Asianet Suvarna News Asianet Suvarna News

Worst Company of 2021: ಫೇಸ್‌ಬುಕ್-ಮೆಟಾ 2021 ರ ಅತ್ಯಂತ ಕೆಟ್ಟ ಕಂಪನಿ: ಸಮೀಕ್ಷೆ!

*ಅತ್ಯಂತ ಕೆಟ್ಟ ಕಂಪನಿಗಳ ವರದಿ ನೀಡಿದ Yahoo! Finance
*ಮೊದಲ ಸ್ಥಾನದಲ್ಲಿ ಮೆಟಾ ಒಡೆತನದ ಫೇಸ್‌ಬುಕ್
*ಚೈನೀಸ್ ಇ-ಕಾಮರ್ಸ್ ದೈತ್ಯ ಅಲಿಬಾಬಾ ರನ್ನರ್ ಅಪ್ 
 

Facebook Meta is the worst company of 2021 according to Yahoo Finance survey mnj
Author
Bengaluru, First Published Dec 20, 2021, 1:50 PM IST

Tech Desk: ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ ಪ್ರಪಂಚದ ಕೋಟ್ಯಂತರ ಜನರ ಫೇವರೇಟ್.‌ ಪೋಟೊ, ವಿಡಿಯೋ ಪೋಸ್ಟಿಂಗ್‌ನಿಂದ ಮಾರ್ಕೆಟಿಂಗ್‌ ವರೆಗೆ ಫೇಸ್‌ಬುಕ್ ಹಲವು ಸೌಲಭ್ಯಗಳನ್ನು ನೀಡುತ್ತದೆ. ಇತ್ತೀಚೆಗೆ ಫೇಸ್‌ಬುಕ್‌ನ ಹೆಸರನ್ನು ಮೆಟಾ ಎಂದು ಬದಲಾಯಿಸಲಾಗಿತ್ತು. ಆದರೆ ಇದೇ ಮೆಟಾ ಕಂಪನಿ 2021ರ ಅತ್ಯಂತ ಕೆಟ್ಟ ಕಂಪನಿ ಎಂದು ವರದಿಯೊಂದು ಹೇಳಿದೆ. ಯಾಹೂ (Yahoo! Finance) ಪ್ರಪಂಚದಾದ್ಯಂತದ ಉತ್ತಮ ಮತ್ತು ಕೆಟ್ಟ ಕಂಪನಿಗಳ ವರದಿಯನ್ನು ಬಿಡುಗಡೆ ಮಾಡುತ್ತದೆ.  ಈ ಪಟ್ಟಿಯ ಪ್ರಕಾರ  ಈಗ ಮೆಟಾ ಎಂದು ಕರೆಯಲ್ಪಡುತ್ತಿರುವ ಫೇಸ್‌ಬುಕ್ ವರ್ಷದ ಕೆಟ್ಟ ಕಂಪನಿ ಕಿರೀಟವನ್ನು ಪಡೆದುಕೊಂಡಿದೆ.

ಇನ್ನು ಈ ಪಟ್ಟಿಯಲ್ಲಿ  ಚೈನೀಸ್ ಇ-ಕಾಮರ್ಸ್ ದೈತ್ಯ ಅಲಿಬಾಬಾ ರನ್ನರ್ ಅಪ್ ಆಗಿ ಹೊರ ಹೊಮ್ಮಿದೆ. ಅಲಿಬಾಬಾಗಿಂತ ಫೇಸ್‌ಬುಕ್ ವರ್ಷದ ಕೆಟ್ಟ ಕಂಪನಿಯಲ್ಲಿ 50% ಹೆಚ್ಚಿನ ಮತಗಳನ್ನು ಪಡೆದಿದೆ. ಮತ್ತೊಂದೆಡೆ, ಮೈಕ್ರೋಸಾಫ್ಟ್ ಈ ವರ್ಷದ ಅತ್ಯುತ್ತಮ ಕಂಪನಿಯ ಕಿರೀಟವನ್ನು ಪಡೆದುಕೊಂಡಿದೆ. ಸರ್ವೆ ಮಂಕಿಯಲ್ಲಿ (Survey Monkey) ಯಾಹೂ ನಡೆಸಿದ ಮುಕ್ತ ಸಮೀಕ್ಷೆ  ಡಿಸೆಂಬರ್ 4 ರಿಂದ ಡಿಸೆಂಬರ್ 5 ರವರೆಗೆ 1,541 ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ.

'ವಿಶ್ವಾದ್ಯಂತ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ'

ಪ್ರತಿಕ್ರಿಯೆ ನೀಡಿದ ಬಳಕೆದಾರರು ಫೇಸ್‌ಬುಕ್ ಅಥವಾ ಮೆಟಾವನ್ನು "ವರ್ಷದ ಕೆಟ್ಟ ಕಂಪನಿ" ಎಂದು ಗುರುತಿಸುವ ವಿವಿಧ ಕಾರಣ ನೀಡಿದ್ದಾರೆ. ಮೂಲಭೂತವಾದಿಗಳ ಮತ್ತು ಬಲಪಂಥೀಯರ   ಸೆನ್ಸಾರ್‌ಶಿಪ್‌,  ಜತೆಗೆ ತಮ್ಮ ವೇದಿಕೆಯಲ್ಲಿ ಅವರು ಬಯಸಿದ್ದನ್ನು ಸಂವಹನ ಮಾಡುವ ಅವಕಾಶ ನೀಡದಿದ್ದಕ್ಕಾಗಿ ಸೇರಿದಂತೆ ಹಲವು ಕಾರಣಗಳಿವೆ.

ಮತ್ತೊಂದೆಡೆ ಬಲಪಂಥೀಯ ಉಗ್ರಗಾಮಿ ದೃಷ್ಟಿಕೋನಗಳ ಬೆಳವಣಿಗೆಗೆ ಫೇಸ್‌ಬುಕ್ ಅಥವಾ ಮೆಟಾವನ್ನು ದೂಷಿಸಬೇಕೆಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಮೆಟಾ "ವಿಶ್ವಾದ್ಯಂತ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ" ಎಂದು ಆರೋಪಿಸಿದ್ದಾರೆ ಜತೆಗೆ  ಫೇಸ್‌ಬುಕ್ ಅಥವಾ ಮೆಟಾ ಒಡೆತನದ ಮತ್ತೊಂದು ಅಪ್ಲಿಕೇಶನ್ ಇನ್ಸ್ಟಾಗ್ರಾಮ್‌ (Instagram) ಮಾನಸಿಕ ಆರೋಗ್ಯದ ಮೇಲೆ  ಬೀರುವ ಪರಿಣಾಮ ಮತ್ತು ಮಕ್ಕಳನ್ನು ಗುರಿಯಾಗಿಸುವ ಬಗ್ಗೆ ಹಲವರು ಉಲ್ಲೇಖಿಸಿದ್ದಾರೆ.  

ಫೇಸ್‌ಬುಕ್ ತಾನು ಮಾಡಿದ್ದನ್ನು ಒಪ್ಪಿಕೊಳ್ಳಬೇಕು

ಫೇಸ್‌ಬುಕ್ ತಾನು ಮಾಡಿದ್ದನ್ನು ಒಪ್ಪಿಕೊಳ್ಳುವ ಮತ್ತು ಕ್ಷಮೆಯಾಚಿಸುವ ಮೂಲಕ  ಅದಕ್ಕಾದ ಹಾನಿಯನ್ನು ಸರಿ ಮಾಡಬಹುದು. ಜತೆಗೆ ಯಾವುದಾದರೂ ಸಂಸ್ಥೆಗೆ ತನ್ನ ಲಾಭದ ಗಣನೀಯ ಮೊತ್ತವನ್ನು ದಾನ ಮಾಡುವ ಮೂಲಕ  ಮತ್ತೆ ಉತ್ತಮ ಕಂಪನಿಯಾಗಬಹುದು  ಎಂದು ಪ್ರತಿಕ್ರಿಯಿಸಿದವರು ಹೇಳಿದ್ದಾರೆ. ಕಂಪನಿಯ ವಿಶ್ವಾಸಾರ್ಹತೆಯೂ ಉತ್ತಮವಾಗಿಲ್ಲ ಎಂದು ತೋರುತ್ತಿದೆ ಮತ್ತು ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ, ಹತ್ತರಲ್ಲಿ ಮೂವರು ಮಾತ್ರ ಫೇಸ್‌ಬುಕ್ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದಯ ಎಂದು ಹೇಳಿದ್ದಾರೆ.

ಮೆಟಾ, ಟ್ವಿಟರ್, ಟಿಕ್‌ಟಾಕ್‌ಗೆ ಬಿತ್ತು ಭರ್ಜರಿ ದಂಡ!

ಕೋಟ್ಯಂತರ ಜನರು ಬಳಸುವ ಸಾಮಾಜಿಕ ಜಾಲತಾಣಗಳ (Social Media) ಮೇಲೆ ನಿಯಂತ್ರಿಸಲು  ಪ್ರಪಂಚದ ಬಹುತೇಕ ದೇಶಗಳು ಹಲವು ಕಾನೂನುಗಳನ್ನು ರೂಪಿಸಿವೆ. ಇಂಥಹ ಕಾನೂನುಗಳು (IT Laws) ಭಾರತದಲ್ಲಿ ಕೂಡ ಜಾರಿಗೊಳಿಸಲಾಗಿದೆ. ದೈತ್ಯ ಸೋಷಿಯಲ್‌ ಮೀಡಿಯಾ ಸಂಸ್ಥೆಗಳು ಈ ಕಾನೂನುಗಳನ್ನು ಪಾಲಿಸುವಲ್ಲಿ ವಿಫಲರಾದಾಗ ಸರ್ಕಾರಗಳು ಭಾರೀ ಮೊತ್ತದ ದಂಡವನ್ನು ವಿಧಿಸುತ್ತವೆ. ಈ ಬೆನ್ನಲ್ಲೇ ರಷ್ಯಾ ಸರ್ಕಾರ ಫೇಸ್‌ಬುಕ್ ಮಾತೃ ಸಂಸ್ಥೆಯಾದ ಮೆಟಾ (Meta), ಟ್ವಿಟರ್ (Twitter) ಹಾಗೂ ಟಿಕ್‌ಟಾಕ್‌ಗೆ (Tiktok) ರಷ್ಯಾ ಗುರುವಾರ ದಂಡ ವಿಧಿಸಿದೆ.

ಸರ್ಕಾರವು ಕಾನೂನುಬಾಹಿರವೆಂದು ನಿರ್ಧರಿಸಿರುವ (Banned Content) ವಿಷಯವನ್ನು ತಮ್ಮ ವೇದಿಕೆಗಳಿಂದ ಡೀಲಿಟ್‌ ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ ಎಂದು ಮಾಸ್ಕೋ ನ್ಯಾಯಾಲಯವು (Moscow's Tagansky District Court) ಹೇಳಿದೆ.  ಮಾಸ್ಕೋ ಈ ವರ್ಷ ದೈತ್ಯ ಟೆಕ್‌ ಕಂಪನಿಗಳ ಮೇಲೆ ಒತ್ತಡವನ್ನು ಹೆಚ್ಚಿಸಿದೆ. ಇದು ಇಂಟರ್ನೆಟ್‌ನ ಮೇಲೆ ಬಿಗಿಯಾದ ನಿಯಂತ್ರಣವನ್ನು ಸಾಧಿಸಲು ರಷ್ಯಾದ ಅಧಿಕಾರಿಗಳು ಮಾಡಿದ ಪ್ರಯತ್ನವೆಂದು ವಿಮರ್ಶಕರು ಅಭಿಪ್ರಯಾ ಪಟ್ಟಿದ್ದಾರೆ. ಇದು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಕಾರ್ಪೊರೇಟ್ ಸ್ವಾತಂತ್ರ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳವ ಪ್ರಯತ್ನ ಎಂದು ಹಲವರು ಹೇಳಿದ್ದಾರೆ.

ಇದನ್ನೂ ಓದಿ:

1) Social Media Hacking: ನಿಮ್ಮ ಸೋಷಿಯಲ್‌ ಮೀಡಿಯಾ ಖಾತೆ ಸೇಫಾಗಿಡಲು ಇಲ್ಲಿವೆ ಸರಳ ಸೂತ್ರಗಳು!

2) Most Downloaded App: 2021ರಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಆ್ಯಪ್ : ಟಿಕ್ ಟಾಕ್‌ಗೆ ಅಗ್ರಸ್ಥಾನ!

3) Google Year in Search 2021ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್‌ ಮಾಡಿದ ವಿಷಯ ಯಾವುದು ಗೊತ್ತಾ?

Follow Us:
Download App:
  • android
  • ios