Asianet Suvarna News Asianet Suvarna News

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಗರಣ; ಬ್ಯಾಂಕ್ ಸಿಬ್ಬಂದಿ ಮೇಲೆ ಎಫ್‌ಐಆರ್ ದಾಖಲು

ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅಕ್ರಮವಾಗಿ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಮೇಲೆ ನಿಗಮದ ಮ್ಯಾನೇಜರ್ ಎಫ್‌ಐಆರ್ ದಾಖಲಿಸಿದ್ದಾರೆ.

Valmiki Development Corporation 187 crore scam FIR file against Union bank staff sat
Author
First Published May 29, 2024, 1:53 PM IST | Last Updated May 29, 2024, 1:53 PM IST

ಬೆಂಗಳೂರು (ಮೇ 29): ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಬ್ಯಾಂಕ್ ಸಿಬ್ಬಂದಿಯೂ ಪಾಲುದಾರರಾಗಿದ್ದಾರೆಂದು ಆರೋಪಿಸಿ ವಾಲ್ಮೀಕಿ ನಿಗಮದ ಪ್ರಧಾನ ವ್ಯವಸ್ಥಾಪಕ (ಮ್ಯಾನೇಜರ್) ರಾಜಶೇಖರ್ ಅವರು ಬೆಂಗಳೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆ ವಿರುದ್ಧ ದೂರು ದಾಖಲಿಸಿದ್ದಾರೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಅಕ್ರಮವಾಗಿ 187.33 ಕೋಟಿ ರೂಪಾಯಿ ಹಣ ಗುಳಂ ಮಾಡಿರೋ ಆರೋಪದಲ್ಲಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ಮಹರ್ಷಿ ವಾಲ್ಮೀಕಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ದೂರು ದಾಖಲಿಸಿದ್ದಾರೆ. ವಸಂತನಗರದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹೆಸರಲ್ಲಿ  ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಇತ್ತು. 19/02/2024 ರಂದು ಖಾತೆಯನ್ನು ಎಂ.ಜಿ. ರೋಡ್ ಬ್ರಾಂಚ್ ಗೆ ವರ್ಗಾವಣೆ ಮಾಡಿಕೊಂಡಿರುತ್ತಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂ. ಅವ್ಯವಹಾರ; ಸಚಿವರ ಹೆಸರು ಬರೆದಿಟ್ಟು ಅಧಿಕಾರಿ ಆತ್ಮಹತ್ಯೆ

ಬ್ಯಾಂಕ್ ಖಾತೆ ಸಂಖ್ಯೆ 520141001659653 ಅಕೌಂಟ್ ನಿಗಮದ ಪರವಾಗಿ ನಿರ್ವಹಣೆ ಮಾಡಲಾಗುತ್ತಿರುತ್ತದೆ. ಆದರೆ, 26/02/2024 ರಂದು ಬ್ಯಾಂಕಿನವರು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಾಧಿಕಾರಿಗಳು ಸಹಿ ಪಡೆದುಕೊಂಡಿರುತ್ತಾರೆ. ನಂತರ ನಿಗಮದ ಹಣವಿರುವ ಖಾತೆಯಿಂದ 4/03/2024 ರಂದು 25 ಕೋಟಿ ರೂ., 06/03/2024 ರಂದು 25 ಕೋಟಿ ರೂ., 21/03/2024 ರಂದು 44 ಕೋಟಿ ರೂ., 22/05/2024 ರಂದು 33 ಕೋಟಿ ರೂಪಾಯಿ ಹಾಗೂ 21 /05/2024 ರಂದು 50 ಕೋಟಿ ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಒಟ್ಟಾರೆ, ವಾಲ್ಮೀಕಿ ನಿಗಮದ ಬ್ಯಾಂಕ್ ಅಕೌಂಟ್ ನಿಂದ 187.33 ಕೋಟಿ ರೂ. ಹಣ ವರ್ಗಾವಣೆಯಾಗಿದೆ.

ಒಟ್ಟಾರೆ ವಾಲ್ಮೀಕಿ ನಿಗಮದ ಅಕೌಂಟ್ ನಿಂದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಾಗೂ ಸ್ಟೇಟ್ ಹುಜುರ್ ಟ್ರೇಜರಿ ಖಾಜನೆ -02 ಯಿಂದ ನಿಗಮದ ಖಾತೆಗೆ ಹಣ ಸಂದಾಯವಾಗಿರುತ್ತದೆ. ಈ ಮಧ್ಯೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದ್ದರೂ, ಸದರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ನಿಗಮದಿಂದ ಯಾವುದೇ ಪತ್ರ ವ್ಯವಹಾರ ನಡೆಸಿರುವುದಿಲ್ಲ. ಆದರೂ, ನಕಲಿ ದಾಖಲೆ ಸೃಷ್ಠಿಸಿ ಬರೋಬ್ಬರಿ 94,73,08,500 ಅಕ್ರಮ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಯೂನಿಯನ್ ಬ್ಯಾಂಕ್ ನ ಎಂಡಿ ಹಾಗೂ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿರುವ ಮನಿ ಮೇಖಲೈ, ಕಾರ್ಯನಿರ್ವಾಹಕ ನಿರ್ದೇಶಕ ನಿತೇಶ್ ರಂಜನ್, ಬ್ಯಾಂಕ್ ಪ್ರಮುಖ ಸಿಬ್ಬಂದಿಯಾದ ರಾಮಸುಬ್ರಮಣ್ಯಂ, ಸಂಜಯ ರುದ್ರ , ಪಂಕಜ್ ದ್ವಿವೇದಿ , ಸುಶಿಚಿತ ರಾವ್ ಸೇರಿ ಇತರ ಬ್ಯಾಂಕ್ ಆಡಳಿತ ಮಂದಿ ಮೇಲೆ ಎಫ್ ಐಆರ್ ದಾಖಲು ಮಾಡಲಾಗಿದೆ. ಬ್ಯಾಂಕ್ ಆಡಳಿತ ಮಂಡಳಿ ಬೇಜಾವಾಬ್ದಾರಿಯಿಂದ ಅಕ್ರಮ ಹಣ ವರ್ಗಾವಣೆ ಮಾಡಲಾಗುದೆ ಎಂಬುದು ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರ್ ಲೆಕ್ಕ ಮಾಡುವಾಗಲೇ ತಿಳಿದುಬಂದಿದೆ.

ನಾನು ಮೌಖಿಕ ಆದೇಶ ಕೊಟ್ಟಿಲ್ಲ, ರಾಜೀನಾಮೆ ಪ್ರಶ್ನೆಯೇ ಇಲ್ಲ: ಸಚಿವ ನಾಗೇಂದ್ರ

ಇನ್ನು ನಿಗಮದಲ್ಲಿ ಹಣವಿರುವ ಬ್ಯಾಂಕ್ ಖಾತೆಯನ್ನು ತಾನು ನಿರ್ವಹಣೆ ಮಾಡುತ್ತಿದ್ದ ಅವಧಿಯಲ್ಲಿಯೇ ಇಷ್ಟೆಲ್ಲಾ ಅವ್ಯವಹಾರ ಮಾಡಲು ಬಳಕೆ ಮಾಡಿಕೊಂಡಿದ್ದರಿಂದ ಇದಕ್ಕೆ ತಾನೇ ಹೊಣೆಗಾರನಾಗುತ್ತೇನೆಂಬ ಭಯದಿಂದ ಲೆಕ್ಕಾಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಸದ್ಯ ಹೈಗ್ರೌಂಡ್ ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಅಕ್ರಮದಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು, ಸಚಿವರುಗಳು ಭಾಗಿಯಾಗಿರೋ ಆರೋಪ ಇದೆ.

Latest Videos
Follow Us:
Download App:
  • android
  • ios