ಚಾಮರಾಜನಗರದ ಪ್ರವಾಸೋದ್ಯಮ ಇಲಾಖೆಗೆ ಉಪ ನಿರ್ದೇಶಕರಿಲ್ಲ: ಖಾಯಂ ಅಧಿಕಾರಿ ನೇಮಿಸದೆ ಸರ್ಕಾರದ ನಿರ್ಲಕ್ಷ್ಯ
ಚಾಮರಾಜನಗರ ಕೇವಲ ಹಿಂದುಳಿದ ಜಿಲ್ಲೆ ಮಾತ್ರವಲ್ಲ.ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ಜಿಲ್ಲೆ. ಪ್ರಮುಖ ಪ್ರೇಕ್ಷಣೀಯ ಸ್ಥಳಗಳು, ದೇವಾಲಯಗಳು ಇರುವ ಜಿಲ್ಲೆ ಆದ್ರೆ ಜಿಲ್ಲೆಯ ಪ್ರವಾಸಿತಾಣಗಳು ಮಾತ್ರ ಅಭಿವೃದ್ಧಿ ಕಾಣುತ್ತಿಲ್ಲ.
ವರದಿ: ಪುಟ್ಟರಾಜು.ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಅ.13): ಚಾಮರಾಜನಗರ ಕೇವಲ ಹಿಂದುಳಿದ ಜಿಲ್ಲೆ ಮಾತ್ರವಲ್ಲ.ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ಜಿಲ್ಲೆ. ಪ್ರಮುಖ ಪ್ರೇಕ್ಷಣೀಯ ಸ್ಥಳಗಳು, ದೇವಾಲಯಗಳು ಇರುವ ಜಿಲ್ಲೆ ಆದ್ರೆ ಜಿಲ್ಲೆಯ ಪ್ರವಾಸಿತಾಣಗಳು ಮಾತ್ರ ಅಭಿವೃದ್ಧಿ ಕಾಣುತ್ತಿಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಉಪ ನಿರ್ದೇಶಕರೇ ಇಲ್ಲದೆ ಜಿಲ್ಲೆಯ ಇಡೀ ಪ್ರವಾಸಿ ತಾಣಗಳಿಗೆ ಅಭಿವೃದ್ಧಿ ಮರೀಚಿಕೆಯಾಗೆ ಉಳಿದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. ಹೌದು! ಚಾಮರಾಜನಗರ ಅಂದ್ರೆ ಸಾಕು ಅದೊಂದು ಹಿಂದುಳಿದ ಜಿಲ್ಲೆ ಅನ್ನೋ ಕಲ್ಪನೆ ಎಲ್ಲರಲ್ಲೂ ಮೂಡುತ್ತೆ.
ಜಿಲ್ಲೆಯ ಶೇ 52 ರಷ್ಟು ಭಾಗ ಅರಣ್ಯದಿಂದ ಕೂಡಿರುವ ಜಿಲ್ಲೆ ಆದ್ರೆ ಇಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಒಂದೊಂದಾಗಿ ಹೇಳುತ್ತಾ ಹೋದ್ರೆ ಈ ಸ್ಥಳ ಇರೋದು ಚಾಮರಾಜನಗರ ಜಿಲ್ಲೆಯಲ್ಲ ಅಂತ ಒಂದು ಕ್ಷಣ ಮೂಗಿನ ಮೇಲೆ ಬೆರಳನ್ನು ಇಟ್ಟುಕೊಳ್ಳುತ್ತಾರೆ. ವೀಕೆಂಡ್ ಬಂತು ಅಂದ್ರೆ ಬೆಂಗಳೂರು, ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದಲು ಪ್ರವಾಸಿಗರು ಆಗಮಿಸುತ್ತಾರೆ. ಹೌದು, ಭಕ್ತಿಗೆ ಮಲೈ ಮಹದೇಶ್ವರ, ಬಿಳಿಗಿರಿ ರಂಗನ ಬೆಟ್ಟ, ಗೋಪಾಲಸ್ವಾಮಿ ಬೆಟ್ಟಗಳಲ್ಲಿ ಭಕ್ತರ ದಂಡೆ ಹರಿದು ಬರುತ್ತೆ. ಇದೆ. ಇನ್ನು ಜಲಪಾತಗಳನ್ನ ನೋಡ್ತಿನಿ ಅಂದ್ರೆ ಹೊಗೆನಕಲ್, ಭರಚುಕ್ಕಿ ಜಲಪಾತ, ಕಾಡನ್ನ ನೋಡ್ತಿನಿ ಅಂದ್ರೆ ಬಂಡೀಪುರ ,ಬಿಳಿಗಿರಿ ಹುಲಿರಕ್ಷಿತಾರಣ್ಯಗಳು.
Chamarajanagar: ಎಸ್ಪಿ ಕಚೇರಿ ಮುಂದೆಯೇ ವ್ಹೀಲಿಂಗ್ ನಡೆಸಿರುವ ಪುಂಡ ಬೈಕ್ ಸವಾರರು!
ಹೇಳುತ್ತಾ ಹೋದ್ರೆ ಜಿಲ್ಲೆಯಲ್ಲಿ ಹತ್ತಾರು ಪ್ರವಾಸಿ ತಾಣಗಳು ಸಿಗುತ್ತೆ. ಆದ್ರೆ ಈ ಪ್ರವಾಸಿ ತಾಣಗಳ ಅಭಿವೃದ್ಧಿ ಮಾತ್ರ ಮರಿಚಿಕೆಯಾಗೆ ಉಳಿದು ಹೋಗಿದೆ. ಪ್ರವಾಸಿ ತಾಣಗಳ ಅಭಿವೃದ್ದಿಗೆ ಯಾವ ಒಬ್ಬ ಅಧಿಕಾರಿಯು ತಲೆ ಕೆಡಿಸಿಕೊಂಡಿಲ್ಲ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳು ಸಣ್ಣ ಅಭಿವೃದ್ಧಿಯೆ ಕಂಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನ ಕೇಳೋಣ ಅಂದ್ರೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಖಾಯಂ ಉಪ ನಿರ್ದೇಶಕರು ಇಲ್ಲ, ಅಧಿಕಾರಿಗಳು ಬಾರದಿರುವ ಹಿನ್ನಲೆ ಇದ್ರಿಂದ ಅಭಿವೃದ್ಧಿ ಕಷ್ಟವಾಗುತ್ತಿದೆ ಅಂತ ಸ್ವತಃ ಜಿಲ್ಲಾಧಿಕಾರಿ ಹೇಳ್ತಿದ್ದಾರೆ.ಬಹುತೇಕ ಚಾಮರಾಜನಗರಕ್ಕೆ ನೇಮಕವಾಗಿರುವ ಅಧಿಕಾರಿಗಳು ಎರಡೆರಡು ಕಡೆ ಕೆಲ್ಸ ಮಾಡ್ತಿದ್ದಾರೆ.
ಇನ್ನೂ ಮೈಸೂರಿನಲ್ಲಿ ಕೆಲಸ ಮಾಡೋರಿಗೆ ಪ್ರಭಾರ ಹುದ್ದೆ ಕೊಟ್ಟಿರೊದ್ರಿಂದ ಅಭಿವೃದ್ಧಿ ಕಷ್ಟವಾಗ್ತಿದೆ. ಚಾಮರಾಜನಗರ ಜಿಲ್ಲೆ ಮೈಸೂರಿನಿಂದ ವಿಭಜನೆಯಾಗಿ 25 ವರ್ಷ ಕಳೆದಿದೆ. ಆದರೆ ಅಧಿಕಾರಿಗಳು ಇಲ್ಲದ ಕಾರಣ ಜಿಲ್ಲೆಯ ಬೆಳ್ಳಿ ಮಹೋತ್ಸವವು ಆಗಿಲ್ಲ. ಇವರೆಗು ಜಿಲ್ಲೆಗೆ ಮೈಸೂರಿನ ಅಧಿಕಾರಿಯನ್ನೆ ಪ್ರಭಾರವಾಗಿ ಇಲಾಖೆಯಿಂದ ನೇಮಿಸಲಾಗುತ್ತಿದೆ. ಈ ಬಗ್ಗೆ ಪ್ರಭಾರ ಅಧಿಕಾರಿಯನ್ನ ಪ್ರಶ್ನೆ ಮಾಡಲಾಗುತ್ತಿಲ್ಲ. ಯಾವುದಾದ್ರು ಪ್ರಶ್ನೆ ಕೇಳಿದ್ರೆ ಮೈಸೂರಿನ ಕೆಲಸದಲ್ಲಿದ್ದೇನೆ ಅನ್ನೋ ಉತ್ತರ ಬರುತ್ತೆ. ಹೇಳಿ ಕೇಳಿ ಈ ಜಿಲ್ಲೆಗೆ ಅಧಿಕಾರಿಗಳು ವರ್ಗಾವಣೆಯಾದರೂ ಬರುವುದೆ ಕಷ್ಟ.
ಚಾಮರಾಜನಗರ: ಮುಖ್ಯಾಧಿಕಾರಿ ವರ್ಗಾವಣೆ, ಕೋರ್ಟ್ ಆದೇಶಕ್ಕಿಲ್ಲ ಕಿಮ್ಮತ್ತು..!
ಇನ್ನು ಪ್ರಭಾರ ಅಧಿಕಾರಿಯಂತು ಕನಸಿನ ಮಾತು, ಪ್ರಭಾರ ಅಧಿಕಾರಿ ಯಾವತ್ತೂ ಒಂದು ದಿನ ಬಂದು ಹೋದ್ರೆ ಪ್ರವಾಸಿ ತಾಣ ಅಭಿವೃದ್ದಿ ಸಾಧ್ಯನಾ, ಇದ್ರಿಂದ ಜಿಲ್ಲೆಗೆ ಈಗಲಾದ್ರು ಓರ್ವ ಪ್ರವಾಸೋದ್ಯಮ ಇಲಾಖೆಗೆ ಅಧಿಕಾರಿಗಳನ್ನು ನೇಮಿಸಿ ಅಂತ ಕೂಗು ಕೇಳಿ ಬರುತ್ತಿದೆ. ಒಟ್ಟಾರೆ, ವಿದೇಶಿ ಪ್ರವಾಸಿಗರನ್ನು ಸೆಳೆಯುವಂತಹ ಆಕರ್ಷಕ ಪ್ರವಾಸಿ ತಾಣಗಳಿದ್ರು ಅದನ್ನ ಪ್ರಚಾರ ಮಾಡಲು ಹಾಗೂ ಅಭಿವೃದ್ಧಿ ಪಡಿಸಲು ಅಧಿಕಾರಿಗಳೆ ಇಲ್ಲದಿರೋದು ನಿಜಕ್ಕೂ ಬೇಸರದ ಸಂಗತಿ. ಈಗಲಾದ್ರು ಅಧಿಕಾರಿ ನೇಮಿಸಿ ಪ್ರವಾಸೋದ್ಯಮ ಚಟುವಟಿಕೆಗಳನ್ನ ಗರಿಗೆದರುವಂತೆ ಮಾಡಲಿ ಎಂಬುದೆ ನಮ್ಮ ಆಶಯ.