ಕಾಡಂಚಿನ ಗ್ರಾಮಗಳ ಜನರ ನಿದ್ದೆಗೆಡಿಸಿದ ನರಭಕ್ಷಕ; ಹುಲಿ ದಾಳಿಗೆ ದನಗಾಯಿ ಮಹಿಳೆ ಬಲಿ!
ಮೈಸೂರು ಜಿಲ್ಲೆಯ ಬಂಡಿಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನವ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ಹೆಚ್ಚಿದ್ದು ಒಂದು ತಿಂಗಳ ಅವಧಿಯಲ್ಲಿ ಇಬ್ಬರನ್ನು ಬಲಿ ಪಡೆದಿದೆ.
ವರದಿ : ಮಧು.ಎಂ.ಚಿನಕುರಳಿ
ಮೈಸೂರು (ನ.25): ಮೈಸೂರು ಜಿಲ್ಲೆಯ ಬಂಡಿಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ನಿರಂತರವಾಗಿ ನಡೆಯುತ್ತಿದೆ. ಹುಲಿ ದಾಳಿಯಾದ ಸಂದರ್ಭದಲ್ಲಷ್ಟೇ ಅರಣ್ಯ ಇಲಾಖೆ ಹುಲಿ ಕೂಂಬಿಂಗ್ ಮಾಡಿ ಸಾರ್ವಜನಿಕರ ಕಣ್ಣೊರೆಸುವ ಕೆಲಸ ಮಾಡಿ ಕಾರ್ಯಣೆ ಕೈಬಿಟ್ಟು ಅರಣ್ಯ ಇಲಾಖೆ ಸುಮ್ಮನಾಗ್ತಿದೆ. ಕಳೆದ ಇಪ್ಪತ್ತೈದು ದಿನಗಳ ಹಿಂದೆ ನಂಜನಗೂಡು ತಾಲೂಕಿನ ಮಹದೇವನಗರ ವ್ಯಾಪ್ತಿಯಲ್ಲಿ ವೀರಭದ್ರ ಬೋವಿ ಮೇಲೆ ಹುಲಿ ಅಟ್ಯಾಕ್ ಮಾಡಿತ್ತು. ಬಳಿಕ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದ ಬಳಿಕೆ ಎರಡು ಸಾಕಾನೆ ಕರೆಸಿ ಕೂಂಬಿಂಗ್ ಮಾಡಿ ಕಾರ್ಯಚರಣೆ ಕೈಬಿಟ್ಟಿತ್ತು. ಇದೀಗ ಮತ್ತೆ ಇದೇ ವ್ಯಾಪ್ತಿಯ ಪಕ್ಕದ ಗ್ರಾಮ ಬಳ್ಳೂರು ಹುಂಡಿ ಗ್ರಾಮದ ರೈತ ಮಹಿಳೆ ರತ್ನಮ್ಮ (50) ಮೇಲೆ ಅಟ್ಯಾಕ್ ಮಾಡಿ ಕೊಂದು ಹಾಕಿದೆ.
ನಿನ್ನೆ ಸುಮಾರು ಸಂಜೆ 4 ಗಂಟೆ ವೇಳೆಗೆ ಬಂಡೀಪುರ ವ್ಯಾಪ್ತಿ ಕಾಡಂಚಿನಲ್ಲಿ ದನ ಮೇಯಿಸುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಹುಲಿ ರತ್ನಮ್ಮನನ್ನ ಕೊಂದು ಕಾಡಿಗೆ ಮೃತದೇಹ ಎಳೆದೊಯ್ತಿದೆ. ಇನ್ನು ಪ್ರಕರಣ ಸಂಬಂಧ ಕಿಡಿ ಕಾರಿರೋ ಪರಸರ ವಾದಿ ಜೋಸೆಫ್ ಹೂವರ್ ಬಂಡಿಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ವಿರುದ್ಧ ಕಿಡಿಕಾರಿದ್ದಾರೆ. ಗಸ್ತು ತಿರುಗಲು ಜೀಪ್ ಗಳಿಗೆ ಹಣವನ್ನೇ ಕೊಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಚಾಮರಾಜನಗರ: ಕಾಡಬೇಗೂರು ಜಮೀನಿನಲ್ಲಿ ಕೆಲಸ ಮಾಡುವಾಗ ಹುಲಿ ದಾಳಿ, ರೈತ ಬಲಿ
ನಿರಂತರ ಹುಲಿ ದಾಳಿಗೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಅವರೇ ಕಾರಣ ಅನ್ನೋ ಆರೋಪ ಕೇಳಿ ಬರ್ತಿದೆ. ಸರ್ಕಾರದಿಂದ ಹುಲಿ ಯೋಜನೆ ನಿರ್ವಹಣೆಗೆ ಬರೋ ಹಣವನ್ನು ಹುಲಿ ಯೋಜನೆ ನಿರ್ದೇಶಕ ರಮೇಶ್ ದುರ್ಬಳಕೆ ಮಾಡಿಕೊಂಡಿರೋ ಗಂಭೀರ ಆರೋಪ ಇದ್ದು. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆಯಂತೆ. ಜೀಪ್ ಟೈರ್ ಬದಲಾಯಿಸುತ್ತಿಲ್ಲ. ಗಸ್ತು ತಿರುಗಲು ಜೀಪ್ ಗಳಿಗೆ ಹಣವನ್ನೇ ಕೊಡುತ್ತಿಲ್ಲ. ಇಷ್ಟೇಲ್ಲ ಅನಾಹುತಕ್ಕೆ ಹುಲಿ ಯೋಜನೆ ನಿರ್ದೇಶಕ ರಮೇಶ್ ಹೊಣೆ. ಇಂತಹವರನ್ನ ಏಕೆ ಮುಂದುವರೆಸಬೇಕು. ವರ್ಗಾವಣೆ ಆಗಿದ್ದವರು ಕೋರ್ಟ್ ಮೂಲಕ ಅದೇ ಸ್ಥಳಕ್ಕೆ ಬಂದಿದ್ದಾರೆ ಮತ್ತೆ ಅವರ ತಪ್ಪು ತಿದ್ದಿಕೊಳ್ಳಲು ಮುಂದಾಗಿಲ್ಲ. ಹೀಗಾಗಿ ನಿರ್ದೇಶಕ ಸ್ಥಾನದಿಂದ ತೆಗೆಯುವಂತೆ ಒತ್ತಾಯ ಕೇಳಿಬಂದಿದೆ.
ಹುಲಿಗೆ ಆಹಾರವಾದ 7 ವರ್ಷದ ಬಾಲಕ: ಅಪ್ಪ-ಅಮ್ಮನೆದುರೇ ಮಗನನ್ನು ಕೊಂದು ತಿಂದ ವ್ಯಾಘ್ರ
ಒಟ್ಟಿನಲ್ಲಿ, ಹುಲಿ ದಾಳಿಗೆ ಅಮಾಯಕರ ಜೀವ ಬಲಿಯಾಗಿಹೋಗ್ತಿದೆ. ಆದ್ರೆ ಕಾಡು ಪ್ರಾಣಿಗಳ ಹಾವಳಿ ತೆಡೆಗೆ ಮೀಸಲಿಟ್ಟ ಹಣವನ್ನ ನಿರ್ದೇಶರೇ ದುರ್ಬಳಕೆ ಮಾಡಿಕೊಳ್ಳುತ್ತಿರೋದು ಬೇಲಿಯೇ ಎದ್ದು ಹೊಲ ಮೇಯ್ದ ರೀತಿಯಾಗ್ತಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ.