Chamarajanagar: ಎಸ್ಪಿ ಕಚೇರಿ ಮುಂದೆಯೇ ವ್ಹೀಲಿಂಗ್ ನಡೆಸಿರುವ ಪುಂಡ ಬೈಕ್ ಸವಾರರು!

ನಗರದಲ್ಲಿ ಯುವಕರ ವ್ಹೀಲಿಂಗ್ ಪುಂಡಾಟಿಕೆ ಹೆಚ್ಚಾಗಿದೆ.ಈ ವ್ಹೀಲಿಂಗ್‌ನಿಂದ ಕೆಲದಿನಗಳ ಹಿಂದೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದರೆ, ಕಳೆದ ಕೆಲವು ದಿನಗಳ ಹಿಂದೆ ಕೋಮು ಗಲಭೆಗು ಕಾರಣವಾಗಿತ್ತು. ಆದ್ರೆ ವಿಚಾರವಾಗಿ ವಿಶೇಷ ತಂಡ ರಚನೆ ಮಾಡುವುದಾಗಿ ಜಿಲ್ಲಾ ಪೊಲೀಸರು ಹೇಳಿದ್ದರು.

Bike riders wheeling in front of the SP office in chamarajanagar gvd

ವರದಿ: ಪುಟ್ಟರಾಜು. ಆರ್.ಸಿ, ಏಷ್ಯಾನೆಟ್ ಸುವರ್ಣನ್ಯೂಸ್, ಚಾಮರಾಜನಗರ

ಚಾಮರಾಜನಗರ (ಅ.12): ನಗರದಲ್ಲಿ ಯುವಕರ ವ್ಹೀಲಿಂಗ್ ಪುಂಡಾಟಿಕೆ ಹೆಚ್ಚಾಗಿದೆ.ಈ ವ್ಹೀಲಿಂಗ್‌ನಿಂದ ಕೆಲದಿನಗಳ ಹಿಂದೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದರೆ, ಕಳೆದ ಕೆಲವು ದಿನಗಳ ಹಿಂದೆ ಕೋಮು ಗಲಭೆಗು ಕಾರಣವಾಗಿತ್ತು. ಆದ್ರೆ ವಿಚಾರವಾಗಿ ವಿಶೇಷ ತಂಡ ರಚನೆ ಮಾಡುವುದಾಗಿ ಜಿಲ್ಲಾ ಪೊಲೀಸರು ಹೇಳಿದ್ದರು. ಆದರೆ ಈಗ ಯಾವುದೇ ತಂಡ ರಚನೆ ಮಾಡದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಅದರಲ್ಲು ಎಸ್ಪಿ ಕಚೇರಿ ಮುಂದೆಯು ಯುವಕರು ವ್ಹೀಲಿಂಗ್ ನಡೆಸುತ್ತಿದ್ದಾರೆ. ವ್ಹೀಲಿಂಗ್ ಯುವಕರು ನಡೆಸುವ ಈ ಹುಚ್ಚಾಟ ಚಾಮರಾಜನಗರ  ಪಟ್ಟಣದಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ಯುವಕರು ಮಾಡಿದ ವ್ಹೀಲಿಂಗ್ ನಿಂದ ಚಾಮರಾಜನಗರ ಪಟ್ಟಣದಲ್ಲಿ ಕೆಲದಿನಗಳ ಹಿಂದೆ ಎರಡು ಕೋಮಿನ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜೊತೆಗೆ ವ್ಹೀಲಿಂಗ್ ಮಾಡುವ ಸಂದರ್ಬದಲ್ಲೆ ಒಬ್ಬ ವ್ಯಕ್ತಿ ಮೃತಪಟ್ಟಿರುವ ಘಟನೆ ಕೂಡ ನೆಡೆದಿದೆ.  ಇದಾದ ಬಳಿಕ ಪೊಲೀಸರು ಚಾಮರಾಜನಗರ ಪಟ್ಟಣ ಗಲ್ಲಿ ಗಲ್ಲಿಗಳಲ್ಲಿ ಮಾರ್ಚ್ ಫಾಸ್ಟ್ ನಡೆಸಿ ಎಚ್ಚರಿಸಿದ್ರು. ಅಷ್ಟೆ ಅಲ್ಲದೆ ವ್ಹೀಲಿಂಗ್ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡುವುದಾಗಿಯು ಹೇಳಿದ್ರು. ಆದ್ರೆ ಇಷ್ಟೆಲ್ಲ ಆದ್ರು ಪೊಲೀಸರ ಕಂಡ್ರೆ ಯುವಕರಿಗೆ ಭಯ ಹೋದಂತೆ ಕಾಣುತ್ತಿಲ್ಲ. 

ಚಾಮರಾಜನಗರ: ಮುಖ್ಯಾಧಿಕಾರಿ ವರ್ಗಾವಣೆ, ಕೋರ್ಟ್‌ ಆದೇಶಕ್ಕಿಲ್ಲ ಕಿಮ್ಮತ್ತು..!

ಬೈಪಾಸ್ ರಸ್ತೆ ಹಾಗು ಮೈಸೂರು ಮುಖ್ಯ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದು ಕಳೆದ ಐದಾರು ದಿನಗಳ ಹಿಂದೆ ದಸರಾ ಲೈಟಿಂಗ್ಸ್ ಹಾಕಿದ್ದಂತಹ ಸಂದರ್ಭದಲ್ಲಿ ಚಾಮರಾಜನಗರ ಪಟ್ಟಣದ ಜನನಿಬಿಡ ಮುಖ್ಯ ರಸ್ತೆಯಾದ ಜೋಡಿ ರಸ್ತೆಯಲ್ಲಿರುವ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆಯೆ ವ್ಹೀಲಿಂಗ್ ಮಾಡಿದ್ದಾರೆ. ಆದರು ಇವರ ವಿರುದ್ದ ಯಾವ ಕ್ರಮ ಜರುಗಿಸಿಲ್ಲ.   ಸದ್ಯ ಈ ವ್ಹೀಲಿಂಗ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ಲಾಗಿದೆ. ಇಂತಹ ಪ್ರಕಣರವನ್ನ ಪೊಲೀಸರು ಕಡಿವಾಣ ಹಾಕಬೇಕು ಅಂತ ಸಾರ್ವಜನಿಕ ವಲಯದಲ್ಲು ಕೇಳಿ ಬರುತ್ತಿದೆ. 

ಇನ್ನೂ ಪೊಲೀಸರು  ಮಾರ್ಚ್ ಫಾಸ್ಟ್ ನಡೆಸಿ ಯಾರು ವ್ಹೀಲಿಂಗ್ ಮಾಡಬಾರದು ಒಂದು ವೇಳೆ ಆ ರೀತಿಯ ಘಟನೆಗಳು ನಡೆದರೆ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದರು. ಆದರೆ ಈ  ಹೇಳಿಕೆ ಬರಿ ಹೇಳಿಕೆಗೆ ಸೀಮಿತವಾದ್ದಂತೆ ಕಾಣುತ್ತಿದೆ. ಒಂದು ರೀತಿ ಇದು ಜಿಲ್ಲಾ ಪೊಲೀಸರ ಕಾರ್ಯವೈಖರಿಯನ್ನೆ ಅಣುಕಿಸುವಂತಿತೆ ಕಾಣುತ್ತಿದೆ. ಈ ಬಗ್ಗೆ ಪೊಲೀಸರು ಕೂಡ ನೋಡಿದ್ರು ನೋಡದಂತೆ ಮೌನವಹಿಸಿದ್ದಾರ ಅನ್ನೋ ಪ್ರಶ್ನೆ ಮೂಡುತ್ತಿದೆ. ಅದರ ಜೊತೆಗೆ ಶಾಲಾ ಕಾಲೇಜಿಗೆ ತೆರಳುವ  ಯುವತಿಯರು ಕೂಡ ಓಡಾಡಲು ಭಯಪಡುವ ಪರಿಸ್ಥಿತಿಯಿದೆ. 

ಅಧ್ಯಕ್ಷೆ ಮಾಡ್ತೇನೆಂದು ಬೀದೀಲಿ ನಿಲ್ಲಿಸಿದ್ರು: ಕಣ್ಣೀರಿಟ್ಟ ಕೈ ನಾಯಕಿ

ಅನೇಕ ಬಾರಿ ಜನ ಸಂಚಾರ ಪ್ರದೇಶದಲ್ಲೆ ಯುವತಿಯರ ಮುಂದೆ  ಯುವಕರು ದ್ವಿಚಕ್ರ ವಾಹನ ಚಲಾಯಿಸುತ್ತ ವ್ಹೀಲಿಂಗ್ ಮಾಡಿ ಹಾಗು  ಪಕ್ಕದಲ್ಲಿ ಜೋರಾಗಿ ಚಲಿಸುತ್ತ ಕಿರಿಕಿರಿ ಮಾಡ್ತಾರೆ. ಅಂತವರ ವಿರುದ್ದ  ಪೊಲೀಸರು ಕ್ರಮ ವಹಿಸಿ ಅಂತಾ ಯುವತಿಯರು ಮನವಿ ಮಾಡ್ತಿದ್ದಾರೆ. ಒಟ್ಟಾರೆ ಅದೇನೆ ಇರಲಿ ವ್ಹೀಲಿಂಗ್ ಮಾಡುವ ವೇಳೆ ವ್ಯಕ್ತಿ ಮೃತಪಟ್ಟಿದ್ದರು ಯುವಕ ಸಮಾಜ ಬುದ್ದಿ ಕಲಿತಂತೆ ಕಾಣುತ್ತಿಲ್ಲ. ಆದರೆ ದಸರಾ ಸಂದರ್ಭದಲ್ಲಿ ವ್ಹೀಲಿಂಗ್ ನಂತಹ ಅಪಾಯಕಾರಿ ಹುಚ್ಚು ಸಾಹಸ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆಯೆ ನಡೆದಿದ್ದು ಪೊಲೀಸರು ಈಗಲಾದ್ರು  ಎಚ್ಚೆತ್ತು ಇಂತಹ ಚಟುವಟಿಕೆಗಳಿಗೆ ಬ್ರೇಕ್ ಹಾಕ್ತಾರಾ ಅಂತ ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios