ಎಲ್ಲೂ ಇಲ್ಲದ ನಿಯಮ ಭಾರತದಲ್ಲಿದೆ, ಪಾಲಿಸಲು ಒತ್ತಾಯಿಸಿದರೆ ದೇಶ ಬಿಡುತ್ತೇವೆ, ವ್ಯಾಟ್ಸ್ಆ್ಯಪ್ ಎಚ್ಚರಿಕೆ!
ಭಾರತದಲ್ಲಿ ವ್ಯಾಟ್ಸ್ಆ್ಯಪ್ ಪ್ರತಿಯೊಬ್ಬನ ಅವಿಭಾಜ್ಯ ಅಂಗವಾಗಿದೆ. ಕಚೇರಿ ಕೆಲಸವಿರಲಿ, ಮಾರಾಟವೇ ಇರಲಿ, ಬಹುತೇಕ ಕೆಲಸ, ಸಂದೇಶ, ಮೀಟಿಂಗ್ ಎಲ್ಲವೂ ವ್ಯಾಟ್ಸ್ಆ್ಯಪ್ ಮೂಲಕವೇ ನಡೆಯುತ್ತಿದೆ. ಆದರೆ ಇಂದು ವ್ಯಾಟ್ಸ್ಆ್ಯಪ್ ಏಕಾಏಕಿ ಭಾರತ ತೊರೆಯುವುದಾಗಿ ಹೈಕೋರ್ಟ್‌ನಲ್ಲಿ ಎಚ್ಚರಿಕೆ ಹೇಳಿಕೆ ನೀಡಿದೆ.
ನವದೆಹಲಿ(ಏ.26) ವ್ಯಾಟ್ಸ್ಆ್ಯಪ್ ಭಾರತದಲ್ಲಿ ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ದಿನ ನಿತ್ಯದ ಬದುಕಿನಲ್ಲಿ, ವೃತ್ತಿಯಲ್ಲಿ, ಕುಟುಂಬದ ಜೊತೆಗಿನ ಸಂಪರ್ಕ, ಮಾತುಕತೆಗೆ ಸೇರಿದಂತೆ ಎಲ್ಲದ್ದಕ್ಕೂ ಭಾರತದಲ್ಲಿ ವ್ಯಾಟ್ಸ್ಆ್ಯಪ್ ಪ್ರಮುಖ ವೇದಿಕೆಯಾಗಿದೆ. ಆದರೆ ಇದೇ ವ್ಯಾಟ್ಸ್ಆ್ಯಪ್ ಇದೀಗ ಭಾರತ ತೊರೆಯುವ ಎಚ್ಚರಿಕೆ ನೀಡಿದೆ. ಐಟಿ ನಿಯಮ ಹೇರಿ ವ್ಯಾಟ್ಸ್ಆ್ಯಪ್ ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಚಾಟ್ಸ್ ಬ್ರೇಕ್ ಮಾಡಲು ಹೇಳಿದರೆ, ನಾವು ಭಾರತದಲ್ಲಿ ಇರುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ಹೇಳಿದೆ. ವ್ಯಾಟ್ಸ್ಆ್ಯಪ್ ಈ ಹೇಳಿಕೆ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ಮೇಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್ ಭಾರತದಲ್ಲಿ ಐಟಿ ನಿಯಮದ ಅಡಿಯಲ್ಲಿ ಕೆಲ ಸವಾಲು ಎದುರಿಸುತ್ತಿದೆ. ಈ ಪೈಕಿ ಪ್ರಮುಖವಾಗಿ ವ್ಯಾಟ್ಸ್ಆ್ಯಪ್ ಸೇರಿದಂತೆ ಇತರ ಮೇಸೆಜಿಂಗ್ ಆ್ಯಪ್‌ಗಳ ಸರ್ಕಾರ ಬಯಸಿದ್ದಲ್ಲಿ ಯಾವುದೇ ಮೆಸೇಜ್ ಹುಡುಕುವ, ಡಿಕೋಡ್ ಮಾಡುವ ಅನುಮತಿಯನ್ನು ಕೇಳಿದೆ. ಇದು ಐಟಿ ನಿಯಮದ ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ ಅಡಿಯಲ್ಲಿ ಈ ಅನುಮತಿಯನ್ನು ವ್ಯಾಟ್ಸ್ಆ್ಯಪ್ ನೀಡುವಂತೆ ಸೂಚಿಸಿತ್ತು. ದೇಶದ ಭದ್ರತೆ, ಸೌರ್ವಭೌಮತ್ವ, ಐಕ್ಯತೆ ವಿಚಾರದಲ್ಲಿ ಯಾವುದೇ ಮಸೇಜ್ ಡಿಕೋಡ್ ಮಾಡುವ ಅನುಮತಿಯನ್ನು ನೀಡಲು ಭಾರತ ಸರ್ಕಾರ ಕೇಳಿದೆ.
ಈ ದೇಶದ ಐಫೋನ್ ಬಳಕೆದಾರರಿಗೆ ವ್ಯಾಟ್ಸ್ಆ್ಯಪ್ ನಿಷೇಧ, ಸರ್ಕಾರದ ಆದೇಶ!
ಈ ಕುರಿತು ವ್ಯಾಟ್ಸ್ಆ್ಯಪ್ ಹಾಗೂ ಭಾರತ ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಇದೀಗ ವ್ಯಾಟ್ಸ್ಆ್ಯಪ್ ಪರ ವಕೀಲ ತೇಜಸ್ ಕಾರಿಯಾ ದೆಹಲಿ ಹೈಕೋರ್ಟ್‌ನಲ್ಲಿ ಈ ಕುರಿತು ವಾದ ಮಂಡಿಸಿದ್ದಾರೆ. ಭಾರತದಲ್ಲಿ ವ್ಯಾಟ್ಸ್ಆ್ಯಪ್ 400 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಕೋಟ್ಯಾಂತರ ಜನರು ವ್ಯಾಟ್ಸ್ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಪ್ರಮುಖವಾಗಿ ವ್ಯಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಸುರಕ್ಷತೆಯನ್ನು ನೀಡುತ್ತದೆ. ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಚಾಟ್ ಬ್ರೇಕ್ ಮಾಡಿದರೆ ವ್ಯಾಟ್ಸ್ಆ್ಯಪ್ ಬಳಕೆದಾರರಿಕೆ ಯಾವುದೇ ಭದ್ರತೆ ನೀಡಲು ಸಾಧ್ಯವಿಲ್ಲ. ಐಟಿ ನಿಯಮದ ಮೂಲಕ ಒತ್ತಾಯಿಸಿದರೆ ನಾವು ಭಾರತ ತೊರೆಯುತ್ತೇವೆ ಎಂದು ಹೈಕೋರ್ಟ್‌ನಲ್ಲಿ ವ್ಯಾಟ್ಸ್ಆ್ಯಪ್ ಹೇಳಿದೆ.
ಇದೇ ವೇಳೆ ಚೀಫ್ ಜಸ್ಟೀಸ್ ಮನ್‌ಮೋಹನ್ ಈ ಕುರಿತು ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ರೀತಿಯ ಸಮಸ್ಯೆ ಇತರ ಯಾವುದಾದರೂ ದೇಶದಲ್ಲಿ ಎದುರಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವ್ಯಾಟ್ಸ್ಆ್ಯಪ್ ಈ ರೀತಿಯ ಐಟಿ ನಿಯಮ ಯಾವುದೇ ದೇಶದಲ್ಲಿ ಇಲ್ಲ. ಬ್ರಿಜಿಲ್ ಕೂಡ ಈ ರೀತಿಯ ನಿಯಮ ಹೇರಿಲ್ಲ ಎಂದು ಹೇಳಿದೆ.
ವಾಟ್ಸಪ್ ಬಳಕೆದಾರರಿಗೆ ಗುಡ್‌ನ್ಯೂಸ್, Meta AI chatbot ಪರಿಚಯಿಸಿದೆ! ಯಾರೆಲ್ಲ ಬಳಸಬಹುದು?