Asianet Suvarna News Asianet Suvarna News

Google Year in Search 2021ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್‌ ಮಾಡಿದ ವಿಷಯ ಯಾವುದು ಗೊತ್ತಾ?

*2021 ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ವಿಷಯಗಳು
*ಅಗ್ರಸ್ಥಾನದಲ್ಲಿ Indian Premier League ಹಾಗೂ T20 World Cup!
*ಗೂಗಲ್‌ ಟ್ರೆಂಡಿಗ್‌ನಲ್ಲಿ ಕೋವಿಡ್-ಸಂಬಂಧಿತ ಪ್ರಶ್ನೆಗಳಿಗೂ ಅಗ್ರಸ್ಥಾನ
*ಟಾಪ್‌ ಸರ್ಚ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್‌ ಹೀರೋ ನೀರಜ್ ಚೋಪ್ರಾ!

Google Year in Search 2021 Indian Premier League CoWIN  Neeraj Chopra Enoki Mushrooms Among Top Searches  in India mnj
Author
Bengaluru, First Published Dec 8, 2021, 11:51 PM IST

ನವದೆಹಲಿ(ಡಿ. 08): ಮೊಬೈಲ್‌, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳೇ ರಾಜ್ಯಭಾರ ಮಾಡುತ್ತಿರುವ ಈ ಆಧುನಿಕ ಯುಗದಲ್ಲಿ ಬಳಕೆದಾರರು ಗೂಗಲ್‌ ಸರ್ಚ್‌ (Google Search) ಮಾಡುವುದು ಸರ್ವೇ ಸಾಮಾನ್ಯ. ಮಕ್ಕಳಾಟಿಕೆಯ ವಸ್ತುವಿನಿಂದ ಹಿಡಿದು ಬಾಹ್ಯಾಕಾಶ ವಿಜ್ಞಾನದವರೆಗೂ ಯಾವುದೇ ವಿಷಯದ ಮಾಹಿತಿ ಬೇಕಿದ್ದರೂ ಗೂಗಲ್‌ ನಮಗೆ ಬೆನ್ನೆಲುಬಾಗಿ ನಿಲ್ಲುತ್ತದೆ. ಮೈಕ್ರೋ ಸೆಕೆಂಡ್‌ಗಳಲ್ಲಿ ನಾವು ಸರ್ಚ್‌ ಮಾಡಿದ ವಿಷಯದ ಬಗ್ಗೆ ಜಗತ್ತಿನಲ್ಲಿ ಲಭ್ಯವಿರುವ ಎಲ್ಲ ಮಾಹಿತಿಯನ್ನು ನೀಡುತ್ತದೆ. ಅತಿ ಹೆಚ್ಚು ಅಂತರ್ಜಾಲ ಬಳಕೆದಾರರು ಇರುವ ಭಾರದಲ್ಲಿ 2021ರಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ಪದಗಳ ಪಟ್ಟಿ ಈಗ ಬಿಡುಗಡೆಯಾಗಿದೆ. ಗೂಗಲ್ ಬುಧವಾರ ತನ್ನ 2021 ವರ್ಷದ ಸರ್ಚ್ ವರದಿಯನ್ನು (Google Year in Search 2021) ಬಿಡುಗಡೆ ಮಾಡಿದ್ದು, ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದ ಈ ವರ್ಷದಲ್ಲಿ ಬಳಕೆದಾರರು ಹುಡುಕಾಡಿದ ವಿಷಯದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದೆ.

ಭಾರತದಲ್ಲಿ ಮಾಡಲಾಗಿರುವ ಸರ್ಚ್‌ಗಳಲ್ಲಿ ಕ್ರಿಕೆಟ್‌ ವಿಷಯದ ಸರ್ಚ್‌ಗಳು ಅಗ್ರಸ್ಥಾನದಲ್ಲಿದ್ದೂ 'ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League)' ಮತ್ತು 'ಐಸಿಸಿ ಟಿ 20 ವಿಶ್ವಕಪ್' (ICC T20 World Cup) ಬಗ್ಗೆ ಅತಿ ಹೆಚ್ಚು ಸರ್ಚ್‌ ಮಾಡಲಾಗಿದೆ. 'ಕೋವಿನ್' (CoWin) ಮತ್ತು 'ಕೋವಿಡ್ ಲಸಿಕೆ' ಗಾಗಿ ಕೂಡ ಸಾಕಷ್ಟು ಸರ್ಚ್‌ಗಳಾಗಿದ್ದು ದೇಶದಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿದೆ ಎಂದು ಸರ್ಚ್ ದೈತ್ಯ ಹೇಳಿದೆ. ಬ್ಯಾಟಲ್ ರಾಯಲ್ ಗೇಮ್ ಗರೆನಾ ಫ್ರೀ ಫೈರ್ ( Garena Free Fire) ಗೇಮಿಂಗ್ ವಿಭಾಗದಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ವಿಷಯವಾಗಿದ್ದು ಅದು ದೇಶದ ಒಟ್ಟಾರೆ ಟ್ರೆಂಡಿಂಗ್ ಪಟ್ಟಿಗೆ ಸೇರಿದೆ.

2021 ರಲ್ಲಿ ಟಾಪ್ ಟ್ರೆಂಡಿಂಗ್ Google Search ವಿಷಯಗಳು!

ಭಾರತದಲ್ಲಿ, 'ಇಂಡಿಯನ್ ಪ್ರೀಮಿಯರ್ ಲೀಗ್', 'ಕೋವಿನ್', 'ಐಸಿಸಿ ಟಿ20 ವಿಶ್ವಕಪ್', 'ಯೂರೋ ಕಪ್' ಮತ್ತು 'ಟೋಕಿಯೋ ಒಲಿಂಪಿಕ್ಸ್' 2021 ರಲ್ಲಿ ಭಾರತದಲ್ಲಿ ಗೂಗಲ್‌ನಲ್ಲಿ ಟಾಪ್-ಐದು ಟ್ರೆಂಡಿಂಗ್ ಹುಡುಕಾಟ (Top 5 Trending Searches) ವಿಷಯಗಳಾಗಿವೆ. ಕೊರೊನಾ ಎರಡನೇ ಅಲೆ ಬೆನ್ನಲ್ಲೇ ನೆಟ್ಟಿಗರು  ದೇಶದಲ್ಲಿ ಕೋವಿಡ್ ಲಸಿಕೆಗಳು ಮತ್ತು ಆಸ್ಪತ್ರೆಗಳ ಬಗ್ಗೆ ಗೂಗಲ್‌ನಲ್ಲಿ ಹೆಚ್ಚು ಹುಡುಕಾಟ ನಡೆಸಿದ್ದಾರೆ. ಮಾರಣಾಂತಿಕ ವೈರಸ್ ಹಾವಳಿ ಹೆಚಾಗಿದ್ದ ಹಿನ್ನೆಲೆ   ನೀಯರ್ ಮೀ (Near Me) ವಿಭಾಗದಲ್ಲಿ 'ಆಮ್ಲಜನಕ ಸಿಲಿಂಡರ್‌ಗಳು' ಮತ್ತು 'CT ಸ್ಕ್ಯಾನ್‌ಗಳ' ಹುಡುಕಾಟಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಅದೇ ರೀತಿ, ಈ ವರ್ಷ ಗೂಗಲ್‌ನಲ್ಲಿ ಆಹಾರ ವಿತರಣೆ, ಟಿಫಿನ್ ಸೇವೆಗಳು ಮತ್ತು ಟೇಕ್‌ಔಟ್ ರೆಸ್ಟೋರೆಂಟ್‌ಗಳ ಕುರಿತು ಪ್ರಶ್ನೆಗಳು ಹೆಚ್ಚಿವೆ ಎಂದು ಕಂಪನಿ ತಿಳಿಸಿದೆ.

Cyber Security Skilling Programme: ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಮೈಕ್ರೋಸಾಫ್ಟ್ ತರಬೇತಿ !

Google ನಲ್ಲಿ ಟ್ರೆಂಡಿಂಗ್ 'ಹೇಗೆ' ಮತ್ತು 'ಏನು' ಪ್ರಶ್ನೆಗಳು?

ಒಟ್ಟಾರೆ ಟ್ರೆಂಡಿಂಗ್ ವಿಷಯಗಳ ಜೊತೆಗೆ, ಗೂಗಲ್‌ನಲ್ಲಿ 'ಹೇಗೆ' ಮತ್ತು 'ಏನು'‌ (How and What Quetions) ಹುಡುಕಾಟ ವಿಭಾಗಗಳು ಈ ವರ್ಷ ಭಾರತದಲ್ಲಿ ಕೋವಿಡ್-ಸಂಬಂಧಿತ ಪ್ರಶ್ನೆಗಳಿಂದ ಕೂಡಿವೆ. 'COVID ಲಸಿಕೆ'ಗಾಗಿ ನೋಂದಾಯಿಸುವುದು ಹೇಗೆ, 'ಲಸಿಕೆ ಪ್ರಮಾಣೀಕರಣವನ್ನು ಡೌನ್‌ಲೋಡ್ ಮಾಡುವುದು ಹೇಗೆ' ಮತ್ತು 'ಆಮ್ಲಜನಕದ ಮಟ್ಟವನ್ನು ಹೇಗೆ ಹೆಚ್ಚಿಸುವುದು' ಮುಂತಾದ ಪ್ರಶ್ನೆಗಳನ್ನು ಜನರು ಸಕ್ರಿಯವಾಗಿ ಹುಡುಕಿದ್ದಾರೆ. ಇವು ಈ ವರ್ಷದ ಮೊದಲ ಮೂರು 'ಹೇಗೆ' ಹುಡುಕಾಟಗಳಾಗಿವೆ ಎಂದು ಗೂಗಲ್‌ ತಿಳಿಸಿದೆ.

Global Arms Sales: ಜಗತ್ತಿನ ಟಾಪ್ 100ರಲ್ಲಿ ಮೂರು ಭಾರತೀಯ ಕಂಪನಿಗಳು!‌

'ಏನು' ಹುಡುಕಾಟಗಳಲ್ಲಿ, 'ಬ್ಲಾಕ್ ಫಂಗಸ್ ಎಂದರೇನು' ಮತ್ತು 'ರಿಮೆಡೆಸಿವಿರ್ ಎಂದರೇನು' ಮುಂತಾದ ಪ್ರಶ್ನೆಗಳು ಅಗ್ರಸ್ಥಾನದಲ್ಲಿವೆ. 'ತಾಲಿಬಾನ್ ಎಂದರೇನು' ಮತ್ತು 'ನೂರರ ಫ್ಯಾಕ್ಟೋರಿಯಲ್ ಯಾವುದು' (factorial of hundred) ಸೇರಿದಂತೆ ಅನೇಕ ಹುಡುಕಾಟಗಳು ಪ್ರಮುಖ ಪ್ರಶ್ನೆಗಳಲ್ಲಿ ಸೇರಿವೆ.

Google ನಲ್ಲಿ ವರ್ಷದ ಟ್ರೆಂಡಿಂಗ್ ವ್ಯಕ್ತಿಗಳು

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಅವರು ಈ ವರ್ಷ ಭಾರತದಲ್ಲಿ ಗೂಗಲ್‌ನಲ್ಲಿ ಹೆಚ್ಚು ಟ್ರೆಂಡಿಂಗ್ ವ್ಯಕ್ತಿಯಾಗಿದ್ದಾರೆ. ಅವರ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ (Aryan Khan) ಅವರು ಮಾದಕ ದ್ರವ್ಯ ಪ್ರಕರಣದಲ್ಲಿ ಸುದ್ದಿಯಾಗಿದ್ದಾರೆ. ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ (Elon Musk) ಮತ್ತು ವಿಕ್ಕಿ ಕೌಶಲ್ (Vicky Kaushal), ಶೆಹನಾಜ್ ಗಿಲ್ (Shehnazz Gill) ಮತ್ತು ರಾಜ್ ಕುಂದ್ರಾ (Raj Kundra) ಸೇರಿದಂತೆ ಹಲವು ಸೆಲೆಬ್ರಿಟಿಗಳು 2021 ರಲ್ಲಿ ಗೂಗಲ್‌ನಲ್ಲಿ ಟಾಪ್ ಟ್ರೆಂಡಿಂಗ್ ವ್ಯಕ್ತಿಗಳಲ್ಲಿ ಸೇರಿದ್ದಾರೆ.

Google ನಲ್ಲಿ ವರ್ಷದ ಟ್ರೆಂಡಿಂಗ್ ಚಲನಚಿತ್ರಗಳು

ತಮಿಳು ಚಲನಚಿತ್ರ ಜೈ ಭೀಮ್ (Jai Bhim) ಚಲನಚಿತ್ರಗಳ ಪಟ್ಟಿಯಲ್ಲಿ ಇತರರನ್ನು ಹಿಂದಿಕ್ಕಿ ಅಗ್ರ ಸ್ಥಾನದಲ್ಲಿದೆ. ಹಾಗಾಗಿ ಈ ವರ್ಷ ಭಾರತದಲ್ಲಿನ ಗೂಗಲ್ ಬಳಕೆದಾರರ ಆಸಕ್ತಿಯನ್ನು ಸೆಳೆಯುವಲ್ಲಿ ಪ್ರಾದೇಶಿಕ ಸಿನಿಮಾ (Regional Cinema) ಯಶಸ್ವಿಯಾಗಿವೆ. ನಂತರದ ಸ್ಥಾನದಲ್ಲಿ ಬಾಲಿವುಡ್  ಚಲನಚಿತ್ರಗಳಾದ ಶೇರ್ಷಾ, ರಾಧೆ ಮತ್ತು ಬೆಲ್ ಬಾಟಮ್ ಇವೆ. ಗಾಡ್ಜಿಲ್ಲಾ vs ಕಾಂಗ್ ಮತ್ತು ಎಟರ್ನಲ್ಸ್ ಸೇರಿದಂತೆ ಹಾಲಿವುಡ್ ಚಲನಚಿತ್ರಗಳು ದೇಶದಲ್ಲಿ ವರ್ಷದ ಟಾಪ್ ಟ್ರೆಂಡಿಂಗ್ ಚಲನಚಿತ್ರಗಳಲ್ಲಿ ಸೇರಿವೆ.

Anti-drone Technology ಭಾರತದಲ್ಲೇ ಅಭಿವೃದ್ಧಿ: ಶೀಘ್ರದಲ್ಲಿ ಭದ್ರತಾ ಪಡೆಗಳಿಗೆ ಹಸ್ತಾಂತರ : ಅಮಿತ್ ಶಾ!

Google ನಲ್ಲಿ ಟ್ರೆಂಡಿಂಗ್ ಪಾಕ ವಿಧಾನಗಳು!

ಕೊರೋನಾ ಭೀತಿಯಂದ ವರ್ಷದ ಆರಂಭಿಕ ತಿಂಗಳುಗಳಲ್ಲಿ ಜನರು ಹೆಚ್ಚಾಗಿ ತಮ್ಮ ಮನೆಗಳಲ್ಲಿ ಉಳಿದುಕೊಂಡಿದ್ದರಿಂದ, ಅವರಲ್ಲಿ ಹಲವರು ಹೊಸ ಪಾಕವಿಧಾನಗಳನ್ನು (recipes) ಹುಡುಕಲು Google ಅನ್ನು ಬಳಸಿದ್ದಾರೆಂದು ವರದಿ ತೋರಿಸುತ್ತಿದೆ. ಈ ವರ್ಷ ಭಾರತದಲ್ಲಿ ಗೂಗಲ್‌ನಲ್ಲಿ ಟಾಪ್ ಟ್ರೆಂಡಿಂಗ್ ರೆಸಿಪಿಗಳು 'ಎನೋಕಿ ಮಶ್ರೂಮ್ಸ್' (Enoki Mushrooms) ಆಗಿದ್ದು, 'ಮೋದಕ್' ಮತ್ತು 'ಕುಕೀಸ್' ಕೂಡ ಪ್ರಮುಖ ಪ್ರಶ್ನೆಗಳಲ್ಲಿವೆ. ಗೂಗಲ್ ಈ ವರ್ಷ ತನ್ನ ವೆಬ್‌ಸೈಟ್‌ನಲ್ಲಿ ಹುಡುಕಲಾದ ಟಾಪ್ ರೆಸಿಪಿಗಳಲ್ಲಿ 'ಮೇಥಿ ಮಟರ್ ಮಲೈ' ಮತ್ತು 'ಪಾಲಕ್' ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ 'ಕಡಾ' ಬಗ್ಗೆ ಕೂಡ ಸರ್ಚ್‌ ಮಾಡಿದ್ದಾರೆ ಎಂದು ಹೇಳಿದೆ.

Google ನಲ್ಲಿ ಟ್ರೆಂಡಿಂಗ್ ಕ್ರೀಡಾ ಘಟನೆಗಳು

ಒಟ್ಟಾರೆ ಟಾಪ್ ಟ್ರೆಂಡ್‌ಗಳಂತೆಯೇ, ಇಂಡಿಯನ್ ಪ್ರೀಮಿಯರ್ ಲೀಗ್, ICC T20 ವಿಶ್ವಕಪ್ ಮತ್ತು ಯುರೋ ಕಪ್ ಭಾರತದಲ್ಲಿ ತನ್ನ ಸೈಟ್‌ನಲ್ಲಿ ಹುಡುಕಲಾದ ಮೂರು ಪ್ರಮುಖ ಕ್ರೀಡಾಕೂಟಗಳಾಗಿವೆ ಎಂದು ಗೂಗಲ್ ಹೇಳಿದೆ. ಇವುಗಳ ನಂತರ ಟೋಕಿಯೊ ಒಲಿಂಪಿಕ್ಸ್ ಮತ್ತು ಕೋಪಾ ಅಮೇರಿಕಾ ನಂತರದ ಸ್ಥಾನದಲ್ಲಿವೆ.

Google ನಲ್ಲಿ ಟ್ರೆಂಡಿಂಗ್ ಸುದ್ದಿ ಘಟನೆಗಳು

ಈ ವರ್ಷ ಭಾರತದಲ್ಲಿ ಗೂಗಲ್‌ನಲ್ಲಿ 'ಸುದ್ದಿ ಈವೆಂಟ್‌ಗಳು' ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ ಮೇಲುಗೈ ಸಾಧಿಸಿದೆ. ಅದರ ನಂತರ ಕಪ್ಪು ಶಿಲೀಂಧ್ರ (Black Fungus), ಅಫ್ಘಾನಿಸ್ತಾನ ಸುದ್ದಿ, ಪಶ್ಚಿಮ ಬಂಗಾಳ ಚುನಾವಣೆಗಳು ಮತ್ತು ಉಷ್ಣವಲಯದ ಚಂಡಮಾರುತ ತೌಕ್ತೆ ಬಗ್ಗೆ ಸರ್ಚ್‌ ಮಾಡಲಾಗಿದೆ.

Kadison–Singer Problem: 1959ರ ಗಣಿತ ಸಮಸ್ಯೆ ಪರಿಹರಿಸಿದ ಭಾರತೀಯ ಮೂಲದ ಅಮೆರಿಕನ್ ನಿಖಿಲ್ ಶ್ರೀವಾಸ್ತವ್!

Google ನಲ್ಲಿ ಜಾಗತಿಕ ಟ್ರೆಂಡಿಂಗ್  

ಭಾರತದಲ್ಲಿನ ಟಾಪ್ ಟ್ರೆಂಡ್‌ಗಳ ಜೊತೆಗೆ, ಗೂಗಲ್ ಜಗತ್ತಿನಾದ್ಯಂತ ಪ್ರಮುಖ ಸರ್ಚ್‌ ಬಗ್ಗೆಯೂ ಮಾಹಿತಿ ಬಹಿರಂಗಪಡಿಸಿದೆ. 70 ಕ್ಕೂ ಹೆಚ್ಚು ದೇಶಗಳಲ್ಲಿ ಮಾಡಲಾದ ಟಾಪ್‌ ಸರ್ಚ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ. 'ಆಸ್ಟ್ರೇಲಿಯಾ ವಿರುದ್ಧ ಭಾರತ' (Australia Vs India)  ಅತಿ ಹೆಚ್ಚು ಸರ್ಚ್‌ ಮಾಡಿದ ವಿಷಯವಾಗಿದ್ದು 'ಇಂಡಿಯಾ vs ಇಂಗ್ಲೆಂಡ್', 'ಐಪಿಎಲ್', 'ಎನ್‌ಬಿಎ' ಮತ್ತು 'ಯುರೋ 2021' ನಂತರದ ಸ್ಥಾನದಲ್ಲಿವೆ.

ಕಳೆದ ವರ್ಷ, 'ಕೊರೋನವೈರಸ್', 'ಯುಎಸ್ ಚುನಾವಣಾ ಫಲಿತಾಂಶಗಳು' ಮತ್ತು 'ಪಿಎಂ ಕಿಸಾನ್ ಯೋಜನೆ' ಗೂಗಲ್‌ನಲ್ಲಿ ಪ್ರಮುಖ ಹುಡುಕಾಟ ಪ್ರಶ್ನೆಗಳಲ್ಲಿ ಸೇರಿದ್ದವು, ಆದರೂ 'ಇಂಡಿಯನ್ ಪ್ರೀಮಿಯರ್ ಲೀಗ್' ಎಲ್ಲಾ ಇತರ ಪ್ರಶ್ನೆಗಳನ್ನು ಹಿಂದಿಕ್ಕಿ ಮತ್ತು ಟಾಪ್ ಟ್ರೆಂಡಿಂಗ್ ಪ್ರಶ್ನೆಯಾಗಿ ಹೊರಹೊಮ್ಮಿದ್ದವು.

Follow Us:
Download App:
  • android
  • ios