ಉಡುಪಿ ಚರ್ಚಿನಲ್ಲಿ ಸಿದ್ಧಗಂಗಾ ಸ್ವಾಮೀಜಿಗೆ ಶ್ರದ್ಧಾಂಜಲಿ!
ಸರ್ವಧರ್ಮ ಸೌಹಾರ್ದತೆಗೆ ಕ್ಕೆ ಹೆಸರಾಗಿದ್ದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ನಗರದ ಕವಿ ಮುದ್ದಣ ಮಾರ್ಗದಲ್ಲಿರುವ ಶೋಕ ಮಾತಾ ಚರ್ಚಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಉಡುಪಿ(ಜ.24): ಸರ್ವಧರ್ಮ ಸೌಹಾರ್ದತೆಗೆ ಹೆಸರಾಗಿದ್ದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ನಗರದ ಕವಿ ಮುದ್ದಣ ಮಾರ್ಗದಲ್ಲಿರುವ ಶೋಕ ಮಾತಾ ಚರ್ಚಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರು ವಂ.ಫಾ.ವಲೇರಿಯನ್ ಮೆಂಡೊನ್ಸಾ, ಡಾ.ಶಿವಕುಮಾರ ಸ್ವಾಮೀಜಿ ಅವರು 111 ವರ್ಷಗಳ ತಮ್ಮ ಜೀವಿತಾವದಿಯಲ್ಲಿ ವಿವಿಧ ಸಾಧನೆಗಳನ್ನು ಉಲ್ಲೇಖಿಸಿ ನುಡಿನಮನಗಳನ್ನು ಸಲ್ಲಿಸಿದರು.
ಸ್ಥಳೀಯ ಮೈನ್ ಶಾಲೆಯ ಸಹಶಿಕ್ಷಕ ಪ್ರಭಾಕರ್ ಶೆಟ್ಟಿ ಮಾತನಾಡಿ, ಸ್ವಾಮೀಜಿ ಅವರು ಅಕ್ಷರ ದಾಸೋಹ, ಜ್ಞಾನ ದಾಸೋಹ, ಅನ್ನ ದಾಸೋಹಗಳ ಮೂಲಕ ಭಾರತ ದೇಶದಲ್ಲಿಯೇ ಹೆಸರಾದವರು. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿ ಇದ್ದಾರೆ ಎಂದು ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಚರ್ಚಿನ ಸೈಂಟ್ ಮೇರಿಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ - ಶಿಕ್ಷಕಿಯರು ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಾಗರೀಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳನಾಡು, ಸದಸ್ಯ ತಾರಾನಾಥ್ ಮೇಸ್ತ ಶಿರೂರು, ಸೈಂಟ್ ಮೇರಿಸ್ ಪ್ರೌಢ ಶಾಲಾ ಮುಖ್ಯೊಪಾಧ್ಯಾಯಿನಿ ಜೊಯ್ಲ್ ಡೇಸಾ, ಪ್ರಾಥಮಿಕ ಶಾಲಾ ಮುಖ್ಯೋಪದ್ಯಾಯ ಹೆರಾಲ್ಡ್ ಡಿಸೋಜ ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು.
6 ತಿಂಗಳ ಮುಂಚೆಯೇ ಶ್ರೀಗಳಿಗೆ ಸಿಕ್ಕಿತ್ತಾ ಸಾವಿನ ಮುನ್ಸೂಚನೆ?
ಹುಬ್ಬಳ್ಳಿ ಆಕಾಶದಲ್ಲಿ ಹಾರಿದ ಸಿದ್ಧಗಂಗಾ ಶ್ರೀಗಳ ಕೀರ್ತಿ!
ಚಿತ್ರಕಲಾ ಶಿಕ್ಷಕನ ರಕ್ತದಲ್ಲಿ ಅರಳಿದ ಸಿದ್ದಗಂಗಾ ಶ್ರೀ!
ಶ್ರೀಗಳಿಗೆ ಮೊದಲು ಖರೀದಿಸಿದ್ದ ‘ಡಾಡ್ಜಿ’ ಕಾರೆಂದರೆ ಎಲ್ಲಿಲ್ಲದ ಪ್ರೀತಿ
ಇಹಲೋಕದ ಯಾತ್ರೆ ಮುಗಿಸಿದ ಶತಮಾನದ ಸಂತ