Asianet Suvarna News Asianet Suvarna News

ದಿಗಂತದಲ್ಲಿ ತ್ರಿವರ್ಣ ಧ್ವಜ ಹಾರಿಸೋಣ: ಇಸ್ರೋ ಯುವಿಕಾ ಸೇರೋಣ!

ಬನ್ನಿ ಭವಿಷ್ಯದ ವಿಜ್ಞಾನಿಗಳಾಗೋಣ| ಭಾವೀ ವಿಜ್ಞಾನಿಗಳ ಹುಟುಕಾಟದಲ್ಲಿ ಇಸ್ರೋ| ಯುವ ವಿಜ್ಞಾನಿ ಕಾರ್ಯಕ್ರಮ(ಯುವಿಕಾ)ಕ್ಕೆ ಚಾಲನೆ| ವಿದ್ಯಾರ್ಥಿಗಳಿಗೆ ಅಂತರಿಕ್ಷ ತಂತ್ರಜ್ಞಾನದ ಮಾಹಿತಿ| ಮಾ.25ರಿಂದ ಏ.3ರವೆರೆಗೆ ಆನ್‌ಲೈನ್ ರೆಜಿಸ್ಟ್ರೇಷನ್| ಮೇ ಮಧ್ಯಭಾಗದಲ್ಲಿ ಇಸ್ರೋದ 4 ಕೇಂದ್ರದಲ್ಲಿ ಯುವಿಕಾ|

ISRO Young Scientist Programme Yuvika Online Registration Begins
Author
Bengaluru, First Published Mar 27, 2019, 2:37 PM IST

ಬೆಂಗಳೂರು(ಮಾ.27): ಶಾಲಾ ವಿದ್ಯಾರ್ಥಿಗಳಲ್ಲಿ ಅಂತರಿಕ್ಷ ವಿಜ್ಞಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತ್ತು ಯುವ ವಿಜ್ಞಾನಿಗಳನ್ನು ಗುರುತಿಸುವ ವೇದಿಕೆಯಾಗಿ ಇಸ್ರೋ ಯುವ ವಿಜ್ಞಾನ ಕಾರ್ಯಕ್ರಮ(ಯುವಿಕಾ)ವನ್ನು ಹಮ್ಮಿಕೊಂಡಿದೆ.

ಖಗೋಶ ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮತ್ತು ಭವಿಷ್ಯದ ಖಗೋಳ ವಿಜ್ಞಾನಿಗಳನ್ನು ನಿರ್ಮಿಸುವಲ್ಲಿ ಇಸ್ರೋ ಯುವಿಕಾ ಸಹಾಯಕಾರಿಯಾಗಲಿದೆ.

ಬೇಸಿಗೆ ರಜೆಯ ವೇಳೆ ಯುವಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರತಿ ರಾಜ್ಯದಿಂದ ಮೂವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಒಟ್ಟು 108 ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

2018-19ರಲ್ಲಿ 9 ನೇ ತರಗತಿ ಪಾಸಾಗಿರುವ ವಿದ್ಯಾರ್ಥಿ ಅಥವಾ 10ನೇ ತರಗತಿ ಈಗಷ್ಟೇ ಪ್ರವೇಶಿಸಿರುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅರ್ಹನಾ/ಳಾಗಿದ್ದು, 8ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು ಎಂಧು ಇಸ್ರೋ ತಿಳಿಸಿದೆ.

ಇದೇ ಮಾರ್ಚ್ 25ರಿಂದ ಆನ್‌ಲೈನ್ ರೆಜಿಸ್ಟ್ರೇಶನ್ ಆರಂಭವಾಗಿದ್ದು, ಏ.3ರವರೆಗೂ ಪ್ರಕ್ರಿಯೆ ಮುಂದುವರೆಯಲಿದೆ. ಮೇ ಮಧ್ಯಭಾಗದಲ್ಲಿ ಇಸ್ರೋದ ನಾಲ್ಕು ಕೇಂದ್ರಗಳಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಆಸಕ್ತರು ಇಸ್ರೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ದಲ್ಲಿ ರೆಜಿಸ್ಟ್ರೇಶನ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಇಸ್ರೋ ಕೋರಿದೆ.

Follow Us:
Download App:
  • android
  • ios