ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗದಂತೆ ತಡೆದು, ಸರ್ಕಾರಿ ಶಾಲೆಗಳತ್ತ ಸೆಳೆಯಲು ಶಿಕ್ಷಕರೊಬ್ಬರು ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲ ಮಕ್ಕಳಿಗೂ ತಲಾ 2 ಸಾವಿರ ಠೇವಣಿ ಮಾಡಿಸಲು ಮುಂದಾಗಿದ್ದಾರೆ.
- Home
- News
- State
- Karnataka News Live: ಸರ್ಕಾರಿ ಶಾಲೇಲಿ 1ನೇ ತರಗತಿ ವಿದ್ಯಾರ್ಥಿಗಳಿಗೆ ₹2 ಸಾವಿರ ಠೇವಣಿ - ಶಿಕ್ಷಕನ ಹೊಸ ಪ್ರಯತ್ನವೇನು?
Karnataka News Live: ಸರ್ಕಾರಿ ಶಾಲೇಲಿ 1ನೇ ತರಗತಿ ವಿದ್ಯಾರ್ಥಿಗಳಿಗೆ ₹2 ಸಾವಿರ ಠೇವಣಿ - ಶಿಕ್ಷಕನ ಹೊಸ ಪ್ರಯತ್ನವೇನು?

ಬೆಂಗಳೂರು: ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಲಭ್ಯವಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಮಳೆ ಆಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬಿತ್ತನೆ ಬೀಜಗಳನ್ನು ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜಗಳ ಸಮರ್ಪಕ ಪೂರೈಕೆಗೆ ಕೃಷಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ವಿವರಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ 8960 ಕ್ವಿಂಟಲ್ ಸೋಯಾಬೀನ್, 1344 ಕ್ವಿಂಟಲ್ ಶೇಂಗಾ ಬೀಜಕ್ಕೆ ಅಂದಾಜು ಬೇಡಿಕೆ ಇದೆ. ಈಗಾಗಲೇ 2733 ಕ್ವಿಂಟಲ್ ಸೋಯಾಬೀನ್, 305 ಕ್ವಿಂಟಲ್ ಶೇಂಗಾ ಬೀಜ ದಾಸ್ತಾನು ಮಾಡಲಾಗಿದೆ. ಉಳಿದ ಬೇಡಿಕೆಯನ್ನು ಅಗತ್ಯದ ಆಧಾರದಲ್ಲಿ ಪೂರೈಸಲಾಗುವುದು ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ರಾಜ್ಯ ಮಟ್ಟದಲ್ಲಿಯೂ ಸೋಯಾಬೀನ್ ಬೀಜಕ್ಕೆ 1.80 ಲಕ್ಷ ಕ್ವಿಂಟಲ್ ಬೇಡಿಕೆ ಅಂದಾಜಿದ್ದು, 2.09 ಲಕ್ಷ ಕ್ವಿಂಟಲ್ ದಾಸ್ತಾನಿದೆ. 70 ಸಾವಿರ ಕ್ವಿಂಟಲ್ ಶೇಂಗಾ ಬೀಜಕ್ಕೆ ಬೇಡಿಕೆ ಇದ್ದು, 74 ಸಾವಿರ ಕ್ವಿಂಟಲ್ ದಾಸ್ತಾನಿದೆ. ಒಟ್ಟಾರೆ ರಾಜ್ಯದಲ್ಲಿ ಎಲ್ಲಾ ಬೆಳೆಗಳ 4.71 ಲಕ್ಷ ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, 5.46 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದೆ ಎಂದು ಹೇಳಿದ್ದಾರೆ.
Karnataka News Live 23 May 2026ಸರ್ಕಾರಿ ಶಾಲೇಲಿ 1ನೇ ತರಗತಿ ವಿದ್ಯಾರ್ಥಿಗಳಿಗೆ ₹2 ಸಾವಿರ ಠೇವಣಿ - ಶಿಕ್ಷಕನ ಹೊಸ ಪ್ರಯತ್ನವೇನು?
Karnataka News Live 23 May 2026ನಕಲಿ ಬಯೋಮೆಟ್ರಿಕ್ - 80ಕ್ಕೂ ಹೆಚ್ಚು ಪಿಡಿಒಗಳ ಹಾಜರಿ ಹಿಂದಿನ ಮುಖವಾಡ ಕಳಚಿದ ಸಿಇಒ ಲವೀಶ್
ಗ್ರಾಮಗಳಲ್ಲೇ ಹಾಜರಿದ್ದು, ಸಮಸ್ಯೆಗಳ ಬಗೆಹರಿಸುವಿಕೆಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಸುಳ್ಳು ಹೇಳುತ್ತ, ಬಯೋಮೆಟ್ರಿಕ್ ಹಾಜರಿಯನ್ನು ಬೇರೊಬ್ಬರಿಗೆ ನೀಡಿ, ದಿನನಿತ್ಯದ..
Karnataka News Live 23 May 2026ರಾಜ್ಯದ ಹಲವೆಡೆ ಭಾರೀ ಗಾಳಿ ಮಳೆಯಿಂದ ಅವಾಂತರ, ಸಿಡಿಲಿನ ಅಬ್ಬರಕ್ಕೆ ಹೊತ್ತಿ ಉರಿದ ತೆಂಗಿನ ಮರ
ರಾಜ್ಯದ ಹಲೆವೆಡೆ ಇಂದು ಭಾರಿ ಮಳೆಯಾಗಿದೆ. ಹಲವೆಡೆ ಮರಗಳು ಉರುಳಿ ಬಿದ್ದಿದೆ. ಇತ್ತ ಸಿಡಿಲಿನ ಅಬ್ಬರಕ್ಕೆ ತೆಂಗಿನ ಮರ ಹೊತ್ತಿ ಉರಿದ ಘಟನೆಯೂ ನಡೆದಿದೆ. ರಸ್ತೆಗಳು ನೀರಿನೀಂದ ತುಂಬಿ ಹೋಗಿದ್ದು ವಾಹನ ಸವಾರರು ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ.
Karnataka News Live 23 May 2026ಕರ್ನಾಟಕದಲ್ಲೂ ಸಾಮ್ರಾಜ್ಯ ವಿಸ್ತರಣೆಗೆ ದಳಪತಿ ಸ್ಕೆಚ್.. ಯಾರ ಸಪೋರ್ಟ್, ಏನಾಗ್ತಿದೆ ಇಲ್ಲಿ? ಸೀಕ್ರೆಟ್..
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ 5 ನಗರ ಪಾಲಿಕೆಗಳಿಗೆ 2026ರ ಆಗಸ್ಟ್ 31ರೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸೋ ಚುನಾವಣೆಗೆ ತಯಾರಿ ಶುರುವಾಗಿದೆ. ಈ ನಡುವೆ ತಮಿಳು ಮತದಾರರು ಹೆಚ್ಚು ಇರುವ ವಾರ್ಡ್‌ಗಳಲ್ಲಿ ಟಿವಿಕೆ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ ಅನ್ನುವ ಸುದ್ದಿ ಹರಿದಾಡ್ತಾ ಇದೆ..!
Karnataka News Live 23 May 2026ನನ್ನ ಗಟ್ಟಿ ಧ್ವನಿ ಅಡಗಿಸಲು ಪ್ಯಾಕೇಜ್ ಮಾಡಿ ಸೋಲಿಸಿದ್ದಾರೆ - ಮಾಜಿ ಸಚಿವ ಎಚ್.ಆಂಜನೇಯ
ಸಮಾಜದ ಪರವಾದ ನನ್ನ ಗಟ್ಟಿಧ್ವನಿ ಅಡಗಿಸಲು ದುಷ್ಟಶಕ್ತಿಗಳು ಪ್ಯಾಕೇಜ್ ಮಾಡಿಕೊಂಡು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ನೋವಿನಿಂದ ಹೇಳಿಕೊಂಡರು.
Karnataka News Live 23 May 2026ರಾಷ್ಟ್ರೀಯತೆ ಎನ್ನುವುದು ತಾಯಿ ಮಕ್ಕಳ ಸಂಬಂಧ ಇದ್ದಂತೆ - ಸಿ.ಟಿ.ರವಿ ಹೇಳಿದ್ದೇನು?
ಭಾರತೀಯ ಜನತಾ ಪಕ್ಷ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷವಲ್ಲ. ಅದು ಒಂದು ಸೈದ್ದಾಂತಿಕ ಆಂದೋಲನ. ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಹರಡಿದೆ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
Karnataka News Live 23 May 2026ಮಕ್ಕಳನ್ನು ಪ್ರಾಣಿಗಳಂತ ತಿಳ್ಕೊಂಡಿದಿರೇನ್ರೀ - ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ಬಿ.ವೀರಪ್ಪ ಆಕ್ರೋಶ
ಇವರೇನು ಮಕ್ಕಳೂ ಅಂತ ತಿಳ್ಕೊಂಡಿದೀರಾ ಅಥವಾ ಪ್ರಾಣಿಗಳಂತ ತಿಳ್ಕೊಂಡಿದಿರಾ. ನೀವೆಲ್ಲಾ ಮನುಷ್ಯರೇನ್ರೀ. ನಿಮಗೆ ಮನುಷ್ಯತ್ವ ಇದೆಯಾ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
Karnataka News Live 23 May 2026ಮೆಟ್ರಿಮೋನಿಯಲ್ ಸೈಟ್ನಲ್ಲಿ 'ಹ್ಯಾಂಡ್ಸಮ್ ಡಾಕ್ಟರ್' - ಲಕ್ಷ ಲಕ್ಷ ಕಳಕೊಂಡ ಕರ್ನಾಟಕದ ಯುವತಿಯರು
Karnataka News Live 23 May 2026ಸಿದ್ದರಾಮಯ್ಯನವರದ್ದು ಅತಿಯಾಯ್ತು - ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಯತ್ನಾಳ ವಾಗ್ದಾಳಿ
ಮುಸ್ಲಿಮರ ಮೇಲಿನ ಕೇಸ್‌ಗಳನ್ನು ವಾಪಸ್ ತೆಗೆದುಕೊಂಡಂತೆ ಹಿಂದೂಗಳ ಮೇಲಿನ ಕೇಸ್‌ಗಳನ್ನು ವಾಪಸ್ ತೆಗೆದುಕೊಳ್ಳಲಿ. ಈ ಮೂಲಕ ಜಾತ್ಯಾತೀತ ಎಂದು ಎಲ್ಲರನ್ನೂ ನೋಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
Karnataka News Live 23 May 2026ಈಕೆಯ ಎಲ್ಲಾದ್ರೂ ನೋಡಿರುವಿರಾ? ನಿಮ್ಮ ಅಂಗಡಿಗೂ ಬಂದಾಳು ಹುಷಾರ್- ಕಂಡ್ರೆ ಕೂಡಲೇ ತಿಳಿಸಿ
Karnataka News Live 23 May 2026ಹೀರೋಯಿನ್ ಇಲ್ಲ, ಮೇಕಪ್ ಇಲ್ಲ.. ಆದರೂ ಗಮನ ಸೆಳೆಯುತ್ತಿರುವ ಈ ಕನ್ನಡ ಸಿನಿಮಾ ಯಾವುದು?
ಕಾಶೀನಾಥ್ ಗರಡಿಯಲ್ಲಿ ಪಳಗಿದ ನಟ, ನಿರ್ದೇಶಕ ಪ್ರಸಾದ್ ಪುತ್ತೂರು ನಿರ್ದೇಶನದ ಚಿತ್ರ ‘ಮಂಗಮಾಯ’ ಇದೀಗ ಥಿಯೇಟರ್‌ನಲ್ಲಿದೆ. ಸಿನಿಮಾ ಬಗ್ಗೆ ನಿರ್ದೇಶಕ ಪ್ರಸಾದ್ ಪುತ್ತೂರು, ಶ್ರೀಸಾಮಾನ್ಯನೊಬ್ಬನ ಶಕ್ತಿಯನ್ನು ಹೇಳುವ ಸಸ್ಪೆನ್ಸ್ ಥ್ರಿಲ್ಲರ್.
Karnataka News Live 23 May 2026ಸೊಂಟದ ಅಂದ ಹೆಚ್ಚಿಸೋ ಈ ಜ್ಯುವೆಲರಿ ಈಗ ಎಲ್ಲೆಡೆ ಟ್ರೆಂಡ್ - ಡಿಸೈನ್ ನೋಡಿದ್ರೆ ನೀವೂ ಟ್ರೈ ಮಾಡ್ತೀರಾ!
ನಿಮ್ಮ ಎಥ್ನಿಕ್ ಅಥವಾ ಫ್ಯೂಷನ್ ಲುಕ್‌ಗೆ ಒಂದು ಸ್ಟೈಲಿಶ್ ಮತ್ತು ರಾಯಲ್ ಟಚ್ ನೀಡಬೇಕಾ? ಹಾಗಿದ್ರೆ, ಈ ಮಾಡರ್ನ್ ಸಿಲ್ವರ್ ಕಮರ್‌ಬಂದ್ ಡಿಸೈನ್‌ಗಳು ನಿಮ್ಮ ಸೊಂಟದ ಅಂದವನ್ನು ಹೆಚ್ಚಿಸಿ, ನಿಮ್ಮ ಇಡೀ ಲುಕ್‌ಗೆ ಗ್ಲಾಮರ್ ತುಂಬಲಿವೆ.
Karnataka News Live 23 May 2026ಬಿಸಾಕುವ ಖರ್ಜೂರದ ಬೀಜದಿಂದ ಕಾಫಿ ಮಾಡೋ ಸೀಕ್ರೆಟ್ ಗೊತ್ತಾ? ಈ ಡ್ರಿಂಕ್ ಈಗ ಫುಲ್ ಟ್ರೆಂಡ್!
ಸಾಮಾನ್ಯವಾಗಿ ಬಿಸಾಕೋ ಖರ್ಜೂರದ ಬೀಜಗಳಿಂದ್ಲೇ ಸಖತ್ ಟೇಸ್ಟಿ ಮತ್ತು ಹೆಲ್ದೀ ಕಾಫಿ ಮಾಡ್ಬಹುದು ಗೊತ್ತಾ? ಕೆಫೀನ್ ಇಲ್ಲದ ಈ ಡ್ರಿಂಕ್ ಕುಡಿಯೋಕೆ ರುಚಿಯಾಗಿರೋದು ಮಾತ್ರವಲ್ಲ, ಶಕ್ತಿ ಕೂಡ ಕೊಡುತ್ತೆ.
Karnataka News Live 23 May 2026IPL Playoffs - ಒಂದೇ ಸ್ಥಾನ, 4 ತಂಡಗಳ ಫೈಟ್! ಯಾರಿಗೆ ಸಿಗಲಿದೆ ಕೊನೆಯ ಚಾನ್ಸ್?
19ನೇ ಐಪಿಎಲ್ ಪ್ಲೇಆಫ್‌ನ ಕೊನೆಯ ಸ್ಥಾನಕ್ಕಾಗಿ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಾಜಸ್ಥಾನಕ್ಕೆ ಹೆಚ್ಚಿನ ಅವಕಾಶಗಳಿದ್ದರೆ, ಉಳಿದ ತಂಡಗಳ ಭವಿಷ್ಯವು ನೆಟ್ ರನ್‌ರೇಟ್ ಮತ್ತು ಇತರ ಪಂದ್ಯಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.
Karnataka News Live 23 May 2026ಶಿವಮೊಗ್ಗ-ತಾಳಗುಪ್ಪ ಮಲೆನಾಡು ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಸಂಸದ ಬಿ.ವೈ ರಾಘವೇಂದ್ರ!
ಬೆಂಗಳೂರು: ತಾಳಗುಪ್ಪ-ಬೆಂಗಳೂರು ನಡುವಿನ ರೈಲುಗಳು ಕೆಲವೊಮ್ಮೆ ತಾಳಗುಪ್ಪ ತಲುಪುವುದು ತುಂಬಾ ತಡವಾಗುತ್ತಿದೆ ಎನ್ನುವ ಮಾತುಗಳು ಪ್ರಯಾಣಿಕರಿಂದ ಕೇಳಿ ಬಂದಿದ್ದವು. ಇದೀಗ ಮಲೆನಾಡಿನ ರೈಲ್ವೇ ಪ್ರಯಾಣಿಕರಿಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಗುಡ್ ನ್ಯೂಸ್ ಕೊಟ್ಟಿದ್ದಾರೆ.
Karnataka News Live 23 May 2026ಜೂನ್ 1ರಿಂದ ಹೊಸ ಕೋರ್ಟ್‌ನಲ್ಲಿ ದರ್ಶನ್ ಕೇಸ್ ವಿಚಾರಣೆ - 1 ವರ್ಷದಲ್ಲಿ ಮುಗಿಯುತ್ತಾ ಕೇಸ್?
ರೇಣುಕಾಸ್ವಾಮಿ ಕೊಲೆ ಪ್ರಕರಣವು ನಿರ್ಣಾಯಕ ಹಂತ ತಲುಪಿದ್ದು, ಸುಪ್ರೀಂ ಕೋರ್ಟ್ ತ್ವರಿತ ವಿಚಾರಣೆಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು 59ನೇ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದ್ದು, ಐವರು ಆರೋಪಿಗಳ ಜಾಮೀನು ರದ್ದತಿ ಕುರಿತ ಹೈಕೋರ್ಟ್ ತೀರ್ಪು ಕಾಯ್ದಿರಿಸಲಾಗಿದೆ.
Karnataka News Live 23 May 2026IPL ಅಬ್ಬರದ ನಡುವೆಯೂ ಗೃಹಿಣಿಯರ ಮನಗೆದ್ದು TRP ಚಾರ್ಟ್‌ನಲ್ಲಿ ಮುನ್ನುಗ್ಗುತ್ತಿರುವ ಟಾಪ್ 5 ಕನ್ನಡ ಸೀರಿಯಲ್ಸ್
ಪ್ರಸಕ್ತ 19ನೇ ವಾರದ ಕನ್ನಡ ಕಿರುತೆರೆ ಟಿಆರ್‌ಪಿ ರೇಟಿಂಗ್ಸ್ ಬಿಡುಗಡೆಯಾಗಿದ್ದು, ಧಾರಾವಾಹಿಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ. 'ಕರ್ಣ' ಧಾರಾವಾಹಿ ಅಗ್ರಸ್ಥಾನದಲ್ಲಿದ್ದರೆ, 'ಅಣ್ಣಯ್ಯ', 'ಲಕ್ಷ್ಮಿ ನಿವಾಸ', 'ನಂದಗೋಕುಲ' ಮತ್ತು 'ಅಮೃತಧಾರೆ' ಕ್ರಮವಾಗಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
Karnataka News Live 23 May 2026ನಜ್ಮಾ ನಜೀರ್ ಚಿಕ್ಕನೇರಳೆ ಮದುವೆ - ಕಾಂಗ್ರೆಸ್ ಯುವ ನಾಯಕಿಯ 'ಕೈ' ಹಿಡಿದ ಹುಡುಗ ಯಾರು?
ಕಾಂಗ್ರೆಸ್ ಯುವ ನಾಯಕಿ ನಜ್ಮಾ ನಜೀರ್ ಚಿಕ್ಕನೇರಳೆ ಅವರು ಡಾ.ಹಕೀಮ್ ತೀರ್ಥಹಳ್ಳಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ಧೂರಿ ವಿವಾಹ ಸಮಾರಂಭದಲ್ಲಿ ರಾಜಕೀಯ ಗಣ್ಯರು ಮತ್ತು ಚಂದನವನದ ಕಲಾವಿದರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು.
Karnataka News Live 23 May 2026ಜೂನ್ ತಿಂಗಳಲ್ಲಿ ಹುಟ್ಟಿದವರ ಮೇಲೆ ವಿಷ್ಣು-ಶುಕ್ರನ ಡಬಲ್ ಕೃಪೆ - ಇವರ ಆ ಅದ್ಭುತ ಗುಣಗಳ ಬಗ್ಗೆ ನಿಮಗೊತ್ತಾ?
ಜೂನ್‌ನಲ್ಲಿ ಜನಿಸಿದವರ ಮೇಲೆ ಶುಕ್ರ ಗ್ರಹ ಮತ್ತು ಭಗವಾನ್ ವಿಷ್ಣುವಿನ ವಿಶೇಷ ಕೃಪೆ ಇರುತ್ತದೆ. ಇವರು ಆಕರ್ಷಕ ವ್ಯಕ್ತಿತ್ವದವರಾಗಿದ್ದು, ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ ಮತ್ತು ಶಾಂತಿಪ್ರಿಯರಾಗಿರುತ್ತಾರೆ.
Karnataka News Live 23 May 2026ಆ ಥರ ಕಂಟೆಂಟ್‌ಗೆ ಆಪ್ಶನ್ ಕೊಟ್ಟು, IT BT ಉದ್ಯೋಗಿಗಳಿಗಿಂತ ಹೆಚ್ಚು ದುಡಿಯುತ್ತಿರೋ Sonu Srinivas Gowda!
Bigg Boss Sonu Srinivas Gowda: ಸೋನು ಶ್ರೀನಿವಾಸ್ ಗೌಡ ಅವರು ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಾರೆ. ಆಗಾಗ ವಿದೇಶಕ್ಕೆ ಟ್ರಿಪ್ ಹೋಗುವ ಸೋನು ಈ ಬಾರಿ ಇನ್‌ಸ್ಟಾಗ್ರಾಮ್ ಆದಾಯದಿಂದ ಅಚ್ಚರಿಗೊಳಿಸಿದ್ದಾರೆ. ಡಬಲ್ ಡಿಗ್ರಿ ಮಾಡಿದವರಿಗೂ ಇಷ್ಟು ಹಣ ಸಿಗೋದಿಲ್ಲ.