Asianet Suvarna News Asianet Suvarna News

ಈ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದಿಂದಲೇ Football Training

*ಈಗ ಎಲ್ಲಡೆ ಫುಟ್ಬಾಲ್ ವಿಶ್ವಕಪ್ ಮೇನಿಯಾ ಜೋರಾಗಿದೆ, ಇದು ಅತಿ ಹೆಚ್ಚು ರಾಷ್ಟ್ರಗಳು ಆಡುವ ಆಟವಾಗಿದೆ
*ಈಶಾನ್ಯ ಭಾರತದ ಅರುಣಾಚಲ ಪ್ರದೇಶವು ಶಾಲಾ ಹಂತದಲ್ಲಿ ಫುಟ್ಬಾಲ್ ಟ್ರೈನಿಂಗ್ ನೀಡಲು ಮುಂದಾಗಿದೆ
*200 ಸರ್ಕಾರಿ ಶಾಲೆಗಳಲ್ಲಿ ರಾಜ್ಯ ಸರ್ಕಾರವು ಆಯ್ದ ವಿದ್ಯಾರ್ಥಿಗಳಿಗೆ ಫುಟ್ಬಾಲ್ ತರಬೇತಿಯನ್ನು ಒದಗಿಸಲಿದೆ

Arunachal Pradesh government is planning to provide football training to school children
Author
First Published Nov 24, 2022, 3:54 PM IST

ಶಾಲೆಗಳಲ್ಲಿ (Schools) ಮಕ್ಕಳಿಗೆ ಪಾಠದ ಜೊತೆಗೆ ಆಟವೂ‌ ಬಹಳ ಮುಖ್ಯ. ಕ್ರೀಡಾ (Sports) ಆಸಕ್ತಿ ಇದ್ದವರಿಗೆ ಉತ್ತಮ ಮಾರ್ಗದರ್ಶನ ಸಿಕ್ಕರೆ ಉಜ್ವಲ ಭವಿಷ್ಯ ರೂಪಿಸಿ ಕೊಳ್ಳಬಹುದು. ಕ್ರಿಕೆಟ್, ಪುಟ್ ಬಾಲ್, ಬಾಸ್ಕೆಟ್ ಪಾಲ್, ಹಾಕಿ, ಕಬಡ್ಡಿ, ಖೊ ಖೊ- ಹೀಗೆ ಯಾವುದಾದರೂ ಗೇಮ್ ಗಳಿದ್ದರೆ ಮಕ್ಕಳ ಕ್ರೀಡಾಪ್ರೇಮ ಹೆಚ್ಚಾಗುತ್ತದೆ. ಇಂತಹ ಕ್ರೀಡೆಗಳು ಖಾಸಗಿ ಶಾಲೆಗಳಲ್ಲಿ ಕಾಣಸಿಗುತ್ತವೆ. ಆದ್ರೆ ಸರ್ಕಾರಿ ಶಾಲೆಗಳಲ್ಲಿ ಇಂಥ ಆಟಗಳು ಮರೀಚಿಕೆಯೇ ಸರಿ. ಆದ್ರೆ ಅರುಣಾಚಲ ಪ್ರದೇಶ (Arunachal Pradesh) ಸರ್ಕಾರವು ಮಕ್ಕಳ ಕ್ರೀಡೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಸರ್ಕಾರಿ ಶಾಲೆಗಳಲ್ಲಿ ಫುಟ್ಬಾಲ್ ತರಬೇತಿ (Football Training) ಕಾರ್ಯಕ್ರಮವನ್ನು ಪರಿಚಯಿಸಲು ಮುಂದಾಗಿದೆ.

ಹೌದು.. ಶಾಲಾ ಮಕ್ಕಳಲ್ಲಿ ಫುಟ್‌ಬಾಲ್ ಅನ್ನು ಉತ್ತೇಜಿಸುವ ಉದ್ದೇಶದಿಂದ ಅರುಣಾಚಲ ಪ್ರದೇಶ ಸರ್ಕಾರವು ಇಂಥ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ. ರಾಜ್ಯದ 200  ಸರ್ಕಾರಿ ಶಾಲೆಗಳಲ್ಲಿ  ಫುಟ್ಬಾಲ್ ತರಬೇತಿ ಕಾರ್ಯಕ್ರಮ ಆಯೋಜಿಸಲು ಯೋಜಿಸಿದೆ. ಆಟದ ಮೈದಾನ ಮತ್ತು ದೈಹಿಕ ಶಿಕ್ಷಕರನ್ನು ಹೊಂದಿರುವ ಶಾಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ನಿಗದಿತ ವಯೋಮಾನದ 50 ರಿಂದ 100 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಶಾಲೆಗಳಿಗೆ ಆದ್ಯತೆ ನೀಡಲಾಗುತ್ತದೆ. ಫುಟ್‌ಬಾಲ್ ಅನ್ನು ಉತ್ತೇಜಿಸುವ ಕಾರ್ಯಕ್ರಮವನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಶಿಕ್ಷಣ ಸಚಿವ ತಬಾ ಟೆದಿರ್ ಹೇಳಿದ್ದಾರೆ. ‘ಶಾಲೆಗಾಗಿ ಫುಟ್‌ಬಾಲ್’ (Football for School) ಕಾರ್ಯಕ್ರಮವು ವಿಭಿನ್ನವಾಗಿದ್ದು, 6 ರಿಂದ 13 ವರ್ಷದೊಳಗಿನ ಪ್ರತಿಭೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಮಕ್ಕಳಲ್ಲಿ ಫುಟ್‌ಬಾಲ್ ಅನ್ನು ಉತ್ತೇಜಿಸಲು ಫಿಫಾ ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸಚಿವ ತದಿರ್ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಅಧ್ಯಾಪಕರಿಗೂ ಡ್ರೆಸ್ ಕೋಡ್!

ಪ್ರತಿಯೊಂದು ರಾಜ್ಯವನ್ನು ಈ ಕಾರ್ಯಕ್ರಮಕ್ಕಾಗಿ ಯೋಜನೆಯನ್ನು ಸಿದ್ಧಪಡಿಸಲು ಕೇಳಲಾಗಿದೆ. ಈ ಕುರಿತು ಸೋಮವಾರ ಸಭೆ ನಡೆಸಿದ್ದೇವೆ. ಶಿಕ್ಷಣ ಮತ್ತು ಕ್ರೀಡಾ ಇಲಾಖೆಗಳ ಅಧಿಕಾರಿಗಳು ಮತ್ತು ಅರುಣಾಚಲ ಪ್ರದೇಶ ಫುಟ್ಬಾಲ್ ಅಸೋಸಿಯೇಷನ್ (ಎಪಿಎಫ್ಎ) ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಣ ಸಚಿವಾಲಯ ಮತ್ತು ಫಿಫಾ ಕಾರ್ಯಕ್ರಮಕ್ಕೆ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.

'ಆಟದ ಮೈದಾನ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ಹೊಂದಿರುವ ಶಾಲೆಗಳನ್ನು ಈ ಉಪಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ. ನಿಗದಿತ ವಯಸ್ಸಿನ 50 ರಿಂದ 100 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಶಾಲೆಗಳಿಗೆ ಆದ್ಯತೆ ನೀಡುವುದನ್ನು ನಾವು ನೋಡುತ್ತೇವೆ ಅಂತಾರೆ ಸಚಿವರು.  ಎಪಿಎಫ್‌ಎ ಈ ಕಾರ್ಯಕ್ರಮವನ್ನು ಡಿಸೆಂಬರ್‌ನಲ್ಲಿ ಪ್ರಾರಂಭಿಸುವ ಗುರಿ ಇದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು,  ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ಟೆಡಿರ್ ಹೇಳಿದ್ದಾರೆ. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಖಜಾಂಚಿ ಕಿಪಾ ಅಜಯ್ ಮಾತನಾಡಿ, ಅರುಣಾಚಲ ಪ್ರದೇಶವು ಇಂತಹ ಕಾರ್ಯಕ್ರಮವನ್ನು ಹೊಂದಿರುವ ದೇಶದ ಮೊದಲ ರಾಜ್ಯವಾಗಲಿದೆ. ಈ ಉಪಕ್ರಮವು ರಾಜ್ಯದಲ್ಲಿ ಫುಟ್‌ಬಾಲ್ ಅನ್ನು ಜನಪ್ರಿಯಗೊಳಿಸಲು ಸಹಾಯ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒನ್ ನೇಷನ್ ಒನ್ ರೇಷನ್ ರೀತಿಯಲ್ಲಿ ಮತ್ತೊಂದೇ ಯೋಜನೆ! ಯಾವುದು ಅದು?

ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಫಿಫಾ ಕಾರ್ಯಕ್ರಮಕ್ಕೆ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು. "ಆಟದ ಮೈದಾನ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ಹೊಂದಿರುವ ಶಾಲೆಗಳನ್ನು ಉಪಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ. ನಿಗದಿತ ವಯಸ್ಸಿನ 50 ರಿಂದ 100 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಶಾಲೆಗಳಿಗೆ ಆದ್ಯತೆ ನೀಡುವುದನ್ನು ನಾವು ನೋಡುತ್ತೇವೆ, ”ಎಂದು ಸಚಿವರು ಹೇಳಿದರು. ಒಟ್ಟಾರೆಯಾಗಿ‌ ಇದೊಂದು ಉತ್ತಮ ಕ್ರೀಡಾ ಕಾರ್ಯಕ್ರಮವಾಗಿದ್ದು, ಅರುಣಾಚಲ ಸರ್ಕಾರದ   ನಿರ್ಧಾರ ಪ್ರಶಂಸನೀಯ. ಈ ಕಾರ್ಯಕ್ರಮವನ್ನು ಉಳಿದ ರಾಜ್ಯಗಳ ಸರ್ಕಾರಗಳು ಜಾರಿಗೊಳಿಸಿದರೆ, ಶಾಲೆಗಳಲ್ಲಿ ಮಕ್ಜಳು ಕಲಿಕೆ ಜೊತೆಗೆ ‌ಕ್ರೀಡಾಸಕ್ತಿಯನ್ನು ವೃದ್ಧಿಸಿಕೊಳ್ಳಬಹುದು.

Follow Us:
Download App:
  • android
  • ios