10:48 PM (IST) Mar 06

Karnataka News Live 6th March:ಎಚ್‌ಎನ್ ವ್ಯಾಲಿ, ಕೆಸಿ ವ್ಯಾಲಿ ನೀರಿಗೆ 3ನೇ ಹಂತದ ಶುದ್ಧೀಕರಣ ಬೇಕು - ಸಂಸದ ಡಾ.ಕೆ.ಸುಧಾಕರ್‌

ಕೆಸಿ ವ್ಯಾಲಿಯಿಂದ ಬರುವ ನೀರನ್ನು ಹೆಚ್ಚು ಶುದ್ಧ ಮಾಡಲು 3ನೇ ಹಂತದ ಸಂಸ್ಕರಣೆ ಯೋಜನೆ ಜಾರಿ ಮಾಡದೇ ಇದ್ದಲ್ಲಿ ದೊಡ್ಡಮಟ್ಟದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದರು.

Read Full Story
10:28 PM (IST) Mar 06

Karnataka News Live 6th March:ಮಾ.11ರಂದು ವೈದ್ಯರು ಮುಷ್ಕರ ಮಾಡದಿರುವ ವಿಶ್ವಾಸವಿದೆ - ಸಚಿವ ದಿನೇಶ್ ಗುಂಡೂರಾವ್‌

ಮಾ.11ರಿಂದ ಮುಷ್ಕರಕ್ಕೆ ಕರೆ ನೀಡಿದ್ದು, ಮುಷ್ಕರದಿಂದ ಜನರಿಗೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ವೈದ್ಯರು ಮುಷ್ಕರ ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

Read Full Story
09:50 PM (IST) Mar 06

Karnataka News Live 6th March:ಬೆಂಗಳೂರು - ಹೆರಿಗೆಗಾಗಿ ಪತ್ನಿ ಊರಿಗೆ, ಮತ್ತೊಬ್ಬಳ ಜತೆ ಸಂಬಂಧ, ಹೆಂಡತಿ ಮರಳಿದಾಗ ತಿಳಿಯಬಾರದೆಂದು ಕೊಂದೇ ಬಿಟ್ಟ ರಾಯಚೂರಿನ ಸೆಕ್ಯೂರಿಟಿ ಗಾರ್ಡ್!

ದೇವನಹಳ್ಳಿ ರಾಜಕಾಲುವೆಯಲ್ಲಿ ಪತ್ತೆಯಾದ ಸುಟ್ಟ ಮಹಿಳೆಯ ಶವದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ತನ್ನ ಪತ್ನಿಯಿಂದ ದೂರವಾಗುವ ಭಯದಲ್ಲಿ, ಆರೋಪಿ ಮೌನೀಶ್ ಮೈತ್ರಿ ಎಂಬಾತ ನಿರ್ಮಲಾ ಎಂಬ ಮಹಿಳೆಯನ್ನು ಹತ್ಯೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವಕ್ಕೆ ಬೆಂಕಿ ಹಚ್ಚಿದ್ದನು. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
Read Full Story
09:36 PM (IST) Mar 06

Karnataka News Live 6th March:ಜೀವನದಲ್ಲಿ ಏನಾದ್ರೂ ಮಾಡ್ಬೇಕು; ರಿಸ್ಕ್‌ ತಗೊಂಡು, ಹೊಸ ಹೆಜ್ಜೆ ಇಟ್ಟ ನಿರೂಪಕ ನಿರಂಜ್‌ ದೇಶಪಾಂಡೆ

Anchor Niranjan Deshapande: ನಿರೂಪಕ ನಿರಂಜನ್‌ ದೇಶಪಾಂಡೆ ಅವರು ಈಗಾಗಲೇ ಬೆಟ್ಟ ಗುಡ್ಡ ರೆಸಾರ್ಟ್‌ ನಡೆಸುತ್ತಿದ್ದಾರೆ. ಈಗ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಹೌದು, ನಿರೂಪಣೆ ಜೊತೆಗೆ ಉದ್ಯಮಿಯಾಗಲು ರೆಡಿ ಆಗಿದ್ದಾರೆ.

Read Full Story
09:15 PM (IST) Mar 06

Karnataka News Live 6th March:ಯುಪಿಎಸ್‌ಸಿಯಲ್ಲಿ ರಾಜ್ಯ ಗೆದ್ದ PWD ಇಂಜಿನಿಯರ್ ಕಿರಣ್ ಕಮತೆ! ಫಸ್ಟ್ ರ‍್ಯಾಂಕ್ ಪಡೆದ ಉತ್ತರ ಕರ್ನಾಟಕದ ಹಮ್ಮೀರ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಿರಣ್ ಕಮತೆ, ಯುಪಿಎಸ್‌ಸಿ ಪರೀಕ್ಷೆಯಲ್ಲಿ 53ನೇ ರ್ಯಾಂಕ್ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಸದ್ಯ PWD ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ಇವರು, ತಮ್ಮ ಕೊನೆಯ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದು, ಗ್ರಾಮೀಣ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
Read Full Story
09:13 PM (IST) Mar 06

Karnataka News Live 6th March:ಚಿತ್ರದುರ್ಗ - ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ - ಜಾತ್ರೆಗೆ ಹೋಗಿ ಬರ್ತಿದ್ದ ಇಬ್ಬರು ತರುಣರು ಸಾವು

ಚಿತ್ರದುರ್ಗ: ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಹದಿಹರೆಯದ ಹುಡುಗರು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ತಿಪ್ಪೇರುದ್ರಸ್ವಾಮಿಯ ಜಾತ್ರೆಗೆ ಭೇಟಿ ನೀಡಿ ವಾಪಸ್ ಬರುವ ವೇಳೆ ಈ ದುರಂತ ಸಂಭವಿಸಿದೆ.

Read Full Story
09:02 PM (IST) Mar 06

Karnataka News Live 6th March:ಬೆಂಗಳೂರಲ್ಲಿ 23ಕಿ.ಮಿ ದೂರದ ಪ್ರಯಾಣಕ್ಕೆ ಮ್ಯಾಪ್ ಹಾಕಿ 47 ಕಿ.ಮಿ ಸುತ್ತಾಡಿದ ಮಹಿಳೆ, ಕಾರಣವೇನು?

ಬೆಂಗಳೂರಲ್ಲಿ 23ಕಿ.ಮಿ ದೂರದ ಪ್ರಯಾಣಕ್ಕೆ ಮ್ಯಾಪ್ ಹಾಕಿ 47 ಕಿ.ಮಿ ಸುತ್ತಾಡಿದ ಮಹಿಳೆ, ಕಾರಣವೇನು? ಈಕೆ ಘಟನೆ ಹೇಳಿದ ಬೆನ್ನಲ್ಲೇ ಮಹಿಳೆ ಆಯ್ಕೆ ಮಾಡಿಕೊಂಡ ಮಾರ್ಗ ಸರಿ ಎಂದು ಹಲವರು ಹೇಳಿದ್ದಾರೆ. ಏನಿದು ಘಟನೆ

Read Full Story
09:01 PM (IST) Mar 06

Karnataka News Live 6th March:ಮಮಿತಾ ಬಗ್ಗೆ ಮೊದಲಿಗೆ ಅನುಮಾನವಿತ್ತು, ನಂತರ ಶಾಕ್ ಆದೆ - ರಾಧಿಕಾ ಶರತ್‌ಕುಮಾರ್ ಹೇಳಿದ್ದೇನು?

ಸೂರ್ಯ ನಟನೆಯ ಸಿನಿಮಾದಲ್ಲಿ 'ಪ್ರೇಮಲು' ಸಿನಿಮಾ ಮೂಲಕ ಸೌತ್ ಇಂಡಿಯಾದಲ್ಲೇ ಫೇಮಸ್ ಆದ ನಟಿ ಮಮಿತಾ ನಾಯಕಿ ಎಂದಾಗ ರಾಧಿಕಾಗೆ ಅನುಮಾನವಿತ್ತು. ಆದರೆ, ಆಕೆಯ ನಟನೆ ನೋಡಿ ಶಾಕ್ ಆಗಿದ್ದಾಗಿ ಹಿರಿಯ ನಟಿ ಹೇಳಿಕೊಂಡಿದ್ದಾರೆ.

Read Full Story
08:32 PM (IST) Mar 06

Karnataka News Live 6th March:ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು - ಡಿ.ಕೆ.ಶಿವಕುಮಾರ್

ದೇವರು ವರವನ್ನೂ ಕೊಡುವುದಿಲ್ಲ. ಶಾಪವನ್ನೂ ಕೊಡುವುದಿಲ್ಲ. ಅವಕಾಶವನ್ನು ಮಾತ್ರ ಕೊಡುತ್ತಾನೆ. ನಾವು ಎಷ್ಟು ದಿನ ಇರುತ್ತೇವೆ ಅನ್ನುವುದು ಮುಖ್ಯವಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

Read Full Story
08:30 PM (IST) Mar 06

Karnataka News Live 6th March:ಬಂಗಾರ ಮೈಮೇಲಿದ್ರೆ ಜೀವಕ್ಕೆ ಕುತ್ತು - ಚಿನ್ನಕ್ಕಾಗಿ ವೃದ್ಧೆಯ ಕಿವಿಯನ್ನೆ ಕತ್ತರಿಸಿದ ಕಳ್ಳರ ಗ್ಯಾಂಗ್

ಚಿನ್ನದ ಆಭರಣಕ್ಕಾಗಿ ದುಷ್ಕರ್ಮಿಗಳು ಒಂಟಿ ವೃದ್ಧೆಯ ಮೇಲೆ ಹಲ್ಲೆ ಮಾಡಿ ಆಕೆಯ ಚಿನ್ನದ ಬೆಂಡೋಲೆಗಾಗಿ ಕಿವಿಯನ್ನೇ ಕತ್ತರಿಸಿದಂತಹ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೂವಳ್ಳಿಯಲ್ಲಿ ನಡೆದಿದೆ. 

Read Full Story
08:24 PM (IST) Mar 06

Karnataka News Live 6th March:ಬೆಂಗಳೂರು - ಮನೆಯಲ್ಲಿ ಯಾರೂ ಇಲ್ಲವೆಂದು ಕ್ಯಾಬ್‌ನಲ್ಲಿ ಮಾತಾಡಿ ಕೆಟ್ಟ ಕುಟುಂಬ, ರಾತ್ರಿ ಮನೆ ದೋಚಿದ ಕ್ಯಾಬ್ ಡ್ರೈವರ್!

ರಂಜಾನ್ ಹಬ್ಬದ ಶಾಪಿಂಗ್‌ಗೆ ಮುಂಬೈಗೆ ತೆರಳಿದ್ದ ಕುಟುಂಬವೊಂದು, ತಮ್ಮ ಪ್ರಯಾಣದ ವಿವರಗಳನ್ನು ಕೇಳಿಸಿಕೊಂಡ ಕ್ಯಾಬ್ ಚಾಲಕನಿಂದಲೇ ದರೋಡೆಗೆ ಒಳಗಾಗಿದೆ. ಬೆಂಗಳೂರಿನ ಭುವನೇಶ್ವರಿನಗರದಲ್ಲಿ ನಡೆದ ಈ ಘಟನೆಯಲ್ಲಿ, ಚಾಲಕನು ಮನೆಯ ಬೀಗ ಮುರಿದು ₹25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದು, ನಂತರ ಹೆಬ್ಬಾಳ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ.
Read Full Story
08:21 PM (IST) Mar 06

Karnataka News Live 6th March:ಹೈಕಮಾಂಡನ್ನು ಪ್ರಶ್ನಿಸುವಷ್ಟು ಎತ್ತರಕ್ಕೆ ಬೆಳೆದಿಲ್ಲ - ಸಚಿವ ಡಾ.ಎಂ.ಸಿ.ಸುಧಾಕರ್‌

ನಾವು ಹೈಕಮಾಂಡನ್ನೇ ಪ್ರಶ್ನಿಸುವಷ್ಟು ದೊಡ್ಡವರಲ್ಲ. ಜ್ಯೋತಿಷ್ಯ ಹೇಳಲು ನನಗೆ ಬರುವುದಿಲ್ಲ. ಒಂದು ಮಾತು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

Read Full Story
08:18 PM (IST) Mar 06

Karnataka News Live 6th March:ಬಿಗ್ ಬಾಸ್ ರಜತ್ ಮೇಲೆ 3ನೇ ಬಾರಿ ಪೊಲೀಸ್ ಕೇಸ್; ಡಾಗ್ ಸತೀಶ್‌ನನ್ನ ಕೆಣಕಿ ಜೈಲು ಸೇರ್ತಾನಾ ಬುಜ್ಜಿ!

ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ರಜತ್ ಬುಜ್ಜಿ ವಿರುದ್ಧ ಪ್ರಾಣ ಬೆದರಿಕೆ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಎಂಬುವವರಿಗೆ ಫೋನ್ ಕರೆ ಹಾಗೂ ಮೆಸೇಜ್ ಮೂಲಕ ಬೆದರಿಸಿದ್ದಾರೆ ಎಂದು ದೂರು ನೀಡಿದ್ದು, ಕೆ.ಆರ್. ಪುರಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story
08:01 PM (IST) Mar 06

Karnataka News Live 6th March:ಬೆಂಗಳೂರು ನಮ್ಮ ಮೆಟ್ರೋ - ಜಯನಗರ-ಆರ್.ವಿ. ರಸ್ತೆ ನಡುವಿನ ಮೆಟ್ರೋ ರೈಲುಗಳ ವೇಗಕ್ಕೆ ಬ್ರೇಕ್ ಹಾಕಿದ ಬಿಎಂಆರ್‌ಸಿಎಲ್!

ಬೆಂಗಳೂರಿನ 'ನಮ್ಮ ಮೆಟ್ರೋ' ಹಸಿರು ಮಾರ್ಗದಲ್ಲಿ, ಆರ್.ವಿ. ರಸ್ತೆ ಮತ್ತು ಜಯನಗರ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿಯಿಂದಾಗಿ ರೈಲುಗಳ ವೇಗವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲಾಗಿದೆ. ಈ ಕಾರಣದಿಂದ ಪ್ರಯಾಣಿಕರು ಕೆಲವು ನಿಮಿಷಗಳು ಹೆಚ್ಚುವರಿ ಕಾಯಬೇಕಾಗಬಹುದು.

Read Full Story
07:42 PM (IST) Mar 06

Karnataka News Live 6th March:Rakshit Shetty ಫೇಸ್​ಬುಕ್​ ಕವರ್​ ಫೋಟೋ 3 ವರ್ಷದ ಬಳಿಕ ಚೇಂಜ್! ಒಂದು ಚಿತ್ರ, ನೂರೆಂಟು ಅರ್ಥ

ರಶ್ಮಿಕಾ ಮಂದಣ್ಣ ಮದುವೆ ಸುದ್ದಿಯ ನಡುವೆ, ನಟ ರಕ್ಷಿತ್ ಶೆಟ್ಟಿ ಮೂರು ವರ್ಷಗಳ ನಂತರ ತಮ್ಮ ಫೇಸ್‌ಬುಕ್ ಕವರ್ ಫೋಟೋ ಬದಲಿಸಿದ್ದಾರೆ. '777 ಚಾರ್ಲಿ' ಸಿನಿಮಾದ ಫೋಟೋವನ್ನು ಹಂಚಿಕೊಂಡಿದ್ದು, ಇದು ಅವರ ಮುರಿದುಬಿದ್ದ ಮದುವೆಯ ಬಗ್ಗೆ ಪರೋಕ್ಷ ಸಂದೇಶವೇ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
Read Full Story
07:41 PM (IST) Mar 06

Karnataka News Live 6th March:ಸಿದ್ದರಾಮಯ್ಯಗೆ ರಾಜಕೀಯ ಆಪತ್ತು ಬಂದಾಗ ಅಷ್ಟೇ ಅಹಿಂದ ನೆನಪು - ಎಚ್‌.ಡಿ.ಕುಮಾರಸ್ವಾಮಿ

ಸಾಮಾಜಿಕ ನ್ಯಾಯ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚುನಾವಣೆ ಬಂದಾಗ ಅಥವಾ ರಾಜಕೀಯ ಆಪತ್ತು ಬಂದಾಗ ಅಷ್ಟೇ ಅಹಿಂದ ನೆನಪಾಗುತ್ತದೆ. ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.

Read Full Story
07:32 PM (IST) Mar 06

Karnataka News Live 6th March:ನದಿ ನೀರು ಕೊಡುವ ಭರವಸೆ ನೀಡಿ ಕೊಚ್ಚೆ ನೀರು ಹರಿಸಿದ್ದಾರೆ - ಸಿಎಂ ವಿರುದ್ಧ ದೇವೇಗೌಡ ವಾಗ್ದಾಳಿ

ಹದಿನಾರು ಬಜೆಟ್‌ಗಳನ್ನು ಮಂಡಿಸಿ ಹದಿನೇಳನೇ ಬಜೆಟ್ ಮಂಡಿಸಲು ಹೊರಟಿರುವ ಭೂಪರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರಿನ ಕೊಳಚೆ ನೀರು ಹರಿಸಿದರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

Read Full Story
07:17 PM (IST) Mar 06

Karnataka News Live 6th March:ಪೋಷಕರಿಂದ ಮಗು ನಾಪತ್ತೆ ದೂರು - ಚೆಕ್‌ಪೋಸ್ಟ್ ನಿರ್ಮಿಸಿ ಪೊಲೀಸರ ಶೋಧ - 5 ಗಂಟೆ ಬಳಿಕ ಮನೆಯಲ್ಲೇ ಸಿಕ್ಕಿದ ಮಗು

Dandeli news: ದಾಂಡೇಲಿಯಲ್ಲಿ 4 ವರ್ಷದ ಮಗು ನಾಪತ್ತೆಯಾಗಿದೆ ಎಂದು ಪೋಷಕರು ಮತ್ತು ಪೊಲೀಸರು ಸುಮಾರು 5 ಗಂಟೆಗಳ ಕಾಲ ಹುಡುಕಾಡಿದ್ದಾರೆ. ಇಡೀ ಊರೇ ಆತಂಕದಲ್ಲಿದ್ದಾಗ, ಬಾಲಕ ತನ್ನದೇ ಮನೆಯ ಮೆಟ್ಟಿಲಿನ ಹಿಂಭಾಗದಲ್ಲಿ ನಿದ್ದೆ ಮಾಡುತ್ತಿರುವುದು ಕಂಡುಬಂದಿದ್ದು, ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

Read Full Story
07:07 PM (IST) Mar 06

Karnataka News Live 6th March:ಹೈಕಮಾಂಡ್‌ ತೀರ್ಮಾನಕ್ಕೆ ಸಿಎಂ, ಡಿಸಿಎಂ ಒಪ್ಪಿದ್ದಾರೆ - ಸಚಿವ ಎಂ.ಬಿ.ಪಾಟೀಲ

ಮುಖ್ಯಮಂತ್ರಿಗಳ ಡಿನ್ನರ್ ಸಭೆ ವಿಚಾರವಾಗಿ ಮುಖ್ಯಮಂತ್ರಿ ಕರೆದರೂ ಹೋಗುತ್ತೇವೆ. ಉಪಮುಖ್ಯಮಂತ್ರಿ ಕರೆದರೂ ಹೋಗುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು. ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Read Full Story
06:51 PM (IST) Mar 06

Karnataka News Live 6th March:ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡಿಗರ ಕೀರ್ತಿ ಪತಾಕೆ, 22 ಜನ ಪಾಸ್, ಬೆಳಗಾವಿಯ ಕಿರಣ್ ರಾಜ್ಯಕ್ಕೆ ಟಾಪ್!

ಲೋಕಸೇವಾ ಆಯೋಗ (UPSC) ಪ್ರಕಟಿಸಿದ ಸಿವಿಲ್ ಸರ್ವಿಸ್ ಪರೀಕ್ಷೆಯ ಫಲಿತಾಂಶದಲ್ಲಿ 20ಕ್ಕೂ ಹೆಚ್ಚು ಕನ್ನಡಿಗರು ಯಶಸ್ಸು ಸಾಧಿಸಿದ್ದಾರೆ. ಬೆಳಗಾವಿಯ ಕಿರಣ್ ಕಾಮಟೆ 53ನೇ ರ್ಯಾಂಕ್ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದರೆ, ಸಂದೀಪ್ ಬಾದಾದ್ 82ನೇ ರ್ಯಾಂಕ್ ಪಡೆದಿದ್ದಾರೆ.
Read Full Story