Asianet Suvarna News Asianet Suvarna News

ಅಪರೂಪದ ಟೇಕ್ವಾಂಡೋ ಯುದ್ಧ ಕ್ರೀಡೆಯಲ್ಲಿ ವಿಜಯಪುರ ಬಾಲಕನಿಗೆ ಚಿನ್ನ

ಟೇಕ್ವಾಂಡೋ ಆಟದ ಬಗ್ಗೆ ನಮ್ಮ ಬಹಳಷ್ಟು ಜನರಿಗೆ ಗೊತ್ತಿಲ್ಲ. ಕೋರೊಯಾದ ಸಮರ ಕಲೆ, ಚೈನಾದ ಮಾರ್ಷಲ್‌ ಆರ್ಟ್‌ ಗಳಂತೆ ಟೇಕ್ವಾಂಡೋ ಕೂಡ ಯುದ್ಧ ಕ್ರೀಡೆ. ಬಲು ಅಪರೂಪದ ಈ ಆಟಕ್ಕೂ ಸ್ಪರ್ಧೆಗಳು ನಡೆಯುತ್ತವೆ. ವಿಜಯಪುರದ ಬಾಲಕನೊಬ್ಬ ಈ ಅಪರೂಪದ ಆಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿನ್ನ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

Vijayapura boy wins gold  medal in  Taekwondo  championship gow
Author
First Published Dec 11, 2022, 9:21 PM IST

ವರದಿ: ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌

ವಿಜಯಪುರ (ಡಿ.11): ಟೇಕ್ವಾಂಡೋ ಆಟದ ಬಗ್ಗೆ ನಮ್ಮ ಬಹಳಷ್ಟು ಜನರಿಗೆ ಗೊತ್ತಿಲ್ಲ. ಕೋರೊಯಾದ ಸಮರ ಕಲೆ, ಚೈನಾದ ಮಾರ್ಷಲ್‌ ಆರ್ಟ್‌ ಗಳಂತೆ ಟೇಕ್ವಾಂಡೋ ಕೂಡ ಯುದ್ಧ ಕ್ರೀಡೆ. ಬಲು ಅಪರೂಪದ ಈ ಆಟಕ್ಕೂ ಸ್ಪರ್ಧೆಗಳು ನಡೆಯುತ್ತವೆ. ವಿಜಯಪುರದ ಬಾಲಕನೊಬ್ಬ ಈ ಅಪರೂಪದ ಆಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿನ್ನ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ವಿಜಯಪುರದ ಸ್ಟೇಶನ್‌ ರಸ್ತೆಯ ಅಂಬೇಡ್ಕರ್‌ ನಗರ ನಿವಾಸಿ ಸುನೀಲ್‌ ಕಾಂಬಳೆ ಪುತ್ರ ಸುಕೀಲ್‌ ಅಪರೂಪರ ಯುದ್ಧ ಕ್ರೀಡೆಯಾದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿನ್ನವನ್ನ ಮುಡಿಗೇರಿಸಿಕೊಂಡಿದ್ದಾನೆ. ಜೊತೆಗೆ ಇನ್ನು ಇಬ್ಬರು ಚಿನ್ನ ಸಂಪಾಧಿಸಿ ಜಿಲ್ಲೆಯ ಕೀರ್ತಿಯನ್ನ ಹೆಚ್ಚಿಸಿದ್ದಾರೆ. ಕರ್ನಾಟಕ ಟೇಕ್ವಾಂಡೋ ಅಕಾಡೆಮಿ ಕೆಟಿಎ ಕಫ್‌-2022 ಸ್ಪರ್ಧೆಯನ್ನ ಬೆಂಗಳೂರಿನ ಡೆಕ್ಟ್ರೊನ್‌ ಅನುಭವ 157ರಲ್ಲಿ ಸ್ಪರ್ಧಿಸಿದ್ದ ಸುಕೀಲ್‌, ಶೌರ್ಯ ಪಾಟೀಲ್‌, ಮಧು ಗಾಗರೇ, ಭಾಗ್ಯ ಮಂಟೂರ್‌ ಚಿನ್ನ ಪಡೆದುಕೊಂಡಿದ್ದಾರೆ. ಸುಕೀಲ್‌ 11 ವರ್ಷದ ವಯಸ್ಸಿನ ವಿಭಾಗದಲ್ಲಿ ಇಬ್ಬರು ಎದುರಾಳಿಗಳನ್ನ ಸೋಲಿಸಿ ಚಿನ್ನ ಪಡೆದುಕೊಂಡಿದ್ದಾನೆ.  ಕಳೆದ 2 ವರ್ಷಗಳಿಂದ ಸುಕೀಲ್‌ ಈ ಕ್ರೀಡೆಯನ್ನ ಕಲಿಯುತ್ತಿದ್ದು, ಈ ಸಾರಿ ರಾಜ್ಯ ಮಟ್ಟದಲ್ಲಿ ಚಿನ್ನ ಪಡೆದು ಸಾಧನೆ ಮಾಡಿದ್ದಾನೆ.

ಜಿಲ್ಲೆಯಲ್ಲಿ ಹವಾ ಸೃಷ್ಟಿಸುತ್ತಿರುವ ಟೇಕ್ವಾಂಡೋ!
ಆಗಲೇ ಹೇಳಿದಂತೆ ಟೇಕ್ವಾಂಡೋ ಒಂದು ಪಕ್ಕಾ ಯುದ್ಧ ಕ್ರೀಡೆ. ಕೋರಿಯಾ ಸಮರ ಕ್ರೀಡೆಗಳಲ್ಲಿ ಟೇಕ್ವಾಂಡೋ ಕೂಡ ಒಂದು. ಇದು ಕೂಡ ಬಾಕ್ಸಿಂಗ್‌, ಕುಸ್ತಿ, ಕರಾಟೆಯಂತೆ ಕ್ರೀಡೆ, ಆದರೂ ಅಷ್ಟೊಂದು ಜನಪ್ರೀಯತೆ ಪಡೆದುಕೊಂಡಿಲ್ಲ ಅನ್ನೋದು ವಿಷಾಧನೀಯ. ಆದರೇ ಇತ್ತೀಚೆಗೆ ಯುದ್ಧ ಕ್ರೀಡೆಗಳನ್ನ ಇಷ್ಟ ಪಡುವವರಿಗೆ ಟೇಕ್ವಾಂಡೋ ಅಚ್ಚುಮೆಚ್ಚಾಗುತ್ತಿದೆ. ಈ ವಲಯದಲ್ಲು ಬಾಲಕರು, ಬಾಲಕಿಯರು ಸಾಧನೆಯನ್ನ ಮಾಡ್ತಿದ್ದಾರೆ. ಅದ್ರಲ್ಲು ವಿಜಯಪುರ ಜಿಲ್ಲೆ ಟೇಕ್ವಾಂಡೋ ಕ್ರೀಡೆಯಲ್ಲಿ ಹವಾ ಸೃಷ್ಟಿ ಮಾಡ್ತಿದೆ.

ಏನಿದು ಟೇಕ್ವಾಂಡೋ ಕ್ರೀಡೆ?
ಟೇಕ್ವಾಂಡೋ ಅಭ್ಯಾಸಕಾರರು ಡೋಬೊಕ್ ಎಂದು ಕರೆಯಲ್ಪಡುವ ಸಮವಸ್ತ್ರವನ್ನು ಧರಿಸುತ್ತಾರೆ . ಇದು ಯುದ್ಧ ಕ್ರೀಡೆಯಾಗಿದೆ ಮತ್ತು 1940 ಮತ್ತು 1950 ರ ದಶಕದಲ್ಲಿ ಕೊರಿಯಾದ ಸಮರ ಕಲೆಗಳಾದ ಕರಾಟೆ , ಚೈನೀಸ್ ಮಾರ್ಷಲ್ ಆರ್ಟ್ಸ್ ಮತ್ತು ಸ್ಥಳೀಯ ಕೊರಿಯನ್ ಸಮರ ಕಲೆಗಳ ಸಂಪ್ರದಾಯಗಳಾದ ಟೇಕ್ಯಾನ್ , ಸುಬಾಕ್ ಮತ್ತು ಗ್ವಾನ್‌ಬೆಪ್‌ನಲ್ಲಿ ಅನುಭವ ಹೊಂದಿರುವ ಕೊರಿಯನ್ ಮಾರ್ಷಲ್ ಕಲಾವಿದರು ಅಭಿವೃದ್ಧಿಪಡಿಸಿದರು. 

ಟೇಕ್ವಾಂಡೋದ ಅತ್ಯಂತ ಹಳೆಯ ಆಡಳಿತ ಮಂಡಳಿಯು ಕೊರಿಯಾ ಟೇಕ್ವಾಂಡೋ ಅಸೋಸಿಯೇಷನ್ (KTA), ಕೊರಿಯಾದಲ್ಲಿನ ಒಂಬತ್ತು ಮೂಲ ಕ್ವಾನ್‌ಗಳು ಅಥವಾ ಸಮರ ಕಲೆಗಳ ಶಾಲೆಗಳ ಪ್ರತಿನಿಧಿಗಳ ಸಹಯೋಗದ ಪ್ರಯತ್ನದ ಮೂಲಕ 1959 ರಲ್ಲಿ ರೂಪುಗೊಂಡಿತು. 1966 ರಲ್ಲಿ ಚೋಯ್ ಹಾಂಗ್-ಹಿ ಸ್ಥಾಪಿಸಿದ ಇಂಟರ್ನ್ಯಾಷನಲ್ ಟೇಕ್ವಾಂಡೋ ಫೆಡರೇಶನ್ (ITF) ಮತ್ತು ಕುಕ್ಕಿವಾನ್ ಮತ್ತು ವರ್ಲ್ಡ್ ಟೇಕ್ವಾಂಡೋ (WT, ಹಿಂದೆ ವರ್ಲ್ಡ್ ಟೇಕ್ವಾಂಡೋ ಫೆಡರೇಶನ್ ಅಥವಾ WTF ಸಹಭಾಗಿತ್ವದಲ್ಲಿ ಟೇಕ್ವಾಂಡೋಗೆ ಇಂದು ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು ಇವೆ, 2000 ರಿಂದ ಒಲಿಂಪಿಕ್ ಕ್ರೀಡಾಕೂಟವಾಗಿದೆ. 2018 ರಲ್ಲಿ, ದಕ್ಷಿಣ ಕೊರಿಯಾದ ಸರ್ಕಾರವು ಅಧಿಕೃತವಾಗಿ ಟೇಕ್ವಾಂಡೋವನ್ನು ಕೊರಿಯಾದ ರಾಷ್ಟ್ರೀಯ ಸಮರ ಕಲೆ ಎಂದು ಗೊತ್ತುಪಡಿಸಿದೆ.

ಟೇಕ್ವಾಂಡೋ ಸಮರ ಆಟ ಆಡೋದು ಹೇಗೆ?
ಕುಸ್ತಿ, ಬಾಕ್ಸಿಂಗ್‌, ಕರಾಟೆಯನ್ನ ಬಹುತೇಕರು ಕಂಡಿದ್ದಾರೆ. ಕೊಂಚ ಮಟ್ಟಿಗೆ ಈ ಆಟ ಹೀಗಿಗೆ ಅಂತಾ ಗೊತ್ತಿದೆ. ಹೀಗೆ ಹೊಡೆದರು ಇಷ್ಟು ಪಾಯಿಂಟ್‌, ಗೆದ್ದಂತೆ-ಸೋತಂತೆ ಅಂತಾ ಒಂದು ಅಂದಾಜನ್ನ ಈ ಕ್ರೀಡೆಗಳ ಬಗ್ಗೆ ಆಸಕ್ತರು ಮಾಡ್ತಾರೆ. ಆದ್ರೆ ಟೇಕ್ವಾಂಡೋ ಹಾಗಲ್ಲ. ಈ ಆಟವನ್ನ ವೀಕ್ಷಣೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಟೇಕ್ವಾಂಡೋ ಆಟ ರೀತಿ-ನೀತಿಗಳೆ ಒಂದು ತರಹ ಡಿಪ್ರೆಂಟ್‌ ಆಗಿದೆ.. ಇದ್ರಲ್ಲಿ ತಳ್ಳುವುದು-ನೂಕುವುದು, ಕಿಕ್‌ ಇದರ ಆಟದ ರೀತಿಗಳಾಗಿವೆ.

ಒಲಿಂಪಿಕ್ಸ್ ಕನಸು ನನಸಾಗಿರಲು ವಿರಾಟ್ ಕೊಹ್ಲಿ ನೆರವು ಯಾಚಿಸಿದ ಟೇಕ್ವಾಂಡೋ ಅಥ್ಲೀಟ್ ಡ್ಯಾನಿಶ್ ಮಂಜೂರ್!

ಹೇಗೆ ಪಾಯಿಂಟ್‌ ಗಳು ಸಿಗುತ್ತವೆ ಗೊತ್ತಾ?
ಎದುರಾಳಿಯ ಹೆಗಲು ಜೊತೆ ಬಲವಾದ ಸಂಪರ್ಕವನ್ನು ಮಾಡುವ ಪಂಚ್ 1 ಪಾಯಿಂಟ್ ಗಳಿಸುತ್ತದೆ. ಪಂಚ್ ನೇರವಾದ ಪಂಚ್ ಆಗಿರಬೇಕು ಮತ್ತು ತೋಳನ್ನು ವಿಸ್ತರಿಸಬೇಕು; ಜಬ್‌ಗಳು, ಕೊಕ್ಕೆಗಳು, ಅಪ್ಪರ್‌ಕಟ್‌ಗಳು ಇತ್ಯಾದಿಗಳನ್ನು ಅನುಮತಿಸಲಾಗಿದೆ ಆದರೆ ಸ್ಕೋರ್ ಮಾಡಬೇಡಿ. ತಲೆಗೆ ಹೊಡೆತಗಳನ್ನು ಅನುಮತಿಸಲಾಗುವುದಿಲ್ಲ. ಹೋಗು 2 ಅಂಕಗಳನ್ನು ಗಳಿಸಲು ನಿಯಮಿತವಾದ ಕಿಕ್ (ತಿರುಗುವಿಕೆ ಅಥವಾ ತಿರುಗುವಿಕೆ ಇಲ್ಲ). ತಲೆಗೆ ನಿಯಮಿತವಾದ ಕಿಕ್ (ತಿರುಗುವಿಕೆ ಅಥವಾ ತಿರುಗುವಿಕೆ ಇಲ್ಲ) 3 ಅಂಕಗಳನ್ನು ಗಳಿಸುತ್ತದೆ. ಹೋಗು ಸ್ಕೋರ್ 4 ಅಂಕಗಳಿಗೆ ತಾಂತ್ರಿಕ ಕಿಕ್ (ತಿರುಗುವಿಕೆ ಅಥವಾ ತಿರುಗುವಿಕೆಯನ್ನು ಒಳಗೊಂಡಿರುವ ಕಿಕ್). ತಲೆಗೆ ತಾಂತ್ರಿಕ ಕಿಕ್ 5 ಅಂಕಗಳನ್ನು ಗಳಿಸುತ್ತದೆ. ಇನ್ನು ಕಾಲ ಕಾಲಕ್ಕೆ ಅಂಕಗಳನ್ನ ನೀಡುವ ಮಾದರಿಯು ಬದಲಾಗಿದೆ. ಅಕ್ಟೋಬರ್ 2010 ರಂತೆ, ಈ ದಾಳಿಯನ್ನು ಕಾರ್ಯಗತಗೊಳಿಸಲು ಟರ್ನಿಂಗ್ ಕಿಕ್ ಅನ್ನು ಬಳಸಿದರೆ 4 ಅಂಕಗಳನ್ನು ನೀಡಲಾಯಿತು. ಜೂನ್ 2018 ರಂತೆ, ಇದನ್ನು 5 ಅಂಕಗಳಿಗೆ ಬದಲಾಯಿಸಲಾಗಿದೆ.

Russia Ukraine Crisis: ಪುಟಿನ್‌ಗೆ ನೀಡಿದ್ದ ಗೌರವ ಬ್ಲ್ಯಾಕ್‌ಬೆಲ್ಟ್ ಹಿಂಪಡೆದ ವರ್ಲ್ಡ್ ಟೇಕ್ವಾಂಡೋ!

ತೂಕ ಹಾಗೂ ವಯಸ್ಸಿನ ಆಧಾರದ ಮೇಲೆ ಆಟ
ಈ ಆಟದಲ್ಲಿ ಕುಸ್ತಿಯಂತೆಯೇ ತೂಕ ಹಾಗೂ ವಯಸ್ಸನ್ನ ಆಧರಿಸಿ ಸ್ಪರ್ಧೆಗೆ ಸ್ಪರ್ಧಾಳುಗಳನ್ನ ಬಿಡಲಾಗುತ್ತೆ. ಇಬ್ಬರು ಬಾಲಕರು ಎದುರಾಳಿಯಾಗಿ ನಿಲ್ಲಬೇಕಾದ್ರೆ ಇಬ್ಬರ ವಯಸ್ಸು ಹಾಗೂ ತೂಕದಲ್ಲಿ ಸಾಮ್ಯತೆಗಳು ಇರಬೇಕಾಗುತ್ತದೆ. ಇದೆ ಮಾದರಿಯಲ್ಲಿ ಸ್ಪರ್ಧೆಗಳು ನಡೆಯುತ್ತವೆ.

Follow Us:
Download App:
  • android
  • ios