10:13 PM (IST) Sep 22

karnataka news live:ಯೂಟ್ಯೂಬರ್ ಮುಕಳೆಪ್ಪ ಮತ್ತೊಂದು ಸಂಕಷ್ಟ, ಸುಳ್ಳು ದಾಖಲೆ ನೀಡಿ ಮದುವೆ ಆರೋಪ

ಯೂಟ್ಯೂಬರ್ ಮುಕಳೆಪ್ಪ ಮತ್ತೊಂದು ಸಂಕಷ್ಟ, ಸುಳ್ಳು ದಾಖಲೆ ನೀಡಿ ಮದುವೆ ಆರೋಪ, ಸಬ್ ರಿಜಿಸ್ಟರ್ ಕಚೇರಿಗೆ ಹಿಂದೂಪರ ಸಂಘಟನೆಗಳು ಮುತ್ತಿಗೆ ಹಾಕಿದೆ. ಯುವತಿ ತಾಯಿ ಗಂಭೀರ ಆರೋಪ ಮಾಡಿದ್ದಾರೆ.

Read Full Story
09:39 PM (IST) Sep 22

karnataka news live:ಮುಕುಳೆಪ್ಪನದು ನಿಯಮ ಬಾಹಿರ ವಿವಾಹ ನೋಂದಣಿ, ಠಾಣೆ ಮೆಟ್ಟಲೇರಿದ ಪತ್ನಿ!

ಯೂಟ್ಯೂಬರ್ ಮುಕುಳೆಪ್ಪ ಅವರ ವಿವಾಹ ವಿವಾದವು ಹೊಸ ತಿರುವು ಪಡೆದಿದೆ. ನಿಯಮಬಾಹಿರ ವಿವಾಹ ನೋಂದಣಿ ಆರೋಪದ ಮೇಲೆ ಮುಂಡಗೋಡ ಸಬ್ ರಿಜಿಸ್ಟರ್ ಕಚೇರಿಗೆ ಮುತ್ತಿಗೆ ಹಾಕಲಾಗಿದ್ದು, ಇದೀಗ ಪತ್ನಿ ಗಾಯತ್ರಿ ಠಾಣೆಗೆ ಹಾಜರಾಗಿ ತಾನು ಸ್ವಇಚ್ಛೆಯಿಂದ ಮದುವೆಯಾಗಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.

Read Full Story
09:22 PM (IST) Sep 22

karnataka news live:ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕದೋಷ, ರೈಲು ಇಲ್ಲದೆ ಪ್ರಯಾಣಿಕರ ಪರದಾಟ

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕದೋಷ, ರೈಲು ಇಲ್ಲದೆ ಪ್ರಯಾಣಿಕರ ಪರದಾಟ, ಸಂಜೆ 7 ಗಂಟೆಯಿಂದ ಸಮಸ್ಯೆ ಎದುರಾಗಿದೆ. ಬಿಎಂಆರ್‌ಸಿಎಲ್ ಸಮಸ್ಯೆ ಖಚಿತಪಡಿಸಿದ್ದು, ಪ್ರಯಾಣಿಕರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದೆ.

Read Full Story
07:59 PM (IST) Sep 22

karnataka news live:ಅಹಮದಾಬಾದ್ ಏರ್ ಇಂಡಿಯಾ ದುರಂತ, ಪೈಲೆಟ್‌ಗಳ ದೋಷವೆಂಬ ವರದಿಯನ್ನು ಖಂಡಿಸಿದ ಸುಪ್ರೀಂ, ಸ್ವತಂತ್ರ ತನಿಖೆಗೆ ನೋಟಿಸ್

ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದ ತನಿಖೆ ಕುರಿತು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಮತ್ತು ಡಿಜಿಸಿಎಗೆ ನೋಟಿಸ್ ಜಾರಿ ಮಾಡಿದೆ. ಪೈಲಟ್‌ಗಳ ದೋಷವೇ ಕಾರಣ ಎಂದು ಹೇಳಿದ್ದ AAIBಯ ಪ್ರಾಥಮಿಕ ವರದಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ನ್ಯಾಯಯುತ ತನಿಖೆಯ ಅಗತ್ಯವನ್ನು ಒತ್ತಿಹೇಳಿದೆ.

Read Full Story
07:49 PM (IST) Sep 22

karnataka news live:ದಿಢೀರ್​ ಲೈವ್​ನಲ್ಲಿ ಕಾಣಿಸಿಕೊಂಡ Drishtibottu ನಾಯಕಿ ಅರ್ಪಿತಾ ಕೊಟ್ರು ಬಿಗ್​ ಸರ್​ಪ್ರೈಸ್​! ಏನದು ನೋಡಿ....

ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ನಾಯಕಿ ದೃಷ್ಟಿಯ ನಿಜಬಣ್ಣ ಬಯಲಾಗಿದ್ದು, ಸೀರಿಯಲ್ ಅಂತ್ಯದ ವದಂತಿಗಳಿವೆ. ಈ ನಡುವೆ, ನಟಿ ಅರ್ಪಿತಾ ಮೋಹಿತೆ ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ಕಾಣಿಸಿಕೊಂಡು ಕೆಲವೊಂದು ವಿಷಯದ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು? 

Read Full Story
07:15 PM (IST) Sep 22

karnataka news live:ಫೋನ್ ಡಿಸ್‌ಕನೆಕ್ಟ್ ಮಾಡ್ತೇನೆ, ಸಂಸದೆ ಸುಧಾಮೂರ್ತಿಗೆ ಸೈಬರ್ ವಂಚಕನ ಬೆದರಿಕೆ

ಫೋನ್ ಡಿಸ್‌ಕನೆಕ್ಟ್ ಮಾಡ್ತೇನೆ, ಸಂಸದೆ ಸುಧಾಮೂರ್ತಿಗೆ ಸೈಬರ್ ವಂಚಕನ ಬೆದರಿಕೆ, ಘಟನೆ ನಡೆದಿದೆ. ನಿಮ್ಮ ಫೋನ್ ನಂಬರ್ ಮೂಲಕ ಇತರರಿಗೆ ವಿಡಿಯೋಗಳು ಕಳುಹಿಸುತ್ತೇನೆ. ತಕ್ಷಣವೇ ನಿಮ್ಮ ಫೋನ್ ಡಿಸ್ಕನೆಕ್ಟ್ ಮಾಡುತ್ತೇವೆ ಎಂದು ಬೆದೆರಿಕೆ ಹಾಕಲಾಗಿದೆ

Read Full Story
06:45 PM (IST) Sep 22

karnataka news live:ಕರ್ನಾಟಕದ ಭವಿಷ್ಯಕ್ಕೆ 1000 ಕೋಟಿ ವೆಚ್ಚದಲ್ಲಿ LEAP ಕಾರ್ಯಕ್ರಮ ಘೋಷಣೆ, ಏನಿದು ಮತ್ತೊಂದು ಯೋಜನೆ?

ಕರ್ನಾಟಕ ಸರ್ಕಾರವು 1,000 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ (LEAP) ಅನ್ನು ಅನಾವರಣಗೊಳಿಸಿದೆ. ಈ ಯೋಜನೆಯು ಬೆಂಗಳೂರಿನ ಹೊರಗಿನ ನಗರಗಳಲ್ಲಿ ನವೋದ್ಯಮ ಪರಿಸರವನ್ನು ಉತ್ತೇಜಿಸಿ, ಐದು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.
Read Full Story
06:43 PM (IST) Sep 22

karnataka news live:ಬಿಗ್‌ ಬಾಸ್ ಆಯೋಜನೆ ವೆಚ್ಚಕ್ಕೆ ಹೋಲಿಸಿದರೆ, ಟ್ರೋಫಿ ವಿಜೇತರು ಪಡೆವ ₹50 ಲಕ್ಷ ತೃಣಕ್ಕೆ ಸಮಾನ!

ಬಿಗ್ ಬಾಸ್ ಕಾರ್ಯಕ್ರಮದ ಒಂದು ಸೀಸನ್‌ಗೆ ಕೋಟಿಗಟ್ಟಲೆ ವೆಚ್ಚವಾಗುತ್ತದೆ. ಮನೆ ನಿರ್ಮಾಣಕ್ಕೆ ₹3-3.5 ಕೋಟಿ, ನಿರೂಪಕರ ಸಂಭಾವನೆಗೆ ₹1-5 ಕೋಟಿ ಖರ್ಚಾದರೆ, ವಿಜೇತರಿಗೆ ನೀಡುವ ₹50 ಲಕ್ಷ ಬಹುಮಾನವು ಈ ಒಟ್ಟು ವೆಚ್ಚಕ್ಕೆ ಹೋಲಿಸಿದರೆ ಅತ್ಯಲ್ಪ. ತೆರಿಗೆ ಕಡಿತದ ನಂತರ ವಿಜೇತರ ಕೈ ಸೇರುವುದು ಕಡಿಮೆ ಮೊತ್ತ.

Read Full Story
06:40 PM (IST) Sep 22

karnataka news live:ನೂರೊಂದು ನೆನಪು ಎದೆಯಾಳದಿಂದ... ಹಾಡಿಗೆ 'ಅಣ್ಣಯ್ಯ' ಶಿವು ದನಿಯಾದ್ರೆ ಹೀಗಿರತ್ತೆ ನೋಡಿ...

'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ನಟ ವಿಕಾಶ್ ಉತ್ತಯ್ಯ, ವಿಷ್ಣುವರ್ಧನ್ ಅವರ 'ನೂರೊಂದು ನೆನಪು' ಹಾಡಿಗೆ ಲಿಪ್‌ಸಿಂಕ್ ಮಾಡಿ ಗಮನ ಸೆಳೆದಿದ್ದಾರೆ. ಮೂಲತಃ ಕೊಡಗಿನವರಾದ ಇವರು, ವಕೀಲ ವೃತ್ತಿ ಬಿಟ್ಟು ನಟನೆಗೆ ಬಂದಿದ್ದು, 'ಅಪಾಯವಿದೆ ಎಚ್ಚರಿಕೆ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
Read Full Story
06:31 PM (IST) Sep 22

karnataka news live:ಬೆಂಗಳೂರು ಆರ್.ಟಿ.ನಗರದ ಆಂಟಿ ಜೊತೆಗೆ ವಾಕಿಂಗ್ ಬಂದ 28 ಗೋಲ್ಡನ್ ರಿಟ್ರೀವರ್ ಶ್ವಾನಗಳು!

ಬೆಂಗಳೂರಿನ ಆರ್‌ಟಿ ನಗರದಲ್ಲಿ ಮಹಿಳೆಯೊಬ್ಬರು 28 ಗೋಲ್ಡನ್ ರಿಟ್ರೀವರ್‌ಗಳೊಂದಿಗೆ ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಶ್ವಾನಪ್ರೇಮಿ ಮಹಿಳೆಯನ್ನು ಸಂಗೀತ ಮಲ್ಹೋತ್ರಾ ಎಂದು ಗುರುತಿಸಲಾಗಿದ್ದು, ಅವರ ಪ್ರಾಣಿ ಪ್ರೀತಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
Read Full Story
06:00 PM (IST) Sep 22

karnataka news live:ಯಾವಾಗ್ಲೂ ಮೊಬೈಲ್‌ನಲ್ಲಿ ಬ್ಯೂಸಿ ಆಗಿರ್ತಿದ್ದ ಬೆಳಗಾವಿ ನರ್ಸಿಂಗ್ ವಿದ್ಯಾರ್ಥಿನಿ ದಿಢೀರ್ ಸಾವು!

ಬೆಳಗಾವಿಯ ಸದಾಶಿವ ನಗರದ ಸರ್ಕಾರಿ ವಸತಿ ನಿಲಯದಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಸಮಿತ್ರಾ ಗೋಕಾಕ್ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ, ವಿದ್ಯಾರ್ಥಿನಿ ನಿರಂತರವಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.

Read Full Story
05:25 PM (IST) Sep 22

karnataka news live:ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ಸರ್​ಪ್ರೈಸ್​ ಕೊಟ್ಟ Karna! ಅಮ್ಮಂದಿರು ಫುಲ್​ ಖುಷ್​​

ಜೀ ಕನ್ನಡದ ಜನಪ್ರಿಯ 'ಕರ್ಣ' ಧಾರಾವಾಹಿ ತಂಡವು ನಟ ಕಿರಣ್ ರಾಜ್ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಕಿಟ್ ವಿತರಿಸಿದೆ. ಈ ಧಾರಾವಾಹಿಯಲ್ಲಿ ವೈದ್ಯನ ಪಾತ್ರಕ್ಕಾಗಿ ಕಿರಣ್ ರಾಜ್ ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿ, ಪ್ರಸವದ ಕುರಿತು ಅಧ್ಯಯನ ನಡೆಸಿದ್ದರು.

Read Full Story
05:03 PM (IST) Sep 22

karnataka news live:ದೆಹಲಿಯಲ್ಲಿ ರಾಜ್ಯ ಕೈ ನಾಯಕರ ದರ್ಬಾರ್ - ನವೆಂಬರ್‌ನಲ್ಲಿ ಮಹತ್ವದ ಬದಲಾವಣೆ ಸುಳಿವು ಕೊಟ್ಟ ಮುಖ್ಯಸಚೇತಕ ಸಲೀಂ ಅಹಮದ್

ವಿಧಾನಪರಿಷತ್ ಮುಖ್ಯಸಚೇತಕ ಸಲೀಂ ಅಹಮದ್ ನವೆಂಬರ್‌ನಲ್ಲಿ ಸಂಪುಟ ಪುನರ್ ರಚನೆಯಾಗುವ ಸುಳಿವು ನೀಡಿದ್ದು, ಶೇ.50ರಷ್ಟು ಸಚಿವರು ಬದಲಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಇದೇ ವೇಳೆ, ದೆಹಲಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಮಿತ್ ಶಾ ಭೇಟಿಯ ವದಂತಿಯನ್ನು ತಳ್ಳಿಹಾಕಿದ್ದಾರೆ.

Read Full Story
05:02 PM (IST) Sep 22

karnataka news live:ಮುಕಳೆಪ್ಪ ಮದುವೆಯಾದ ಮ್ಯಾಲ ಬಂಗಾರದ ಸರ ಕೊಡಿಸ್ಯಾನ.., ಗಾಯತ್ರಿ ಜಾಲಿಹಾಳ ವಿಡಿಯೋ ರಿಲೀಸ್!

ಉತ್ತರ ಕರ್ನಾಟಕದ ಯೂಟ್ಯೂಬರ್ ಮುಕಳೆಪ್ಪ ಅವರ ವೈವಾಹಿಕ ವಿವಾದದಲ್ಲಿ ಹೊಸ ತಿರುವು ಉಂಟಾಗಿದೆ. ಪತ್ನಿ ಗಾಯತ್ರಿ, ತಮ್ಮ ತಾಯಿಯ ಆರೋಪಗಳಿಗೆ ಪ್ರತಿಯಾಗಿ ಆಡಿಯೋ ಬಿಡುಗಡೆ ಮಾಡಿದ್ದು, ತನ್ನ ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಮತ್ತು ಯಾರ ಮಾತನ್ನೂ ಕೇಳಬೇಡಿ ಎಂದು ತಾಯಿಗೆ ಸ್ಪಷ್ಟಪಡಿಸಿದ್ದಾರೆ.
Read Full Story
04:45 PM (IST) Sep 22

karnataka news live:ಹೆಂಡತಿ ಮೇಲೆ 3ನೇ ಅಕ್ರಮ ಸಂಬಂಧದ ಶಂಕೆ, ಮಗಳೆದುರೇ 11 ಬಾರಿ ಚಾಕು ಇರಿದು ಕೊಂದ 2ನೇ ಗಂಡ!

Husband Kills Wife in Front of Daughter ಬೆಂಗಳೂರಿನ ಸುಂಕದಕಟ್ಟೆಯಲ್ಲಿ, ಪತ್ನಿಯ ಮೂರನೇ ಅಕ್ರಮ ಸಂಬಂಧದ ಮೇಲೆ ಶಂಕೆಗೊಂಡ ಎರಡನೇ ಪತಿ, ಆಕೆಯ ಮಗಳ ಮುಂದೆಯೇ 11 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. 

Read Full Story
04:04 PM (IST) Sep 22

karnataka news live:ಅಮ್ಮನ ಸ್ಮರಣಾರ್ಥ ಮಠಕ್ಕೆ ಕಾರು ಕಾಣಿಕೆ ನೀಡಿದ ನಟ ವಿನೋದ್ ರಾಜ್!

ನಟ ವಿನೋದ್ ರಾಜ್ ಅವರು ತಮ್ಮ ತಾಯಿ, ಖ್ಯಾತ ನಟಿ ಡಾ. ಎಂ. ಲೀಲಾವತಿ ಅವರ ಸ್ಮರಣಾರ್ಥವಾಗಿ ಬಾಗಲಕೋಟೆಯ ಬನಹಟ್ಟಿಯ ಮಹಾಂತ ಮಂದಾರ ಮಠಕ್ಕೆ ಕಾರೊಂದನ್ನು ದಾನ ಮಾಡಿದ್ದಾರೆ. ಇದನ್ನು ಮಕ್ಕಳಿಗೆ ದಾಸೋಹಕ್ಕೆ ಬಳಸುವುದಕ್ಕೆ ಮನವಿ ಮಾಡಿದ್ದಾರೆ.

Read Full Story
03:51 PM (IST) Sep 22

karnataka news live:ಅಂಬರೀಶ್, ಶಿವಣ್ಣ, ವಿಷ್ಣು.. ಸ್ಟಾರ್‌ ನಟರ ಸಿನಿಮಾ ಹಿಟ್ ಆಗಲು ಮೋಹನ್‌ಲಾಲ್ ಸಿನಿಮಾಗಳೇ ಮೂಲವೇ ಕಾರಣ!

Dadasaheb Phalke Winner Mohanlals 5 Classic Films Remade Successfully in Kannada ಮಲಯಾಳಂ ನಟ ಮೋಹನ್‌ಲಾಲ್‌ ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಅವರ ಅನೇಕ ಕ್ಲಾಸಿಕ್ ಚಿತ್ರಗಳು ಕನ್ನಡದಲ್ಲಿ ರಿಮೇಕ್ ಆಗಿ ಭಾರಿ ಯಶಸ್ಸು ಕಂಡಿವೆ.

Read Full Story
03:18 PM (IST) Sep 22

karnataka news live:ಬಿಹಾರ ಪ್ರವಾಸ ಹೊರಟ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ - ಕಾಂಗ್ರೆಸ್‌ನ ಹೊಸ ರಣತಂತ್ರ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಹಾರ ಪ್ರವಾಸ ಕೈಗೊಂಡಿದ್ದಾರೆ. ಪಾಟ್ನಾದಲ್ಲಿ ನಡೆಯಲಿರುವ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯಲ್ಲಿ ಇಬ್ಬರೂ ನಾಯಕರು ಭಾಗವಹಿಸಲಿದ್ದು, ಈ ಪ್ರವಾಸವು ರಾಷ್ಟ್ರೀಯ ರಾಜಕೀಯದಲ್ಲಿ ಕರ್ನಾಟಕದ ನಾಯಕರ ಪಾತ್ರ ಸೂಚಿಸುತ್ತಿದೆ.

Read Full Story
03:00 PM (IST) Sep 22

karnataka news live:ಮುದ್ದಾದ ಹುಡುಗಿ ಕೈಹಿಡಿಯಲಿರುವ ಬಿಗ್‌ಬಾಸ್ ವಿನ್ನರ್‌!

Suraj Chavan Marriage: ಬಿಗ್‌ಬಾಸ್ ಮರಾಠಿ ಸೀಸನ್ 5ರ ವಿನ್ನರ್‌ ಸೂರಜ್ ಚವಾಣ್ ಅವರ ಮದುವೆ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿದೆ. ಅವರ ಬಿಗ್‌ಬಾಸ್ ಸೋದರಿ ಅಂಕಿತಾ ವಾಲಾವಾಲ್ಕರ್ ಅವರ ಪೋಸ್ಟ್ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.

Read Full Story
02:43 PM (IST) Sep 22

karnataka news live:ಕಾಂತಾರ ಚಾಪ್ಟರ್ 1 ಟ್ರೇಲರ್; ಈ ಕುತೂಹಲ ತಿಳಿದರೆ ಟಿಕೆಟ್ ಬುಕಿಂಗ್ ದಾಖಲೆ ಬರೆಯೋದು ಗ್ಯಾರಂಟಿ!

ಕಾಂತಾರ: ಚಾಪ್ಟರ್ 1 ಟ್ರೇಲರ್, ದಂತಕಥೆಯ ಮೂಲ ಅನಾವರಣಗೊಳಿಸುತ್ತದೆ. ಕಾಡಿನ ನಾಯಕ ಮತ್ತು ರಾಣಿಯ ಪ್ರೀತಿಯಿಂದ ರಾಜನ ವಿರುದ್ಧ ಯುದ್ಧ ಪ್ರಾರಂಭ. ಕಾಂತಾರ ಚಾಪ್ಟರ್ 1 ಟ್ರೇಲರ್ ನೋಡಿದವರಿಗೆ ಈಗಲೇ ಟಿಕೆಟ್ ಬುಕಿಂಗ್ ಮಾಡಬೇಕು ಎನ್ನುವಷ್ಟು ಕುತೂಹಲ ಸೃಷ್ಟಿಸಿದೆ.

Read Full Story