ಇದು ದೇಶದ ಇತಿಹಾಸದಲ್ಲಿ ಇತ್ತೀಚೆಗೆ ನಡೆದ ಅತೀ ದೊಡ್ಡ ಜಪ್ತಿ. ಮನೆಯೊಂದರ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಬರೋಬ್ಬರಿ 88ಕೆಜಿ ಚಿನ್ನ, 19.6 ಕೆಜಿ ಆಭರಣ, 1.3 ಕೋಟಿ ರೂ ನಗದು ಸೇರಿದಂತೆ 100 ಕೋಟಿ ಮೌಲ್ಯದ ವಸ್ತುಗಳು ಸೀಝ್ ಮಾಡಿದ್ದಾರೆ. ಇದರ ಮಾಲೀಕ ಯಾರು?
ಪೂರ್ತಿ ಓದಿ- Home
- News
- State
- Karnataka News Live 21st March: ಮನೆಯಿಂದ 88 ಕೆಜಿ ಚಿನ್ನ ಸೇರಿ 100 ಕೋಟಿ ರೂ ಮೌಲ್ಯದ ವಸ್ತು ಜಪ್ತಿ, ಇದು ಅತೀದೊಡ್ಡ ದಾಳಿ
Karnataka News Live 21st March: ಮನೆಯಿಂದ 88 ಕೆಜಿ ಚಿನ್ನ ಸೇರಿ 100 ಕೋಟಿ ರೂ ಮೌಲ್ಯದ ವಸ್ತು ಜಪ್ತಿ, ಇದು ಅತೀದೊಡ್ಡ ದಾಳಿ

ಬೆಂಗಳೂರು (ಮಾ.11): ದೇಶದ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದಿನಿಂದ ಆರಂಭವಾಗಲಿದೆ. ಏಪ್ರಿಲ್ 14ರವರೆಗೆ ಪರೀಕ್ಷೆ ನಡೆಯಲಿದೆ.ಒಟ್ಟು 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷೆಗೆ ಎದೆಗುಂದಬೇಡಿ. ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಶುರು. 9ರ ಒಳಗಾಗಿ ಪರೀಕ್ಷಾ ಕೇಂದ್ರವನ್ನು ತಲುಪಿ. ಅದರೊಂದಿಗೆ ರಾಜ್ಯದಲ್ಲಿ ಹನಿಟ್ರ್ಯಾಪ್ ವಿವಾದ ಜೋರಾಗಿದೆ. ಗುರುವಾರ ವಿಧಾನಸಭೆಯಲ್ಲಿಯೇ ಈ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದಲ್ಲಿ 48 ರಾಜಕಾರಣಿಗಳ ಹನಿಟ್ರ್ಯಾಪ್ ನಡೆದಿದೆ ಎಂದು ಸ್ವತಃ ಸಹಕಾರ ಸಚಿವ ಕೆಎನ್ ರಾಜಣ್ಣ ತಿಳಿಸಿದ್ದು, ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಮಾಡಲಾಗುವುದು ಎಂದು ಗೃಹ ಸಚಿವ ಪರಮೇಶ್ವರ ಹೇಳಿದ್ದಾರೆ.
ಮನೆಯಿಂದ 88 ಕೆಜಿ ಚಿನ್ನ ಸೇರಿ 100 ಕೋಟಿ ರೂ ಮೌಲ್ಯದ ವಸ್ತು ಜಪ್ತಿ, ಇದು ಅತೀದೊಡ್ಡ ದಾಳಿ
ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಿಂದ ಹೊರ ಬಂದ ನಟಿ; ಪ್ರಮುಖ ಪಾತ್ರದ ಬದಲಾವಣೆಗೆ ವೀಕ್ಷಕರು ಶಾಕ್!
Shravani Subramanya Serial: ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಿಂದ ನಟಿ ಹೊರಬಂದಿದ್ದು, ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಪ್ರಮುಖ ಪಾತ್ರದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಕಾರಣಾಂತರಗಳಿಂದ ನಟಿ ಧಾರಾವಾಹಿಯಿಂದ ನಿರ್ಗಮಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪೂರ್ತಿ ಓದಿಗೂಗಲ್ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್, ಪಿ. ಜಿ. ಚೆನ್ನಾಗಿಲ್ಲ ಎಂದ ವಿದ್ಯಾರ್ಥಿಗೆ ಮಾಲೀಕನ ಹಲ್ಲೆ
ಪೇಯಿಂಗ್ ಗೆಸ್ಟ್ (ಪಿ.ಜಿ.) ಬಗ್ಗೆ ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್‌ರೇಟಿಂಗ್ ಕೊಟ್ಟು ಚೆನ್ನಾಗಿಲ್ಲ ಎಂದು ಕಾಮೆಂಟ್ ಹಾಕಿದ್ದಕ್ಕೆ ಪಿ. ಜಿ. ಮಾಲೀಕ ಮತ್ತು ಆತನ ಸಹಚರರು ಸೇರಿ ಎಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಕದ್ರಿಯಲ್ಲಿ ಸಂಭವಿಸಿದೆ.
ಪೂರ್ತಿ ಓದಿ₹30,000 ಹೈಕ್‌ಗಾಗಿ ನೋಯ್ಡಾದಿಂದ ಬೆಂಗಳೂರು ಬಂದು ಕೆಟ್ಟೆ, ಚರ್ಚೆಯಾಗುತ್ತಿದೆ ಉದ್ಯೋಗಿಯ ಕಾರಣ
ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ತಿಂಗಳಿಗೆ 30,000 ರೂಪಾಯಿ ಹೈಕ್ ಕೊಟ್ಟ ಕಾರಣ ಬೆಂಗಳೂರಿಗೆ ಶಿಫ್ಟ್ ಆಗಿದ್ದಾನೆ. ಆದರೆ ಸಂಬಂಳ ಹೆಚ್ಚಾದರೂ ಬೆಂಗಳೂರು ಎಲ್ಲಾ ಖುಷಿಯನ್ನೇ ನುಂಗಿ ಹಾಕಿದೆ ಎಂದು ಉದ್ಯೋಗಿ ನೋವು ತೋಡಿಕೊಂಡಿದ್ದಾನೆ. ಇದಕ್ಕೆ ಕಾರಣವನ್ನೂ ನೀಡಿದ್ದಾನೆ.
ಪೂರ್ತಿ ಓದಿಸ್ಮಾರ್ಟ್ ಮೀಟರ್ ಹಗರಣ: 7,408 ಕೋಟಿ ರೂ. ಗೋಲ್ ಮಾಲ್? ಜನರ ಹಣ ಯಾರ ಜೇಬಿಗೆ?
ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಭಾರೀ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಬೇರೆ ರಾಜ್ಯಗಳಿಗಿಂತ ಹೆಚ್ಚಿನ ದರದಲ್ಲಿ ಸ್ಮಾರ್ಟ್ ಮೀಟರ್ ಖರೀದಿಸಿ 7,408 ಕೋಟಿ ರೂ. ಗೋಲ್ ಮಾಲ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಪೂರ್ತಿ ಓದಿ70, 90 ಗಂಟೆ ಕೆಲಸಕ್ಕೆ ಪರಿಹಾರ ಕೊಟ್ಟ ಬೆಂಗಳೂರಿಗ, ಈತನ ಐಡಿಯಾಗೆ ದಿಗ್ಗಜರೆ ಕಕ್ಕಾಬಿಕ್ಕಿ
ವಾರದಲ್ಲಿ 70 ಗಂಟೆ ಕೆಲಸ ಮಾಡಿ, 90 ಗಂಟೆ ಕೆಲಸ ಮಾಡಿ ಎಂದು ಹಲವು ಕಂಪನಿಗಳು ಸಿಇಒ, ಮುಖ್ಯಸ್ಥರು ಸಲಹೆ ನೀಡಿದ್ದಾರೆ. ಈ ಚರ್ಚೆ ತಣ್ಣಾಗಾದ ಬೆನ್ನಲ್ಲೇ ಬೆಂಗಳೂರಿಗ ಇದೀಗ ವರ್ಕ್ ಲೈಫ್ ಬ್ಯಾಲೆನ್ಸ್‌ಗೆ ಭರ್ಜರಿ ಪರಿಹಾರ ಸೂಚಿಸಿದ್ದಾನೆ. ಈತ ಕೊಟ್ಟ ಐಡಿಯಾಗೆ ಹಲವು ಕಂಪನಿಗಳ ಬಾಸ್ ಕಕ್ಕಾಬಿಕ್ಕಿಯಾಗಿದ್ದಾರೆ.
ಪೂರ್ತಿ ಓದಿಕೊರೋನಾದಲ್ಲಿ ಹೆಣದಿಂದ ಬಿಜೆಪಿ ಹಣ ಮಾಡಿರುವುದು ಬಯಲು: ಸಚಿವ ಪ್ರಿಯಾಂಕ್ ಖರ್ಗೆ
ಬಿಜೆಪಿ ಅವಧಿಯಲ್ಲಿನ ಕೊರೋನಾ ಸಾವುಗಳ ಬಗ್ಗೆ ವಿಧಾನಸಭೆಯಲ್ಲಿ ತೀವ್ರ ಚರ್ಚೆಯಾಗಿದ್ದು, ‘ನ್ಯಾ. ಕುನ್ಹಾ ವರದಿಯಲ್ಲಿ ಬಿಜೆಪಿಯವರು ಹೆಣದಿಂದ ಹಣ ಮಾಡಿರುವುದು ಬಯಲಾಗಿದೆ. ಕಂಬಿ ಎಣಿಸಲು ಸಜ್ಜಾಗಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ಪೂರ್ತಿ ಓದಿಬೇಸಿಗೆಯ ಊಟಕ್ಕೆ ರುಚಿಕರ ಹುಳಿ-ಮಜ್ಜಿಗೆ ಸೂಪರ್! ಇದನ್ನು ಮಾಡೋದು ತುಂಬಾ ಸುಲಭ!
ಬೇಸಿಗೆಗೆ ತಂಪಾದ ಹಸಿ ಮಜ್ಜಿಗೆ ಹುಳಿ ಮಾಡುವ ಸರಳ ವಿಧಾನ ಇಲ್ಲಿದೆ. ಮೊಸರು, ತೆಂಗಿನ ತುರಿ ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿ ರುಚಿಕರವಾದ ಮಜ್ಜಿಗೆ ಹುಳಿಯನ್ನು ತಯಾರಿಸಿ.
ಪೂರ್ತಿ ಓದಿನರೇಂದ್ರ ಮೋದಿಯೇ ದೇಶದ ಹನಿಟ್ರ್ಯಾಪ್ ಪಿತಾಮಹ; ಬಿ.ಕೆ.ಹರಿಪ್ರಸಾದ್ ಆರೋಪ
ವಿಧಾನ ಪರಿಷತ್‌ನಲ್ಲಿ ಬಿ.ಕೆ. ಹರಿಪ್ರಸಾದ್ ಅವರು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಮೋದಿ ಅವರೇ ಹನಿಟ್ರ್ಯಾಪ್‌ನ ಪಿತಾಮಹ ಎಂದು ಆರೋಪಿಸಿದ್ದಾರೆ. ಸಂಜಯ್ ಜೋಶಿ ಅವರ ಹನಿಟ್ರ್ಯಾಪ್ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.
ಪೂರ್ತಿ ಓದಿತಿಮ್ಮಪ್ಪನ ದರ್ಶನಕ್ಕೆ ಶಿಫಾರಸು ಬಗ್ಗೆ ಆಂಧ್ರ ಸಿಎಂ ಜತೆ ಚರ್ಚೆ: ಸಚಿವ ರಾಮಲಿಂಗಾರೆಡ್ಡಿ
ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ದರ್ಶನಕ್ಕಾಗಿ ಶಾಸಕರ ಶಿಫಾರಸು ಪತ್ರಗಳನ್ನು ಸ್ವೀಕರಿಸಿ ಅವಕಾಶ ನೀಡುವ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿಯವರಿಗೆ ಮನವಿ ಮಾಡುವ ಚಿಂತನೆಯಿದ್ದು, ಈ ಬಗ್ಗೆ ಚರ್ಚಿಸಿ ತೀರ್ಮಾನಿಸುವುದಾಗಿ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಪೂರ್ತಿ ಓದಿ58 ಸಾವಿರ ಶಿಕ್ಷಕರ ಬಡ್ತಿಗೆ ಶೀಘ್ರ ತಿದ್ದುಪಡಿ: ಸಚಿವ ಮಧು ಬಂಗಾರಪ್ಪ
2017ರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ (ಸಿಅಂಡ್ ಆರ್) ಶೀಘ್ರ ತಿದ್ದುಪಡಿ ತರಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪೂರ್ತಿ ಓದಿನಂದಿನಿ ಇಡ್ಲಿ-ದೋಸೆ ಹಿಟ್ಟು ಹಾಲಿನ ಬೂತ್ ಜೊತೆಗೆ ಚಿಲ್ಲರೆ ಅಂಗಡಿ, ಇ-ಕಾಮರ್ಸ್ ಡೆಲಿವರಿ ಆಪ್‌ಗಳಲ್ಲೂ ಲಭ್ಯ!
ನಂದಿನಿ ಪ್ರೊಟೀನ್ ಭರಿತ ಇಡ್ಲಿ-ದೋಸೆ ಹಿಟ್ಟು ಏಪ್ರಿಲ್ 1 ರಿಂದ ಚಿಲ್ಲರೆ ಮಳಿಗೆಗಳು, ಆಪ್‌ಗಳು, ಇ-ಕಾಮರ್ಸ್ ತಾಣಗಳು ಮತ್ತು ಮಾಲ್‌ಗಳಲ್ಲಿ ಲಭ್ಯವಿರಲಿದೆ. ಮಾರಾಟವನ್ನು ಹೆಚ್ಚಿಸಲು ಕೆಎಂಎಫ್ ಖಾಸಗಿ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.
ಪೂರ್ತಿ ಓದಿಬೇಸಿಗೆಯಲ್ಲೂ ತುಂಬಿ ತುಳುಕುತ್ತಿರುವ ಬಂಡೀಪುರದ ಕಾಡಿನ ಕೆರೆ: ದಾಹ ತಣಿಸಿಕೊಂಡು ವಿಹರಿಸುತ್ತಿರುವ ಮೂಕ ಪ್ರಾಣಿಗಳು!
ಹತ್ತು ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇದೀಗ ವನ್ಯಪ್ರಾಣಿಗಳ ನೀರಿನ ದಾಹ ನೀಗಿಸಲು ರಾಜ್ಯದಲ್ಲೇ ಮೊದಲ ಬಾರಿಗೆ ಕಾಡಿನೊಳಗೆ ಕೆರೆ ಅಭಿವೃದ್ಧಿಪಡಿಸಿದೆ.
ಪೂರ್ತಿ ಓದಿIPL 2025 ಪಾಯಿಂಟ್ಸ್ ಪಟ್ಟಿಯಲ್ಲಿ ಆರ್‌ಸಿಬಿ ಸ್ಥಾನದ ಭವಿಷ್ಯ ನುಡಿದ ಗಿಲ್‌ಕ್ರಿಸ್ಟ್, ಫ್ಯಾನ್ಸ್ ಶಾಕ್
ಐಪಿಎಲ್ 2025 ಟೂರ್ನಿ ಕುರಿತು ಹಲವರು ಭವಿಷ್ಯ ನುಡಿದಿದ್ದಾರೆ. ಈ ಪೈಕಿ ಆ್ಯಡಮ್ ಗಿಲ್‌ಕ್ರಿಸ್ಟ್ ಈ ಬಾರಿಯ ಐಪಿಎಲ್ ಅಂತ್ಯದ ವೇಳೆ ಆರ್‌ಸಿಬಿ ಯಾವ ಸ್ಥಾನದಲ್ಲಿರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಕಾರಣನ್ನೂ ಕೊಟ್ಟಿದ್ದಾರೆ.
ಪೂರ್ತಿ ಓದಿಪ್ರಧಾನಿ ನರೇಂದ್ರ ಮೋದಿಯವರೇ ನನಗೊಂದು ಆಧಾರ್ ಕಾರ್ಡ್ ಮಾಡಿಸಿಕೊಡಿ; ಪತ್ರ ಬರೆದ 80 ವರ್ಷದ ಅಜ್ಜಿ!
ಉತ್ತರ ಕನ್ನಡ ಜಿಲ್ಲೆಯ 80 ವರ್ಷದ ವೃದ್ಧೆಯೊಬ್ಬರು ಆಧಾರ್ ಕಾರ್ಡ್‌ಗಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ್‌ಗಾಗಿ ಅಲೆದಾಡಿದ್ದರೂ, ಈವರೆಗೆ ಯಾರೂ ಮಾಡಿಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಪೂರ್ತಿ ಓದಿಡೇಟಿಂಗ್ ರಟ್ಟಾಗುತ್ತಿದ್ದಂತೆ ಓಡಿ ಬಂದು ಕಾರ್ತಿಕ್ ಆರ್ಯನ್‌ಗೆ ಪ್ರಪೋಸ್ ಮಾಡಿ, ರಿಂಗ್ ತೊಡಿಸಿದ ಯುವತಿ
ಕನ್ನಡ ನಟಿ ಶ್ರೀಲೀಲಾ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್ ಕುರಿತು ಇತ್ತೀಚೆಗೆ ನಟನ ತಾಯಿ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದ. ಇದರ ಬೆನ್ನಲ್ಲೇ ಯುವತಿಯೊಬ್ಬಳು ಓಡೋಡಿ ಬಂದು ಕಾರ್ತಿಕ್ ಆರ್ಯನ್‌ಗೆ ಎಲ್ಲರ ಮುಂದೆ ಪ್ರಪೋಸ್ ಮಾಡಿದ್ದಾಳೆ. ಇಷ್ಟೇ ಅಲ್ಲ ಎಂಗೇಜ್‌ಮೆಂಟ್ ರಿಂಗ್ ಕೂಡ ತೊಡಿಸಿದ್ದಾಳೆ. ಈ ವಿಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ.
ಪೂರ್ತಿ ಓದಿಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯಬೇಕೆಂಬುದು ವಿದ್ಯಾರ್ಥಿಗಳ ಹಂಬಲ: ಡಿ.ಕೆ.ಶಿವಕುಮಾರ್
ನಾಳೆ ವಿಶ್ವ ಜಲ ದಿನವಾಗಿದ್ದು, ಅದರ ಅಂಗವಾಗಿ ಕಾವೇರಿ ಆರತಿ ಮಾಡುತ್ತಿದ್ದೇವೆ. ತಲಕಾವೇರಿಯಿಂದ ಕಾವೇರಿ ತೀರ್ಥ ಕೊಂಡೊಯ್ದು ಆರತಿ ಮಾಡಲಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪೂರ್ತಿ ಓದಿಸ್ಪೀಕರ್ 50 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡ್ತಾರೆ ಅನ್ಕೊಂಡಿದ್ದೆ, 18 ಮಾಡಿದ್ದಾರೆ: ಶಾಸಕ ಪ್ರದೀಪ್ ಈಶ್ವರ್!
ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಶಾಸಕರನ್ನು ಅಮಾನತು ಮಾಡಿರುವುದು ಸ್ಪೀಕರ್ ಸ್ಥಾನದ ಗೌರವ ಹೆಚ್ಚಿಸಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಕಲಾಪಕ್ಕೆ ಅಡ್ಡಿಪಡಿಸಿದ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದನ್ನು ಸಚಿವ ಕೆ.ಎಚ್ ಮುನಿಯಪ್ಪ ಸ್ವಾಗತಿಸಿದ್ದಾರೆ.
ಪೂರ್ತಿ ಓದಿಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್
ಹನಿಟ್ರ್ಯಾಪ್ ಅಂದರೆ ಸುಮ್ಮನೆ ಸುಮ್ಮನೆ ಯಾರಾದರೂ ನಿಮ್ಮ ಹತ್ತಿರ ಬರುತ್ತಾರಾ.? ನೀವು ಹಲೋ ಎಂದರೆ ಅವರು ಹಲೋ ಹಲೋ ಎನ್ನುತ್ತಾರೆ, ನೀವು ಮಾತನಾಡುತ್ತಿರುವುದಕ್ಕೆ ನಾನು ಮಾತನಾಡಿದ್ದೇನೆ.
ಪೂರ್ತಿ ಓದಿKarimani Serial: ಕರ್ಣನ ಶತ್ರು ʼಬ್ಲ್ಯಾಕ್ ರೋಸ್ʼ ನಳಿನಿಯೋ? ವನಜಾಳೋ? ಇದೇ ದಿನದಂದು ಉತ್ತರ ಸಿಗೋದು ಪಕ್ಕಾ!
ಖಾಸಗಿ ವಾಹಿನಿಯಲ್ಲಿ ʼಕರಿಮಣಿʼ ಧಾರಾವಾಹಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿಯಲ್ಲಿ ಬ್ಲ್ಯಾಕ್‌ರೋಸ್ ಯಾರು?
ಪೂರ್ತಿ ಓದಿ