- Home
- Entertainment
- ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ಸರ್ಪ್ರೈಸ್ ಕೊಟ್ಟ Karna! ಅಮ್ಮಂದಿರು ಫುಲ್ ಖುಷ್
ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ಸರ್ಪ್ರೈಸ್ ಕೊಟ್ಟ Karna! ಅಮ್ಮಂದಿರು ಫುಲ್ ಖುಷ್
ಜೀ ಕನ್ನಡದ ಜನಪ್ರಿಯ 'ಕರ್ಣ' ಧಾರಾವಾಹಿ ತಂಡವು ನಟ ಕಿರಣ್ ರಾಜ್ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಕಿಟ್ ವಿತರಿಸಿದೆ. ಈ ಧಾರಾವಾಹಿಯಲ್ಲಿ ವೈದ್ಯನ ಪಾತ್ರಕ್ಕಾಗಿ ಕಿರಣ್ ರಾಜ್ ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿ, ಪ್ರಸವದ ಕುರಿತು ಅಧ್ಯಯನ ನಡೆಸಿದ್ದರು.

ಕುತೂಹಲ ಹಂತದಲ್ಲಿ ಕರ್ಣ ಸೀರಿಯಲ್
ಜೀ ಕನ್ನಡದ ಕರ್ಣ ಸೀರಿಯಲ್ (Karna Serial) ಇದೀಗ ಕುತೂಹಲದ ಹಂತ ತಲುಪಿದೆ. ಆದರೆ ಕರ್ಣಾ ನಿತ್ಯಳನ್ನು ಮದ್ವೆಯಾಗ್ತಾನೋ, ನಿಧಿಯನ್ನೋ ಎನ್ನುವ ಟ್ವಿಸ್ಟ್ ಅಂತೂ ಇದ್ದೇ ಇದೆ. ಶುರುವಾದ ಕೆಲವೇ ದಿನಗಳಲ್ಲಿಯೇ ಭರ್ಜರಿ ಟಿಆರ್ಪಿಯನ್ನು ಕೂಡ ಸೀರಿಯಲ್ ಪಡೆದುಕೊಂಡಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ಣ ಟೀಮ್
ಇದರ ನಡುವೆಯೇ, ಇದೀಗ ಕರ್ಣ ಸೀರಿಯಲ್ ತಂಡವು, ಕರ್ನಾಟಕದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ಕಿಟ್ ಹಂಚಿದ್ದು, ಅದರ ವಿಡಿಯೋ ಶೇರ್ ಮಾಡಲಾಗಿದೆ. ಬೆಂಗಳೂರಿನ ಕೆ.ಸಿ. ಜನರಲ್ (KC Genral Hospital) ಗೆ ಹೋಗಿ ಅಲ್ಲಿನ ನವಜಾತ ಶಿಶುಗಳ ಅಮ್ಮಂದಿರಿಗೆ ಕಿಟ್ ವಿತರಣೆ ಮಾಡಲಾಗಿದೆ. ಇದಕ್ಕೆ ಖುದ್ದು ಕಿರಣ್ ರಾಜ್ ಅವರೇ ಹೋಗಿ ಕಿಟ್ ವಿತರಣೆ ಮಾಡಿರುವುದು ವಿಶೇಷ.
ಕಿರಣ್ ರಾಜ್ ಏನಂದ್ರು?
ಬಳಿಕ ಮಾತನಾಡಿರುವ ನಟ ಕಿರಣ್ ರಾಜ್ (Kiran Raj), ನೀವು ಕರ್ಣ ಸೀರಿಯಲ್ಗೆ ತೋರಿಸುತ್ತಿರುವ ಪ್ರೀತಿಗೆ ಧನ್ಯವಾದ. ಇದೇ ರೀತಿ ನಿಮ್ಮ ಪ್ರೀತಿಯನ್ನು ಕೊಡುತ್ತಿರಿ ಎಂದು ಹೇಳಿದ್ದಾರೆ. ನಿಮ್ಮ ಪ್ರೀತಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎನ್ನುತ್ತಲೇ ನಟ, ಇನ್ನಷ್ಟು ಪ್ರೀತಿ ನೀಡುವಂತೆ ಕೇಳಿದ್ದಾರೆ.
ವೈದ್ಯೆ ಮಾತು
ಈ ಕಿಟ್ನಲ್ಲಿ ಮಕ್ಕಳಿಗೆ ಬೇಕಾಗುವ ಸೋಪು, ಶ್ಯಾಂಪೂ, ಪೌಡ್ ಎಲ್ಲಾ ಇದೆ. ಮಗುವಿನ ಆರೋಗ್ಯ ಕಾಪಾಡಲು ಅನ್ನುವ ಉದ್ದೇಶದಿಂದ ಈ ಆ್ಯಕ್ಟಿವಿಟಿ ಮಾಡಿರುವುದಾಗಿ ವೈದ್ಯೆ ಹೇಳಿದ್ದಾರೆ.
ವೈದ್ಯನ ರೋಲ್ಗೆ ಪ್ರಿಪೇರ್
ಹಿಂದೊಮ್ಮೆ ಕಿರಣ್ ರಾಜ್ ಅವರು ತಾವು ಈ ಸೀರಿಯಲ್ನಲ್ಲಿ ವೈದ್ಯನ ರೋಲ್ ಮಾಡುವುದಕ್ಕೆ ಹೇಗೆಲ್ಲಾ ಪ್ರಿಪೇರ್ ಆಗಿದ್ದು ಎನ್ನುವ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದರು. 'ಆಸ್ಪತ್ರೆಗಳಿಗೆ ಭೇಟಿ ಕೊಟ್ಟು, ಹಲವು ವೈದ್ಯರ ಜೊತೆ ಮಾತನಾಡಿದ್ದೇನೆ. ಡಾಕ್ಟರ್ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಸ್ಟಡಿಮಾಡಿದ್ದೇನೆ ಎಂದಿದ್ದರು.
ಪ್ರಸವದ ಬಗ್ಗೆ ಅಧ್ಯಯನ
ಮಾತ್ರವಲ್ಲದೇ ಪ್ರಸವದ ಸಮಯದಲ್ಲಿ ಏನಾಗುತ್ತದೆ, ಮಹಿಳೆಯರ ಮನಸ್ಥಿತಿ ಹೇಗೆ ಇರುತ್ತದೆ, ಕರ್ನಾಟಕದಲ್ಲಿ ಗರ್ಭಿಣಿಯರ ಸಾವು ಯಾಕೆ ಆಗ್ತಿದೆ, ಇದನ್ನು ತಡೆಯಲು ಏನು ಮಾಡಬಹುದು, ಹೆರಿಗೆ ಸಮಯದಲ್ಲಿ ರಕ್ತದ ಕೊರತೆ ಏಕೆ ಕಾಡುತ್ತಿದೆ, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವ ಕೊರತೆ ಇವೆ ಇವೆಲ್ಲವುಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ' ಎಂದಿದ್ದರು ಕಿರಣ್ ರಾಜ್.
ನಟನ ಕುರಿತು...
ಇನ್ನು ನಟನ ಕುರಿತು ಹೇಳುವುದಾದರೆ, ಇವರು ಕನ್ನಡ ಚಿತ್ರದಲ್ಲಿಯೂ ನಟಿಸಿದ್ದಾರೆ. ತೆಲುಗು ಮತ್ತು ಹಿಂದಿಯಲ್ಲಿ ಕೆಲ ಧಾರಾವಾಹಿ ಮತ್ತು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ನಟನಾ ಜೀವನ ಹಿಂದಿ ಸೀರಿಯಲ್‌ನಿಂದ ಆರಂಭವಾಗಿದ್ದು, ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಕನ್ನಡಕ್ಕೆ ಬಂದರು.
ಪ್ರಶಸ್ತಿ ವಿಜೇತ 'ಕರ್ಣ'
ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದರು. ಕಲರ್ಸ್ ಕನ್ನಡದ ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್‌ಬಾಸ್ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದರು. ಅಸತೋಮ ಸದ್ಗಮಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು, ಬಳಿಕ ಮಾರ್ಚ್ 22, ಜೀವ್ನಾನೇ ನಾಟ್ಕ ಸ್ವಾಮಿ, ಬಹುದ್ದೂರ್ ಗಂಡು, ಬಡ್ಡೀಸ್, ಒನ್ ವೇ, ರಾನಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗುವಿನಲ್ಲಿ ನುವ್ವೇ ನಾ ಪ್ರಾಣಂ, ವಿಕ್ರಮ್ ಗೌಡ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.