ಮುಂಬರುವ ಜುಲೈನಲ್ಲಿ ಚಂದ್ರಯಾನ-2 ಯೋಜನೆ| ಚಂದ್ರಯಾನ-2 ಯೋಜನೆಯ ದಿನಾಂಕ ಘೋಷಿಸಿದ ಇಸ್ರೋ| ಜುಲೈ 9ರಿಂದ 16ರ ಅವಧಿಯಲ್ಲಿ ಚಂದ್ರಯಾನ-2 ಉಡಾವಣೆ| ಚಂದ್ರಯಾನ-2 ಯೋಜನೆಗಾಗಿ GSLV Mk III ರಾಕೆಟ್|  ಚಂದ್ರನ ದಕ್ಷಿಣ ಧೃವದಲ್ಲಿ ಇಳಿದು ಹೀಲಿಯಂ ಖನಿಜ ನಿಕ್ಷೇಪದ ಅನ್ವೇಷಣೆ!

ಬೆಂಗಳೂರು(ಮೇ.02): ಮುಂಬರುವ ಜುಲೈ ತಿಂಗಳಲ್ಲಿ ಚಂದ್ರನ ಅನ್ಷೇಷಣೆಗಾಗಿ ಚಂದ್ರಯಾನ-2 ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತಿಳಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಇಸ್ರೋ, ಚಂದ್ರನ ದಕ್ಷಿಣ ಭಾಗದಲ್ಲಿರುವ ಖನಿಜ ನಿಕ್ಷೇಪಗಳ ಕುರಿತು ಮತ್ತಷ್ಟು ಸಂಶೋಧನೆ ನಡೆಸುವ ಉದ್ದೇಶದಿಂದ ಮುಂಬರುವ ಜುಲೈ 9ರಿಂದ 16ರ ಅವಧಿಯಲ್ಲಿ ಚಂದ್ರಯಾನ-2 ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದೆ.

Scroll to load tweet…

ಚಂದ್ರಯಾನ-2 ಯೋಜನೆಗಾಗಿ ಇಸ್ರೋ GSLV Mk III (ಜಿಎಸ್​ಎಲ್​ವಿ ಎಂಕೆ 3) ಎಂಬ ಹೊಸ ಮಾದರಿಯ ರಾಕೆಟ್ ಒಂದನ್ನು ನಿರ್ಮಿಸಿದೆ. ಇದರ ಮೂಲಕ ಉಪಗ್ರಹವನ್ನು ಭೂ ಕಕ್ಷೆಯಿಂದ ಚಂದ್ರನ ಮೇಲ್ಮೈಗೆ ಉಡಾಯಿಸಲಾಗುವುದು. 

ಉಡಾವಣೆಯ ನಂತರ ಪೂರ್ವ ನಿರ್ಧಾರಿತದಂತೆ ಉಪಗ್ರಹ ಚಂದ್ರನ ದಕ್ಷಿಣ ಧೃವದಲ್ಲಿ ಇಳಿಯಲಿದ್ದು, ಚಂದ್ರನ ಮೇಲ್ಮೈಯಲ್ಲಿರುವ ಶಕ್ತಿಯ ಪ್ರಮುಖ ಮೂಲವಾದ ಹೀಲಿಯಂ ಕುರಿತು ಸಂಶೋಧನೆ ನಡೆಸಲಿದೆ ಎಂದು ಇಸ್ರೋ ತಿಳಿಸಿದೆ.