BrahMos Test Fire: ನೌಕಾ ಮಾದರಿ ಬ್ರಹ್ಮೋಸ್‌ ಕ್ಷಿಪಣಿ ಉಡಾವಣೆ ಯಶಸ್ವಿ!

ಅತ್ಯಾಧುನಿಕ ಸೂಪರ್‌ಸಾನಿಕ್‌ ಬ್ರಹ್ಮೋಸ್‌ ನೌಕಾ ಮಾದರಿಯ ಕ್ಷಿಪಣಿ ಪರೀಕ್ಷೆಯನ್ನು ಮಂಗಳವಾರ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ

India Test Fires Naval Variant Of Advanced Supersonic BrahMos Missile from INS Visakhapatnam mnj

ನವದೆಹಲಿ (ಜ. 12): ಅತ್ಯಾಧುನಿಕ ಸೂಪರ್‌ಸಾನಿಕ್‌ ಬ್ರಹ್ಮೋಸ್‌ (Supersonic BrahMos) ನೌಕಾ ಮಾದರಿಯ ಕ್ಷಿಪಣಿ ಪರೀಕ್ಷೆಯನ್ನು ಮಂಗಳವಾರ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಇದನ್ನು ಐಎನ್‌ಎಸ್‌ ವಿಶಾಖಪಟ್ಟಣದದಿಂದ ಪರೀಕ್ಷಿಸಲಾಗಿದೆ. ಕ್ಷಿಪಣಿಯು ತನ್ನ ಗುರಿಯನ್ನು ನಿಖರವಾಗಿ ತಲುಪಿದೆ ಎಂದು ಡಿಆರ್‌ಡಿಒ ತಿಳಿಸಿದೆ. ಕ್ಷಿಪಣಿಯ ಯಶಸ್ವಿ ಉಡಾವಣೆಯು ಭಾರತೀಯ ನೌಕಾಪಡೆಯ ಸನ್ನದ್ಧ ಸ್ಥಿತಿಯನ್ನು ಮತ್ತೊಮ್ಮೆ ದೃಢಪಡಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಟ್ವೀಟ್‌ ಮಾಡಿದ್ದು, ಭಾರತೀಯ ನೌಕಾಪಡೆಗೆ ಅಭಿನಂದನೆ ತಿಳಿಸಿದ್ದಾರೆ. ಭಾರತ ಮತ್ತು ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಈ ಬ್ರಹ್ಮೋಸ್‌ ಕ್ರೂಸ್‌ ಕ್ಷಿಪಣಿಯನ್ನು ತಯಾರಿಸುತ್ತಿವೆ. ಈ ಕ್ಷಿಪಣಿಗಳು ಶಬ್ಧಕ್ಕಿಂತ 3 ಪಟ್ಟು ಹೆಚ್ಚು ವೇಗವಾಗಿ ಹಾರಬಲ್ಲ ಸಾಮರ್ಥ್ಯ ಹೊಂದಿವೆ.

ಕ್ಷಿಪಣಿಯು ಗೊತ್ತುಪಡಿಸಿದ ಗುರಿಯನ್ನು "ನಿಖರವಾಗಿ" ತಲುಪಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹೇಳಿದೆ. ಕ್ಷಿಪಣಿಯು ಮೂಲ ವ್ಯಾಪ್ತಿಯ 290 ಕಿಲೋಮೀಟರ್‌ಗಿಂತ ಹೆಚ್ಚಿನ 350 ರಿಂದ 400 ಕಿಮೀ ವ್ಯಾಪ್ತಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ. "ಐಎನ್‌ಎಸ್ ವಿಶಾಖಪಟ್ಟಣಂನಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ಸುಧಾರಿತ ಸಿ ಟು ಸಿ ವೇರಿಯಂಟನ್ನು ಇಂದು ಪರೀಕ್ಷಿಸಲಾಯಿತು. ಕ್ಷಿಪಣಿಯು ಗೊತ್ತುಪಡಿಸಿದ ಗುರಿ ಹಡಗನ್ನು ನಿಖರವಾಗಿ ತಲುಪಿದೆ" ಎಂದು ಡಿಆರ್‌ಡಿಒ ಟ್ವೀಟ್ ಮಾಡಿದೆ.

 

 

"ಇಂದು ಐಎನ್‌ಎಸ್ ವಿಶಾಖಪಟ್ಟಣದಿಂದ ಬ್ರಹ್ಮೋಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯ ಯಶಸ್ವಿ ಉಡಾವಣೆ ನಂತರ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಸನ್ನದ್ಧತೆಯ ದೃಢತೆಯನ್ನು ಇಂದು ಮರುದೃಢೀಕರಿಸಲಾಗಿದೆ. ಭಾರತೀಯ ನೌಕಾಪಡೆ, ಡಿಆರ್‌ಡಿಒ ಮತ್ತು ಬ್ರಹ್ಮೋಸ್ ಕ್ಷಿಪಣಿಗಳ ಅದ್ಭುತ ತಂಡದ ಕಾರ್ಯವನ್ನು ನಾನು ಅಭಿನಂದಿಸುತ್ತೇನೆ" ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.ಬ್ರಹ್ಮೋಸ್ ಕ್ಷಿಪಣಿ 2.8 ಮ್ಯಾಕ್ (Mach) ವೇಗದಲ್ಲಿ ಅಥವಾ ಶಬ್ದಕ್ಕಿಂತ ಮೂರು ಪಟ್ಟು ವೇಗದಲ್ಲಿ ಹಾರುತ್ತದೆ.ಭಾರತವು ಈಗಾಗಲೇ ಸಾಕಷ್ಟು ಸಂಖ್ಯೆಯ ಮೂಲ ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಇತರ ಪ್ರಮುಖ ಸಲಕರಣೆಗಳನ್ನು ಹಲವಾರು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಿದೆ.

ಇದನ್ನೂ ಓದಿ: Indo China border tensions ಹಿಂದೂ ಮಹಾಸಾಗರದಲ್ಲಿ ಚೀನಾ ಬಂದರು ನಿರ್ಮಾಣ, ಹೆಚ್ಚಿತು ಭಾರತದ ಆತಂಕ!

ಅಣ್ವಸ್ತ್ರ ಸಾಮರ್ಥ್ಯದ ರಫೇಲ್-ಎಂ ಯಶಸ್ವಿ ಪರೀಕ್ಷೆ!

ಯುದ್ಧವಿಮಾನಗಳನ್ನು ಹೊತ್ತೊಯ್ಯಬಲ್ಲ ನೌಕಾಸೇನೆಯ ಯುದ್ಧಹಡಗು (aircraft carrier) ಐಎನ್ಎಸ್ ವಿಕ್ರಮಾದಿತ್ಯ (INS Vikramaditya) ಬಲವರ್ಧನೆಗಾಗಿ ಭಾರತವು, ನೌಕಾಸೇನೆಗೆ ಸೇರ್ಪಡೆಯಾಗಲಿರುವ ರಫೇಲ್-ಎಂ (ರಫೇಲ್-ಮರೀನ್) (Rafale-Marine)ಯುದ್ಧವಿಮಾನವನ್ನು ಗೋವಾದಲ್ಲಿ (Goa) ಪರೀಕ್ಷೆ ನಡೆಸಿತು. ವಾಯುಪಡೆಗೆ (Air Force) ಸೇರ್ಪಡೆಯಾಗಿರುವ ರಫೇಲ್ (Rafale) ಯುದ್ಧವಿಮಾನಕ್ಕಿಂತ ಸ್ವಲ್ಪ ಭಿನ್ನವಾಗಿರುವ ಡಸಾಲ್ಟ್ ನಿರ್ಮಿತ ರಫೇಲ್-ಎಂ (Rafale-M) ಜೆಟ್ ಅನ್ನು ಭಾರತ ಐಎನ್ಎಸ್ ವಿಕ್ರಮಾದಿತ್ಯದ ಜೊತೆಗೆ ಐಎನ್ಎಸ್ ವಿಕ್ರಾಂತ್ (INS Vikrant)ಹೆಸರಲ್ಲಿ ಸೇರ್ಪಡೆಯಾಗಲಿರುವ ಸ್ವದೇಶಿ ಯುದ್ಧವಿಮಾನ ವಾಹಕ ನೌಕೆ-1 (ಐಎಸಿ-1) ಅಲ್ಲಿ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಪರೀಕ್ಷೆ ಮಾಡಲಾಗಿದೆ. 

ಇದನ್ನೂ ಓದಿ: SMART Missile ಸೂಪರ್‌ಸಾನಿಕ್‌ ಕ್ಷಿಪಣಿ ಆಧರಿತ ಟಾರ್ಪೆಡೋ ಪರೀಕ್ಷೆ ಪೂರ್ಣ ಯಶಸ್ವಿ!

ಗೋವಾದಲ್ಲಿ ಐಎನ್ಎಸ್ ಹನ್ಸಾ (INS Hansa ) ಮೂಲಕ ಈ ಯುದ್ಧವಿಮಾನದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಪರೀಕ್ಷೆಗಾಗಿ ಗುರುವಾರ ಗೋವಾಕ್ಕೆ ಆಗಮಿಸಿದ್ದ ಯುದ್ಧವಿಮಾನವು ಕಡಲತೀರ ಆಧಾರಿತ ಪರೀಕ್ಷೆಯಲ್ಲಿ ಪಾಲ್ಗೊಂಡಿದೆ. ರಫೇಲ್ ಎಂ ಅಲ್ಲದೆ, ಅಮೆರಿಕದ ಎಫ್ 18 ಹಾರ್ನೆಟ್, ರಷ್ಯಾದ ಮಿಗ್-29ಕೆ (MIG-29K) ಹಾಗೂ ಸ್ವೀಡನ್ ನ ಗ್ರಿಪಿನ್ (Gripen) ಭಾರತೀಯ ನೌಕಾಪಡೆಯ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದೆ.

Latest Videos
Follow Us:
Download App:
  • android
  • ios