Asianet Suvarna News Asianet Suvarna News

Karnataka Grama Panchayat : ಜನಸಂಖ್ಯೆ 15 ಸಾವಿರ ಇದ್ದರಷ್ಟೇ ಗ್ರಾಪಂ ಮೇಲ್ದರ್ಜೆಗೆ: ಎಂಟಿಬಿ

  • 15 ಸಾವಿರಕ್ಕಿಂತ ಜನಸಂಖ್ಯೆ ಹೆಚ್ಚಿರುವ ಗ್ರಾಮ ಪಂಚಾಯಿತಿಗಳನ್ನು ಮಾತ್ರ ಮೇಲ್ದರ್ಜೆಗೇ
  • ಪೌರಾಡಳಿತ ಸಚಿವ ಎಂಟಿಬಿ ನಾಗರಾಜ ಮಾಹಿತಿ
More Than 15 thousand  Population  Mandatory For Grama Panchayats to  promote  Next Level  snr
Author
Bengaluru, First Published Dec 18, 2021, 10:13 AM IST

ವಿಧಾನಸಭೆ (ಡಿ.18):  15 ಸಾವಿರಕ್ಕಿಂತ ಜನಸಂಖ್ಯೆ ಹೆಚ್ಚಿರುವ ಗ್ರಾಮ ಪಂಚಾಯಿತಿಗಳನ್ನು ಮಾತ್ರ ಮೇಲ್ದರ್ಜೆಗೇರಿಸಲಾಗುವುದು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ (MTB Nagaraj ) ತಿಳಿಸಿದರು.  ಶುಕ್ರವಾರ ಕಾಂಗ್ರೆಸ್‌ (Congress) ಸದಸ್ಯ ಎಂ.ವೈ.ಪಾಟೀಲ್‌ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಬೇಕಾದರೆ ಪ್ರದೇಶದ ಜನಸಂಖ್ಯೆಯು 10 ಸಾವಿರಕ್ಕೆ ಕಡಿಮೆ ಇಲ್ಲದಂತೆ ಮತ್ತು 20 ಸಾವಿರಕ್ಕೆ ಹೆಚ್ಚಿಲ್ಲದಂತಿರಬೇಕು. ಜನಸಾಂದ್ರತೆಯು ಅ ಪ್ರದೇಶದ ಒಂದು ಚದರ ಕಿ.ಮೀ ವಿಸ್ತೀರ್ಣಕ್ಕೆ 400ಕ್ಕಿಂತ ಕಡಿಮೆ ಇರಬಾರದು ಮತ್ತು ಕೃಷಿಯೇತರ (Agriculture) ಚಟುವಟಿಕೆಗಳಲ್ಲಿನ ಉದ್ಯೋಗಾವಕಾಶದ ಶೇಕಡಾವಾರು ಪ್ರಮಾಣವು ಒಟ್ಟು ಉದ್ಯೋಗದ ಪ್ರಮಾಣಕ್ಕಿಂತ ಶೇ.50ಕ್ಕಿಂತ ಕಡಿಮೆ ಇರಬಾರದು ಎಂದು ಹೇಳಿದರು.

ಅಲ್ಲದೇ, ಸಚಿವ ಸಂಪುಟ ಸಭೆಯ ನಿರ್ಣಯದಂತೆ 15 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯಿತಿಗಳನ್ನು (Grama Panchayat) ಮಾತ್ರ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗಿದೆ. 2011ರ ಜನಗಣತಿ ಪ್ರಕಾರ ಅಫ್ಜಲಪುರ ಮತ ಕ್ಷೇತ್ರದ ಮಶ್ಯಾಳ ಗ್ರಾಮದ ಜನಸಂಖ್ಯೆ 11,015 ಮತ್ತು ಕಾರಜಗಿ ಗ್ರಾಮದ ಜನಸಂಖ್ಯೆಯು 7708 ಇರುತ್ತದೆ. ಪಟ್ಟಣ ಪಂಚಾಯಿತಿಯನ್ನಾಗಿ ನಿಗದಿಪಡಿಸಿದ ಮಾನದಂಡಗಳು ಮತ್ತು ಸರ್ಕಾರದ ತೀರ್ಮಾನದಂತೆ ಪ್ರಸ್ತಾಪಿತ ಎರಡು ಗ್ರಾಮಗಳ ಜನಸಂಖ್ಯೆಯು 15 ಸಾವಿರಕ್ಕಿಂತ ಕಡಿಮೆ ಇರುವುದರಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಅವಕಾಶ ಇಲ್ಲ ಎಂದರು.

ಉಪ ಚುನಾವಣೆ ಅಧಿಸೂಚನೆ : ಹಲವು ಗ್ರಾಮ ಪಂಚಾಯಿತಿಗಳಲ್ಲಿ (Gram Panchayat) ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ (By Election) ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.  13ರಂದು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದು, 17ರಂದು ನಾಮಪತ್ರ (Nomination) ಸಲ್ಲಿಸಲು ಕೊನೆಯ ದಿನವಾಗಿದೆ. 18ರಂದು ನಾಮಪತ್ರ ಪರಿಶೀಲಿಸುವ ದಿನವಾಗಿದೆ. 20ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್‌, 27ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನದ ಅವಶ್ಯವಿದ್ದರೆ ಮತದಾನ ನಡೆಯಲಿದೆ. ಅವಶ್ಯವಿದ್ದರೆ 29 ರಂದು ಬೆಳಗ್ಗೆ 7ರಿಂದ ಸಂಜೆ 5ರ ತನಕ ಮರ ಉಮತದಾನ ನಡೆಯಲಿದೆ. 30ರಂದು ಬೆಳಗ್ಗೆ 8ರಿಂದ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

ಚುನಾವಣೆ (Election) ನಡೆಯುವ ಗ್ರಾಮ ಪಂಚಾಯಿತಿ, ಕ್ಷೇತ್ರ, ಸ್ಥಾನ ಮತ್ತು ಮೀಸಲಾತಿ ವಿವರಗಳು: ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾ.ಪಂ.ಯ ಎಮ್ಮೆಮಾಡು-1(1 ಸ್ಥಾನ) ಪ.ಪಂ.(ಮ), ಎಮ್ಮೆಮಾಡು-2(1 ಸ್ಥಾನ) ಪ.ಜಾ(ಮ), ಚೆಂಬು ಗ್ರಾ.ಪಂ.ಯ ಚೆಂಬು-3(1 ಸ್ಥಾನ) ಪ.ಜಾ(ಮ).

ಸೋಮವಾರಪೇಟೆ ತಾಲೂಕಿನ ತೋಳೂರು ಶೆಟ್ಟಿಹಳ್ಳಿ ಗ್ರಾ.ಪಂ. ಕೂತಿ (2 ಸ್ಥಾನ) ಹಿ.ವರ್ಗ. ಅ ಮತ್ತು ಸಾಮಾನ್ಯ(ಮ), ವಿರಾಜಪೇಟೆ ತಾಲೂಕಿನ ತಿತಿಮತಿ ಗ್ರಾ.ಪಂ. ಅರೆಕೇರಿ 1, 2,3 (4 ಸ್ಥಾನ) ಪರಿಶಿಷ್ಟಪಂಗಡ, ಪರಿಶಿಷ್ಟಪಂಗಡ(ಮ), ಪರಿಶಿಷ್ಟಪಂಗಡ(ಮ) ಮತ್ತು ಸಾಮಾನ್ಯ, ಮಾಲ್ದಾರೆ ಗ್ರಾ.ಪಂ.ಯ ಮಾಲ್ದಾರೆ-2(1 ಸ್ಥಾನ) ಪ.ಜಾ, ಚೆನ್ನಯ್ಯನ ಕೋಟೆ ಗ್ರಾ.ಪಂ. ಚೆನ್ನಯ್ಯನಕೋಟೆ-2(1 ಸ್ಥಾನ), ಪ.ಪಂ.(ಮ), ಕಾರ್ಮಾಡು ಗ್ರಾ.ಪಂ.ಯ ಕಾವಾಡಿ(1 ಸ್ಥಾನ) ಹಿಂ.ವರ್ಗ.ಬ, ಕಾರ್ಮಾಡು-1(1 ಸ್ಥಾನ) ಪರಿಶಿಷ್ಟಪಂಗಡ(ಮ).

ಕರ್ನಾಟಕ  ಗ್ರಾಮ ಸ್ವರಾಜ್‌ (Karnataka Grama Swaraj) ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993ರ ಪ್ರಕರಣ 308ಎಸಿ ಪ್ರಕಾರ ಚುನಾವಣಾ ನೀತಿ ಸಂಹಿತೆ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಡಿ.30ರ ತನಕ ಜಾರಿಯಲ್ಲಿರುತ್ತದೆ.

ಗ್ರಾಮ ಪಂಚಾಯಿತಿಯ ಯಾವುದೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದೇ ಚುನಾವಣೆ ಪ್ರಕ್ರಿಯೆ ಮುಂದುವರಿಯಲಾಗದೆ ಇರುವಂತಹ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ / ನಾಮಪತ್ರ ಹಿಂತೆಗೆತ ಮತ್ತಿತರ ಕಾರಣಗಳಿಂದ ಯಾವುದೇ ಅಭ್ಯರ್ಥಿಯು (Candidate) ಕಣದಲ್ಲಿರದೆ, ಆ ಗ್ರಾಮ ಪಂಚಾಯಿತಿಯ ಯಾವುದೇ ಸ್ಥಾನಕ್ಕೂ ಚುನಾವಣೆ ನಡೆಯದೇ ಇದ್ದಲ್ಲಿ ಅಥವಾ ಗ್ರಾಮ ಪಂಚಾಯಿತಿಯಲ್ಲಿನ ಚುನಾವಣೆ ಘೋಷಿಸಿರುವ ಎಲ್ಲಾ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗಿದ್ದ, ಆಯ್ಕೆಯಾದ ಅಭ್ಯರ್ಥಿಯ ಫಲಿತಾಂಶವನ್ನು ಚುನಾವಣಾಧಿಕಾರಿಯು ಘೋಷಿಸಿದ್ದಲ್ಲಿ ಅಂತಹ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀತಿಸಂಹಿತೆ ಜಾರಿಯಲ್ಲಿರುವುದು ತಕ್ಷಣದಿಂದ ಕೊನೆಗೊಳ್ಳಲಿದೆ.

ಚುನಾವಣಾಧಿಕಾರಿಗಳ ನೇಮಕ ಮಾಡಲಾದ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಡಿ.13ರಿಂದ ನಾಮಪತ್ರಗಳನ್ನು ಸ್ವೀಕರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.

 ದಾವಣಗೆರೆಯಲ್ಲಿಯು ಉಪಚುನಾವಣೆ :  ಜಿಲ್ಲೆಯ ದಾವಣಗೆರೆ (Davanagere), ಹರಿಹರ, ಚನ್ನಗಿರಿ, ಹೊನ್ನಾಳಿ, ಜಗಳೂರು, ನ್ಯಾಮತಿ ತಾಲೂಕಿನ ಗ್ರಾಪಂಗಳಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾಗದೆ ಖಾಲಿ ಇರುವ ಹಾಗೂ ತೆರವಾಗಿರುವ ಸದಸ್ಯರ ಸ್ಥಾನಗಳನ್ನು ತುಂಬಲು ಉಪ ಚುನಾವಣೆ ನಡೆಸಲು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ವೇಳಾಪಟ್ಟಿನಿಗದಿಪಡಿಸಿ, ಅಧಿಸೂಚನೆ ಹೊರಡಿಸಿದ್ದಾರೆ.

 10 ಗ್ರಾಪಂಗಳಿಗೆ ಉಪಚುನಾವಣೆ :  ಹಾವೇರಿ (Haveri) ಜಿಲ್ಲೆಯ ಆರು ತಾಲೂಕುಗಳ 10 ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣದಿಂದ ತೆರವಾದ 10 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಜರುಗಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೋಮವಾರ ಅಧಿಸೂಚನೆ ಹೊರಡಿಸಿದ್ದಾರೆ.  ನಾಮಪತ್ರ ಸಲ್ಲಿಸಲು ಡಿ. 17ರಂದು ಕೊನೆಯ ದಿನವಾಗಿದ್ದು, ಡಿ. 18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಡಿ. 20ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ. ಡಿ. 27ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅವಶ್ಯವಿದ್ದಲ್ಲಿ ಡಿ. 29ರಂದು ನಡೆಸಲಾಗುವುದು. ಮತಗಳ ಎಣಿಕೆ ಡಿ. 30ರಂದು ಬೆಳಗ್ಗೆ 8 ರಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.

Follow Us:
Download App:
  • android
  • ios