹಣವಾಗಿರಲಿದೆ. ಇದು 21ನೇ ಶತಮಾನದಲ್ಲಿ ಭೂಮಿಯ ಮೇಲಿಂದ ಗೋಚರಿಸುವ ಅತ್ಯಂತ ದೀರ್ಘಾವಧಿಯ ಸಂಪೂರ್ಣ ಸೂರ್ಯಗ್ರಹಣವಾಗಿದ್ದು, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಚುವುದರಿಂದ ಹಗಲಿನಲ್ಲೇ ಸುಮಾರು 6 ನಿಮಿಷ 23 ಸೆಕೆಂಡುಗಳ ಕಾಲ ಕತ್ತಲು ಆವರಿಸಲಿದೆ. ದಕ್ಷಿಣ ಸ್ಪೇನ್, ಮೊರಾಕೊ, ಅಲ್ಜೀರಿಯಾ, ಟುನೀಶಿಯಾ, ಲಿಬಿಯಾ, ಈಜಿಪ್ಟ್, ಸುಡಾನ್, ಸೌದಿ ಅರೇಬಿಯಾ, ಯೆಮೆನ್ ಮತ್ತು ಸೊಮಾಲಿಯಾ ದೇಶಗಳಲ್ಲಿ ಸಂಪೂರ್ಣ ಕತ್ತಲು ಆವರಿಸಲಿದೆ.
ಭಾರತದಲ್ಲಿ ಭಾಗಶಃ (Partial Solar Eclipse) ಗೋಚರವಾಗಲಿದೆ. ಭಾರತೀಯ ಕಾಲಮಾನ (IST) ಮಧ್ಯಾಹ್ನ 3:34 ರಿಂದ ಸಂಜೆ 5:53 ರವರೆಗೆ ವಿವಿಧ ನಗರಗಳಲ್ಲಿ ಗ್ರಹಣ ಗೋಚರಿಸಲಿದೆ.ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಮಧ್ಯಾಹ್ನ 3:51 ರ ಸುಮಾರಿಗೆ ಆರಂಭವಾಗಿ ಸಂಜೆ 5:46 ರವರೆಗೆ ಭಾಗಶಃ ಗ್ರಹಣವನ್ನು ವೀಕ್ಷಿಸಬಹುದು.
17ನೇ ಆಗಸ್ಟ್ 2027
ಇದು 2027ರ ಕೊನೆಯ ಪೆನಂಬ್ರಲ್ ಚಂದ್ರಗ್ರಹಣವಾಗಿದೆ. ಈ ಗ್ರಹಣವು ಉತ್ತರ ಮತ್ತು ದಕ್ಷಿಣ ಅಮೆರಿಕಾ, ಪೆಸಿಫಿಕ್ ಪ್ರದೇಶ ಹಾಗೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನ ಕೆಲವು ಭಾಗಗಳಲ್ಲಿ ಗೋಚರಿಸಲಿದ್ದು, ಭಾರತದಲ್ಲಿ ಸೂತಕದ ನಿಯಮಗಳು ಅನ್ವಯಿಸುವುದಿಲ್ಲ. ಭಾರತದಲ್ಲಿ ಈ ಗ್ರಹಣವು ಗೋಚರವಾಗುವುದಿಲ್ಲ.












