ನವದೆಹಲಿ(ಸೆ.17): ರಿಲಾಯನ್ಸ್ ಜಿಯೋ ಹಬ್ಬಗಳ ಪ್ರಯುಕ್ತ ಹೊಸ ಆಫರ್ ಘೋಷಿಸಿತ್ತು. 349 ರೂಪಾಯಿ ರೀಚಾರ್ಜ್‌ಗೆ ಪ್ರತಿ ದಿನ 1.5 ಜಿಜಿ ಡಾಟಾ ಹಾಗೂ 70 ದಿನಗಳ ಅವಧಿ ಕೂಡ ನೀಡಲಾಗಿದೆ. ಇದೀಗ ಜಿಯೋಗೆ ಪೈಪೋಟಿ ನೀಡಲು ಏರ್‌ಟೆಲ್ ಬಂಪರ್ ಆಫರ್ ಘೋಷಿಸಿದೆ.

ಏರ್‌ಟೆಲ್ ನೂತನ ಪ್ಲಾನ್ ಪ್ರಕಾರ 419 ರೂಪಾಯಿ ರೀಚಾರ್ಜ್ ಮಾಡಿದರೆ, ಪ್ರತಿ ದಿನ 1.4 ಜಿಬಿ ಡಾಟ ಹಾಗೂ 75 ದಿನಗಳ ವ್ಯಾಲಿಡಿಟಿ ಆಫರ್ ಘೋಷಿಸಿದೆ. ಈ ಮೂಲಕ ರಿಲಯನ್ಸ್ ಜಿಯೋಗೆ ಪೈಪೋಟಿ ನೀಡಲು ಸಜ್ಜಾಗಿದೆ.

ನೂತನ 419 ಪ್ಲಾನ್ ಆಫರ್‌ನಲ್ಲಿ ಪ್ರತಿ ದಿನ 300 ನಿಮಿಷಗಳ ಫ್ರಿ ಲೋಕಲ್ ಹಾಗೂ ಎಸ್‌ಟಿಡಿ ಕಾಲ್ ಹಾಗೂ ವಾರಕ್ಕೆ 1000 ನಿಮಿಷಗಳ ಫ್ರಿ ಲೋಕಲ್ ಹಾಗೂ ಎಸ್‌ಟಿಡಿ ಕಾಲ್ ಸೌಲಭ್ಯ ಸಿಗಲಿದೆ. ಇನ್ನು ಫ್ರೀ ನ್ಯಾಷನಲ್ ರೋಮಿಂಗ್ ಹಾಗೂ 100 ಎಸ್ಎಂಎಸ್ ಕೂಡ ಸಿಗಲಿದೆ.