- Home
- News
- State
- Karnataka News Live: ಬೆಳಗಾವಿ - ಇಟಗಿಯಲ್ಲಿ ಗೋವಾ ಕದಂಬರ ಕಾಲದ ಕ್ರಿ.ಶ.1062ರ ಯುಗದ ಅಪರೂಪದ ಶಿಲಾಶಾಸನ ಪತ್ತೆ,!
Karnataka News Live: ಬೆಳಗಾವಿ - ಇಟಗಿಯಲ್ಲಿ ಗೋವಾ ಕದಂಬರ ಕಾಲದ ಕ್ರಿ.ಶ.1062ರ ಯುಗದ ಅಪರೂಪದ ಶಿಲಾಶಾಸನ ಪತ್ತೆ,!

ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಗೆ ಸೋಮವಾರ ಆರಂಭವಾದ ವಿಧಾನಮಂಡಲದ ವಿಶೇಷ ಅಧಿವೇಶನದ ಮೊದಲ ದಿನ ಉಭಯ ಸದನಗಳಲ್ಲಿ ಪಕ್ಷಾತೀತವಾಗಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಭೌತಿಕ ಸಮೀಕ್ಷೆ ನಡೆಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ(ಎನ್ಜಿಟಿ) ವರದಿ ಸಲ್ಲಿಸಿ ಕಾನೂನು ಹೋರಾಟ ಮುಂದುವರೆಸಬೇಕು. ಕೇಂದ್ರದ ಕರಡು ಅಧಿಸೂಚನೆಯನ್ನು ತಿರಸ್ಕರಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಸೋಮವಾರ ಕಸ್ತೂರಿ ರಂಗನ್ ವರದಿ ಕುರಿತು ಉಭಯ ಸದನಗಳಲ್ಲಿ ನಡೆದ ಚರ್ಚೆಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಸದಸ್ಯರು ಪಾಲ್ಗೊಂಡು ಮಾತನಾಡಿದರು. ದಶಕದ ಹಿಂದೆ ಉಪಗ್ರಹಗಳ ಮೂಲಕ ಮಾಡಿರುವ ಸಮೀಕ್ಷೆ ಮಾಡಿ ಸಿದ್ಧಪಡಿಸಿರುವ ಈ ಅವೈಜ್ಞಾನಿಕ ವರದಿ ಜಾರಿಯಾದರೆ, ಜನಜೀವನಕ್ಕೆ ಮಾರಕವಾಗಲಿದೆ. ಯಾವುದೇ ಕಾರಣಕ್ಕೂ ಈ ವರದಿ ಒಪ್ಪಬಾರದು. ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಭೌತಿಕ ಸರ್ವೆ ನಡೆಸಿ ಎನ್‌ಜಿಟಿಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
Karnataka News Live ಬೆಳಗಾವಿ - ಇಟಗಿಯಲ್ಲಿ ಗೋವಾ ಕದಂಬರ ಕಾಲದ ಕ್ರಿ.ಶ.1062ರ ಯುಗದ ಅಪರೂಪದ ಶಿಲಾಶಾಸನ ಪತ್ತೆ,!
Karnataka News Live ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಮಾಡೋಕೆ ಹೋಗಿ ತಾನೇ ಸಿಕ್ಕಿಬಿದ್ದ ಪೂಜಾ; ₹20 ಲಕ್ಷಕ್ಕೆ ಬೇಡಿಕೆಯಿಟ್ಟು ಲಾಕ್!
ಉದ್ಯಮಿಯೊಬ್ಬರಿಗೆ ಸುಳ್ಳು ಅತ್ಯಾ*ಚಾರ ಪ್ರಕರಣದ ಬೆದರಿಕೆಯೊಡ್ಡಿ 20 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. 7 ಲಕ್ಷ ರೂ.ಗೆ ಡೀಲ್ ಕುದುರಿಸಿ, ಮೊದಲ ಕಂತಾಗಿ 2.5 ಲಕ್ಷ ರೂ. ಪಡೆಯುತ್ತಿದ್ದಾಗ ಪೂಜಾ ಪ್ರಕಾಶ್ ಎಂಬಾಕೆ ಸಿಕ್ಕಿಬಿದ್ದಿದ್ದಾಳೆ. ಈಕೆಯ ಬಂಧನದ ವಿಡಿಯೋ ಈಗ ವೈರಲ್ ಆಗಿದೆ.
Karnataka News Live ಕರ್ನಾಟಕದಲ್ಲಿ ಮುಂದಿನ 3 ದಿನ ಮಳೆ ರೌದ್ರಾವತಾರ! ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ
ಕರ್ನಾಟಕದಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಸೆಪ್ಟೆಂಬರ್ 26ರಿಂದ ಮಳೆ ಪ್ರಮಾಣ ಇಳಿಕೆಯಾಗಲಿದೆ.
Karnataka News Live ಇಂದು ರಾತ್ರಿಯಿಂದಲೇ 108 ಆ್ಯಂಬುಲೆನ್ಸ್ ಬಂದ್ ಆಗುತ್ತಾ? ತುರ್ತು ಚಿಕಿತ್ಸೆಗೆ ಹೋಗುವ ರೋಗಿಗಳಿಗೆ ಎದುರಾಯ್ತು ಆತಂಕ!
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ 108 ಆ್ಯಂಬುಲೆನ್ಸ್ ನೌಕರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ರಾತ್ರಿ 8 ಗಂಟೆಯೊಳಗೆ ಬೇಡಿಕೆ ಈಡೇರದಿದ್ದರೆ ಸೇವೆ ಸ್ಥಗಿತಗೊಳ್ಳಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗುವ ಆತಂಕ.
Karnataka News Live ಕಸ್ತೂರಿ ರಂಗನ್ ವರದಿ ಜಾರಿಗೆ ಪಶ್ಚಿಮ ಘಟ್ಟದ ಶಾಸಕರು, ಸಚಿವರು ಏನ್ ಹೇಳಿದ್ರು? ಇಲ್ಲಿದೆ ಅಧಿವೇಶನ ವಿವರ
ಕೇಂದ್ರ ಸರ್ಕಾರದ ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಪಕ್ಷಾತೀತವಾಗಿ ತೀವ್ರ ವಿರೋಧ ವ್ಯಕ್ತವಾಗಿದೆ. ಉಪಗ್ರಹ ಆಧಾರಿತ ಸಮೀಕ್ಷೆ ಬದಲು ಕೇರಳ ಮಾದರಿಯಲ್ಲಿ ಭೌತಿಕ ಸಮೀಕ್ಷೆ ನಡೆಸಿ ಎನ್‌ಜಿಟಿಗೆ ವರದಿ ಸಲ್ಲಿಸಲು ಆಗ್ರಹಿಸಲಾಗಿದೆ. ಯಾರು ಏನು ಮಾತನಾಡಿದರು? ಇಲ್ಲಿದೆ ವಿವರ.