MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಹಾರ್ದಿಕ ಹೇಳಲು ಬರ್ತಿರಲಿಲ್ಲ, 'ದಿ' ಬದ್ಲು 'ತಿ' ಹೇಳಿ ಆದ ಅವಮಾನ ಅಷ್ಟಿಷ್ಟಲ್ಲ: Anchor Anushreeಯ ಆ ದಿನಗಳು

ಹಾರ್ದಿಕ ಹೇಳಲು ಬರ್ತಿರಲಿಲ್ಲ, 'ದಿ' ಬದ್ಲು 'ತಿ' ಹೇಳಿ ಆದ ಅವಮಾನ ಅಷ್ಟಿಷ್ಟಲ್ಲ: Anchor Anushreeಯ ಆ ದಿನಗಳು

ಖ್ಯಾತ ನಿರೂಪಕಿ ಅನುಶ್ರೀ ತಮ್ಮ 20 ವರ್ಷಗಳ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದವರಾದ ಕಾರಣ ಸರಿಯಾಗಿ ಕನ್ನಡ ಮಾತನಾಡಲು ಬಾರದೆ, 'ಹಾರ್ದಿಕ' ಪದ ಉಚ್ಚರಿಸಲಾಗದೆ ಅವಮಾನ ಅನುಭವಿಸಿ, ಆರ್ಥಿಕ ಸಂಕಷ್ಟದಲ್ಲಿದ್ದ ದಿನಗಳನ್ನು ಮೆಲುಕು ಹಾಕಿದ್ದಾರೆ.

1 Min read
Author : Suchethana D
Published : Apr 22 2026, 04:42 PM IST
Share this Photo Gallery
  • FB
  • TW
  • Linkdin
  • Whatsapp
16
20 ವರ್ಷಗಳ ಆ್ಯಂಕರಿಂಗ್​ ಅನುಭವ
Image Credit : Social Media

20 ವರ್ಷಗಳ ಆ್ಯಂಕರಿಂಗ್​ ಅನುಭವ

ವೇದಿಕೆಯ ಮೇಲೆ ಪಟಪಟ ಎಂದು ಮಾತನಾಡುತ್ತಾ ಸದಾ ಎಲ್ಲರಲ್ಲಿಯೂ ಉತ್ಸಾಹ ತುಂಬುತ್ತಾ, ಹಾಸ್ಯ ಮಾಡುತ್ತಾ, ತಮ್ಮದೇ ಆದ ರೀತಿಯಲ್ಲಿ ನಿರೂಪಣೆಯ ಶೈಲಿಯಲ್ಲಿ ಗುರುತಿಸಿಕೊಂಡವರು ಆ್ಯಂಕರ್​ ಅನುಶ್ರೀ. ಹಾಗೆ ನೋಡಿದ್ರೆ ಅನುಶ್ರೀ ಅವರಿಗೆ ಈ ಕ್ಷೇತ್ರದಲ್ಲಿ ಇದಾಗಲೆ 20 ವರ್ಷಗಳ ಅನುಭವವೂ ಆಗಿದೆ.

26
ಕನ್ನಡವೇ ಸರಿಯಾಗಿ ಬರ್ತಿರಲಿಲ್ಲ
Image Credit : Gold Class With Mayuraa Instagram

ಕನ್ನಡವೇ ಸರಿಯಾಗಿ ಬರ್ತಿರಲಿಲ್ಲ

ಆದರೆ, ದಕ್ಷಿಣ ಕನ್ನಡದ ಅನುಶ್ರೀ ಅವರಿಗೆ ನಿರೂಪಣೆಗೆ ತಕ್ಕಂಥ ಕನ್ನಡ ಬಾರದೇ ಮೊದಲಿನ ದಿನಗಳಲ್ಲಿ ಆದ ಅವಮಾನ ಹಾಗೂ ನೋವಿನ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ. ದೂರದರ್ಶನ ಚಂದನ ವಾಹಿನಿಯಲ್ಲಿ ಅನುಶ್ರೀ ಅವರು ನೀಡಿರುವ ಸಂದರ್ಶನದಲ್ಲಿ ತಮ್ಮ ಆರಂಭದ ದಿನಗಳ ಮೆಲುಕು ಹಾಕಿದ್ದಾರೆ ನಟಿ.

Related Articles

Related image1
Anchor Anushree ಸ್ಮೈಲ್​ ಬಗ್ಗೆ ಭವಿಷ್ಯ ನುಡಿದಿದ್ರಂತೆ ಆ ಟೀಚರ್​: ಮಗಳನ್ನು ಹದ್ದುಬಸ್ತಲ್ಲಿ ಇಟ್ಕೊಳಿ ಅಂದಿದ್ರಂತೆ
Related image2
Anchor Anushree ಗುಡ್​ನ್ಯೂಸ್​ ಯಾವಾಗ? ಫ್ಯಾನ್ಸ್​ ಕಾಡ್ತಿರೋ ಪ್ರಶ್ನೆಗೆ ಉತ್ತರ ಕೊಟ್ಟೇಬಿಟ್ರು ನಟಿ
36
ಹಾರ್ದಿಕ ಹೇಳಲು ಬರಲೇ ಇಲ್ಲ
Image Credit : Instagram

ಹಾರ್ದಿಕ ಹೇಳಲು ಬರಲೇ ಇಲ್ಲ

ನಾನು ಬೆಂಗಳೂರಿಗೆ ಬಂದಾಗಿತ್ತು. ಒಂದಷ್ಟು ಕಡೆ ಆಫರ್​ ಸಿಕ್ಕಿದ್ದವು. ಅಲ್ಲಿ ತುಳು ಮಾತನಾಡುವ ಕಾರಣ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಒಂದು ಚಾನೆಲ್​ನಲ್ಲಿ ಆಫರ್​ ಕೊಟ್ಟರು. ಆದರೆ ಹಾರ್ದಿಕ ಸ್ವಾಗತ ಹೇಳಲು ಬರದೇ ಒದ್ದಾಡಿಬಿಟ್ಟೆ. ಎಷ್ಟು ಟೇಕ್​ ತೆಗೆದುಕೊಂಡರೂ ದಿ ಬದಲು ತಿ ಆಗಿ ಅಪಾರ್ಥ ಆಗುತ್ತಿತ್ತು. ನೋಡುವಷ್ಟು ನೋಡಿ ಮುಖ್ಯಸ್ಥರು ನನ್ನನ್ನುಮನೆಗೆ ಕಳುಹಿಸಿಬಿಟ್ಟರು ಎಂದು ನೆನಪಿಸಿಕೊಂಡಿದ್ದಾರೆ ಅನುಶ್ರೀ.

46
ಕೈಯಲ್ಲಿ ಕಾಸಿರಲಿಲ್ಲ
Image Credit : Gold Class With Mayuraa Instagram

ಕೈಯಲ್ಲಿ ಕಾಸಿರಲಿಲ್ಲ

ಕೈಯಲ್ಲಿ ಕಾಸಿರಲಿಲ್ಲ. ಪಿಜಿಯಲ್ಲಿ ಇದ್ದೆ. ಅದರ ಬಾಡಿಗೆಗೂ ದುಡ್ಡು ಇರಲಿಲ್ಲ. ಮೂರು ತಿಂಗಳು ದುಡ್ಡೇ ಕೊಡಲಿಲ್ಲ. ಮುಂದಿನ ತಿಂಗಳು ಕೊಡದೇ ಹೋದರೆ ಬಿಟ್ಟುಹೋಗುವಂತೆ ಹೇಳಿದಾಗಲೇ ನನ್ನ ಬುಡಕ್ಕೆ ಬಂದಿದ್ದು ಎಂದು ನೋವಿನ ದಿನಗಳ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.

56
ಹಸಿವು ಎಲ್ಲಾ ಕಲಿಸಿತು
Image Credit : Instgaram

ಹಸಿವು ಎಲ್ಲಾ ಕಲಿಸಿತು

ಹಸಿವು ಏನು ಬೇಕಾದರೂ ಕಲಿಸುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಕನ್ನಡವನ್ನು ಕಲಿಯಲೇಬೇಕು. ನಿರೂಪಣಾ ಕ್ಷೇತ್ರದಲ್ಲಿ ಛಾಪು ಮೂಡಿಸಲೇಬೇಕು ಎಂದು ಪಣ ತೊಟ್ಟೆ. ಅಲ್ಲಿ ಇದ್ದವರ ಬಳಿಯೆಲ್ಲಾ ಕನ್ನಡ ಮಾತನಾಡಿದೆ. ಅಂಗಡಿಯವರು, ತರಕಾರಿಯವರು ಹೀಗೆ ಎಲ್ಲರ ಬಳಿಯೂ ಕನ್ನಡ ಮಾತನಾಡಿ ಕಷ್ಟಪಟ್ಟು ಕಲಿತೆ ಎಂದಿದ್ದಾರೆ.

66
ಸಂಪೂರ್ಣ ಬದಲಾದೆ
Image Credit : Instagram

ಸಂಪೂರ್ಣ ಬದಲಾದೆ

ಕೊನೆಗೆ, ಅದ್ಯಾವ ಪರಿಯಲ್ಲಿ ಬದಲಾಗಿ ಬಿಟ್ಟೆ ಎಂದರೆ, ನನ್ನ ಮಾತು ಕೇಳಿ ಅವರೇ ಆಶ್ವರ್ಯಗೊಂಡರು. ಆಗ ಎರ್ರಾಬಿರ್ರಿ ಮಾತನಾಡುತ್ತಿದ್ದುದು ನಾನೇನಾ ಎನ್ನುವಷ್ಟರಮಟ್ಟಿಗೆ ಬದಲಾಗಿ ಬಿಟ್ಟೆ. ಆ್ಯಂಕರಿಂಗ್​ ನನಗೆ ಒಲಿಯಿತು. ಅದರಲ್ಲಿಯೇ ಮುಂದೆ ಬಂದೆ ಎಂದು ನೆನಪಿಸಿಕೊಂಡಿದ್ದಾರೆ ಆ್ಯಂಕರ್​ ಅನುಶ್ರೀ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆಂಕರ್ ಅನುಶ್ರೀ
ಟಿವಿ ಶೋ
ಮನರಂಜನಾ ಸುದ್ದಿ
ರಿಯಾಲಿಟಿ ಶೋ

Latest Videos
Recommended Stories
Recommended image1
ಎದುರಿಗೆ ಇರೋ ವ್ಯಕ್ತಿ ಜೊತೆ ಎಲ್ಲಾನೂ ಕಳೆದುಕೊಳ್ಳೋಕೆ ರೆಡಿ ಇದ್ರೆ ಮ್ಯಾರೇಜ್ ಒಳ್ಳೇದು: ರಾಜ್ ಬಿ ಶೆಟ್ಟಿ!
Recommended image2
ಧಾರಾವಾಹಿಗಳಲ್ಲಿ ನಟಿಸುವಾಗಲೇ ಭಿನ್ನಾಭಿಪ್ರಾಯ ಹೊರಹಾಕಿದ ಸೆಲೆಬ್ರಿಟಿಗಳಿವರು! ಯಾಕೆ? ಅಂಥದ್ದೇನಾಯ್ತು?
Recommended image3
ಎರಡು ಸೀರಿಯಲ್​ಗಳ ಆಗರ್ಭ ಶ್ರೀಮಂತ ನಾಯಕರು ರಾತ್ರೋರಾತ್ರಿ ಬೀದಿಪಾಲು: ಜಾತಕದಲ್ಲಿ ಇರುವುದೇನು?
Related Stories
Recommended image1
Anchor Anushree ಸ್ಮೈಲ್​ ಬಗ್ಗೆ ಭವಿಷ್ಯ ನುಡಿದಿದ್ರಂತೆ ಆ ಟೀಚರ್​: ಮಗಳನ್ನು ಹದ್ದುಬಸ್ತಲ್ಲಿ ಇಟ್ಕೊಳಿ ಅಂದಿದ್ರಂತೆ
Recommended image2
Anchor Anushree ಗುಡ್​ನ್ಯೂಸ್​ ಯಾವಾಗ? ಫ್ಯಾನ್ಸ್​ ಕಾಡ್ತಿರೋ ಪ್ರಶ್ನೆಗೆ ಉತ್ತರ ಕೊಟ್ಟೇಬಿಟ್ರು ನಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved