Asianet Suvarna News ENBA Award ಏಷ್ಯಾನೆಟ್ ನ್ಯೂಸ್‌ಗೆ ಮತ್ತಷ್ಟು ಪ್ರಶಸ್ತಿಗಳ ಗರಿ!
ನೇರ, ದಿಟ್ಟ, ನಿರಂತರ ಸುದ್ದಿಗಳಿಂದ ವಿಶ್ವಾಸಾರ್ಹತೆ ಗೆದ್ದಿರುವ 'ಏಷ್ಯಾನೆಟ್ ಸುವರ್ಣ ನ್ಯೂಸ್' ರಾಷ್ಟ್ರಮಟ್ಟದ ಪ್ರತಿಷ್ಠಿತ 'ಎನ್ಬಾ 2022' ಅವಾರ್ಡ್‌ನ 4 ವಿಭಾಗಗಳಲ್ಲಿ ಪ್ರಶಸ್ತಿಗೆ ಭಾಜನವಾಗಿದೆ.
ಬೆಂಗಳೂರು (ಏ. 29): ನೇರ, ದಿಟ್ಟ, ನಿರಂತರ ಸುದ್ದಿಗಳಿಂದ ವಿಶ್ವಾಸಾರ್ಹತೆ ಗೆದ್ದಿರುವ 'ಏಷ್ಯಾನೆಟ್ ಸುವರ್ಣ ನ್ಯೂಸ್' ರಾಷ್ಟ್ರಮಟ್ಟದ ಪ್ರತಿಷ್ಠಿತ ' ENBA 2021' ಅವಾರ್ಡ್ ಗೆದ್ದುಕೊಂಡಿದೆ. 4 ವಿಭಾಗಗಳಲ್ಲಿ ENBA (exchange4media News Broadcasting Awards ) ಪ್ರಶಸ್ತಿಗೆ ಭಾಜನವಾಗಿದೆ. ಮೂರು ಚಿನ್ನ ಮತ್ತು 1 ಬೆಳ್ಳಿಯನ್ನು ಸುವರ್ಣನ್ಯೂಸ್ ಗೆದ್ದುಕೊಂಡಿದೆ. ಒಟ್ಟು 3 ಚಿನ್ನದ ಗರಿ ಬಂದಿದ್ದು, ಹ್ಯಾಟ್ರಿಕ್ ಸಾಧನೆಯಾಗಿದೆ. ಬಿಗ್ 3 ಗೆ ಇದು 4 ನೇ ಪ್ರಶಸ್ತಿಯ ಗರಿಯಾಗಿದೆ. ಈ ಪ್ರಶಸ್ತಿಯ ಮುಖ್ಯ ಉದ್ದೇಶ ನ್ಯೂಸ್ ಉದ್ಯಮದಲ್ಲಿ ಹೊಸ ಬದಲಾವಣೆಗೆ ಕಾರಣವಾಗುವ ಸುದ್ದಿವಾಹಿನಿಗಳು, ಸುದ್ದಿ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವುದು. ಅದೇ ರೀತಿ ಸದಾ ಹೊಸತನದ ಹರಿಕಾರ ಎನಿಸಿಕೊಂಡಿರುವ ಸುವರ್ಣ ನ್ಯೂಸ್‌ಗೆ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರ! ದೆಹಲಿಯಲ್ಲಿ ನಾಳೆ (ಎಪ್ರಿಲ್ 30) ಪ್ರತಿಷ್ಠಿತ ENBA ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಮಾನವೀಯ ನೆಲೆಗಟ್ಟಿನಲ್ಲಿ, ಜನರ ನೋವಿಗೆ ಸ್ಪಂದಿಸುವ ಏಷ್ಯಾನೆಟ್ ಸುವರ್ಣ ನ್ಯೂಸ್ ಈ ವರ್ಷವೂ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಸಂಕಷ್ಟದಲ್ಲಿರುವ ರೈತನಿಗೆ ನೆರವಾದ ಸುವರ್ಣ ನ್ಯೂಸ್, ಕೊರೋನಾ ಸಮಯದಲ್ಲಿ ಜನರು 'ಬದುಕಿದರೆ ಸಾಕು ಈ ಬಡ ಜೀವ' ಎಂಂದು ಕೊಳ್ಳುತ್ತಿದ್ದರೆ, ಕೋವಿಡ್ ಹೆಸರಲ್ಲಿ ನಕಲಿ ಸರ್ಟಿಫಿಕೇಟ್ ಸೃಷ್ಟಿಸಿ ನಡೆಯುತ್ತಿದ್ದ ಕರ್ಮಕಾಂಡವನ್ನು ತನ್ನ ಕವರ್ ಸ್ಟೋರಿಯಲ್ಲಿ ಪ್ರಕಟಿಸಿ, ನಡೆಯುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿತ್ತು.
ಈ ಎಲ್ಲ ಕಾರಣಗಳಿಂದ ಜನರೊಂದಿಗೆ ಅದರಲ್ಲಿಯೂ ಸಂಕಷ್ಟದಲ್ಲಿ ಇರುವವರೊಂದಿಗೆ ಸುವರ್ಣನ್ಯೂಸ್‌ಗ ವಿಶೇಷ ಬಾಂಧವ್ಯ. ಅದರಲ್ಲಿಯೂ ಜನರ ನೋವಿಗೆ ಸ್ಪಂದಿಸುವ ಬಿಗ್-3 ಕಾರ್ಯಕ್ರಮದಿಂದ ಜನರಿಗೆ ನಮ್ಮ ಸುದ್ದಿ ವಾಹಿನಿ ಮತ್ತಷ್ಟು ಹತ್ತಿರವಾಗಿದೆ. ಆ ನಂಬಿಕೆಯಿಂದಲೇ ಕೊರೋನಾದಿಂದ ಸಂಕಷ್ಟ ಎದುರಿಸುತ್ತಿದ್ದ ವ್ಯಕ್ತಿಯೊಬ್ಬರು ಕದ್ದ ಸರವನ್ನು ಸುವರ್ಣ ನ್ಯೂಸ್ ಆಫೀಸಿಗೆ ತಂದು ಕೊಟ್ಟು, ಆ್ಯಂಕರ ಜಯ ಪ್ರಕಾಶ ಶೆಟ್ಟಿ ಮೂಲಕ ತಲುಪಿಸಬೇಕಾದರವರಿಗೆ ತಲುಪಿಸಿದ್ದು, ಮಾಧ್ಯಮಲೋಕದಲ್ಲಿ ವಿಶಿಷ್ಟ ಘಟನೆ ಎಂದು ಪರಿಗಣಿಸಲಾಗಿತ್ತು. ಇಂಥ ವಿಶೇಷ ಕಾರ್ಯಕ್ರಮಗಳಿಂದಲೇ ಮನೆ ಮಾತಾಗಿರುವ ಸುದ್ದಿವಾಹಿನಿಗೆ ಈ ಬಾರಿ ಒಲಿದಿದ್ದು ಒಂದಲ್ಲ, ಎರಡಲ್ಲ, ನಾಲ್ಕು ಪ್ರಶಸ್ತಿಗಳು.
ಪ್ರಶಸ್ತಿಗಳ ಪಟ್ಟಿ ಇಲ್ಲಿದೆ
ಜಯಪ್ರಕಾಶ್ ಶೆಟ್ಟಿ (Anchor Jaya Prakash shetty)- ಅತ್ಯುತ್ತಮ ನಿರೂಪಕ (ಚಿನ್ನ)
ಬೆಸ್ಟ್ ಕರೆಂಟ್ ಅಫೇರ್ಸ್ ವಿಭಾಗದಲ್ಲೂ ಚಿನ್ನದ ಗರಿ
ಬೆಸ್ಟ್ ನ್ಯೂಸ್ ಕವರೇಜ್ ವಿಭಾಗದಲ್ಲೂ ಗೋಲ್ಡ್ ಅವಾರ್ಡ್
ಸುವರ್ಣ ನ್ಯೂಸ್ ‘ಕವರ್ ಸ್ಟೋರಿ’ಗೆ ಬೆಳ್ಳಿಯ ಗರಿ
ಪ್ರಶಸ್ತಿ ಪಡೆದುಕೊಂಡ ವರದಿಗಳು ಈ ಕೆಳಗಿನಂತಿದೆ:
- ಕೊನೆಗೂ ಅವನು ಬಂದ! ಬೆಳಗಾವಿ ಬಾಲಕನ ಬಾಳಲ್ಲಿ ಮಂದಹಾಸ
- ನಿಂಬೆಹಣ್ಣು ಎಂದು ನಂಬಿ ಬೆಳೆದು ಕಂಗಾಲಾದ ರೈತ; ಬಿಗ್ 3 ವರದಿಯಿಂದ ಸಿಕ್ತು ನೆರವು.!
- ಒಂದು ಮಾಧ್ಯಮದ ವಿಶ್ವಾಸಾರ್ಹತೆಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇಕಾ?
- Cover Story: ಸಿಬ್ಬಂದಿ ಕೇಳಿದಷ್ಟು ಹಣ ಕೊಟ್ರೆ, 'ಕೊರೊನಾ ರಿಪೋರ್ಟ್ ಮಾರಾಟಕ್ಕಿದೆ'..!
ಕೈ ಇಲ್ಲದ ಬಾಲಕನಿಗೆ ಕೃತಕ ಕೈ ಜೋಡಿಸಲು ನೆರವಾದ ಸುವರ್ಣ ನ್ಯೂಸ್: ಆಡಿ, ಬದುಕಿ ಬಾಳಬೇಕಾದ ಕಿರಣ ಎಂಬ ಬಾಲಕ ಕೈ ಇಲ್ಲದೇ ಕಷ್ಟಪಡುತ್ತಿದ್ದ. ಕೃತಕ ಅಳವಡಿಕೆಗೆ ಕುಟುಂಬ ಕಷ್ಟ ಪಡುತ್ತಿತ್ತು. ಬಿಗ್ 3 ಕಾರ್ಯಕ್ರಮದಲ್ಲಿ ಈ ಬಾಲಕನ ಬಗ್ಗೆ ವರದಿ ಪ್ರಕಟವಾದ ಬೆನ್ನಲ್ಲೇ ನೆರವಿನ ಮಹಾಪೂರವೇ ಹರಿದು ಬಂತು. ಲಕ್ಷಾಂತರ ರೂ. ಖಾಲಿ ಮಾಡಿ ಬಾಲಕನಿಗೆ ಕೃತಗಳನ್ನು ಕೈ ಜೋಡಿಸಿದ್ದು, ಸುವರ್ಣ ನ್ಯೂಸ್ ನ ಸಾರ್ಥಕ ಕೆಲಸಗಳಲ್ಲೊಂದು.