Tomatino Fiesta : ಸ್ಪೇನ್ ನಂತೆ ಬೆಂಗಳೂರಿನಲ್ಲೂ ಟೊಮೆಟೊ ಫೀಸ್ಟ್ ಆಚರಣೆಗೆ ತಯಾರಿ ನಡೆದಿದೆ. ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿರೋಧವೂ ಕೇಳಿ ಬರ್ತಿದೆ.
ಹೃತಿಕ್ ರೋಷನ್ ಅಭಿನಯದ ʻʻಜಿಂದಗಿ ನಾ ಮಿಲೇಗಿ ದುಬಾರʼʼ (Zindagi Na Milegi Dobara) ಸಿನಿಮಾ ನೋಡಿದೋರಿಗೆ ಟೊಮೆಟೊ ಫೆಸ್ಟ್ (Tomato Fest) ಬಗ್ಗೆ ತಿಳಿದೇ ಇದೆ. ಸ್ಪೇನ್ ನಲ್ಲಿ ಪ್ರತಿ ವರ್ಷ ಈ ಟೊಮೆಟೊ ಫೆಸ್ಟ್ ಆಚರಣೆ ಮಾಡಲಾಗುತ್ತೆ. ಈ ಬಾರಿಯೂ ಅದ್ಧೂರಿಯಾಗಿ ಟೊಮೆಟೊ ಫೆಸ್ಟ್ ನಡೆದಿದೆ. ಸ್ಪೇನ್ ನಲ್ಲಿ ಪರಸ್ಪರ ಟೊಮೆಟೊದಲ್ಲಿ ಹೊಡೆದುಕೊಂಡು, ಟೊಮೆಟೊ ರಸದಲ್ಲಿ ಮಿಂದೇಳುವ ಈ ಹಬ್ಬವನ್ನು ಲಾ ಟೊಮಟಿನಾ (La Tomatina) ಎಂದು ಕರೆಯಲಾಗುತ್ತೆ. ಲಾ ಟೊಮಟಿನಾ 80 ವರ್ಷಗಳನ್ನು ಪೂರೈಸಿದೆ.
1945 ರಲ್ಲಿ ಆರಂಭವಾದ ಈ ಪದ್ಧತಿ ಈಗ್ಲೂ ನಡೆದುಕೊಂಡು ಬಂದಿದೆ. ಸ್ಪೇನ್ನ ಸಣ್ಣ ಪಟ್ಟಣ ಬುನೊಲ್ ನಲ್ಲಿ ಈ ಹಬ್ಬ ನಡೆಯುತ್ತದೆ. ಕೇವಲ 9, 000 ಜನಸಂಖ್ಯೆ ಹೊಂದಿರುವ ಈ ನಗರಕ್ಕೆ ಹಬ್ಬದ ಸಮಯದಲ್ಲಿ 22, 000ಕ್ಕೂ ಹೆಚ್ಚು ಜನ ಸೇರ್ತಾರೆ. ಸ್ಪೇನ್ ಲಾ ಟೊಮಟಿನಾ, ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಈಗ ಯುಎಸ್ಎ (ಫ್ಲೋರಿಡಾ), ಯುಕೆ (ಲಂಡನ್), ನೆದರ್ಲ್ಯಾಂಡ್ಸ್ (ಆಮ್ಸ್ಟರ್ಡ್ಯಾಮ್), ಕೊಲಂಬಿಯಾ ಮಾತ್ರವಲ್ಲ ನಮ್ಮ ದೇಶದಲ್ಲೂ ಇದು ಆಚರಣೆಗೆ ಬರ್ತಿದೆ. ಹೈದ್ರಾಬಾದ್ ನಲ್ಲಿ ಟೊಮೆಟೊ ಫೆಸ್ಟ್ ಶುರುವಾಗಿದ್ದು ಈಗ ಬೆಂಗಳೂರಿನ ಸರದಿ.
ಮೈಸೂರು ಅರಮನೆಯಲ್ಲಿ ದೋಸೆ ಸವಿದ ಮುರ್ಮು: ಪ್ರಮೋದಾ ದೇವಿ ಒಡೆಯರ್
ಬೆಂಗಳೂರಿನಲ್ಲಿ ಟೊಮೆಟೊ ಫೆಸ್ಟ್ : ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ಟೊಮೆಟೊ ಫೆಸ್ಟ್ ನಡೆಯುತ್ತಿದೆ. ಇದಕ್ಕೆ ಟೊಮಟಿನಾ ಫೀಸ್ಟ್ (Tomatino Fiesta) ಅಂತ ನಾಮಕರಣ ಮಾಡಲಾಗಿದೆ. ಈ ಕಾರ್ಯಕ್ರಮ ಇದೇ ಸೆಪ್ಟೆಂಬರ್ 7 ರಂದು ದೊಡ್ಡಜಾಲದ ಶೆಟ್ಟಿಗೇರೆಯಲ್ಲಿರುವ ಬಿ.ಕೆ ಹಳ್ಳಿ ರೋಡ್, ಸ್ಟುಡಿಯೋ ಸ್ಟ್ರೀಟ್ ನಲ್ಲಿ ನಡೆಯಲಿದೆ. ಬುಕ್ ಮೈ ಶೋನಲ್ಲಿ ಟಿಕೆಟ್ ಗಳನ್ನು ನೀಡಲಾಗ್ತಿದ್ದು, ಒಂದು ಟಿಕೆಟ್ ಬೆಲೆ 999 ರೂಪಾಯಿ. ಸ್ಪೇನ್ ಲಾ ಟೊಮಟಿನಾದಿಂದ ಸ್ಪೂರ್ತಿಗೊಂಡು ಈ ಫೆಸ್ಟ್ ಮಾಡಲಾಗ್ತಿದೆ. ಬೆಂಗಳೂರಿನ ಶೈಲಿಯಲ್ಲಿ ಫೆಸ್ಟ್ ಇರಲಿದೆ ಅಂತ ಜಾಹೀರಾತು ನೀಡಲಾಗಿದೆ. ಬೃಹತ್ ಟೊಮೆಟೊ ಹೋರಾಟದ ಅಖಾಡಕ್ಕೆ, ಸ್ನೇಹಿತರು ಮತ್ತು ಅಪರಿಚಿತರೊಂದಿಗೆ ಎಲ್ಲರೂ ಬನ್ನಿ, ಲೈವ್ ಡಿಜೆ ಮತ್ತು ಧೋಲ್ ಬೀಟ್ ಇರಲಿದೆ. ಬಿಳಿ ಬಟ್ಟೆಯಲ್ಲಿ ಬನ್ನಿ,ಸಂತೋಷವಾಗಿ ಬನ್ನಿ, ಸಂತೋಷದಿಂದ ಹೋಗಿ ಅಂತ ಆಡ್ ನಲ್ಲಿ ಮಾಹಿತಿ ನೀಡಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ : ಇನ್ಸ್ಟಾಗ್ರಾಮ್ ನಲ್ಲಿ ಅನೇಕರು ಈ ಫೆಸ್ಟ್ ನಲ್ಲಿ ಪಾಲ್ಗೊಳ್ಳುವ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಅನೇಕರು ಟಿಕೆಟ್ ಬುಕ್ ಗೆ ಲಿಂಕ್ ಕೇಳಿದ್ದಾರೆ. ಇದೇ ವೇಳೆ Go to Bangalore r/Bangalore ಖಾತೆಯಲ್ಲಿ ಟೊಮೆಟೊ ಫೆಸ್ಟ್ ವಿರೋಧಿ ಪೋಸ್ಟ್ ಹಾಕಿ ಈಗ ಡಿಲಿಟ್ ಮಾಡಲಾಗಿದೆ. ಆದ್ರೆ ಕಮೆಂಟ್ ಗಳು ಹಾಗೇ ಇದ್ದು, ಅನೇಕರು ಇದು ಫುಡ್ ಹಾಳು ಮಾಡುವ ಫೆಸ್ಟ್ ಎಂದಿದ್ದಾರೆ. ಸ್ಪೇನ್ ನಲ್ಲಿ ಈ ಫೆಸ್ಟ್ ಆಚರಿಸುವ ಉದ್ದೇಶವೇ ಬೇರೆ ಇತ್ತು. ಕೊಳೆತ, ಹಾಳಾಗ್ತಿರುವ ಟೊಮೆಟೊಗಳನ್ನು ಅವರು ಬಳಸ್ತಿದ್ದರು. ಬೆಂಗಳೂರಿನಲ್ಲಿ ರೈತರು ನ್ಯಾಯ ಬೆಲೆಗೆ ಹೋರಾಟ ನಡೆಸ್ತಿದ್ದಾರೆ. ಈ ವೇಳೆ ಇಂಥ ಹಬ್ಬದ ಅಗತ್ಯವಿದ್ಯಾ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ದುಬೈನಲ್ಲಿ ಮನೆ ಖರೀದಿಗೆ ಶೇ.100 ಸಾಲ ಸೌಲಭ್ಯ: ಕನ್ನಡಿಗರ ಎರಡು ಕಂಪನಿಗಳ ಒಪ್ಪಂದ
2011ರಲ್ಲಿ ರದ್ದಾಗಿತ್ತು ಟೊಮೆಟೊ ಫೆಸ್ಟ್ : 2011ರಲ್ಲಿ ಟೊಮೆಟೊ ಫೆಸ್ಟ್ ಆಚರಣೆ ಮಾಡದಂತೆ ಬೆಂಗಳೂರು ಮತ್ತು ಮೈಸೂರಿನ ಪೊಲೀಸರಿಗೆ ಆಗಿನ ಕರ್ನಾಟಕ ಮುಖ್ಯಮಂತ್ರಿ ಸದಾನಂದ ಗೌಡ ಸೂಚನೆ ನೀಡಿದ್ದರು. ರೈತರು ಕಠಿಣ ಪರಿಶ್ರಮದಿಂದ ಬೆಳೆದ ಟೊಮೆಟೊವನ್ನು ಒಬ್ಬರಿಗೊಬ್ಬರು ಮೋಜಿಗಾಗಿ ಎಸೆಯುವುದು,ವಿದೇಶಿ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. 'ಲಾ ಟೊಮ್ಯಾಟಿನಾ' ಉತ್ಸವದ ಹೆಸರಿನಲ್ಲಿ, ಟೊಮೆಟೊ ವ್ಯರ್ಥ ಮಾಡಲು ಅನುಮತಿ ನೀಡಬಾರದು ಎಂದಿದ್ದರು.
