ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸದೇ ಬಿಡಲ್ಲ ಎಂದ ಶಿವನ್| ಮತ್ತೊಂದು ಚಂದ್ರಯಾನದ ಸುಳಿವು ಕೊಟ್ಟ ಇಸ್ರೋ ಅಧ್ಯಕ್ಷ|  ಲ್ಯಾಂಡಿಂಗ್ ತಂತ್ರಜ್ಞಾನವನ್ನು ಮತ್ತಷ್ಟು ಹರಿತಗೊಳಿಸುವುದಾಗಿ ಶಿವನ್ ಘೋಷಣೆ| ಐಐಟಿ ದೆಹಲಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವನ್| 'ಇಸ್ರೋ ತನ್ನೆಲ್ಲಾ ಅನುಭವ, ಜ್ಞಾನ ಮತ್ತು ತಾಂತ್ರಿಕ ಪರಾಕ್ರಮ ಧಾರೆ ಎರೆಯಲಿದೆ'| ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್ ಸಿಗುವ ಭರವಸೆ ವ್ಯಕ್ತಪಡಿಸಿದ ಶಿವನ್|

ನವದೆಹಲಿ(ನ.02): ಚಂದ್ರಯಾನ -2 ಮುಗಿದ ಅಧ್ಯಾಯವಲ್ಲ ಎಂದಿರುವ ಇಸ್ರೋ ಮುಖ್ಯಸ್ಥ ಕೆ.ಶಿವನ್, ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್​ ಲ್ಯಾಂಡರನ್ನು ಮತ್ತೊಮ್ಮೆ ಇಳಿಸುವ ಪ್ರಯತ್ನ ನಡೆಸುವುದಾಗಿ ಘೋಷಿಸಿದ್ದಾರೆ.

ವಿಜ್ಞಾನ-ಅಧ್ಯಾತ್ಮ: ವಿಜ್ಞಾನಿಯೊಳಗೊಬ್ಬ ಆಸ್ತಿಕನ ಹುಡುಕುತ್ತಾ..!

Scroll to load tweet…

ಲ್ಯಾಂಡಿಂಗ್ ತಂತ್ರಜ್ಞಾನವನ್ನು ಮತ್ತಷ್ಟು ಹರಿತಗೊಳಿಸಿ ಮತ್ತೆ ಚಂದ್ರನ ದಕ್ಷಿಣ ಧ್ರುವಕ್ಕೆ ನೌಕೆ ಕಳುಹಿಸಲಾಗುವುದು ಎಂದು ಶಿವನ್ ಸ್ಪಷ್ಪಪಡಿಸಿದ್ದಾರೆ. ಅಲ್ಲದೇ ಮುಂದಿನ ಪ್ರಯತ್ನದಲ್ಲಿ ಖಂಡಿತವಾಗಿಯೂ ಯಶಸ್ಸು ಸಿಗಲಿದೆ ಎಂದು ಶಿವನ್ ಭರವಸೆ ವ್ಯಕ್ತಪಡಿಸಿದ್ದಾರೆ.

ಸದಾ ಸಾಧನೆಯ ಗುಂಗಲ್ಲೇ ಇರೋ ಇಸ್ರೋ ಸಿವನ್‌ (ಶಿವ)ಗೆ ದಕ್ಕದ ಚಂದ್ರನೇ..?

ತಮಿಳುನಾಡಿನ ಬಡ ರೈತನ ಮಗ ಶಿವನ್‌ ಇಸ್ರೋ ಅಧ್ಯಕ್ಷರಾದ ಕಥೆ!

ಐಐಟಿ ದೆಹಲಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವನ್, ಇಸ್ರೋ ತನ್ನೆಲ್ಲಾ ಅನುಭವ, ಜ್ಞಾನ ಮತ್ತು ತಾಂತ್ರಿಕ ಪರಾಕ್ರಮವನ್ನು ಧಾರೆ ಎರೆದು ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲಿದೆ ಎಂದು ಘೋಷಿಸಿದರು.

Scroll to load tweet…

ಅಲ್ಲದೇ ಸದ್ಯ ಚಂದ್ರನ ದಕ್ಷಿಣ ಧ್ರುವದಲ್ಲಿ ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್ ಸ್ಥಳವನ್ನೂ ಪತ್ತೆ ಹಚ್ಚುವ ವಿಶ್ವಾಸವನ್ನು ಶೀವನ್ ವ್ಯಕ್ತಪಡಿಸಿದ್ದಾರೆ.

ಮರೆಯಾಯ್ತು ಚಂದ್ರಯಾನ: ಇಸ್ರೋ ಮುಂದಿನ ಯೋಜನೆ ಗಗನಯಾನ!