ಜಾಗತಿಕ ಮನ್ನಣೆ ಪಡೆದ ಮೈಸೂರು ರೇಷ್ಮೆ ಸೀರೆಗಳಿಗೆ ಅಭೂತಪೂರ್ವ ಬೇಡಿಕೆ ಸೃಷ್ಟಿ, ಸೀರೆ ಕೊಳ್ಳಲು ಗ್ರಾಹಕರು ಮುಂಜಾನೆಯಿಂದಲೇ ಕಾರ್ಖಾನೆಯ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಬೇಡಿಕೆಗೆ ತಕ್ಕಂತೆ ಸೀರೆಗಳನ್ನು ಪೂರೈಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಕ್ಕೆ ಆಕ್ರೋಶ.
ಮೈಸೂರು (ಜ.22): ರಾಜ್ಯದ ಹೆಮ್ಮೆ ಸಾರುವ, ಮೈಸೂರು ಬ್ರಾಂಡ್ ಅನ್ನು ಜಗತ್ತಿಗೆ ಪರಿಚಯಿಸಿದ ವಸ್ತುಗಳಲ್ಲಿ ಮೈಸೂರು ರೇಷ್ಮೆಯೂ ಒಂದು. ಜಾಗತಿ ಮನ್ನಣೆಗಳಿದ ಸೀರೆಗಳಿಗೆ ಈಗ ಡಿಮಾಂಡ್ ಹೆಚ್ಚಾಗಿದೆ. ಸೀರೆಕೊಳ್ಳಲು ಜನ ಮುಂಜಾನೆಯಿಂದಲೇ ಕಾರ್ಖಾನೆ ಮುಂದೆ ಬಂದು ಕೂರುತ್ತಿದ್ದಾರೆ. ಚೌಕಾಸಿ ಮಾಡದೆ ಸೀರೆ ಕೊಂಡರೂ ಸರಿ, ಸೀರೆ ಸಿಕ್ಕವರು ಖುಷಿಪಟ್ಟರೆ, ಸಿಗದವರು ಸರ್ಕಾರಿ ಅಧಿಕಾರಿಗಳ ಮೇಲೆ ಆಕ್ರೋಶಗೊಂಡಿದ್ದಾರೆ.
ಮೈಸೂರು ಅರಸರಿಂದ ಸ್ಥಾಪನೆಯಾಗಿ ಶತಮಾನದಿಂದ ಒಂದೇ ಜಾಗದಲ್ಲಿ ತಯಾರಾಗುತ್ತಿರುವ ಮೈಸೂರು ರೇಷ್ಮೆ ಸೀರೆಗಳು ಜಾಗತಿಕ ಮನ್ನಣೆ ಹೊಂದಿವೆ. ಈಗಾಗಿ ಮೈಸೂರು ರೇಷ್ಮೆ ಸೀರೆಗಳು ತನ್ನ ಉತ್ಕೃಷ್ಟತೆಯಿಂದ ನಾರಿಯರ ಮನಗೆದ್ದಿವೆ. ಶತಮಾನ ದಾಟಿದ ರೇಷ್ಮೆ ಸೀರೆಗಳಿಗೆ ಈಗ ಎಲ್ಲಿಲ್ಲದ ಡಿಮಾಂಡ್ ಸೃಷ್ಟಿಯಾಗಿದೆ. ಈಗಾಗಿ ಸೀರೆ ಕೊಳ್ಳಲು ನೀರೆಯರು ಮುಂಜಾನೆಯಿಂದಲೇ ನೇಯ್ಗೆ ಕಾರ್ಖಾನೆ ಮುಂದೆ ಸಾಲುಗಟ್ಟು ಕುಳಿತಿದ್ದರು.
ಬೆಳಿಗ್ಗೆ 10.30ಕ್ಕೆ ಆರಂಭ ಆಗುವ ಮಳಿಗೆ ಮುಂದೆ ಮುಂಜಾನೆ 5 ಗಂಟೆಯಿಂದ ಸಾಲುಗಟ್ಟಿ ಕುಳಿತಿರುವ ಗ್ರಾಹಕರು, ಮಳಿಗೆ ತೆರೆಯುತ್ತಿದ್ದಂತೆ ನಾ ಮುಂದು ತಾ ಮುಂದು ಅಂತ ಮುಗಿಬಿದ್ದು ಸೀರೆ ಖರೀದಿ ಮಾಡಿದರು. ಗ್ರಾಹಕರ ಬೆಡಿಕೆಗೆ ತಕ್ಕಂತೆ ಸೀರೆಗಳನ್ನು ತಯಾರಿಸಲು ಅಧಿಕಾರಿಗಳು ವಿಫಲವಾಗಿರುವುದೇ ಮೈಸೂರು ರೇಷ್ಮೆ ಸೀರೆಗಳಿಗೆ ಅಬಾವ ಸೃಷ್ಟಿಯಾಗಲು ಕಾರಣ ಎಂಬ ಮಾತುಗಳು ಕೇಳಿ ಬಂದವು.
ನಿತ್ಯ ಬೆರಳೆಣಿಕೆಯಷ್ಟು ಸೀರೆ ಮಾತ್ರ ಮಾರಟಕ್ಕೆ ತರುವ ಸಿಬ್ಬಂದಿ, ಜೊತೆಗೆ ಸೀರೆ ಬ್ಲಾಕಿಂಗ್ ಮಾಡುತ್ತಾರೆ ಎಂಬ ಆರೋಪಗಳನ್ನು ಗ್ರಾಹಕರು ಮಾಡಿದರು. ಈ ನಡುವೆ ಬೆಳಿಗ್ಗೆ 10.30ಕ್ಕೆ ವ್ಯಾಪಾರ ಆರಂಭ ಆಗುತ್ತಿದ್ದಂತೆ ಫಸ್ಟ್ ಕಮ್ ಫಸ್ಟ್ ಬೈ ಎನ್ನುವಂತೆ ಸರತಿ ಸಾಲಲ್ಲಿ ನಿಂತು ಮಹಿಳೆಯರು ಸೀರೆ ಖರೀದಿ ಮಾಡಿದರು. ಕೆಲವೇ ಕೆಲವು ಸೀರೆಗಳು ವ್ಯಾಪಾರಕ್ಕೆ ಲಭ್ಯವಿದ್ದ ಕಾರಣಕ್ಕೆ 5 ಗಂಟೆಗಳ ಕಾಲ ಕ್ಯೂನಲ್ಲಿ ನಿಂತವರು ಕೇವಲ 5 ನಿಮಿಷದಲ್ಲಿ ವ್ಯಾಪಾರ ಮುಗಿಸಿ ಹೊರಕ್ಕೆ ಬಂದರು. ಸೀರೆ ಖರೀದಿಸಿದವರು ಮುಖದಲ್ಲಿ ಮಂದಹಾಸ ಇತ್ತಾದರೂ, ಸೀರೆ ಕೊಳ್ಳಲಾಗದವರ ಮನದಲ್ಲಿ ತೀರ್ವ ಬೇಸರ ಮೂಡಿತ್ತು.
ಅಸಲಿಗೆ ಕೆ.ಎಸ್.ಐ.ಸಿಯ ಎರಡು ಕಾರ್ಖಾನೆಗಳಲ್ಲಿ ದಿನಕ್ಕೆ ಸುಮಾರು 400 ಸೀರೆಗಳು ತಯಾರಾಗುತ್ತವೆ. ಇವುಗಳನ್ನು ಮೈಸೂರು, ಬೆಂಗಳೂರು, ಚನ್ನಪಟ್ಟಣ ಹಾಗೂ ಹೈದ್ರಾಬಾದ್ ಗಳಲ್ಲಿ ಇರುವ ಒಟ್ಟು 12 ಮಳಿಗೆಗಳಲ್ಲಿ ಇಟ್ಟು ವ್ಯಾಪಾರ ಮಾಡಲಾಗುತ್ತದೆ. ಪರಿಶುದ್ಧತೆ ಹಾಗೂ ನಂಬಿಕೆಗೆ ಅರ್ಹವಾಗಿರುವ ಸೀರೆಗಳಿಂದ ವ್ಯಾಪಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ಗ್ರಾಹಕರ ಕೊಳ್ಳುವ ಸಾಮಾರ್ಥ್ಯ ಹೆಚ್ಚಾಗಿರುವ ಕಾರಣಕ್ಕೆ ಅಭವಾ ಸೃಷ್ಟಿಯಾಗುತ್ತಿದೆ ಎನ್ನುವುದು ಅಧಿಕಾರಿಗಳ ಮಾಹಿತಿಯಾಗಿದೆ.
ವಾ.ಓ : ಒಟ್ಟಾರೆ ಸರ್ಕಾರಿ ಸ್ವಾಮ್ಯದ ಉದ್ದಿಮೆಯೊಂದು ಈ ರೀತಿ ಜನಮನ್ನಣೆ ಗಳಿಸಿದೆ ಎನ್ನುವುದು ಸಂತೋಷದ ವಿಚಾರವೇ ಆದರೂ, ಸರ್ಕಾರ ಇದನ್ನೂ ಕೂಡ ಜನರ ಅಗತ್ಯಕ್ಕನುಗುಣವಾಗಿ ನಡೆಸುತ್ತಿಲ್ಲವಲ್ಲ ಎಂಬುದೇ ಬೇಸರದ ಸಂಗತಿ.
ಕ್ಯಾಮೆರಾಮನ್ ನವೀನ್ ಜೊತೆಗೆ ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.


