Rashtriya Swayamsevak Sangh Tumkur: ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳ ನಿಷೇಧದ ಚರ್ಚೆಯ ನಡುವೆಯೇ, ತುಮಕೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್) ಬೃಹತ್ ಪಥಸಂಚಲನ ನಡೆಸಿತು. 4 ಕಿಮೀ ಉದ್ದ, 5 ಸಾವಿರ ಕಾರ್ಯಕರ್ತರು, ಸರ್ಕಾರಕ್ಕೆ ಸವಾಲು ಹಾಕಿ ಆರೆಸ್ಸೆಸ್ ಪಥಸಂಚಲ.
ತುಮಕೂರು,(ಅ.18) ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳ ನಿಷೇಧ ಕುರಿತಂತೆ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು, ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ನಿಷೇಧಿಸಿರುವ ಸರ್ಕಾರದ ತೀರ್ಮಾನ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ತುಮಕೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಕಾರ್ಯಕರ್ತರು ಸರ್ಕಾರಕ್ಕೆ ಸವಾಲೆಸೆಯುವಂತೆ ಸುಮಾರು 4 ಕಿಮೀ ಉದ್ದದ ಭವ್ಯ ಪಥಸಂಚಲನ ನಡೆಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 5,000 ಕಾರ್ಯಕರ್ತರು ಭಾಗವಹಿಸಿದರು.

ಪಥಸಂಚಲನದ ವಿವರ:
ತುಮಕೂರು ನಗರದ ಪ್ರಮುಖ ರಸ್ತೆಗಳಾದ ಎಂಜಿ ರಸ್ತೆ, ಹೊರಪೇಟೆ ರಸ್ತೆ, ಮತ್ತು ರಾಧಾಕೃಷ್ಣ ರಸ್ತೆಗಳ ಮೂಲಕ ನಡೆದ ಈ ಪಥಸಂಚಲನವು ಗಾಯತ್ರಿ ಥಿಯೇಟರ್‌ನಿಂದ ಆರಂಭಗೊಂಡು ಸರ್ಕಾರಿ ಕಾಲೇಜು ಮೈದಾನದಲ್ಲಿ ಕೊನೆಗೊಂಡಿದೆ. ಸಾರ್ವಜನಿಕರು ಹೂಮಳೆ ಸುರಿಸಿ ಕಾರ್ಯಕರ್ತರನ್ನು ಬರಮಾಡಿಕೊಂಡರು.

ಪೊಲೀಸರಿಂದ ಬಂದೋಬಸ್ತ್:
ಪಥಸಂಚಲನದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಭದ್ರತೆಗಾಗಿ ಬಿಹೆಚ್ ರಸ್ತೆಯನ್ನು ಸುಮಾರು ಮೂರು ಗಂಟೆಗಳ ಕಾಲ ಬಂದ್ ಮಾಡಿತ್ತು. ತುಮಕೂರು ನಗರವನ್ನು ಸಂಪರ್ಕಿಸುವ ಎಲ್ಲಾ ವಾಹನಗಳನ್ನು ಪೊಲೀಸ್ ಇಲಾಖೆ ಬೇರೆ ಮಾರ್ಗಗಳಿಗೆ ಸಂಚರಿಸಲು ಅನುವು ಮಾಡಿಕೊಟ್ಟರು.
