Satish Jarkiholi on Ramesh Katti: ಮಾಜಿ ಸಂಸದ ರಮೇಶ್ ಕತ್ತಿ ಅವರ ವಾಲ್ಮೀಕಿ ಸಮಾಜದ ಕುರಿತ ಆಕ್ಷೇಪಾರ್ಹ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಇದು ಸಮುದಾಯದ ವಿಷಯವಾಗಿದ್ದು, ಮುಖಂಡರು ನೋಡಿಕೊಳ್ಳುತ್ತಾರೆ ಈಗಾಗಲೇ ಪ್ರಕರಣ ದಾಖಲಾಗಿದೆ ಎಂದಿದ್ದಾರೆ. 

ಬೆಳಗಾವಿ (ಅ.22): ವಾಲ್ಮೀಕಿ ಸಮಾಜದ ಕುರಿತು ಮಾಜಿ ಸಂಸದ ರಮೇಶ ಕತ್ತಿ ಆಕ್ಷೇಪಾರ್ಹ ಹೇಳಿಕೆಯು ಸಮುದಾಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಸಮಾಜದ ಮುಖಂಡರು ನೋಡಿಕೊಳ್ಳುತ್ತಾರೆ. ಈಗಾಗಲೇ ವಿವಿಧೆಡೆ ಪ್ರಕರಣ ದಾಖಲಾಗಿದ್ದು, ಪೊಲೀಸ್‌ ಇಲಾಖೆ ತೀರ್ಮಾನ ಮಾಡುತ್ತದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. 

ರಮೇಶ್ ಕತ್ತಿಗೆ ವಾಲ್ಮೀಕಿ ಸಮುದಾಯ ಉತ್ತರಿಸುತ್ತೆ:

ಡಿಸಿಸಿ ಚುನಾವಣೆ ಹಿನ್ನೆಲೆಯಲ್ಲಿ ವೈಯಕ್ತಿಕ ಟೀಕೆಗೆ ರಮೇಶ ಕತ್ತಿ ವಿರುದ್ಧ ಕಾನೂನಾತ್ಮಕ ಹೋರಾಟ ವಿಚಾರವಾಗಿ ಮಂಗಳವಾರ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾತನಾಡಿದ ಸಚಿವರು, ಕತ್ತಿ ಹೇಳಿಕೆಗೆ ಸಮುದಾಯದ ಜನರು ಉತ್ತರಿಸುತ್ತಾರೆ. ಡಿಸಿಸಿ ಚುನಾವಣೆ ಮುಗಿದಿದ್ದು, ಬ್ಯಾಂಕ್‌ ಅಧ್ಯಕ್ಷರ ಆಯ್ಕೆಗೆ ಇನ್ನೂ ಸಮಯವಿದೆ. ಅಧ್ಯಕ್ಷ ಸ್ಥಾನಕ್ಕೆ ಇನ್ನೂ ಯಾರ ಹೆಸರೂ ಚರ್ಚೆಗೆ ಬಂದಿಲ್ಲ. ಹುಕ್ಕೇರಿಯಲ್ಲಿ ಎಂದಿನಂತೆ ನಮ್ಮ ಸಂಘಟನೆ ನಡೆಯುತ್ತದೆ ಎಂದರು.

ನಮಗೂ ಶಕ್ತಿ ಇದೆ:

ಡಿಸಿಸಿ ಬ್ಯಾಂಕ್‌ ನಾಮನಿರ್ದೇಶನ ನಿರ್ದೇಶಕರನ್ನ ಹಾಲುಮತ ಸಮಾಜಕ್ಕೆ ನೀಡುವಂತೆ ಸಲಹೆ ಮಾಡಿದ್ದೇವೆ. ಸಾಮಾನ್ಯ ಕ್ಷೇತ್ರದಲ್ಲಿ ಯಾರಿಗೆ ಶಕ್ತಿ ಇದೆಯೋ ಅವರು ಮಾಡುತ್ತಾರೆ. ನಮ್ಮದು ಹಕ್ಕಿದ್ದು, ವೋಟ್ ಬ್ಯಾಂಕ್ ಇದೆ. ನಮಗೂ ಶಕ್ತಿ ಇದೆ ಎಂದು ರಮೇಶ ಕತ್ತಿಗೆ ತಿರುಗೇಟು ನೀಡಿದ್ದಾರೆ.