ಇಂಡಿ ತಾಲೂಕಿನ ಲಚ್ಯಾಣ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಸಿಂದಗಿ-ಇಂಡಿ-ಲಚ್ಯಾಣ ಮೂಲಕ ಸೋಲಾಪುರಕ್ಕೆ ಹೋಗುವ ಹೊಸ ಬಸ್ ಸೇವೆಗೆ ಶಾಸಕ ಯಶವಂತಗೌಡ ಪಾಟೀಲರು ಚಾಲನೆ ನೀಡಿದರು. ಈ ಬಸ್ಸು ಸಿದ್ದಲಿಂಗೇಶ್ವರ ಭಕ್ತರಿಗೆ, ವ್ಯಾಪಾರಸ್ಥರಿಗೆ ಮತ್ತು ನೌಕರರಿಗೆ ಅನುಕೂಲವಾಗಲಿದೆ.
ವಿಜಯಪುರ: ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಸಿದ್ದಲಿಂಗೇಶ್ವರ ಭಕ್ತರ ವ್ಯಾಪಾರಸ್ಥರ ನೌಕರರ ಬಹುದಿನಗಳ ಬೇಡಿಕೆಗೆ ಶಾಸಕ ಯಶವಂತಗೌಡ ಪಾಟೀಲರು ಸ್ಪಂದಿಸಿ ಸಿಂದಗಿಯಿಂದ ಇಂಡಿ ಲಚ್ಯಾಣ ಮೂಲಕ ಸೋಲಾಪುರಕ್ಕೆ ಹೋಗುವ ಬಸ್ಸಿಗೆ ಚಾಲನೆ ನೀಡಿದರು.
Add Asianetnews Kannada as a Preferred Source

ಬಸ್ ಸಮಯ
ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ, ಸೋಲಾಪುರ ಮತ್ತು ಮಹಾರಾಷ್ಟ್ರದ ವಿವಿಧ ಕಡೆಯಿಂದ ಬರುವ ಭಕ್ತರಿಗೆ ಈ ಬಸ್ಸು ಅನುಕೂಲವಾಗುತ್ತದೆ. ಸಿಂದಗಿಯಿಂದ ಮಧ್ಯಾಹ್ನ 2 ಗಂಟೆಗೆ ಬಿಟ್ಟು, ಇಂಡಿಯಿಂದ 3.45ಕ್ಕೆ ಬಿಡುವ ಬಸ್ಸು ಲಚ್ಯಾಣ 4 ಗಂಟೆಗೆ, ಅಹಿರಸಂಗ, ಭೈರುಣಗಿ, ಭತಗುಣಕಿ, ಹಲಸಂಗಿ, ಧೂಳಖೇಡ ಮಾರ್ಗವಾಗಿ ಸೋಲಾಪುರ ತಲುಪುವದು. ಸೋಲಾಪುರದಿಂದ ಸಂಜೆ 7 ಗಂಟೆಗೆ ಬಿಡುವ ಬಸ್ಸು ಇದೇ ಮಾರ್ಗದಲ್ಲಿ ಇಂಡಿಯಿಂದ ಸಿಂದಗಿ ಹೋಗಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಂದಾಯ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಇಒ ಮಹಾದೇವಪ್ಪ ಏವೂರ, ಘಟಕ ವ್ಯವಸ್ಥಾಪಕ ನಡುವಿನಮನಿ ಮತ್ತಿತರಿದ್ದರು.


