ಹೆಚ್ಚುತ್ತಿರುವ ಸೈಬರ್ ದಾಳಿಗಳಿಂದ ನಿಮ್ಮ ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳನ್ನು ರಕ್ಷಿಸಿಕೊಳ್ಳಲು ಬೆಂಗಳೂರು ಪೊಲೀಸರು ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಗೂಗಲ್ ಕ್ರೋಮ್‌ನಲ್ಲಿ ಪಾಸ್‌ವರ್ಡ್ ಮತ್ತು ಪಾವತಿ ವಿಧಾನಗಳನ್ನು ಸೇವ್ ಮಾಡುವ ಆಯ್ಕೆಗಳನ್ನು ಆಫ್ ಮಾಡುವ ಮೂಲಕ ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.
ಇದೀಗ ಸೈಬರ್ ದಾಳಿಗಳು ಹೆಚ್ಚಾಗಿವೆ. ಮೊಬೈಲ್ನಲ್ಲಿಯೇ ಬ್ಯಾಂಕ್ ವಹಿವಾಟುಗಳು ಹೆಚ್ಚಿರುವ ಕಾರಣದಿಂದ, ಸೈಬರ್ ಕ್ರಿಮಿನಲ್ಸ್ ಸುಲಭದಲ್ಲಿ ದಾಳಿ ಮಾಡುತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಬ್ಯಾಂಕ್ನಲ್ಲಿ ಇರುವ ಎಲ್ಲಾ ದುಡ್ಡುಗಳೂ ಗುಳುಂ ಆಗುತ್ತವೆ. ಇವಿಷ್ಟೇ ಅಲ್ಲದೇ ಫೋನ್ ಹ್ಯಾಕ್ ಮಾಡಲು ಕೂಡ ಇದು ಅನುವು ಮಾಡಿಕೊಡುತ್ತದೆ. ಎಷ್ಟೋ ಸಂದರ್ಭಗಳಲ್ಲಿ ನಿಮ್ಮ ಅರಿವಿಗೆ ಬಾರದೇ ದುಡ್ಡು ಹೋಗುತ್ತಿದ್ದರೆ, ಇನ್ನು ಕೆಲವು ಸಲ ನಿಮ್ಮ ಹೆಸರಿನಲ್ಲಿ ಇನ್ನಾರಿಗೋ ಏನೇನೋ ಕೆಟ್ಟ ಸಂದೇಶಗಳು, ಲಿಂಕ್ಗಳು ಹೋಗುತ್ತಿರುತ್ತವೆ. ಹೀಗೆ ಹೋದಾಗ ಅಲ್ಲಿ ನಿಮ್ಮ ಮೊಬೈಲ್ ಫೋನ್ನಿಂದಲೇ ಹೋದ ಹಾಗೆ ಕಾಣಿಸುತ್ತದೆ.
ಸೆಟ್ಟಿಂಗ್ಸ್ನಲ್ಲಿ ಬದಲಾವಣೆ
ಇವೆಲ್ಲವಕ್ಕೂ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ಮೊಬೈಲ್ನಲ್ಲಿ ಕೂಡಲೇ ಈ ಸೆಟ್ಟಿಂಗ್ಸ್ ಆಫ್ ಮಾಡಿಕೊಳ್ಳಲು ಸಲಹೆ ಕೊಟ್ಟಿದ್ದಾರೆ. ಬೈ ಡಿಫಾಲ್ಟ್ ಬಹುತೇಕ ಸ್ಮಾರ್ಟ್ಫೋನ್ಗಳಲ್ಲಿ ಈ ಸೆಟ್ಟಿಂಗ್ಸ್ ಆನೇ ಇರುತ್ತದೆ. ಆದ್ದರಿಂದ ನೀವು ಖುದ್ದಾಗಿ ಹೋಗಿ ಅದನ್ನು ಆಫ್ ಮಾಡಬೇಕು. ಕೆಲವೊಂದು ಆಫ್ ಇದ್ದು, ಅದನ್ನು ಆನ್ ಮಾಡಬೇಕು.
ಬೆಂಗಳೂರು ಪೊಲೀಸರು ಹೇಳಿದ್ದೇನು?
ಈ ಬಗ್ಗೆ ಬೆಂಗಳೂರು ಪೊಲೀಸರು ಹೇಳಿರುವ ಮಾಹಿತಿ ಇಲ್ಲಿದೆ. ನೀವು ಮಾಡಬೇಕಿರುವುದು ಏನು ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.
- ಗೂಗಲ್ ಕ್ರೋಮ್ ಓಪನ್ ಮಾಡಿ
- ಬಲಬದಿಯ ಮೇಲು ಭಾಗದಲ್ಲಿ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ
- ಬಳಿಕ ಸ್ಕ್ರೋಲ್ ಮಾಡಿ ಕೆಳಗೆ ಬಂದರೆ ಸೆಟ್ಟಿಂಗ್ಸ್ (Settings) ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ.
- ಬಳಿಕ ಸ್ಕ್ರೋಲ್ ಮಾಡಿ ಕೆಳಗೆ ಬಂದರೆ Google Password Manager ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ
- ಬಳಿಕ ಬಲಗಡೆ ಕೆಳಭಾಗದಲ್ಲಿ ಮತ್ತೊಮ್ಮೆ ಸೆಟ್ಟಿಂಗ್ಸ್(Settings) ಕಾಣಿಸುತ್ತದೆ. ಕ್ಲಿಕ್ ಮಾಡಿ.
- ಅಲ್ಲಿ ಮೇಲಿನ ಮೂರು ಆಪ್ಷನ್ಸ್ ಆನ್ ಇರುತ್ತದೆ. ಅದನ್ನು ಆಫ್ ಮಾಡಿಕೊಳ್ಳಿ. ಅವೆಂದರೆ, Offer tosave passwaords, Automaticallu create a passkey to sign in faste ಹಾಗೂ ಇನ್ನೊಂದು Auto sing-in.ಇವೆಲ್ಲಾ ಆಫ್ ಮಾಡಬೇಕು. ಇಲ್ಲೇ ಕೆಳಗೆ Password alerts ಕಾಣಿಸುತ್ತದೆ. ಅದು ಆಫ್ ಇದ್ದರೆ ಆನ್ ಮಾಡಿ, ಆನ್ ಇದ್ದರೆ ಹಾಗೆಯೇ ಬಿಡಿ.
- ಇವಿಷ್ಟೂ ಆದ ಮೇಲೆ ಬ್ಯಾಕ್ ಬನ್ನಿ
- ಅಲ್ಲಿ ಗೂಗಲ್ ಪಾಸ್‌ವರ್ಡ್ ಮ್ಯಾನೇಜರ್ ಕೆಳಗೆ Payment methods ಅನ್ನೋದು ಕಾಣಿಸುತ್ತದೆ.
- ಅದನ್ನು ಕ್ಲಿಕ್ ಮಾಡಿದ ಬಳಿಕ, ಅಲ್ಲಿ Savi and fill Payment methods ಮತ್ತು Save Security codes ಆನ್ ಇದ್ದರೆ ಆಫ್ ಮಾಡಿ.
ಹೀಗೆ ಮಾಡಿದ್ದರೆ ನಿಮ್ಮ ಫೋನ್ಗೆ ಎಲ್ಲಾ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಸೇಫ್ ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

