ಮಾಧ್ಯಮ, ಪೊಲೀಸ್ ಕಬ್ಬಡಿ ಟೂರ್ನಿಮೆಂಟ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ ಕ್ರೀಡಾ ಸಚಿವ: ನಾರಾಯಣಗೌಡ
ಕ್ರೈಂ ರಿಪೋರ್ಟಸ್ ಎಲೆಕ್ಟ್ರಾನಿಕ್ ಮಿಡಿಯಾ ಮತ್ತು ಬೆಂಗಳೂರು ಸಿಟಿ ಪೊಲೀಸ್, ಬೆಂಗಳೂರು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಕಬ್ಬಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರು (ಡಿ.12): ಕ್ರೈಂ ರಿಪೋರ್ಟಸ್ ಎಲೆಕ್ಟ್ರಾನಿಕ್ ಮಿಡಿಯಾ ಮತ್ತು ಬೆಂಗಳೂರು ಸಿಟಿ ಪೊಲೀಸ್, ಬೆಂಗಳೂರು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಕಬ್ಬಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ವಿಭಾಗದ ಚಾಂಪಿಯನ್ ಆದ ಕರ್ನಾಟಕ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ತಂಡ ಹಾಗೂ ದ್ವಿತೀಯ ತಂಡವಾದ ಬೆಂಗಳೂರು ಗ್ರಾಮಾಂತರ ತಂಡಕ್ಕೆ ಕ್ರೀಡಾ ಸಚಿವ ನಾರಾಯಣಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮಾಧ್ಯಮ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ಪ್ರೆಸ್ ಕ್ಲಬ್ ಹಾಗೂ ಎರಡನೇ ಸ್ಥಾನ ಪಡೆದ ಪಬ್ಲಿಕ್ ಟಿವಿ ತಂಡಗಳಿಗೆ ಟ್ರೋಫಿ ನೀಡಿ ಗೌರವಿಸಿದರು.
ಅಪರೂಪದ ಟೇಕ್ವಾಂಡೋ ಯುದ್ಧ ಕ್ರೀಡೆಯಲ್ಲಿ ವಿಜಯಪುರ ಬಾಲಕನಿಗೆ ಚಿನ್ನ
ಪೊಲೀಸ್ ವಿಭಾಗದಿಂದ ಫೈರ್ ಟೀಮ್ ಆಲ್ ರೌಂಡರ್ ಪ್ರಶಾಂತ್, ಅದೇ ತಂಡದಿಂದ ಬೆಸ್ಟ್ ರೈಡರ್ ಆಗಿ ಶ್ಯಾಮ್ ಪಡೆದುಕೊಂಡರು. ಮಾಧ್ಯಮ ವಿಭಾಗದಿಂದ ಬೆಂಗಳೂರು ಕ್ರೈಂ ತಂಡದ ಹಂಜಾ ಪಡೆದರೆ ಬೆಸ್ಟ್ ಆಲೌಂಡರ್, ಬೆಸ್ಟ್ ರೈಡರ್ ಆಗಿ ಮಂಜುನಾಥ್ ಪ್ರಶಸ್ತಿ ತನ್ನದಾಗಿಸಿಕೊಂಡರು.
ಬಳಿಕ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಸಚಿವ ನಾರಾಯಣಗೌಡ ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಕ್ರೈಂ ರಿಪೋರ್ಟಸ್ ಪಂದ್ಯಾವಳಿ ಆಯೋಜನೆ ಮಾಡಿರುವುದು ಖುಷಿತಂದಿದೆ.ಅಲ್ಲದೆ ಅಗ್ನಿಶಾಮಕ ಹಾಗೂ ಪೊಲೀಸ್ ತಂಡಗಳು ಭಾಗಿಯಾಗಿರುವುದು ಸಂತಸ ಇನ್ನಷ್ಟು ಹೆಚ್ಚಾಗಿದೆ. ಕೆಲಸದ ಜಂಜಾಟ ಮರೆತು ಕಬ್ಬಡಿ ಪಂದ್ಯಾವಳಿ ಭಾಗಿಯಾದ ಎಲ್ಲಾ ತಂಡಗಳಿಗೂ ಅಭಿನಂದನೆ ಸಲ್ಲಿಸಿದರು.
ಈ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದಿಂದಲೇ Football Training
ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಪತ್ರಕರ್ತರಿಗೂ ವಿಮಾ ಸೌಲಭ್ಯವನ್ನ ಈಗಾಗಲೇ ಮಂಡ್ಯದಲ್ಲಿ ಜಾರಿತರಲಾಗುತ್ತಿದೆ. ಅದೇ ರೀತಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪದಕಗೆದ್ದ ರಾಜ್ಯ ಕ್ರೀಡಾಳುಗಳಿಗೆ ಸರ್ಕಾರಿ ಹುದ್ದೆಯಲ್ಲಿ ಶೇ.2ರಷ್ಟು ಮೀಸಲಾತಿ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು ಕ್ರೀಡಾಪಟುಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು..ಕಾರ್ಯಕ್ರಮದಲ್ಲಿ ರಾಜ್ಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು, ಅಗ್ನಿಶಾಮಕ ಇಲಾಖೆಯ ನಿರ್ದೇಶಕ ಶಿವಕುಮಾರ್, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.