- Home
- Automobile
- Car News
- ಕೇವಲ 11,000 ರೂಗೆ ಬುಕ್ ಮಾಡಿ ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು, ಕ್ರೆಟಾ ಪ್ರತಿಸ್ಪರ್ಧಿ
ಕೇವಲ 11,000 ರೂಗೆ ಬುಕ್ ಮಾಡಿ ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು, ಕ್ರೆಟಾ ಪ್ರತಿಸ್ಪರ್ಧಿ
ಹ್ಯುಂಡೈ ಕ್ರೆಟಾ ಪ್ರತಿಸ್ಪರ್ಧಿ ಮಾರುತಿ ಸಜುಕಿ ವಿಕ್ಟೋರಿಸ್ ಕಾರು ಅನಾವರಣಗೊಂಡಿದೆ. ಕೈಗೆಟುಕುವ ದರದಲ್ಲಿ ಕಾರು ಲಭ್ಯವಿದ್ದು, ಇದೀಗ ಕ್ರೆಟಾ ಸೇರಿದಂತೆ ಪ್ರಿಮಿಯಂ ಎಸ್‌ಯುವಿ ಕಾರುಗಳಿಗೆ ಪೈಪೋಟಿ ನೀಡಲಿದೆ.

ಮಾರುತಿ ಸುಜುಕಿ ಭಾರತದಲ್ಲಿ ಭಾರಿ ಬೇಡಿಕೆಯ ಕಾರು. ಕಡಿಮೆ ಬೆಲೆ, ಕಡಿಮೆ ನಿರ್ವಹಣಾ ವೆಚ್ಚ ಸೇರಿದಂತೆ ಹಲವು ಕಾರಣಗಳಿಂದ ಬಹುತೇಕರು ಮಾರುತಿ ಸುಜುಕಿ ಕಾರು ಖರೀದಿಸುತ್ತಾರೆ. ಗರಿಷ್ಠ ಮಾರಾಟ ಪಟ್ಟಿಯಲ್ಲೂ ಮಾರುತು ಸುಜುಕಿ ಕಾರುಗಳೇ ಅಗ್ರಸ್ಥಾನದಲ್ಲಿರುತ್ತದೆ. ಇದೀಗ ಮಾರುತಿ ಸುಜುಕಿ ಮತ್ತೊಂದು ಕಾರು ಅನಾವರಣ ಮಾಡಿದೆ. ಪ್ರೀಮಿಯಂ ಎಸ್‌ಯುವಿ ಕಾರು ಬಯಸುವ ಮಂದಿಗೆ ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಅನಾವರಣ ಮಾಡಲಾಗಿದೆ.
ಮಾರುತಿ ಸುಜುಕಿ ವಿಕ್ಟೋರಿಸ್ ಅನಾವರಣಗೊಂಡಿದೆ. ಇದು ಮಾರುತಿ ಬ್ರೆಜಾ ಕಾರಿಗಿಂತ ದೊಡ್ಡದು, ಮಾರುತಿ ಗ್ರ್ಯಾಂಡ್ ವಿಟಾರಾ ಕಾರಿಗಿಂತ ಸಣ್ಣ ಗಾತ್ರದ ಕಾರಾಗಿದೆ. ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕಶಾಖ್ ಸೇರಿದಂತೆ ಹಲವು ಪ್ರೀಮಿಯಂ ಎಸ್‌ಯುವಿ ಕಾರುಗಳಿಗ ಪ್ರತಿಸ್ಪರ್ಧಿಯಾಗಿದೆ.
ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಬುಕಿಂಗ್ ಬೆಲೆ ಕೇವಲ 11,000 ರೂಪಾಯಿ. ಮಾರುತಿ ಸುಜುಕಿ ಅಧಿಕೃತ ಡೀಲರ್ ಹಾಗೂ ಆನ್‌ಲೈನ್ ಮೂಲಕ ಕಾರು ಬುಕಿಂಗ್ ಮಾಡಿಕೊಳ್ಳಬಹುದು. ಕೈಗೆಟುಕುವ ಬೆಲೆಯಲ್ಲಿ ಕಾರು ನೀಡುತ್ತಿರುವ ಮಾರುತಿ ಸುಜುಕಿ ಇದೀಗ ಗ್ರಾಹಕರ ಬೇಡಿಕೆಗೆ ಅನುಗುವಣಾಗಿ ಹೊಸ ಎಸ್‌ಯುವಿ ಕಾರು ಅನಾವರಣ ಮಾಡಿದೆ.
ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಎರಡು ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. 1.5 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಕಾರು ಲಭ್ಯವಿದೆ. ಇನ್ನು ಸಿಎನ್‌ಜಿ ವೇರಿಯೆಂಟ್ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ. ಇನ್ನು 5 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಅಥವಾ ಸಿವಿಟಿ ಆಯ್ಕೆಯಲ್ಲಿ ಲಭ್ಯವಿದೆ.
ವಿಕ್ಟೋರಿಸ್ ಕಾರಿನಲ್ಲಿ ಲೆವೆಲ್ 2 ಅಡಾಸ್ ಸಿಸ್ಟಮ್, 6 ಏರ್‌ಬ್ಯಾಗ್, ಇನ್ನು ಸರ್ಕಾರ ಕಡ್ಡಾಯಗೊಳಿಸಿದ ಇತರ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿ ಇದೆ. ವಿಶೇಷ ಅಂದರೆ ಈ ಕಾರು ಭಾರತ್ ಎನ್‌ಕ್ಯಾಪ್ 5 ಸ್ಟಾರ್ ರೇಟಿಂಗ್ ಪಡೆದಿದೆ ಎಂದು ಮಾರುತಿ ಸುಜುಕಿ ಹೇಳಿದೆ. ಈ ಮೂಲಕ ಮಾರುತಿ ಸುಜುಕಿ ಕಾರುಗಳ ಪೈಕಿ 5 ಸ್ಟಾರ್ ರೇಟಿಂಗ್ ಪಡೆದ 2ನೇ ಕಾರು ಅನ್ನೋ ಹೆಗ್ಗಳಿಗೆಕೆ ಪಾತ್ರವಾಗಿದೆ. ಇದಕ್ಕೂ ಮೊದಲು ಮಾರುತಿ ಸುಜುಕಿ ಡಿಸೈರ್ ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ.
ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಸೀಟು, ಪನೋರನಮಿಕ್ ಸನ್‌ರೂಫ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್ ಈ ಕಾರಿನಲ್ಲಿದೆ. 360 ಡಿಗ್ರಿ ಕ್ಯಾಮೆರಾ, 60ಕ್ಕೂ ಹೆಚ್ಚು ಕನೆಕ್ಟೆಡ್ ಫೀಚರ್ಸ್ ಈ ಕಾರಿನಲ್ಲಿದೆ.