10:37 PM (IST) Apr 22

Karnataka News Live 22 April 2026ಪತ್ನಿ ಕೊಲೆಗೈದು ಪತಿ ಆ*ತ್ಮಹ*ತ್ಯೆ; ಕೌಟುಂಬಿಕ ಕಲಹಕ್ಕೆ ಬಲಿಯಾಯ್ತಾ ದಂಪತಿ ಜೀವನ?

ಬೆಂಗಳೂರಿನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಪತಿ ಡೇವಿಡ್ ಪತ್ನಿ ಸುಮಿತ್ರಾಳನ್ನು ಕೊಲೆ ಮಾಡಿ ನಂತರ ತಾನೂ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದಂಪತಿಗಳ ನಡುವೆ ನಿರಂತರ ಜಗಳ ನಡೆಯುತ್ತಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Read Full Story
09:51 PM (IST) Apr 22

Karnataka News Live 22 April 2026ಪುತ್ತೂರು ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ಮಗು ಪ್ರಕರಣ, ಆರೋಪಿ ತಂದೆ ಮಗುವಿನ ಆರೈಕೆ ಮಾಡೋದು ಕರ್ತವ್ಯ - ಹೈಕೋರ್ಟ್

ಪುತ್ತೂರಿನ ಬಿಜೆಪಿ ಮುಖಂಡರ ಪುತ್ರ ಕೃಷ್ಣ ಜೆ. ರಾವ್, ಯುವತಿಯೊಬ್ಬಳಿಗೆ ಮದುವೆ ಆಮಿಷವೊಡ್ಡಿ, ದೈಹಿಕ ಸಂಬಂಧ ಬೆಳೆಸಿ ವಂಚಿಸಿದ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಏಳು ವರ್ಷಗಳ ಸಂಬಂಧದ ಬಳಿಕ ಮಗುವಿಗೆ ಜನ್ಮ ನೀಡಿದ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ ಆರೋಪ ಎದುರಿಸುತ್ತಿದ್ದು, ಡಿಎನ್‌ಎ ಪರೀಕ್ಷೆಯಲ್ಲಿ ಮಗುವಿನ ತಂದೆ ತಾನೇ ಎಂದು ಸಾಬೀತಾಗಿದೆ.
Read Full Story
09:22 PM (IST) Apr 22

Karnataka News Live 22 April 2026ಕೆರೆಗಳಿಗೆ ನೀರು ತುಂಬಿಸುವ ಕೀರ್ತಿ ಶಾಸಕ ಗಣೇಶ್‌ ಪ್ರಸಾದ್‌ಗೆ ಸಲ್ಲಲಿ - ಸಿಎಂ ಸಿದ್ದರಾಮಯ್ಯ

ಗುಂಡ್ಲುಪೇಟೆ ತಾಲೂಕಿನ 110 ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯ ಕೀರ್ತಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಗೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

Read Full Story
08:55 PM (IST) Apr 22

Karnataka News Live 22 April 2026ಬೆಂಗಳೂರು - ಪಾರಿವಾಳಕ್ಕಾಗಿ ಜಗಳ, 25 ವರ್ಷದ ಯುವಕನನ್ನು ಚಾಕು ಇರಿದು ಬರ್ಬರ ಹತ್ಯೆ!

ಬೆಂಗಳೂರಿನ ರಾಜಗೋಪಾಲನಗರದಲ್ಲಿ ಪಾರಿವಾಳ ಕಳ್ಳತನದ ಆರೋಪದ ಮೇಲೆ ನಡೆದ ಗಲಾಟೆಯು 25 ವರ್ಷದ ಮಲ್ಲಿಕಾರ್ಜುನ ಎಂಬ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಆತ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Read Full Story
08:21 PM (IST) Apr 22

Karnataka News Live 22 April 2026ನಾಳೆ SSLC ಫಲಿತಾಂಶ - ರಿಸಲ್ಟ್ ನೋಡಲು ಇದೇ 4 ಸುಲಭ ಮಾರ್ಗ; ಇಲ್ಲಿವೆ ಡೈರೆಕ್ಟ್ ಲಿಂಕ್ಸ್‌

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಏಪ್ರಿಲ್ 23ರಂದು ಪ್ರಕಟಿಸಲಿದೆ. ವಿದ್ಯಾರ್ಥಿಗಳು ವೆಬ್‌ಸೈಟ್, ಮೊಬೈಲ್ ಆಪ್, SMS/WhatsApp ಮೂಲಕ ಫಲಿತಾಂಶ ವೀಕ್ಷಿಸಬಹುದು.

Read Full Story
07:32 PM (IST) Apr 22

Karnataka News Live 22 April 2026Breaking - ವಿದ್ಯಾರ್ಥಿಗಳೇ ಗಮನಿಸಿ, ನಾಳೆ SSLC ಪರೀಕ್ಷೆ ಫಲಿತಾಂಶ ಪ್ರಕಟ

ಹಿಂದಿ ಭಾಷೆಯ ಅಂಕಗಳ ವಿಚಾರದಲ್ಲಿ ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದ್ದ ಕಾರಣ ತಡೆಹಿಡಿಯಲಾಗಿದ್ದ SSLC ಪರೀಕ್ಷೆಯ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುವುದು. ಹೈಕೋರ್ಟ್ ತೀರ್ಪಿನ ನಂತರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುರುವಾರ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
Read Full Story
07:07 PM (IST) Apr 22

Karnataka News Live 22 April 2026ಬೇಸಿಗೆ ರಜೆ ನಾಲ್ಕೇ ದಿನಗಳಲ್ಲಿ 4 ಚಿಣ್ಣರ ಸಾವು; ಮಕ್ಕಳಿಗೆ ಒಂದು ಕ್ಷಣದ ಮೋಜು, ಪೋಷಕರಿಗೆ ಜೀವನವಿಡೀ ಶೋಕ!

ಚಿಕ್ಕಮಗಳೂರಿನಲ್ಲಿ ಬೇಸಿಗೆ ರಜೆಯ ಸಂಭ್ರಮದ ನಡುವೆ ಶೋಕದ ಛಾಯೆ ಆವರಿಸಿದೆ. ಕೇವಲ ನಾಲ್ಕು ದಿನಗಳ ಅಂತರದಲ್ಲಿ, ಜಿಲ್ಲೆಯ ವಿವಿಧ ಜಲಮೂಲಗಳಲ್ಲಿ ಈಜಲು ಹೋಗಿ ಬಾಲಕ ಸೇರಿದಂತೆ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸರಣಿ ದುರಂತಗಳು ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.
Read Full Story
06:40 PM (IST) Apr 22

Karnataka News Live 22 April 2026ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರೇ ಕಾರಣ - ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ

ಅಧಿಕಾರಿಗಳ ಸಮರ್ಥ ನಿರ್ವಹಣೆ ಮಾಡುವಲ್ಲಿ ವಿಫಲರಾಗಿರುವುದರಿಂದ ಶಿರಸಿ-ಹುಬ್ಬಳ್ಳಿ ಮತ್ತು ಹಾವೇರಿ-ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ವಿಳಂಬವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ ಮಾಡಿದರು.

Read Full Story
06:30 PM (IST) Apr 22

Karnataka News Live 22 April 2026ಕಾಂಗ್ರೆಸ್‌ಗೆ ತಟ್ಟಲಿದೆ ಮಹಿಳೆಯರ ಶಾಪ - ಶಾಸಕ ಸಿ.ಸಿ.ಪಾಟೀಲ ವಿವಾದಾತ್ಮಕ ಹೇಳಿಕೆ!

ಮಹಿಳಾ ಮೀಸಲಾತಿ ವಿಧೇಯಕವನ್ನು ಸೋಲಿಸಿರುವ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ದೇಶದ ಮಹಿಳೆಯರು ತೀವ್ರ ಆಕ್ರೋಶ ಹೊಂದಿದ್ದು, ಅವರಿಗೆ ಮಹಿಳೆಯರ ಶಾಪ ತಟ್ಟಲಿದೆ ಎಂದು ಶಾಸಕ ಸಿ.ಸಿ.ಪಾಟೀಲ ತಿಳಿಸಿದರು.

Read Full Story
06:16 PM (IST) Apr 22

Karnataka News Live 22 April 2026ಬಸವ ವಸತಿ ಯೋಜನೆಯ ಹಣ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ - ಗ್ರಾ.ಪಂ. ಕಂಪ್ಯೂಟರ್ ಆಪರೇಟರ್ ಲೋಕಾಬಲೆಗೆ

ಕಲಬುರಗಿಯ ಯಡ್ರಾಮಿ ತಾಲೂಕಿನಲ್ಲಿ ಬಸವ ವಸತಿ ಯೋಜನೆಯ ಸಹಾಯಧನ ಮಂಜೂರು ಮಾಡಲು ₹20,000 ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಫಲಾನುಭವಿಯೊಬ್ಬರ ದೂರಿನ ಮೇರೆಗೆ ಈ ದಾಳಿ ನಡೆದಿದೆ. 

Read Full Story
06:15 PM (IST) Apr 22

Karnataka News Live 22 April 2026ಕಾವೇರಿ ನದಿಯಲ್ಲಿ ಅಪರಿಚಿತ ಶವ ಪತ್ತೆ - ಹಲವು ಅನುಮಾನಗಳಿಗೆ ಕಾರಣ? ತನಿಖೆ ಶುರು!

ಸುಮಾರು ಒಂದು ತಿಂಗಳ ಹಿಂದೆ ಸಾವನ್ನಪ್ಪಿರುವ 50 ರಿಂದ 70 ವರ್ಷದ ಅಪರಿಚಿತ ಪುರುಷನ ಶವವು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಬೂದುಗಟ್ಟೆ ದೊಡ್ಡಿಯ ಕಾವೇರಿ ನದಿಯ ಬಳಿ ಪತ್ತೆಯಾಗಿದೆ.

Read Full Story
06:11 PM (IST) Apr 22

Karnataka News Live 22 April 2026ಒಟಿಟಿ ದೈತ್ಯರಾದ ನೆಟ್‌ಫ್ಲಿಕ್ಸ್-ಅಮೆಜಾನ್ ಪ್ರೈಮ್ ನಡುವೆ 'ಟಾಕ್ಸಿಕ್‌'ಗೆ ಯುದ್ಧ; ಯಾರ ಪಾಲಾಗಲಿದೆ ಯಶ್ ಸಿನಿಮಾ?

ಯಶ್ ಕೇವಲ ಭಾರತೀಯ ಪ್ರೇಕ್ಷಕರನ್ನು ಮಾತ್ರವಲ್ಲದೆ, ಇಡೀ ವಿಶ್ವದ ಸಿನಿಮಾ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ 'ಸಿನಿಮಾಕಾನ್ 2026' ಕಾರ್ಯಕ್ರಮದಲ್ಲಿ ಯಶ್ ಮಿಂಚಿದ್ದು, ಅಲ್ಲಿ 'ಟಾಕ್ಸಿಕ್' ಬಗ್ಗೆ ದೊಡ್ಡ ಮಟ್ಟದ ಮಾತುಕತೆ ನಡೆಸಿದ್ದಾರೆ.

Read Full Story
05:45 PM (IST) Apr 22

Karnataka News Live 22 April 2026ಬೆಂಗಳೂರಿನ HAL ಏರ್‌ಪೋರ್ಟ್‌ ಇನ್ಮುಂದೆ 'ಜಾಗತಿಕ ಏರೋಸ್ಪೇಸ್ ಹಬ್' - 700 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿದೆ ಬೃಹತ್ ಏರೋಸ್ಪೇಸ್ ಸಿಟಿ!

ಕರ್ನಾಟಕ ಸರ್ಕಾರವು ಬೆಂಗಳೂರಿನ ಹಳೆಯ ಹೆಚ್‌ಎಎಲ್ ವಿಮಾನ ನಿಲ್ದಾಣವನ್ನು 'ಜಾಗತಿಕ ಏರೋಸ್ಪೇಸ್ ಹಬ್' ಆಗಿ ಪರಿವರ್ತಿಸಲು ಬೃಹತ್ ಯೋಜನೆ ರೂಪಿಸಿದೆ. 'ಹೆಚ್‌ಎಎಲ್ ಏರೋಸ್ಪೇಸ್ ನವೋದಯ ಮಾಸ್ಟರ್‌ಪ್ಲಾನ್' ಹೆಸರಿನ ಯೋಜನೆ ಇದಾಗಿದೆ.

Read Full Story
05:43 PM (IST) Apr 22

Karnataka News Live 22 April 2026ಕಾರವಾರ - ಉಳ್ಳಾಲಕ್ಕೆ ಹಿಂಸಾತ್ಮಕವಾಗಿ ಒಂಟೆಗಳ ಸಾಗಿಸುತ್ತಿದ್ದ ಮೂವರ ಬಂಧನ - 8 ಒಂಟೆಗಳ ರಕ್ಷಣೆ

ಭಟ್ಕಳದಲ್ಲಿ ಅಕ್ರಮವಾಗಿ ಒಂಟೆಗಳನ್ನು ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂಸಾತ್ಮಕವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ 8 ಒಂಟೆಗಳನ್ನು ರಕ್ಷಿಸಲಾಗಿದ್ದು, ಆರೋಪಿಗಳ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Read Full Story
05:41 PM (IST) Apr 22

Karnataka News Live 22 April 2026ಹಳೆ ಹುಡುಗಿ ವಿಷಯ ಎತ್ಬೇಡಿ; ಹೊಸ ಹುಡುಗಿ ಬಗ್ಗೆ ಹೇಳ್ತೀನಿ - ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ

ಬೃಂದಾವನ ಧಾರಾವಾಹಿ ನಟ, ಕನ್ನಡ ಯುಟ್ಯೂಬರ್‌ ವರುಣ್‌ ಆರಾಧ್ಯ ಅವರು ಹೊಸ ಹುಡುಗಿಯ ಜೊತೆ ಎಂಗೇಜ್‌ ಆಗಿದ್ದಾರೆ. ಈ ಹಿಂದೆ ಅವರು ಓರ್ವ ಯುಟ್ಯೂಬರ್‌ನ್ನು ಲವ್‌ ಮಾಡಿದ್ದು, ಬ್ರೇಕಪ್‌ ಮಾಡಿಕೊಂಡಿದ್ದಾರೆ. ಅನೇಕರು ಈ ಬಗ್ಗೆ ನೆಗೆಟಿವ್‌ ಮಾತನಾಡಿದ್ದು, ವರುಣ್‌ ಅವರು ಬೇಸರ ಹೊರಹಾಕಿದ್ದಾರೆ.

Read Full Story
05:29 PM (IST) Apr 22

Karnataka News Live 22 April 2026ಇಡಿ ದಾಳಿ ಮೂಲಕ ಕಾಂಗ್ರೆಸ್‌ ಟಾರ್ಗೆಟ್‌, ಬಿಜೆಪಿಯವರ ಮೇಲೆ ದಾಳಿ ಆಗುತ್ತಿಲ್ಲ - ಸಿಎಂ ಸಿದ್ದರಾಮಯ್ಯ ಆರೋಪ

ಚಾಮರಾಜನಗರಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಇ.ಡಿ ದಾಳಿ ಮತ್ತು ಮಹಿಳಾ ಮೀಸಲಾತಿ ಬಗ್ಗೆ ಕೇಂದ್ರವನ್ನು ಟೀಕಿಸಿದರು. ಇದೇ ವೇಳೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಕ್ಸಿಜನ್ ದುರಂತದ ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ಪತ್ರಗಳನ್ನು ವಿತರಿಸಿದರು.
Read Full Story
05:21 PM (IST) Apr 22

Karnataka News Live 22 April 2026ಜೆರಾಕ್ಸ್ ಮಿಷನ್ ಮನುಷ್ಯನನ್ನು ಡುಪ್ಲಿಕೇಟ್ ಮಾಡಿದ್ರೆ ಏನಾಗುತ್ತೆ? ಒಟಿಟಿಗೆ ಬಂದ Xerox Kannada Series

ಡಾಲಿ ಧನಂಜಯ್ ನಿರ್ಮಾಣದ, ನಾಗಭೂಷಣ್ ನಟನೆಯ 'ಜೆರಾಕ್ಸ್' ವೆಬ್ ಸರಣಿ Zee5 ನಲ್ಲಿ ಬಿಡುಗಡೆಯಾಗುತ್ತಿದೆ. ಜೆರಾಕ್ಸ್ ಯಂತ್ರವು ಮನುಷ್ಯರನ್ನು ನಕಲು ಮಾಡಿದರೆ ಏನಾಗುತ್ತದೆ ಎಂಬ ವಿಶಿಷ್ಟ ಕಥಾಹಂದರವನ್ನು ಹೊಂದಿರುವ ಈ ಸರಣಿಯು ಸೈಫೈ ಮತ್ತು ಡಾರ್ಕ್ ಕಾಮಿಡಿ ಅಂಶಗಳನ್ನು ಒಳಗೊಂಡಿದೆ.
Read Full Story
05:04 PM (IST) Apr 22

Karnataka News Live 22 April 2026High-Fiber Diet - ಜೀರ್ಣಕ್ರಿಯೆ ಸುಧಾರಿಸಲು ದಿನಕ್ಕೆ ಎಷ್ಟು ಫೈಬರ್ ಬೇಕು? ಇಲ್ಲಿದೆ ನೋಡಿ ಕಾರಣ

ಫೈಬರ್ ಹೆಚ್ಚಾಗಿರುವ ಆಹಾರ ತಿಂದರೆ ಜೀರ್ಣಕ್ರಿಯೆ ಸುಲಭವಾಗುತ್ತೆ ಮತ್ತು ಕರುಳಿನ ಆರೋಗ್ಯ ಚೆನ್ನಾಗಿರುತ್ತೆ. ಫೈಬರ್ ಇರುವ ಆಹಾರ ಸೇವಿಸಿದ ಮೇಲೆ ಹೊಟ್ಟೆ ತುಂಬಿದ ಹಾಗೆ ಅನಿಸುತ್ತೆ. ಇದರಿಂದ ಪದೇ ಪದೇ ಹಸಿವಾಗುವುದು ಕಡಿಮೆಯಾಗುತ್ತದೆ.

Read Full Story
04:42 PM (IST) Apr 22

Karnataka News Live 22 April 2026ಹಾರ್ದಿಕ ಹೇಳಲು ಬರ್ತಿರಲಿಲ್ಲ, 'ದಿ' ಬದ್ಲು 'ತಿ' ಹೇಳಿ ಆದ ಅವಮಾನ ಅಷ್ಟಿಷ್ಟಲ್ಲ - Anchor Anushreeಯ ಆ ದಿನಗಳು

ಖ್ಯಾತ ನಿರೂಪಕಿ ಅನುಶ್ರೀ ತಮ್ಮ 20 ವರ್ಷಗಳ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದವರಾದ ಕಾರಣ ಸರಿಯಾಗಿ ಕನ್ನಡ ಮಾತನಾಡಲು ಬಾರದೆ, 'ಹಾರ್ದಿಕ' ಪದ ಉಚ್ಚರಿಸಲಾಗದೆ ಅವಮಾನ ಅನುಭವಿಸಿ, ಆರ್ಥಿಕ ಸಂಕಷ್ಟದಲ್ಲಿದ್ದ ದಿನಗಳನ್ನು ಮೆಲುಕು ಹಾಕಿದ್ದಾರೆ.

Read Full Story
04:40 PM (IST) Apr 22

Karnataka News Live 22 April 2026ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಿನಿ ಪಯಣಕ್ಕೆ 20 ವರ್ಷ - ಅಭಿಮಾನಿಗಳಿಗೆ ಎಮೋಶನಲ್ ಸಂದೇಶ

ತನ್ನ ಎಕ್ಸ್‌ ಖಾತೆಯಲ್ಲಿ ಖುಷಿ ಹಂಚಿಕೊಂಡಿರುವ ಗೋಲ್ಡನ್‌ ಸ್ಟಾರ್‌ ಗಣೇಶ್‌, ನನ್ನ ಬದುಕಿನಲ್ಲಿ ಇದು ಮಹತ್ವದ ಮೈಲಿಗಲ್ಲು. ಮೊದಲ ಸಿನಿಮಾ ‘ಚೆಲ್ಲಾಟ’ದಿಂದ ಕನಸುಗಳಿಗೆ ರೆಕ್ಕೆ ಮೂಡಿತು.

Read Full Story