ರಾಯಚೂರು ಕೃಷ್ಣಾ ನದಿ ತೀರದ ರೈತರ ಪಂಪ್‌ಸೆಟ್‌ ಕದಿಯುತ್ತಿದ್ದ ತೆಲಂಗಾಣ ಮೂಲದ ಅಂತರರಾಜ್ಯ ಕಳ್ಳರ ಗ್ಯಾಂಗನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಕೆಟ್ಟುಹೋದ ಮೋಟಾರ್ ಕದ್ದ ಪ್ರಕರಣದ ಜಾಡು ಹಿಡಿದ ಪೊಲೀಸರು, ಆರೋಪಿಗಳನ್ನ ಬಂಧಿಸಿ ₹4.31 ಲಕ್ಷ ಮೌಲ್ಯದ 18 ಪಂಪ್‌ಸೆಟ್‌ಗಳು ವಶಕ್ಕೆ ಪಡೆದಿದ್ದಾರೆ.

ರಾಯಚೂರು (ನ.20): ಕೃಷ್ಣಾ ನದಿ ತೀರದ ರೈತರ ನಿದ್ದೆಗೆಡಿಸಿದ್ದ ಅಂತರರಾಜ್ಯ ಕಳ್ಳರ ಗ್ಯಾಂಗನ್ನು ರಾಯಚೂರು ಗ್ರಾಮೀಣ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಬಲೆಗೆ ಕೆಡವಿದ್ದಾರೆ.

ವಿಜಯಕುಮಾರ್ , ಜಿ. ಆದಿಗೌಡ ಬಂಧಿತ ಆರೋಪಿಗಳು. ಇಬ್ಬರೂ ತೆಲಂಗಾಣ ಅವಸಲಿ ಮೂಲದವರಾಗಿದ್ದಾರೆ. ಬಂಧಿತ ಖದೀಮರು ಕಳೆದ ಎರಡೂವರೆ ವರ್ಷಗಳಿಂದ ಸ್ವಿಫ್ಟ್ ಕಾರಿನಲ್ಲಿ ರಾತ್ರಿ ಹೊತ್ತು ಬಂದು ಶಕ್ತಿನಗರ, ಯಾಪಲದಿನ್ನಿ, ಕೃಷ್ಣ ಠಾಣಾ ವ್ಯಾಪ್ತಿಯಲ್ಲಿ ರೈತರ ಪಂಪ್‌ಸೆಟ್‌ಗಳನ್ನು ಕದ್ದು ತೆಲಂಗಾಣಕ್ಕೆ ಕಳ್ಳ ಸಾಗಾಣೆ ಮಾಡುತ್ತಿದ್ದರು.

ಕೆಟ್ಟುಹೋದ ಪಂಪ್‌ಸೆಟ್ ಕದ್ದು ಸಿಕ್ಕಿಬಿದ್ದ ಖದೀಮರು:

ರಾಯಚೂರು ತಾಲ್ಲೂಕಿನ ಕೊರ್ವಿಹಾಳ ಗ್ರಾಮದ ರೈತ ನರಸಿಂಗ್ ಅವರ ಮನೆ ಬಳಿ ರಿಪೇರಿಗಾಗಿ ಇಟ್ಟಿದ್ದ ಮೂರು ಕೆಟ್ಟುಹೋಗಿದ್ದ ಮೋಟಾರುಗಳನ್ನೂ ಹೊತ್ತೊಯ್ದಿದ್ದ ಖದೀಮರು. ಆದರೆ ಕೆಟ್ಟು ಹೋದ ಮೋಟರ್‌ಗೆಲ್ಲ ಯಾರು ದೂರು ಕೊಡ್ತಾರೆ ಎಂದು ಖದೀಮರು ನಿರ್ಲಕ್ಷ್ಯ ಮಾಡಿದ್ರೋ ಏನೋ ಆದರೆ ಎರಡು ವರ್ಷದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಖದೀಮರು ಈ ಬಾರಿ ಕೆಟ್ಟು ಹೋದ ಮೋಟರ್ ಕದ್ದು ಪೊಲೀಸರಿಗೆ ಬಲೆಗೆ ಬಿದ್ದ ಗ್ಯಾಂಗ್

ಪಿಎಸ್‌ಐ ಪ್ರಕಾಶ್ ಡಂಬಾಳ್ ಟೀಂ ಯಶಸ್ವಿ ಕಾರ್ಯಾಚರಣೆ:

ಕೊರ್ವಿಹಾಳ ಗ್ರಾಮದ ರೈತ ನರಸಿಂಗ್ ಮನೆ ಬಳಿ ರಿಪೇರಿಗಾಗಿ ಇಟ್ಟಿದ್ದ ಮೂರು ಕೆಟ್ಟುಹೋಗಿದ್ದ ಮೋಟಾರುಗಳ ಕಳ್ಳತನವಾದ ಬಗ್ಗೆ ದೂರು ನೀಡುತ್ತಿದ್ದಂತೆ ತಕ್ಷಣ ರಾಯಚೂರು ಗ್ರಾಮೀಣ ಠಾಣೆಯ ಪಿಎಸ್‌ಐ ಪ್ರಕಾಶ್ ಡಂಬಾಳ್ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿ ತೆಲಂಗಾಣದ ಗ್ರಾಮಗಳಲ್ಲಿ ಹುಡುಕಾಟ ನಡೆಸಿದೆ. ಕೊನೆಗೆ ಕೆಟ್ಟುಹೋಗಿದ್ದ ಮೋಟಾರುಗಳನ್ನೇ ಸ್ವಿಫ್ಟ್ ಕಾರಿನಲ್ಲಿರುವುದು ಪತ್ತೆಹಚ್ಚಿ ಇಬ್ಬರು ಖದೀಮರನ್ನು ಕಾರು ಸಮೇತ ಬಂಧಿಸುವಲ್ಲಿ ಪಿಎಸ್‌ಐ ಪ್ರಕಾಶ್ ಡಂಬಾಳ್ ಟೀಂ ಯಶಸ್ವಿಯಾಗಿದೆ.

ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾದ ರಾಯಚೂರು ಗ್ರಾಮೀಣ ಠಾಣೆಯ ಪಿಎಸ್‌ಐ ಪ್ರಕಾಶ್ ಡಂಬಾಳ್ ಅವರು ವಿಶೇಷ ತಂಡ ರಚಿಸಿ, ತೆಲಂಗಾಣದ ಹಲವು ಗ್ರಾಮಗಳಲ್ಲಿ ರಾತ್ರಿಯಿಡೀ ದಾಳಿ ನಡೆಸಿದರು. ಕೊನೆಗೆ ಕೆಟ್ಟುಹೋಗಿದ್ದ ಮೋಟಾರುಗಳನ್ನೇ ಸ್ವಿಫ್ಟ್ ಕಾರಿನಲ್ಲಿ ಒಯ್ಯುತ್ತಿದ್ದ ಸ್ಥಳದಲ್ಲಿ ಇಬ್ಬರನ್ನೂ ಕಾರು ಸಮೇತ ಕೈಗೆ ತೆಗೆದುಕೊಂಡರು.ಜಪ್ತಿ ಮಾಡಿದ್ದು ₹4 ಲಕ್ಷ 31 ಸಾವಿರ ಮೌಲ್ಯದ 18 ಪಂಪ್‌ಸೆಟ್ ಹಾಗೂ ಮೋಟಾರುಗಳು ಕಳ್ಳತನಕ್ಕೆ ಬಳಸಿದ್ದ ಸ್ವಿಫ್ಟ್ ಕಾರು ವಶಕ್ಕೆ ಪಡೆಯಲಾಗಿದೆ.

ರಾಯಚೂರು ಎಸ್‌ಪಿ ಮೆಚ್ಚುಗೆ:

ಪೊಲೀಸರು ಒಟ್ಟು ₹4.31 ಲಕ್ಷ ಮೌಲ್ಯದ 18 ಪಂಪ್‌ಸೆಟ್ ಮತ್ತು ಮೋಟಾರುಗಳನ್ನು ಜಪ್ತಿ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ರಾಯಚೂರು ಎಸ್‌ಪಿ ಎಂ. ಪುಟ್ಟಮಾದಯ್ಯ ಅವರು ಪಿಎಸ್‌ಐ ಪ್ರಕಾಶ್ ಡಂಬಾಳ್ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೈತರಿಗೆ ನ್ಯಾಯ ಒದಗಿಸಿದ ಈ ಕಾರ್ಯಾಚರಣೆಗೆ ಪೊಲೀಸ್ ಅಧಿಕಾರಿಗಳು, ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Raichur Rural Police Bust Inter State Gang Telangana Duo Arrested with ₹4.31 Lakh Stolen Pump Sets