ಅನುದಾನ ಮಂಜೂರು ಮಾಡುವುದರಿಂದ ದೇಶದ ಆರ್ಥಿಕತೆ ಹೆಚ್ಚಾಗುವುದಿಲ್ಲ, ದುಡಿಯುವ ವರ್ಗ ಮಾಡುವ ಕೆಲಸ ಹಾಗೂ ಉತ್ಪಾದನೆಯಿಂದ ಸರ್ಕಾರಕ್ಕೆ ಆದಾಯ ಬರುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
Karnataka News Live: ರೈತ, ದುಡಿಯುವ ವರ್ಗ ಆಧುನಿಕ ಯುಗದ ಕುಬೇರರು - ಸಂಸದ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಯಾವುದೇ ಕೋಚಿಂಗ್ ಇಲ್ಲದೇ ಮನೆಯಲ್ಲೇ ತಯಾರಿ ನಡೆಸಿ, ಯುಪಿಎಸ್ಸಿ ಪರೀಕ್ಷೆಗೆ 5 ಪ್ರಯತ್ನಗಳ ಪೈಕಿ ನಾಲ್ಕರಲ್ಲಿ ಯಶಸ್ವಿಯಾದವರುಹುಬ್ಬಳ್ಳಿಯ ಕೃಪಾ ಜೈನ್. ಈಗಿನದು 5ನೇ ಬಾರಿಯಾಗಿದ್ದು, 190ನೇ ರ್ಯಾಂಕ್ ಪಡೆದಿದ್ದಾರೆ.
ಕೃಪಾ ಈವರೆಗೆ ಐದು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದು, ಮೊದಲ ಸಲವಷ್ಟೇ ವಿಫಲವಾಗಿದ್ದರು. ಉಳಿದ ನಾಲ್ಕು ಸಲವೂ ಯಶಸ್ವಿಯಾಗಿದ್ದಾರೆ. ಆದರೆ, ಐಪಿಎಸ್ ಅಧಿಕಾರಿಯಾಗಬೇಕೆಂಬುದು ಇವರ ಕನಸು. 2 ಮತ್ತು 4ನೇ ಪ್ರಯತ್ನದಲ್ಲಿ ಐಆರ್ಎಂಎಸ್ ದೊರೆತರೆ, 3ನೇ ಪ್ರಯತ್ನದಲ್ಲಿ ಐಎಫ್ಎಸ್ ಕ್ಲಿಯರ್ ಆಗಿದೆ. ಐಆರ್ಎಂಎಸ್ ಇಷ್ಟ ಆಗದ ಕಾರಣ ಅದಕ್ಕೆ ಸೇರ್ಪಡೆಗೊಳ್ಳದೇ ಮತ್ತೆ ಪ್ರಯತ್ನಿಸಿದ್ದರು.
ಐಎಫ್ಎಸ್ನಲ್ಲಿ 18ನೇ ರ್ಯಾಂಕ್ ಬಂದಿದ್ದು, ಡೆಹ್ರಾಡೂನ್ನಲ್ಲಿ ಐಎಫ್ಎಸ್ ಅಧಿಕಾರಿ ತರಬೇತಿ ಪಡೆಯುತ್ತಿದ್ದಾರೆ. ಆದರೂ, ಐಪಿಎಸ್ ಅಧಿಕಾರಿಯಾಗಬೇಕೆಂದು ಮತ್ತೆ 5ನೇ ಪ್ರಯತ್ನ ನಡೆಸಿದ್ದು, ಈ ಬಾರಿ 190ನೇ ರ್ಯಾಂಕ್ ಪಡೆದಿದ್ದಾರೆ. ಇದೀಗ ತಾವು ಅಂದುಕೊಂಡಿದ್ದನ್ನು ಸಾಧಿಸಿದ ಖುಷಿ ಅವರ ಮೊಗದಲ್ಲಿ ಎದ್ದು ಕಾಣುತ್ತಿದೆ.
Karnataka News Live 7 March 2026ರೈತ, ದುಡಿಯುವ ವರ್ಗ ಆಧುನಿಕ ಯುಗದ ಕುಬೇರರು - ಸಂಸದ ಬಸವರಾಜ ಬೊಮ್ಮಾಯಿ
Karnataka News Live 7 March 2026ನಾಗಾರ್ಜುನ-ತ್ರಿವಿಕ್ರಮ್ ಕಾಂಬೋದಲ್ಲಿ ಬರಬೇಕಿದ್ದ ಆ ಸಿನಿಮಾ ಯಾವುದು? ಆದ್ರೂ ಮಿಸ್ ಆಗಿದ್ದೇಕೆ?
ಕಿಂಗ್ ನಾಗಾರ್ಜುನ ಮತ್ತು ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಬರಬೇಕಿತ್ತು. ಆದರೆ, ಇನ್ನೊಬ್ಬ ಸ್ಟಾರ್ ಡೈರೆಕ್ಟರ್‌ನಿಂದಾಗಿ ಆ ಪ್ರಾಜೆಕ್ಟ್ ಕೈತಪ್ಪಿ ಹೋಯ್ತು. ಹಾಗಾದರೆ ಆ ಸಿನಿಮಾ ಯಾವುದು? ಆ ನಿರ್ದೇಶಕ ಯಾರು?
Karnataka News Live 7 March 2026ಒಳ ಮೀಸಲಾತಿ ಜಾರಿ ಆಗದಿದ್ದರೆ ಹೋರಾಟ - ಸಂಸದ ಬಸವರಾಜ ಬೊಮ್ಮಾಯಿ ಎಚ್ಚರಿಕೆ
ಸಾಲದ ಶೂಲಕ್ಕೆ ರಾಜ್ಯವನ್ನು ತೆಗೆದುಕೊಂಡು ಹೋಗುವ ಬಜೆಟ್ ಇದಾಗಿದೆ. ಇದರಿಂದ ರಾಜ್ಯದ ಹಣಕಾಸಿನ ಮೇಲೆ ದೂರಗಾಮಿ ಬಹಳ ದೊಡ್ಡ ಪರಿಣಾಮ ಬೀರಲಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
Karnataka News Live 7 March 2026ಕೇಂದ್ರ ಸರ್ಕಾರ ಹಣ ನೀಡದಿದ್ದರೂ ಭದ್ರಾ ಮೇಲ್ದಂಡೆ ಕಾಮಗಾರಿ - ಸಿಎಂ ಸಿದ್ದರಾಮಯ್ಯ
ಕೃಷ್ಣಾ, ಕಾವೇರಿ, ಗೋದಾವರಿ ಸೇರಿದಂತೆ ರಾಜ್ಯದ ನೀರಾವರಿ ಕ್ಷೇತ್ರದಲ್ಲಿನ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಜತೆಗೆ ಹೊಸ ಕಾಮಗಾರಿಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಒತ್ತು ನೀಡಿದ್ದಾರೆ.
Karnataka News Live 7 March 2026ಜಿಬಿಎ ವ್ಯಾಪ್ತಿಯಲ್ಲಿ ಬಿಲ್ ಬಾಕಿ ಇಲ್ಲ, ಪಾವತಿಯಲ್ಲೂ ಯಾವುದೇ ಸಮಸ್ಯೆ ಉಂಟಾಗುತ್ತಿಲ್ಲ - ಡಿಕೆಶಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಕಾಮಗಾರಿಗಳ ಬಿಲ್ ಪಾವತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಗುತ್ತಿಗೆದಾರರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ.
Karnataka News Live 7 March 2026Krishna Rukku ಸೀರಿಯಲ್ ಆಟೋದ ಮೇಲೆ ದರ್ಶನ್ ಫೋಟೋ ಏಕಿಲ್ಲ? ಫ್ಯಾನ್ಸ್ ಪ್ರಶ್ನೆಗೆ ರುಕ್ಕು ಹೇಳಿದ್ದೇನು?
'ಕೃಷ್ಣ ರುಕ್ಕು' ಎಂಬ ಹೊಸ ಸೀರಿಯಲ್ ಆರಂಭವಾಗಲಿದೆ. ಅಣ್ಣನ ಸಾವಿನ ನಂತರ ಕುಟುಂಬದ ಜವಾಬ್ದಾರಿ ಹೊರುವ ರುಕ್ಕು ಮತ್ತು ಹಾದಿ ತಪ್ಪಿದ ಕೃಷ್ಣನ ಕಥೆಯಿದು. ಧಾರಾವಾಹಿಯ ಆಟೋದಲ್ಲಿ ದರ್ಶನ್ ಫೋಟೋ ಇಲ್ಲದಿರುವ ವಿವಾದಕ್ಕೆ ನಾಯಕಿ ಮೌನ ಗುಡ್ಡೇಮನೆ ಸ್ಪಷ್ಟನೆ ನೀಡಿದ್ದಾರೆ.
Karnataka News Live 7 March 2026ಅಂತರ್ಜಲ ವೃದ್ಧಿಯೇ ಎಚ್.ಎನ್ ವ್ಯಾಲಿ ಯೋಜನೆಯ ಉದ್ದೇಶ - ಸಚಿವ ಡಾ.ಎಂ.ಸಿ.ಸುಧಾಕರ್
ಅಂತರ್ಜಲ ವೃದ್ಧಿಗಾಗಿ ಮಾತ್ರವೇ ಎಚ್.ಎನ್. ವ್ಯಾಲಿ ಮತ್ತು ಕೆ.ಸಿ. ವ್ಯಾಲಿಯನ್ನು ಜಾರಿಗೊಳಿಸಲಾಗಿದೆ. ನೀರಾವರಿ ಅಥವಾ ಕೃಷಿ ಚಟುವಟಿಕೆಗಳಿಗಾಗಿ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
Karnataka News Live 7 March 2026ಕನ್ನಡಿಗರ ಹಿತ ಕಾಯುವ ನಮ್ಮ ಬದ್ಧತೆಯಲ್ಲಿ ಯಾವುದೇ ರಾಜಿ ಇಲ್ಲ - ಸಚಿವ ಪ್ರಿಯಾಂಕ್ ಖರ್ಗೆ
ಸಿಎಂ ಸಿದ್ಧರಾಮಯ್ಯನವರು ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮ ಬದ್ದತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Karnataka News Live 7 March 2026ಕಾಂಗ್ರೆಸ್ ಸರ್ಕಾರ ಗಂಜಿ ಕೇಂದ್ರವಾಗಿದೆ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕೆ
ಸಾಲ ಮಾಡಿ ಕಾಂಗ್ರೆಸ್ ನಾಯಕರನ್ನು ಸಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಈ ಕಾಂಗ್ರೆಸಿಗರಿಗೆ ಗಂಜಿ ಕೇಂದ್ರವಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.
Karnataka News Live 7 March 2026ಅಹಂಕಾರ ಬಿಟ್ಟು ಕೇಂದ್ರದ ಜೊತೆ ಕೆಲಸ ಮಾಡಿ - ಸಿಎಂ ಸಿದ್ದರಾಮಯ್ಯಗೆ ಸೋಮಣ್ಣ ಕಿವಿಮಾತು
ಅಹಂಕಾರ ಬಿಟ್ಟು ಕೇಂದ್ರ ಸರ್ಕಾರದ ಜೊತೆ ಕೈಜೋಡಿಸಿ ಎಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದಾರೆ.
Karnataka News Live 7 March 2026ಮಂಡ್ಯ ನಾಲೆಯಲ್ಲಿ ಅರ್ಚಕನ ಶವ ಪತ್ತೆ; ಚಪ್ಪಲಿ ಮೇಲೆ ರಕ್ತದ ಕಲೆ ಕಂಡ ಪೊಲೀಸರಿಗೆ ಕೊಲೆ ಶಂಕೆ!
Karnataka News Live 7 March 2026ಮೌನ ಮುರಿದ Rakshit Shetty ಹೀಗೊಂದು ಮನವಿ - FB ಫೋಟೋ ಚೇಂಜ್ ಆಗುತ್ತಲೇ, ಈ ವಿಡಿಯೋ ವೈರಲ್
ರಶ್ಮಿಕಾ ಮಂದಣ್ಣ ಮದುವೆ ಬೆನ್ನಲ್ಲೇ, ನಟ ರಕ್ಷಿತ್ ಶೆಟ್ಟಿ ತಮ್ಮ ಫೇಸ್‌ಬುಕ್ ಕವರ್ ಫೋಟೋ ಬದಲಿಸಿದ್ದಾರೆ. ಇದನ್ನು ರಶ್ಮಿಕಾಗೆ ನೀಡಿದ ಟಾಂಗ್ ಎಂದು ಅಭಿಮಾನಿಗಳು ಭಾವಿಸುತ್ತಿರುವಾಗಲೇ, ರಶ್ಮಿಕಾ ಬಗ್ಗೆ ಕೆಟ್ಟದಾಗಿ ಮಾತನಾಡದಂತೆ ರಕ್ಷಿತ್ ಮನವಿ ಮಾಡಿದ್ದ ಹಳೆಯ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
Karnataka News Live 7 March 2026Radhika Pandit ಹುಟ್ಟುಹಬ್ಬ - ಯಶ್ ವಿಶೇಷ ಗಿಫ್ಟ್! ನಟಿಗೆ ಈಗ ಎಷ್ಟು ವರ್ಷ? ಸಿನಿಮಾಕ್ಕೆ ಮರಳ್ತಾರಾ?
ನಟಿ ರಾಧಿಕಾ ಪಂಡಿತ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು, ಅವರ ವಯಸ್ಸು, ಪತಿ ಯಶ್ ನೀಡಿದ ಉಡುಗೊರೆ ಮತ್ತು ಸಿನಿಮಾಗೆ ಮರಳುವ ಬಗ್ಗೆ ಅಭಿಮಾನಿಗಳ ಹಾರೈಕೆಯ ಕುರಿತು ಮಾಹಿತಿ ಇಲ್ಲಿದೆ.
Karnataka News Live 7 March 2026ಫ್ರಿಡ್ಜ್‌ಲ್ಲಿ ಇಟ್ಟು ತೆಗೆದು 3 ದಿನ ಒಂದೇ ಸಾರು, ಗಂಡನ ಬೈಗುಳಕ್ಕೆ ದುರಂತ ಅಂತ್ಯಕಂಡ ಬೆಂಗಳೂರು ಮಹಿಳೆ
ಫ್ರಿಡ್ಜ್‌ಲ್ಲಿ ಇಟ್ಟು ತೆಗೆದು 3 ದಿನ ಒಂದೇ ಸಾರು, ಗಂಡನ ಬೈಗುಳಕ್ಕೆ ದುರಂತ ಅಂತ್ಯಕಂಡ ಬೆಂಗಳೂರು ಮಹಿಳೆ, ಗಂಡನ ಆಕ್ರೋಶ, ಜಗಳಕ್ಕೆ ಇದೀಗ 4 ವರ್ಷದ ಮಗು ತಾಯಿಯನ್ನು ಕಳೆದುಕೊಂಡಿದೆ.
Karnataka News Live 7 March 2026ಸ್ಯಾಂಡಲ್ವುಡ್ ಚೆಲುವೆ ಪ್ರೇಮಾ ಮದುವೆ? ಹಿಂಟ್ಸ್ ಕೊಟ್ಟ ನಟಿ ತಾರಾ ಅನುರಾಧ- ಯಾರೀ ಚೆಲುವ?
Karnataka News Live 7 March 2026ಬನಾರಸಿ, ರೇಷ್ಮೆಯಂಥ ಹೆವಿ ಸೀರೆಗಳನ್ನು ಡ್ರೈ ಕ್ಲೀನ್‌ಗೆ ಕೊಡದೇ ಮನೆಯಲ್ಲೇ ತೊಳೆಯುವ ವಿಧಾನ
Karnataka News Live 7 March 2026ಕಲಬುರಗಿ - ಮಠದಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನ ಹೊಲಕ್ಕೆ ಕರೆದೊಯ್ದು ಬಲತ್ಕಾರ, ಕಾಮುಕನ ವಿರುದ್ದ FIR
ಕಲಬುರಗಿಯ ಜೇವರ್ಗಿ ತಾಲೂಕಿನ ಮಠವೊಂದರಲ್ಲಿ ವಾಸವಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಮಸ್ತಾಕ್ ಹುಸೇನ್ ಎಂಬಾತ ಲೈ೦ಗಿಕ ದೌರ್ಜನ್ಯ ಎಸಗಿದ್ದಾನೆ. ಈ ಕೃತ್ಯವನ್ನು ಸ್ಥಳೀಯ ಯುವಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
Karnataka News Live 7 March 2026ಸಿನಿಮಾ ಪ್ರಚಾರಕ್ಕೆ ಇಷ್ಟೊಂದು ಚೀಪ್ ಗಿಮಿಕ್ ಬೇಕಾ, ಏನಾಗಿದೆ ಈ ಚತ್ರರಂಗಕ್ಕೆ? ನಟ ಶರತ್ ಪ್ರಕಾಶ್ ಮೇಲೆ FIR!
'ಸ್ಟಾರ್' ಸಿನಿಮಾದ ಪ್ರಚಾರಕ್ಕಾಗಿ ನಾಯಕ ನಟ ಶರತ್ ಪ್ರಕಾಶ್ ಸಾರ್ವಜನಿಕವಾಗಿ ಮಚ್ಚು ಹಿಡಿದು ಪೋಸ್ ನೀಡಿದ್ದಾರೆ. ಈ ಕೃತ್ಯಕ್ಕಾಗಿ ನಟ ಹಾಗೂ ಚಿತ್ರಮಂದಿರದ ಮಾಲೀಕರ ವಿರುದ್ಧ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
Karnataka News Live 7 March 2026State Budget 2026 - ಹವ್ಯಕ ಭಾಷಾ ಅಕಾಡೆಮಿ ಘೋಷಣೆ ಸ್ವಾಗತಿಸಿದ ರಾಮಚಂದ್ರಾಪುರ ಮಠ
ಹವಿಗನ್ನಡದ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ 'ಹವ್ಯಕ ಭಾಷಾ ಅಕಾಡೆಮಿ' ಸ್ಥಾಪಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ಐತಿಹಾಸಿಕ ತೀರ್ಮಾನವನ್ನು ರಾಮಚಂದ್ರಾಪುರ ಮಠ ಮತ್ತು ಹವ್ಯಕ ಮಹಾಸಭೆ ಸ್ವಾಗತಿಸಿದ್ದು, ಇದು ಭಾಷೆಯ ಉಳಿವು ಹಾಗೂ ಅಧ್ಯಯನಕ್ಕೆ ಉತ್ತೇಜನ ನೀಡಲಿದೆ ಎಂದು ಆಶಯ ವ್ಯಕ್ತಪಡಿಸಿವೆ
Karnataka News Live 7 March 2026Karnataka Budget 2026 - ಅಲ್ಪಸಂಖ್ಯಾತರಿಗೆ ಬಂಪರ್ ಗಿಫ್ಟ್, ಬಡಮಕ್ಕಳಿಗೆ ಲ್ಯಾಪ್‌ಟಾಪ್, ಶಿಕ್ಷಣ, ಉದ್ಯೋಗ, ಮಹಿಳೆಯರಿಗೆ ಹಲವು ಯೋಜನೆಗಳು!
ಕರ್ನಾಟಕ ಬಜೆಟ್ 2026ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವು ಯೋಜನೆ ಘೋಷಿಸಿದ್ದಾರೆ. ಇದರಲ್ಲಿ ಶಾಲೆಗಳ ಉನ್ನತೀಕರಣ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಹುಬ್ಬಳ್ಳಿ-ಕಲಬುರಗಿಯಲ್ಲಿ ಹಜ್ ಭವನ ನಿರ್ಮಾಣ, ಮತ್ತು ಮಹಿಳಾ ಕೋ-ಆಪರೇಟಿವ್ ಸೊಸೈಟಿ ಸ್ಥಾಪನೆ ಪ್ರಮುಖವಾಗಿವೆ.