ಲಂಡನ್‌ನ ಕಿಂಗ್ ಚಾರ್ಲ್ಸ್ ಎಂಟ್ರಿ ಕೊಡುವ ವೇಳೆ ಗೌರವ ಸೂಚಕವಾಗಿ ಮ್ಯೂಸಿಕ್ ಬ್ಯಾಂಡ್ ತಂಡ ಪರಿಸ್ಥಿತಿಗೆ ತಕ್ಕಂತೆ ಮ್ಯೂಸಿಕ್ ಬಜಾಯಿಸಲಿದೆ. ಆದರೆ ಈ ಬಾರಿ ಲಂಡನ್ ಅರಮನೆಗೆ ಕಿಂಗ್ ಚಾರ್ಲ್ಸ್ ಎಂಟ್ರಿಕೊಡುವ ವೇಳೆ ಬಾಲಿವುಡ್‌ನ ಧೂಮ್ ಮಚಾಲೆ ಹಾಡಿನ ಮ್ಯೂಸಿಕ್ ಬಾರಿಸಿದ್ದಾರೆ.
ಲಂಡನ್(ಮಾ.27) ಬಾಲಿವುಡ್ ಹಾಡುಗಳು ಏಷ್ಯಾದಲ್ಲಿ ಅತ್ಯಂತ ಜನಪ್ರಿಯ. ಇನ್ನು ಅಮೆರಿಕೆ, ಯುಕೆ, ಸೇರಿದಂತೆ ಇತರ ಯೂರೋಪ್ ದೇಶಗಳಲ್ಲೂ ಬಾಲಿವುಡ್ ಹಾಡುಗಳು ಬಳಕೆಯಾಗುತ್ತದೆ. ಆದರೆ ಯಾವುದೇ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು, ಆ ದೇಶದ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಬಾಲಿವುಡ್ ಹಾಡು ಅಥವಾ ಭಾರತೀಯ ಸಿನಿಮಾ ಹಾಡುಗಳು ಬಳಕೆಯಾಗಿಲ್ಲ. ಇದೀಗ ಅಚ್ಚರಿಯೊಂದು ನಡೆದಿದೆ. ಇಂಗ್ಲೆಂಡ್ ರಾಜ ಚಾರ್ಲ್ಸ್, ರಾಣಿ ಕ್ಯಾಮಿಲಾ ವಾರ್ಷಿಕ ಕಾಮನ್‌ವೆಲ್ತ್ ಸೆರಮನಿಗೆ ಎಂಟ್ರಿಕೊಡುವ ವೇಳೆ ಬಾಲಿವುಡ್‌ನ ಧೂಮ್ ಮಚಾಲೆ ಹಾಡಿನ ಮ್ಯೂಸಿಕ್ ಪ್ಲೇ ಮಾಡಲಾಗಿದೆ.
ಯನೈಟೆಡ್ ಕಿಂಗ್ಡಮ್‌ನಲ್ಲಿ ಪ್ರತಿ ವರ್ಷ ಕಾಮನ್‌ವೆಲ್ತ್ ಸೆರಮನಿ ಅದ್ಧೂರಿಯಾಗಿ ನಡೆಸಲಾಗುತ್ತದೆ. ಇಂಗ್ಲೆಂಡ್ ರಾಜಮನೆತ ಈ ಕಾರ್ಯಕ್ರಮದ ವಿಶೇಷ ಅತಿಥಿ. ಇದು ಕ್ರಾಸ್ ಕಲ್ಚರ್ ಈವೆಂಟ್ ಆಗಿ ಅತ್ಯಂತ ಜನಪ್ರಿಯವಾಗಿದೆ. ಇಂಗ್ಲೆಂಡ್ ಸರ್ಕಾರ ಹಾಗೂ ರಾಜಮನೆತನ ಆಯೋಜಿಸುವ ಈ ಕಾರ್ಯಕ್ರಮ ಒಂದು ರೀತಿಯಲ್ಲಿ ಯುಕೆಯ ಪ್ರತಿಷ್ಠಿತ ಕಾರ್ಯಕ್ರಮವಾಗಿದೆ. ಯುಕೆ ಸರ್ಕಾರದ ಸಚಿವರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲೇ ಹೃತಿಕ್ ರೋಶನ್ ಅಭಿನಯದ ಧೂಮ್ ಮಚಾಲೆ ಹಾಡಿನ ಮ್ಯೂಸಿಕ್ ಹಾಕಲಾಗಿದೆ. ಅದು ಕೂಡ ಕಿಂಗ್ ಚಾರ್ಲ್ಸ್ ಆಗಮನದ ವೇಳೆ. ಬಕಿಂಗ್‌ಹ್ಯಾಮ್ ಪ್ಯಾಲೆಸ್ ಬಳಿ ಇರುವ ವೆಸ್ಟ್‌ಮಿನಿಸ್ಟರ್ ಕಟ್ಟಡಕ್ಕೆ ಎಂಟ್ರಿಯಾಗುವ ವೇಳೆ ಈ ಹಾಡಿನ ಮ್ಯೂಸಿಕ್ ಪ್ಲೇ ಮಾಡಲಾಗಿದೆ.
ವಿವಾದಿತ ಸರ್ಪ್ರೈಸ್ ಹಾಡಿಗೆ ನಟಿ ಕೇತಿಕಾ ಶರ್ಮಾ ಪಡೆದ ಸಂಭಾವನೆ ಎಷ್ಟು?
ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಯುಕೆ ಕಿಂಗ್ ಚಾರ್ಲ್ಸ್ ಹಾಗೂ ರಾಮಿ ಕ್ಯಾಮಿಲಾ ನಡೆದುಕೊಂಡು ವೆಸ್ಟ್‌ಮಿನಿಸ್ಟರ್ ಅಬೆಗೆ ಆಗಮಿಸುವ ವೇಳೆ ಗಣ್ಯರಿಗೆ, ಅತಿಥಿಗಳಿಗೆ ಗೌರವ ಸೂಚಕವಾಗಿ ಮ್ಯೂಸಿಕ್ ಬ್ಯಾಂಡ್ ತಂಡ ಕೆಲ ವಿಶೇಷ ಮ್ಯೂಸಿಕ್ ಬ್ಯಾಂಡ್ ಬಜಾಯಿಸುತ್ತಾರೆ. ಆದರೆ ಈ ಬಾರಿ ಮಾತ್ರ ಬಾಲಿವುಡ್‌ನ ಧೂಮ್ 2 ಚಿತ್ರದ ಅತ್ಯಂತ ಜನಪ್ರಿಯ ಹಾಗೂ ಭಾರತದಲ್ಲಿ ಬಹುತೇಕರ ಕೇಳಿ ಆನಂದಿಸಿರುವ ಈ ಹಾಡನ್ನು ಲಂಡನ್‌ನಲ್ಲಿ ಬಜಾಯಿಸಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವು ಭಾರತೀಯರು ಇದು ಮ್ಯೂಸಿಕ್ ಸೇರಿಸಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಇದು ಅಸಲಿ ಮ್ಯೂಸಿಕ್. ಹಲವು ಭಾರತೀಯರು ಅಚ್ಚರಿಗೊಂಡಿದ್ದಾರೆ. ಧೂಮ್ ರೀತಿಯಲ್ಲೇ ಕಿಂಗ್ ಚಾರ್ಲ್ಸ್ ಹಾಗೂ ಕ್ವೀನ್ ಕ್ಯಾಮಿಲಾ ಎಂಟ್ರಿ ಕೊಟ್ಟಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Video | ಸೋನು ನಿಗಮ್ ಸಂಗೀತ ಕಾರ್ಯಕ್ರಮದ ವೇಳೆ ಕಲ್ಲು, ಬಾಟಲಿ ತೂರಿದ ಕಿಡಿಗೇಡಿಗಳು!
