'ಯಾರೂ ಬೇಕಾದ್ರೂ ಬಂದು ಇಲ್ಲಿರಲು ಈ ದೇಶ ಧರ್ಮಶಾಲೆಯಲ್ಲ. ಯಾರು ಬರುತ್ತಾರೆ, ಯಾವಾಗ ಏಕೆ ಬರುತ್ತಾರೆ, ಎಲ್ಲಿ ಉಳಿದುಕೊಳ್ತಾರೆ ಎಂಬುದನ್ನು ತಿಳಿಯುವ ಹಕ್ಕು ದೇಶಕ್ಕೆ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

Lok Sabha passes Immigration and Foreigners Bill: 'ಯಾರೂ ಬೇಕಾದ್ರೂ ಬಂದು ಇಲ್ಲಿರಲು ಈ ದೇಶ ಧರ್ಮಶಾಲೆಯಲ್ಲ. ಯಾರು ಬರುತ್ತಾರೆ, ಯಾವಾಗ ಏಕೆ ಬರುತ್ತಾರೆ, ಎಲ್ಲಿ ಉಳಿದುಕೊಳ್ತಾರೆ ಎಂಬುದನ್ನು ತಿಳಿಯುವ ಹಕ್ಕು ದೇಶಕ್ಕೆ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ವಲಸೆ ಮತ್ತು ವಿದೇಶಿಯರ ಮಸೂದೆ 2025 ವಿಚಾರವಾಗಿ ಇಂದು ಲೋಕಸಭೆಯಲ್ಲಿ ಮಾತನಾಡಿದ ಗೃಹ ಸಚಿವರು, ದೇಶದ ಭದ್ರತೆಗಾಗಿ ಯಾರು ಭಾರತಕ್ಕೆ ಬರುತ್ತಾರೆ ಮತ್ತು ಎಷ್ಟು ಕಾಲ ಇರುತ್ತಾರೆ ಎಂಬುದನ್ನು ತಿಳಿಯುವ ಹಕ್ಕು ದೇಶಕ್ಕೆ ಇದೆ ಎಂದು ಅವರು ಒತ್ತಿ ಹೇಳಿದರು.

ಮಸೂದೆಯ ಮುಖ್ಯ ನಿಬಂಧನೆಗಳು ಏನು?

  • ಭಾರತಕ್ಕೆ ಪ್ರವೇಶಿಸಲು ಮಾನ್ಯ ಪಾಸ್‌ಪೋರ್ಟ್ ಮತ್ತು ವೀಸಾ ಕಡ್ಡಾಯ.
  • ನಕಲಿ ದಾಖಲೆಗಳನ್ನು ಬಳಸಿದರೆ ಕಠಿಣ ಶಿಕ್ಷೆ.
  • ವೀಸಾ ಅವಧಿ ಮೀರಿ ದೇಶದಲ್ಲಿ ಉಳಿದವರನ್ನು ಪತ್ತೆ ಮಾಡಿ ಕ್ರಮ.
  • ದೇಶದ ಭದ್ರತೆಗೆ ಅಗತ್ಯ.

ಅಮಿತ್ ಶಾ ಅವರು, 'ಈ ಮಸೂದೆ ದೇಶದ ಹಲವು ಸಮಸ್ಯೆಗಳಿಗೆ ಸಂಬಂಧಿಸಿದೆ. ಇದರ ಮೂಲಕ ಭಾರತಕ್ಕೆ ಬರುವ ವಿದೇಶಿಯರ ವಿವರಗಳನ್ನು ದಾಖಲಿಸಲಾಗುವುದು. ಇದು ದೇಶದ ಭದ್ರತೆ ಮತ್ತು ಅಭಿವೃದ್ಧಿಗೆ ಸಹಾಯಕವಾಗಲಿದೆ' ಎಂದು ಭರವಸೆ ನೀಡಿದರು. ದೇಶದ ಆರ್ಥಿಕತೆ, ಉತ್ಪಾದನೆ, ವ್ಯಾಪಾರ, ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಮತ್ತು 2047ರ ವೇಳೆಗೆ ಭಾರತವನ್ನು ವಿಶ್ವದಲ್ಲಿ ಅಗ್ರಗಣ್ಯವಾಗಿಸಲು ಈ ಮಸೂದೆ ಮಹತ್ವದ್ದು ಎಂದು ಅವರು ತಿಳಿಸಿದರು.

ಇದನ್ನೂ ಓದಿ: 'ನಿಮಗೆ ಧೈರ್ಯವಿದ್ರೆ KFC ಮುಚ್ಚಿಸಿ..'; ನವರಾತ್ರಿಗೆ ಮಾಂಸದಂಗಡಿ ಮುಚ್ಚಬೇಕೆಂಬ ಬಿಜೆಪಿ ಒತ್ತಾಯಕ್ಕೆ ಎಎಪಿ ಸಂಸದ ಸವಾಲ್!

ಸಿಎಎ ಬಗ್ಗೆ ಅಮಿತ್ ಶಾ ಹೇಳಿದ್ದೇನು?

ಗೃಹ ಸಚಿವರು ಸಿಎಎ ಬಗ್ಗೆ ಮಾತನಾಡುತ್ತಾ, 'ಪಾರ್ಸಿಗಳು ಭಾರತಕ್ಕೆ ಆಶ್ರಯ ಪಡೆದ ಇತಿಹಾಸವಿದೆ ಮತ್ತು ಇಂದಿಗೂ ಅವರು ಇಲ್ಲಿ ಸುರಕ್ಷಿತರಾಗಿದ್ದಾರೆ. ಪ್ರಧಾನಿ ಮೋದಿ ಅವರ ಆಡಳಿತದಲ್ಲಿ, ಬಿಜೆಪಿ ಸರ್ಕಾರವು ನೆರೆ ದೇಶಗಳಿಂದ ಕಿರುಕುಳಕ್ಕೊಳಗಾದ ಆರು ಸಮುದಾಯಗಳಿಗೆ ಸಿಎಎ ಮೂಲಕ ಆಶ್ರಯ ನೀಡಿದೆ ಎಂದು ಹೇಳಿದರು.

ಇದನ್ನೂ ಓದಿ: ಆಗ್ರಾ ಮೊಘಲರಿಗೆ ಹೆಸರುವಾಸಿಯಲ್ಲ,ಛತ್ರಪತಿ ಶಿವಾಜಿ ಮಹಾರಾಜರಿಗೆ: ಸಿಎಂ ಯೋಗಿ

ರೋಹಿಂಗ್ಯಾ, ಬಾಂಗ್ಲಾದೇಶಿಗಳಿಗೆ ಎಚ್ಚರಿಕೆ

'ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆ 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿದೆ. ಭಾರತ ಉತ್ಪಾದನಾ ಕೇಂದ್ರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿದೇಶಿಯರು ಇಲ್ಲಿಗೆ ಬರುವುದು ಸಹಜ. ಆದರೆ ದೇಶದ ವ್ಯವಸ್ಥೆಗೆ ಕೊಡುಗೆ ನೀಡಲು ಬರುವವರಿಗೆ ಸ್ವಾಗತವಿದೆ. ಆದರೆ ರೋಹಿಂಗ್ಯಾ ಅಥವಾ ಬಾಂಗ್ಲಾದೇಶಿಗಳು ಅಶಾಂತಿ ಸೃಷ್ಟಿಸಲು ಬಂದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಅವರು ಎಚ್ಚರಿಸಿದರು.

ಈ ಮಸೂದೆಯ ಮೂಲಕ ದೇಶದ ಭದ್ರತೆಯನ್ನು ಖಚಿತಪಡಿಸುವುದು, ವಿದೇಶಿಯರ ಪ್ರವೇಶವನ್ನು ನಿಯಂತ್ರಿಸುವುದು ಮತ್ತು ಭಾರತದ ಅಭಿವೃದ್ಧಿಗೆ ಬಲ ನೀಡುವುದು ಸರ್ಕಾರದ ಗುರಿಯಾಗಿದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.