11:49 PM (IST) Mar 27

Summer cool tips: ಎಷ್ಟೇ ಬಿಸಲಿರಲಿ, ಬೇಸಗೆಯಲ್ಲಿ ನಿಮ್ಮನ್ನು ತಂಪಾಗಿಟ್ಟುಕೊಳ್ಳಲು ಇಷ್ಟು ಮಾಡಿ ಸಾಕು!

ಬೇಸಿಗೆಯಲ್ಲಿ ಆರೋಗ್ಯವಾಗಿರಲು ಹೈಡ್ರೇಟ್ ಆಗಿರುವ ಆಹಾರ ಸೇವಿಸಿ, ಸಾಕಷ್ಟು ನೀರು ಕುಡಿಯಿರಿ ಮತ್ತು ತಂಪಾಗಿರಿ. ಈ ಸಲಹೆಗಳನ್ನು ಅನುಸರಿಸುವ ಮೂಲಕ ದೇಹವನ್ನು ಆರೋಗ್ಯವಾಗಿ ಮತ್ತು ಉಲ್ಲಾಸದಿಂದ ಇಡಬಹುದು.

ಪೂರ್ತಿ ಓದಿ
11:21 PM (IST) Mar 27

ಎನರ್ಜಿ ಡ್ರಿಂಕ್ಸ್ ಕುಡಿಯೋದ್ರಿಂದ ಹೃದಯಾಘಾತವಾಗಬಹುದೇ? ಸತ್ಯಾಸತ್ಯತೆ ಏನು?

ಇತ್ತೀಚಿನ ದಿನಗಳಲ್ಲಿ ಎನರ್ಜಿ ಡ್ರಿಂಕ್‌ಗಳ ಬಳಕೆ ಹೆಚ್ಚಾಗಿದೆ, ಆದರೆ ಅವು ಹೃದಯದ ಆರೋಗ್ಯಕ್ಕೆ ಹಾನಿಕಾರಕ. ಅಧ್ಯಯನಗಳ ಪ್ರಕಾರ, ಇವು ಹೃದಯದ ಮೇಲೆ ಒತ್ತಡ ಹೇರಿ, ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು.

ಪೂರ್ತಿ ಓದಿ
10:45 PM (IST) Mar 27

ಆಟೋ ಬಾಡಿಗೆ ಹಣ ಕೊಡದೆ ಚಾಲಕನ ಮೊಬೈಲ್‌ನೊಂದಿಗೆ ಪರಾರಿಯಾದ ಕಳ್ಳ!

ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಪ್ರಯಾಣಿಕನ ಸೋಗಿನಲ್ಲಿ ಬಂದ ಕಳ್ಳನೊಬ್ಬ ಆಟೋ ಚಾಲಕನ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳು ಆಫ್ ಆಗಿದ್ದರಿಂದ ಕಳ್ಳನ ಪತ್ತೆ ಪೊಲೀಸರಿಗೆ ಸವಾಲಾಗಿದೆ.

ಪೂರ್ತಿ ಓದಿ
10:11 PM (IST) Mar 27

ಅಕ್ರಮ ಬಾಂಗ್ಲಾದೇಶಿಯರ ಬಳಿ ಬಂಗಾಳದ ಆಧಾರ ಕಾರ್ಡ್ ಪತ್ತೆ! ಮಮತಾ ಬ್ಯಾನರ್ಜಿ ವಿರುದ್ಧ ಅಮಿತ್ ಶಾ ಗಂಭೀರ ಆರೋಪ!

ಲೋಕಸಭೆಯಲ್ಲಿ ಅಮಿತ್ ಶಾ ಅವರು ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಗಡಿ ಬೇಲಿ ನಿರ್ಮಾಣಕ್ಕೆ ಭೂಮಿ ನೀಡದಿರುವ ಮತ್ತು ಅಕ್ರಮ ವಲಸಿಗರಿಗೆ ನೆರವು ನೀಡುತ್ತಿರುವ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಾಂಗ್ಲಾದೇಶಿ ನುಸುಳುಕೋರರಿಗೆ ಟಿಎಂಸಿ ಸರ್ಕಾರ ಆಧಾರ್ ಕಾರ್ಡ್ ನೀಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಪೂರ್ತಿ ಓದಿ
09:43 PM (IST) Mar 27

ಕೊಡಗು: ಕಸ ವಿಲೇವಾರಿ ಘಟಕ ವಿರೋಧಿಸಿ ಹಾಡಿ ಜನರ ಅಹೋರಾತ್ರಿ ಧರಣಿ, ಅಮರಣಾಂತರ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ!

ಕೊಡಗಿನ ಚೊಟ್ಟೆಪಾರಿ ಗ್ರಾಮದಲ್ಲಿ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸುವುದನ್ನು ವಿರೋಧಿಸಿ ಗ್ರಾಮಸ್ಥರು ಬಹುಜನ ಪಕ್ಷದ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಜನವಸತಿ ಪ್ರದೇಶದಲ್ಲಿ ಘಟಕ ಸ್ಥಾಪನೆಯಿಂದ ಪರಿಸರ ಮಾಲಿನ್ಯವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ
08:51 PM (IST) Mar 27

ಕೇರಳ ದೇವಸ್ಥಾನದಲ್ಲಿ ನಡೆಯಬೇಕಿದ್ದ 'ಇಫ್ತಾರ್‌ ಪಾರ್ಟಿ' ರದ್ದು ಮಾಡಿದ ಹೈಕೋರ್ಟ್‌!

ಕೇರಳದ ಶ್ರೀ ಮೃದಂಗ ಶೈಲೇಶ್ವರಿ ದೇವಸ್ಥಾನದಲ್ಲಿ ನಡೆಯಬೇಕಿದ್ದ ಇಫ್ತಾರ್ ಕೂಟವನ್ನು ಹೈಕೋರ್ಟ್ ಮಧ್ಯಪ್ರವೇಶದ ನಂತರ ರದ್ದು ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಇಫ್ತಾರ್ ಆಯೋಜನೆಗೆ ವಿರೋಧ ವ್ಯಕ್ತವಾಗಿತ್ತು.

ಪೂರ್ತಿ ಓದಿ
08:39 PM (IST) Mar 27

ಮುಸ್ಲಿಮರು ಬೀದಿಗಳಲ್ಲಿ ಏಕೆ ನಮಾಜ್ ಮಾಡ್ತಾರೆ? ಎಸ್‌ಪಿ ಶಾಸಕ ಅಬು ಅಜ್ಮಿ ಹೇಳಿದ ಕಾರಣ ಏನು ಗೊತ್ತಾ?

ಉತ್ತರ ಪ್ರದೇಶದಲ್ಲಿ ಬೀದಿಗಳಲ್ಲಿ ನಮಾಜ್ ನಿಷೇಧಿಸಿರುವುದಕ್ಕೆ ಎಸ್‌ಪಿ ಶಾಸಕ ಅಬು ಅಜ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ. ತಾಜ್ ಮಹಲ್ ಕುರಿತ ವಿವಾದ ಮತ್ತು ಸಲ್ಮಾನ್ ರಶ್ದಿಗೆ ರೆಡ್ ಕಾರ್ಪೆಟ್ ಹಾಕುವ ವಿಚಾರವನ್ನೂ ಅವರು ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ
08:23 PM (IST) Mar 27

ಮಹರಾಷ್ಟ್ರದ ಮುದ್ದಾದ ಹೆಂಡತಿ ಕೊಂದು, ಸೂಟ್‌ಕೇಸ್‌ಗೆ ತುಂಬಿದ ಪತಿರಾಯ!

ಬೆಂಗಳೂರಿನಲ್ಲಿ ಮಹಾರಾಷ್ಟ್ರ ಮೂಲದ ದಂಪತಿಗಳ ನಡುವೆ ಜಗಳವಾಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡನೇ ಹೆಂಡತಿಯನ್ನು ಕೊಂದು ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿದ್ದಾನೆ.

ಪೂರ್ತಿ ಓದಿ
08:07 PM (IST) Mar 27

ಹಾಲಿನ ದರ ಏರಿಕೆ ಬೆನ್ನಲ್ಲೇ ಕಾಫಿ ಟೀ ದರವೂ ಹೆಚ್ಚಳ ! ಕಾಂಗ್ರೆಸ್ ನಂಬಿದ ಜನಸಾಮಾನ್ಯರಿಗೆ ಬರೆ ಮೇಲೆ ಬರೆ!

ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಏರಿಕೆಯಾದ ಕಾರಣ, ಕಾಫಿ ಮತ್ತು ಟೀ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಬೆಂಗಳೂರು ಹೊಟೇಲ್ ಮಾಲೀಕರ ಸಂಘವು ದರವನ್ನು 2-3 ರೂಪಾಯಿಗಳಷ್ಟು ಹೆಚ್ಚಿಸಲು ನಿರ್ಧರಿಸಿದೆ.

ಪೂರ್ತಿ ಓದಿ
07:59 PM (IST) Mar 27

'ಬೇರೆಲ್ಲಾ ರಾಜ್ಯಕ್ಕಿಂತ ಕಡಿಮೆ..' ಹಾಲಿನ ಬೆಲೆ ಏರಿಕೆಗೆ ಮತ್ತೆ ಹಳೆ ಪ್ಲೇಟ್‌ ಓಡಿಸಿ ಸಮರ್ಥನೆಗಿಳಿದ ಸಿಎಂ!

ಕಾಂಗ್ರೆಸ್ ಸರ್ಕಾರ ನಂದಿನಿ ಹಾಲಿನ ದರವನ್ನು 9 ರೂಪಾಯಿ ಏರಿಸಿದೆ, ಈ ಬಾರಿ 4 ರೂಪಾಯಿ ಏರಿಕೆ ಮಾಡಿದ್ದು, ಸಿಎಂ ಸಮರ್ಥಿಸಿಕೊಂಡಿದ್ದಾರೆ. ರೈತರಿಗೆ ಪ್ರೋತ್ಸಾಹ ಧನ ನೀಡುವ ಬದಲು ದರ ಏರಿಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ
07:31 PM (IST) Mar 27

ಕರ್ನಾಟಕದಲ್ಲಿ ಐಟಿ ಉದ್ಯಮ ಮಹಾಕುಸಿತ, 2025 ಅಲ್ಲಿ ಕೇವಲ 212 ಕಂಪನಿ ಸ್ಟಾರ್ಟ್‌, 440 ಕಂಪನಿ ಕ್ಲೋಸ್‌!

ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಭಾರತದಲ್ಲಿ ಐಟಿ ಕಂಪನಿಗಳ ಸ್ಥಾಪನೆ ಶೇ.90ರಷ್ಟು ಕುಸಿದಿದೆ. 2020ರಲ್ಲಿ 16388 ಕಂಪನಿಗಳು ಸ್ಥಾಪನೆಯಾಗಿದ್ದರೆ, 2025ರಲ್ಲಿ ಕೇವಲ 2419ಕ್ಕೆ ಇಳಿದಿದೆ.

ಪೂರ್ತಿ ಓದಿ
06:55 PM (IST) Mar 27

ಈ ದೇಶ ಧರ್ಮಶಾಲೆಯಲ್ಲ..; ರೋಹಿಂಗ್ಯಾ, ಬಾಂಗ್ಲಾದೇಶಿಗಳಿಗೆ ಅಮಿತ್ ಶಾ ಎಚ್ಚರಿಕೆ!

ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತವು ಯಾರೂ ಬೇಕಾದ್ರೂ ಬಂದು ಹೋಗುವ ಧರ್ಮಶಾಲೆಯಲ್ಲ ಎಂದು ಹೇಳಿದ್ದಾರೆ. ವಲಸೆ ಮತ್ತು ವಿದೇಶಿಯರ ಮಸೂದೆ 2025 ರ ಕುರಿತು ಮಾತನಾಡಿದ ಅವರು, ದೇಶದ ಭದ್ರತೆಗಾಗಿ ವಿದೇಶಿಯರ ವಿವರಗಳನ್ನು ದಾಖಲಿಸುವುದು ಅಗತ್ಯ ಎಂದಿದ್ದಾರೆ.

ಪೂರ್ತಿ ಓದಿ
06:46 PM (IST) Mar 27

ದುಬಾರಿ ಬೆಲೆಯ ಅಯೋಧ್ಯೆ ರಾಮಜನ್ಮಭೂಮಿ ಸ್ಪೆಷಲ್‌ ಎಡಿಷನ್‌ ವಾಚ್‌ ಧರಿಸಿದ ಸಲ್ಮಾನ್‌ ಖಾನ್‌, ಫೋಟೋ ವೈರಲ್‌!

ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರ ಸಿಕಂದರ್ ಬಿಡುಗಡೆಗೆ ಮುಂಚಿತವಾಗಿ ರಾಮ ಜನ್ಮಭೂಮಿ ವಾಚ್ ಧರಿಸಿ ಫೋಟೋ ಹಂಚಿಕೊಂಡಿದ್ದಾರೆ. ಈ ವಿಶೇಷ ವಾಚ್ ರಾಮ ಮಂದಿರದ ಕೆತ್ತನೆಗಳನ್ನು ಹೊಂದಿದೆ ಮತ್ತು ಇದರ ಬೆಲೆ 34 ಲಕ್ಷ ರೂಪಾಯಿ.

ಪೂರ್ತಿ ಓದಿ
06:29 PM (IST) Mar 27

ಹುಸ್ಕೂರು ಮದ್ದೂರಮ್ಮದೇವಿ 100 ಅಡಿ ರಥ ದುರಂತ: ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ ಜಿಲ್ಲಾಧಿಕಾರಿ!

ಆನೇಕಲ್ ಹುಸ್ಕೂರು ಗ್ರಾಮದ ಮದ್ದೂರಮ್ಮ ದೇವಿಯ ಜಾತ್ರೆಯಲ್ಲಿ ತೇರು ಬಿದ್ದ ದುರಂತದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ರಾಜಸ್ವ ನಿರೀಕ್ಷಕ ಪ್ರಶಾಂತ್ ಮತ್ತು ಗ್ರಾಮ ಆಡಳಿತಾಧಿಕಾರಿ ಕಾರ್ತಿಕ್ ಡಿ. ಅವರನ್ನು ಇಲಾಖಾ ವಿಚಾರಣೆ ಬಾಕಿ ಉಳಿಸಿ ಜಿಲ್ಲಾಧಿಕಾರಿ ಜಗದೀಶ್ ಆದೇಶ ಹೊರಡಿಸಿದ್ದಾರೆ.

ಪೂರ್ತಿ ಓದಿ
06:28 PM (IST) Mar 27

ಅಚ್ಚರಿಯಾದರೂ ಸತ್ಯ, ಲಂಡನ್‌ನಲ್ಲಿ ಕಿಂಗ್ ಚಾರ್ಲ್ಸ್ ಎಂಟ್ರಿಗೆ ಧೂಮ್ ಮಚಾಲೆ ಮ್ಯೂಸಿಕ್

ಲಂಡನ್‌ನ ಕಿಂಗ್ ಚಾರ್ಲ್ಸ್ ಎಂಟ್ರಿ ಕೊಡುವ ವೇಳೆ ಗೌರವ ಸೂಚಕವಾಗಿ ಮ್ಯೂಸಿಕ್ ಬ್ಯಾಂಡ್ ತಂಡ ಪರಿಸ್ಥಿತಿಗೆ ತಕ್ಕಂತೆ ಮ್ಯೂಸಿಕ್ ಬಜಾಯಿಸಲಿದೆ. ಆದರೆ ಈ ಬಾರಿ ಲಂಡನ್ ಅರಮನೆಗೆ ಕಿಂಗ್ ಚಾರ್ಲ್ಸ್ ಎಂಟ್ರಿಕೊಡುವ ವೇಳೆ ಬಾಲಿವುಡ್‌ನ ಧೂಮ್ ಮಚಾಲೆ ಹಾಡಿನ ಮ್ಯೂಸಿಕ್ ಬಾರಿಸಿದ್ದಾರೆ. 

ಪೂರ್ತಿ ಓದಿ
06:28 PM (IST) Mar 27

'ನಿಮಗೆ ಧೈರ್ಯವಿದ್ರೆ KFC ಮುಚ್ಚಿಸಿ..; ನವರಾತ್ರಿಗೆ ಮಾಂಸದಂಗಡಿ ಮುಚ್ಚಬೇಕೆಂಬ ಬಿಜೆಪಿ ಒತ್ತಾಯಕ್ಕೆ ಎಎಪಿ ಸಂಸದ ಸವಾಲ್!

ದೆಹಲಿಯಲ್ಲಿ ನವರಾತ್ರಿಯ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಬಿಜೆಪಿ ಒತ್ತಾಯಿಸಿದ್ದಕ್ಕೆ ಎಎಪಿ ಸಂಸದ ಸಂಜಯ್ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಗೆ ಧೈರ್ಯವಿದ್ದರೆ ಕೆಎಫ್‌ಸಿ ಮುಚ್ಚಲಿ ಎಂದು ಸವಾಲು ಹಾಕಿರುವ ಅವರು, ಮದ್ಯ ನಿಷೇಧದ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ.

ಪೂರ್ತಿ ಓದಿ
06:16 PM (IST) Mar 27

ಸರ್ಕಾರದ ಇಲಾಖೆಗಳಿಂದ ಎಸ್ಕಾಂಗೆ 8500 ಕೋಟಿ ಬಾಕಿ, ರಾಜ್ಯ ವಿದ್ಯುತ್‌ ಗ್ರಾಹಕರಿಗೆ ಮಿಸ್‌ ಆಯ್ತು ಕೇಂದ್ರದ ಭಾರೀ ಸಬ್ಸಿಡಿ!

ಸರ್ಕಾರಿ ಇಲಾಖೆಗಳು ಎಸ್ಕಾಂಗಳಿಗೆ ಬಾಕಿ ಉಳಿಸಿಕೊಂಡಿರುವ ಕಾರಣ ಕರ್ನಾಟಕವು ಸ್ಮಾರ್ಟ್ ಮೀಟರ್‌ಗಳ ಮೇಲಿನ ಸಬ್ಸಿಡಿಯನ್ನು ಕಳೆದುಕೊಳ್ಳುತ್ತಿದೆ. ವಿವಿಧ ಇಲಾಖೆಗಳು 8500 ಕೋಟಿ ರೂ.ಗಳಿಗೂ ಹೆಚ್ಚು ಬಾಕಿ ಉಳಿಸಿಕೊಂಡಿವೆ, ಇದರಿಂದಾಗಿ ಗ್ರಾಹಕರಿಗೆ ಸಿಗಬೇಕಾದ ಸಬ್ಸಿಡಿ ತಪ್ಪಿಹೋಗುತ್ತಿದೆ.

ಪೂರ್ತಿ ಓದಿ
06:03 PM (IST) Mar 27

ಕಾಂಗ್ರೆಸ್ ಸರ್ಕಾರದಿಂದ 3ನೇ ಬಾರಿಗೆ ₹4 ಹಾಲಿನ ದರ ಏರಿಕೆ! 20 ತಿಂಗಳಲ್ಲಿ 9 ರೂ. ಹೆಚ್ಚಳ!

ಕಾಂಗ್ರೆಸ್ ಸರ್ಕಾರವು 20 ತಿಂಗಳಲ್ಲಿ ಮೂರು ಬಾರಿ ಹಾಲಿನ ದರವನ್ನು ಏರಿಸಿದೆ, ಒಟ್ಟು 9 ರೂಪಾಯಿ ಹೆಚ್ಚಳವಾಗಿದೆ. ಈ ಏರಿಕೆಯು ಬಡವರು ಮತ್ತು ಮಧ್ಯಮ ವರ್ಗದ ಜನರ ಮೇಲೆ ಪರಿಣಾಮ ಬೀರಿದೆ.

ಪೂರ್ತಿ ಓದಿ
06:02 PM (IST) Mar 27

ಯತ್ನಾಳ್ ಉಚ್ಚಾಟನೆ, ಸೆಂಚುರಿ ದಾಟಿದ ಪದಾಧಿಕಾರಿಗಳು ರಾಜೀನಾಮೆ ವಿಜಯಪುರ ಬಿಜೆಪಿ ಮಂಡಲವೇ ಖಾಲಿ! ಮುಂದೇನು?

ಯತ್ನಾಳ ಉಚ್ಚಾಟನೆ ಬೆನ್ನಲ್ಲೆ ವಿಜಯಪುರದಲ್ಲಿ ರಾಜೀನಾಮೆಗಳ ಮಹಾಪರ್ವ ಶುರುವಾಗಿದೆ. ನಗರ ಮಂಡಲದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ 174 ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ.

ಪೂರ್ತಿ ಓದಿ
05:57 PM (IST) Mar 27

ಪತಿಯಂದಿರೇ ಹುಷಾರ್​! ಗಂಡ ಹೆಂಡಿರ ಜಗಳ ನಾಲಿಗೆ ಕಚ್ಚಿ ತುಂಡು ಮಾಡುವ ತನಕ...

ಜಗಳ ಮಾಡುವ ಭರದಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟ ಪತ್ನಿಯೊಬ್ಬಳು ತನ್ನ ಗಂಡ ನಾಲಿಗೆಯನ್ನು ತುಂಡರಿಸಿ ತಾನೂ ಸಾಯಲು ಹೊರಟಿರುವ ಘಟನೆ ನಡೆದಿದೆ. ಆಗಿದ್ದೇನು?

ಪೂರ್ತಿ ಓದಿ