ಶ್ರೀಹರಿಕೋಟಾ(ಮೇ.18): ಚಂದ್ರಯಾನ-2 ಯೋಜನೆಗೆ ಭರದ ಸಿದ್ಧತೆ ನಡೆಸುತ್ತಿರುವ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಭವಿಷ್ಯದ ಯೋಜನೆಗಳ ಕುರಿತೂ ಮಾಹಿತಿ ನೀಡಿದೆ.

ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಯುವ ವಿಜ್ಞಾನ ಸಮಾವೇಶ(ಯುವಿಕಾ) ಉದ್ದೇಶಿಸಿ ಮಾತನಾಡಿದ ಇಸ್ರೋ ಮುಖ್ಯಸ್ಥ ಡಾ. ಕೆ.ಸಿವಾನ್, ಸಂಸ್ಥೆ ಒಟ್ಟು ಏಳು ಅಂತರಗ್ರಹ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಚಂದ್ರಯಾನ-2 ಬಳಿಕ ಭವಿಷ್ಯದಲ್ಲಿ ಇಸ್ರೋ ಹಲವು ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಪ್ರಮುಖವಾಗಿ ಸೌರವ್ಯೂಹದ ಇತರ ಗ್ರಹಗಳಾದ ಶುಕ್ರ ಗ್ರಹ, ಮಂಗಳ ಗ್ರಹ, ಚಂದ್ರಯಾನ-3 ಯೋಜನೆಗಳು ಸೇರಿವೆ ಎಂದು ಸಿವಾನ್ ಹೇಳಿದರು.

ಇದೇ ವೇಳೆ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್-1 ಯೋಜನೆಯನ್ನೂ ಕೂಡ ಇಸ್ರೋ ಹಮ್ಮಿಕೊಂಡಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.