ಭಾರತದ ಮತ್ತೊಂದು ಕ್ಷಿಪಣಿ ಪರೀಕ್ಷೆ ಯಶಸ್ವಿ ಸಬ್‌ಮರೀನ್‌ಗಳ ಮೇಲೆ ದಾಳಿ ಮಾಡಬಲ್ಲ ಸಾಮರ್ಥ್ಯ   ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಸೂಪರ್‌ಸಾನಿಕ್‌ ಕ್ಷಿಪಣಿ 

ನವದೆಹಲಿ(ಡಿ.14): ಜಲಾಂತರ್ಗಾಮಿ ನೌಕೆಗಳ(submarine) ಮೇಲೆ ದಾಳಿ ನಡೆಸಬಲ್ಲ ಸೂಪರ್‌ಸಾನಿಕ್‌ ಕ್ಷಿಪಣಿ ಆಧರಿತ ಟಾರ್ಪಿಡೊ ವ್ಯವಸ್ಥೆ(SMART)ಯನ್ನು ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಡಿಆರ್‌ಡಿಒ(DRDO) ಅಭಿವೃದ್ಧಿಪಡಿಸಿದ ಸ್ಮಾರ್ಟ್‌ ವ್ಯವಸ್ಥೆಯನ್ನು ಒಡಿಶಾದಲ್ಲಿರುವ(Odisha) ಅಬ್ದುಲ್‌ ಕಲಾಂ ದ್ವೀಪ ಪ್ರದೇಶದಿಂದ ಉಡಾವಣೆ ಮಾಡಲಾಗಿದೆ.

ಟಾರ್ಪೆಡೋಗಳು(Torpedo) ನಿಗದಿತ ದೂರದಲ್ಲಿನ ಸಬ್‌ಮರೀನ್‌ಗಳ ಮೇಲೆ ದಾಳಿ ಮಾಡಬಲ್ಲ ಸಾಮರ್ಥ್ಯ ಹೊಂದಿರುತ್ತವೆ. ಈ ಟಾರ್ಪೆಡೋಗೆ ಸೂಪರ್‌ಸಾನಿಕ ಕ್ಷಿಪಣಿ(Supersonic Missile ) ಅಳವಡಿಸಿದ ಬಳಿಕ ಅವುಗಳ ಸಂಚಾರ ವ್ಯಾಪ್ತಿ ಹೆಚ್ಚಾಗುತ್ತದೆ. ಹೀಗಾಗಿ ಈ ಪ್ರಯೋಗ ಅತ್ಯಂತ ಮಹತ್ವದ್ದು ಎನ್ನಿಸಿಕೊಂಡಿದೆ.

2,000 KM ಗುರಿ ಸಾಮರ್ಥ್ಯದ ಅಗ್ನಿ ಪ್ರೈಮ್ ಕ್ಷಿಪಣಿ ಪ್ರಯೋಗ ಯಶಸ್ವಿ!

ಶತ್ರು ದೇಶಗಳ ಜತೆಗಿನ ಯುದ್ಧಪೀಡಿತ ಸಂದರ್ಭದಲ್ಲಿ ನೌಕಾಪಡೆಗೆ(Indian Navy) ಈ ವ್ಯವಸ್ಥೆ ಭಾರೀ ಅನುಕೂಲವಾಗಲಿದೆ ಎಂದು ಬಣ್ಣಿಸಲಾಗಿದೆ. ಅಲ್ಲದೆ ಈ ವ್ಯವಸ್ಥೆಯು ನಮ್ಮ ನೌಕಾಪಡೆಯನ್ನು ಮತ್ತಷ್ಟುಬಲಪಡಿಸಲಿದ್ದು, ಭದ್ರತೆಯಲ್ಲಿ ಸ್ವಾವಲಂಬನೆಗೆ ಉತ್ತೇಜನ ನೀಡಲಿದೆ ಎಂದು ಡಿಆರ್‌ಡಿಒ ಮುಖ್ಯಸ್ಥ ಡಾ.ಜಿ ಸತೀಶ್‌ರೆಡ್ಡಿ ಹೇಳಿದರು.

ಬ್ರಹ್ಮೋಸ್‌ ವಾಯುಕ್ಷಿಪಣಿ ಪರೀಕ್ಷೆ ಯಶಸ್ವಿ
ಸ್ವದೇಶಿ ನಿರ್ಮಿತ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಯ ವಾಯು ಆವೃತ್ತಿಯ ಪರೀಕ್ಷೆ ಗುರುವಾರ ಯಶಸ್ವಿಯಾಗಿದೆ. ಸುಖೋಯ್‌ 30 ಎಂ.ಕೆ-1 ಯುದ್ಧ ವಿಮಾನದ ಮೂಲಕ ಒಡಿಶಾದ ಚಾಂಡಿಪುರ ಕಡಲತೀರದಲ್ಲಿ ಈ ಪರೀಕ್ಷೆ ನಡೆಸಲಾಗಿದೆ.

ಸ್ವದೇಶಿ ನಿರ್ಮಿತ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಪರೀಕ್ಷೆ ಯಶಸ್ವಿ!

5000 ಕಿ.ಮೀ ದಾಳಿಯ ಅಗ್ನಿ-5 ಕ್ಷಿಪಣಿ ಯಶಸ್ವಿ:
5000 ಕಿ.ಮೀ ದೂರದ ಗುರಿಯನ್ನು ಕರಾರುವಕ್ಕಾಗಿ ಧ್ವಂಸಗೊಳಿಸುವ ಸಾಮರ್ಥ್ಯದ ಅಗ್ನಿ-5 ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಪೂರ್ವ ಲಡಾಖ್‌ನಲ್ಲಿ ಗಡಿ ವಿಚಾರಕ್ಕೆ ಸಂಬಂಧಿಸಿ ಕಳೆದ 17 ತಿಂಗಳುಗಳಿಂದ ಚೀನಾ ಮತ್ತು ಭಾರತ ಮಧ್ಯೆ ಬಿಕ್ಕಟ್ಟಿನ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ, ಭಾರತದ ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಅಗ್ನಿ-5 ಪರೀಕ್ಷೆಯು ಚೀನಾಕ್ಕೆ ಪರೋಕ್ಷ ಎಚ್ಚರಿಕೆ ಸಂದೇಶವಾಗಿದೆ. ಒಡಿಶಾದ ಎಪಿಜೆ ಅಬ್ದುಲ್‌ ಕಲಾಂ ಕೇಂದ್ರದಿಂದ ಬುಧವಾರ ಸಂಜೆ 7.50 ನಿಮಿಷಕ್ಕೆ ಪರಮಾಣ ಸಾಮರ್ಥ್ಯದ ಈ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ. 2012ರಲ್ಲಿ ಇದರ ಮೊದಲ ಪರೀಕ್ಷೆ ನಡೆಸಲಾಗಿತ್ತು. ಈ ಹಿಂದೆ ಪರೀಕ್ಷೆ ನಡೆಸಿದ್ದು 3 ವರ್ಷಗಳ ಹಿಂದಾಗಿತ್ತು.

ಸುಖೋಯ್‌ ವಿಮಾನದಿಂದ ಹಾರಿದ ಕ್ಷಿಪಣಿ ನಿಗದಿತ ಗುರಿ ತಲುಪಲು ಯಶಸ್ವಿಯಾಗಿದೆ. ಈ ಕ್ಷಿಪಣಿಯ ಯಶಸ್ವಿ ಉಡಾವಣೆಯಿಂದ ದೊರೆತ ಯಶಸ್ಸು ಇತರ ಆವೃತ್ತಿಯ ಕ್ಷಿಪಣಿಗಳ ಉತ್ಪಾದನೆಗೆ ಹಾದಿ ಸುಗಮವಾಗಿದೆ. ಇದು ಸಂಪೂರ್ಣವಾಗಿ ಭಾರತದ ಕಾರ್ಖಾನೆಗಳಲ್ಲಿ ತಯಾರಾದ ಕ್ಷಿಪಣಿ ಎಂದು ಡಿಆರ್‌ಡಿಒ ಹೇಳಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಡಿಆರ್‌ಡಿಒ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

ಐಎನ್‌ಎಸ್‌ ವಿಶಾಖಪಟ್ಟಣಂ
ಕ್ಷಿಪಣಿಗಳನ್ನು ಉಡ್ಡಯನ ಮಾಡಬಲ್ಲ ಹಾಗೂ ಧ್ವಂಸ ಮಾಡಬಲ್ಲ ಸಾಮರ್ಥ್ಯ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ಯುದ್ಧ ಕೌಶಲ್ಯಗಳನ್ನು ಒಳಗೊಂಡಿರುವ ಅತ್ಯಾಧುನಿಕ ದಾಳಿ ಯುದ್ಧ ನೌಕೆಯಾದ ಐಎನ್‌ಎಸ್‌ ವಿಶಾಖಪಟ್ಟಣಂ, ಭಾನುವಾರ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ. ಇದು ದೇಶ ಇದುವರೆಗೆ ನಿರ್ಮಿಸಿರುವ ಅತ್ಯಾಧುನಿನಿಕ, ಮೊದಲ ಸ್ವದೇಶಿ ನಿರ್ಮಿತ ಕ್ಷಿಪಣಿ ದಾಳಿ ಯುದ್ಧ ನೌಕೆಯಾಗಿದೆ. ಈ ನೌಕ ಭಾರತೀಯ ನೌಕಾಪಡೆ ಸೇರಿಕೊಂಡಿದೆ.

15ಬಿ ಎಂಬ ಯೋಜನೆಯಡಿ ಭಾರತೀಯ ನೌಕಾಪಡೆ ನಾಲ್ಕು ರಹಸ್ಯ ಮಾರ್ಗದರ್ಶಕ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯದ ಯುದ್ಧನೌಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಮಡಗಾಂವ್‌ ಡಾಕ್‌ ಲಿ.(ಎಂಡಿಎಲ್‌) ಸಂಸ್ಥೆ ವಿನ್ಯಾಸ ಮಾಡಿರುವ ಈ ಯುದ್ಧನೌಕೆ 163 ಮೀಟರ್‌ ಉದ್ದವಿದ್ದು, 7400 ಟನ್‌ ತೂಕ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಈ ನೌಕೆಯು ಭೂಮಿಯಿಂದ ಭೂಮಿಗೆ, ಭೂಮಿಯಿಂದ ಆಗಸಕ್ಕೆ ಹಾರಿಸಬಲ್ಲ ಕ್ಷಿಪಣಿ ದಾಳಿ ವ್ಯವಸ್ಥೆಯನ್ನು ಒಳಗೊಂಡಿದೆ.