ಬೆಂಗಳೂರು(ಸೆ.08): ಚಂದ್ರಯಾನ-2 ಯೋಜನೆಯ ಹಿನ್ನಡೆಯಿಂದಾಗಿ ನಿರಾಸೆಯಲ್ಲಿದ್ದ ಇಸ್ರೋ, ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್’ನ್ನು ಪತ್ತೆ ಹಚ್ಚಿ ಹೊಸ ಆಶಾವಾದ ಮೂಡಿಸಿದೆ.

ಹೌದು, ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್’ನ ಸ್ಥಳವನ್ನು ಇಸ್ರೋ ಪತ್ತೆ ಹಚ್ಚಿದೆ. ಚಂದ್ರಯಾನ-2 ನೌಕೆಯ ಆರ್ಬಿಟರ್ ಕ್ಯಾಮರಾದಲ್ಲಿ ವಿಕ್ರಮ್ ಲ್ಯಾಂಡರ್ ಸೆರೆಯಾಗಿದೆ.

ಆರ್ಬಿಟರ್ ಕ್ಯಾಮರಾದಲ್ಲಿ ವಿಕ್ರಮ್ ಲ್ಯಾಂಡರ್’ನ ಥರ್ಮಲ್ ಇಮೇಜ್ ಸೆರೆಯಾಗಿದ್ದು,  ಇನ್ನೂ ಸಂಪರ್ಕ ಸಾಧ್ಯವಾಗಿಲ್ಲ ಎಂದು ಇಸ್ರೋ ತಿಳಿಸಿದೆ.

"