Asianet Suvarna News Asianet Suvarna News

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂ. ಅವ್ಯವಹಾರ; ಸಚಿವರ ಹೆಸರು ಬರೆದಿಟ್ಟು ಅಧಿಕಾರಿ ಆತ್ಮಹತ್ಯೆ

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂ. ಹಗರಣಕ್ಕೆ ಬೆದರಿ ನಿಗಮದ ಅಧಿಕಾರಿ ಚಂದ್ರಶೇಖರ್, ಇಲಾಖಾ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಹೆಸರನ್ನು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. 

Maharshi Valmiki Development Corporation Rs 85 crore scam shivamogga officer death sat
Author
First Published May 27, 2024, 12:22 PM IST

ಶಿವಮೊಗ್ಗ/ಬೆಂಗಳೂರು (ಮೇ 27): ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಸುಮಾರು 187 ಕೋಟಿ ರೂ. ಮೌಲ್ಯದ ಬೃಹತ್ ದೊಡ್ಡ ಹಗರಣ ನಡೆದಿದ್ದು, ಈ ಪೈಕಿ 85 ಕೋಟಿ ರೂ. ಹಣವನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಅವರು ಮಾಡಿದ ತಪ್ಪನ್ನು ತಮ್ಮ ಮೇಲೆ ಹಾಕುತ್ತಿದ್ದಾರೆಂಬ ಭಯದಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟೆಂಟ್ ಇಲಾಖಾ ಸಚಿವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟೆಂಟ್ ಸೂಪರಿಡೆಂಟ್  ಚಂದ್ರಶೇಖರ್ ನೇಣಿಗೆ ಶರಣಾದ ಅಧಿಕಾರಿಯಾಗಿದ್ದಾರೆ. ಇವರು ನನ್ನ ಸಾವಿಗೆ ನಿಗಮದ ಅಧಿಕಾರಿಗಳು ಹಾಗೂ ಇಲಾಖೆಯ ಸಚಿವರೇ ಕಾರಣವೆಂದು ಡೆತ್ ನೋಟ್ ಬರೆದಿಟ್ಟಿರುವುದು ಪೊಲೀಸರಿಗೆ ಲಭ್ಯವಾಗಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವ್ಸಸ್ಥಾಪಕ ನಿರ್ದೇಶಕ ಜೆ.ಪದ್ಮನಾಭ, ಅಕೌಂಟ್ ವ್ಯವಸ್ಥಾಪಕ ಪರಶುರಾಮ್ ದುರ್ಗಣ್ಣನವರ್ ಹಾಗೂ ಯೂನಿಯನ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಶುಚಿಸ್ಮಿತ ಕಾರಣವೆಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಹರೀಶ್‌ ಪೂಂಜ ಶಾಸಕ ಅಂತ ಬಿಡೋಕೆ ಆಗುತ್ತಾ: ಸಿಎಂ ಸಿದ್ದರಾಮಯ್ಯ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನದಿಂದ 80 ರಿಂದ 85 ಕೋಟಿ ನಿಯಮಬಾಹಿರವಾಗಿ ಲೂಟಿ ಮಾಡಲಾಗಿದೆ. ಈ ಅವ್ಯವಾರದಲ್ಲಿ ನನ್ನ ಪಾತ್ರವಿಲ್ಲ. ಆದರೆ ನನ್ನ ತಪ್ಪೇನೆಂದರೆ ಕೆಲಸದ ಒತ್ತಡದಲ್ಲಿ ಸದರಿ ಖಾತೆಯ ಚೆಕ್ ಪುಸ್ತಕವನ್ನು ವಾಪಸ್ ಪಡೆಯದಿರುವುದು. ಜೊತೆಗೆ, ನಿಗಮದ ಕ್ಯಾಶ್ ಪುಸ್ತಕವನ್ನು ಸಮಪರ್ಕ ಅವಧಿಯಲ್ಲಿ ಮುಕ್ತಾಯಗೊಳಿಸದಿರುವುದು ತನ್ನ ದೊಡ್ಡ ತಪ್ಪಾಗಿದೆ. ಇದರಿಂದ 85 ಕೋಟಿ ರೂ. ಮೌಲ್ಯದ ದೊಡ್ಡ ಹಗರಣಕ್ಕೆ ನಾನು ಕಾರಣವಲ್ಲ. ಆದರೆ ತಪ್ಪಿತಸ್ಥ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಡೆತ್ ನೋಟ್‌ನಲ್ಲಿ ಆಗ್ರಹಿಸಿದ್ದಾರೆ.

ಇಲಾಖೆಯ ಸಚಿವರ ಮೌಖಿಕ ಸೂಚನೆಯ ಮೇರೆಗೆ ಉಪ ಖಾತೆ  ತೆರೆದು ನಿಯಮಬಾಹಿರವಾಗಿ ಹಣ ವರ್ಗಾವಣೆ ಮಾಡಲಾಗಿದೆ. ವಾಲ್ಮೀಕಿ ನಿಗಮವು ಬೆಂಗಳೂರಿನ ವಸಂತನಗರ ಶಾಖೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಳಿತಾಯ ಖಾತೆ ಸಂಖ್ಯೆ 520101080091055 ಯಲ್ಲಿ ಉಳಿತಾಯ ಖಾತೆ ಹೊಂದಿದೆ. ಇದಕ್ಕೆ ಪ್ರತಿಯಾಗಿ ಬೆಂಗಳೂರಿನ ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಒತ್ತಾಯ ಪೂರ್ವಕವಾಗಿ ಉಪಖಾತೆ ಸಂಖ್ಯೆ 520141001659653 ತೆರೆಯಲಾಗಿದೆ.

ನಂತರ ಅಭಿವೃದ್ಧಿ ನಿಗಮದ ಜೀರೋ ಬ್ಯಾಲೆನ್ಸ್ ಅಕೌಂಟ್ ಅನ್ನು ಎಂ.ಜಿ. ರಸ್ತೆಯ ಈ ಶಾಖೆಗೆ ವರ್ಗಾಯಿಸಿ ಮಾರ್ಚ್ 4 ರಂದು 25 ಕೋಟಿ ರೂ., ಮಾರ್ಚ್ 6ರಂದು 25 ಕೋಟಿ ರೂ. ಹಾಗೂ ಪುನಃ ಮಾರ್ಚ್ 21ರಂದು 44 ಕೋಟಿ ರೂ. ವರ್ಗಾಯಿಸಲಾಗಿದೆ. ಜೊತೆಗೆ, ರಾಜ್ಯ ಖಜಾನೆಯಿಂದ 43.33 ಕೋಟಿ  ರೂ. ಹಾಗೂ ಮತ್ತೊಮ್ಮೆ ಮಾ.21ರಂದು 50 ಕೋಟಿ ರೂ. ಸೇರಿ ಒಟ್ಟು 187.33 ಕೋಟಿ ರೂಪಾಯಿ ಅನುದಾನವನ್ನು ವಿವಿಧ ಬ್ಯಾಂಕ್‌ಗಳ ಖಾತೆಯಿಂದ ಹಾಗೂ ರಾಜ್ಯ ಖಜಾನೆಯಿಂದ ಈ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಟೋರಿಯಸ್ ಕೊಲೆಗಾರನ ಮತ್ತಷ್ಟು ಕರಾಳ ಮುಖ ಬಯಲು

ಸರ್ಕಾರದ ಅಭಿವೃದ್ಧಿ ನಿಮಗಮದ ಅನುದಾನವನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡುತ್ತಿರುವ ಒಳಸಂಚು ನಮಗೆ ಅರ್ಥವಾಗಲಿಲ್ಲ. ನಾನು ಆ ರೀತಿ ಚೆಕ್ ಬರೆಯುವುದಿಲ್ಲವೆಂದು ತಿಳಿಸಿದರೂ, ಒತ್ತಾಯ ಪೂರ್ವಕವಾಗಿ ಚೆಕ್ ಬರೆಸಲಾಗಿದೆ. ವಾಲ್ಮೀಕಿ ನಿಗಮದಿಂದ 85 ಕೋಟಿ ರೂ. ಹಗರಣದಲ್ಲಿ ಇಲಾಖೆ ಮಂತ್ರಿಯೂ ಪಾಲುದಾರರಾಗಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸಚಿವರ ಮೌಖಿಕ ಸೂಚನೆ ಮೇರೆಗೆ ನಿಗಮದ ಅಧಿಕಾರಿಗಳು ಈ ರೀತಿ ಅವ್ಯವಾರ ನಡೆಸಿದ್ದಾರೆಂದು ಆರೋಪ ಮಾಡಿದ್ದಾರೆ.

Latest Videos
Follow Us:
Download App:
  • android
  • ios