12:02 AM (IST) Dec 17

Karnataka News Live 16 December 2025ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು, 22 ವರ್ಷದ ವಿದ್ಯಾರ್ಥಿನಿ ಎದೆ ನೋವಿನಿಂದ ಕುಸಿದು ಬಿದ್ದಿದ್ದಾಳೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದರೆ, ಇತ್ತ ಹಾಸ್ಟೆಲ್ ಇತರ ವಿದ್ಯಾರ್ಥನಿಯರು ಆಘಾತಕ್ಕೊಳಗಾಗಿದ್ದಾರೆ.

Read Full Story
10:16 PM (IST) Dec 16

Karnataka News Live 16 December 2025ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಪಿಕ್‌ಅಪ್‌ ಮತ್ತು ಡ್ರಾಪ್-ಆಫ್ ವ್ಯವಸ್ಥೆಯ ಕುರಿತು BIAL ಸ್ಪಷ್ಟನೆ ನೀಡಿದೆ. ಪ್ರಯಾಣಿಕರ ಸುರಕ್ಷತೆಯೇ ಈ ನಿಯಮದ ಮುಖ್ಯ ಉದ್ದೇಶವಾಗಿದ್ದು, ಆರಂಭಿಕ ಸಮಸ್ಯೆಗಳನ್ನು 30 ದಿನಗಳಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದೆ. 

Read Full Story
09:59 PM (IST) Dec 16

Karnataka News Live 16 December 2025ಚೈತ್ರಾ ಕುಂದಾಪುರ 2ನೇ ಬಾರಿ ಬಿಗ್ ಬಾಸ್ ಮನೆಗೆ ಬಂದ್ರೂ ಚೀಪ್ ಮೆಂಟಾಲಿಟಿ ಆಟ ಬಿಡ್ಲಿಲ್ಲ!

ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಟಾಸ್ಕ್‌ನಲ್ಲಿ ಚೈತ್ರ ಕುಂದಾಪುರ, ಸ್ಪರ್ಧಿ ಅಶ್ವಿನಿ ಗೌಡ ಅವರಿಗೆ ಉಗುರಿನಿಂದ ಪರಚಿ ಗಾಯಗೊಳಿಸಿದ್ದಾರೆ. ಎಚ್ಚರಿಕೆ ನೀಡಿದರೂ ಕೇಳದೆ, ಅಸಭ್ಯವಾಗಿ ವರ್ತಿಸಿದ ಚೈತ್ರಾ, ನಂತರ ತನ್ನ ಮೇಲೆಯೇ ಹಲ್ಲೆಯಾಗಿದೆ ಎಂದು ಆರೋಪಿಸಿ ವಿವಾದ ಸೃಷ್ಟಿಸಿದ್ದಾರೆ.
Read Full Story
09:00 PM (IST) Dec 16

Karnataka News Live 16 December 2025ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮ ವಿವಾದ, ತಮ್ಮಣ್ಣ ಶೆಟ್ಟಿ ಎತ್ತಿದ ಹಲವು ಪ್ರಶ್ನೆಗಳಿವು

ಮಂಗಳೂರಿನ ಯೆಯ್ಯಾಡಿ ಹರಕೆ ನೇಮ ವಿವಾದದ ಕುರಿತು ಮಾತನಾಡಿದ ತಮ್ಮಣ್ಣ ಶೆಟ್ಟಿಯವರು, ತಾವು ದೈವಾರಾಧನೆಯ ಲೋಪದೋಷಗಳ ಬಗ್ಗೆ ಮಾತ್ರ ಧ್ವನಿ ಎತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ತುಳು ಭಾಷೆಯ ಬದಲು ಕನ್ನಡದಲ್ಲಿ ನುಡಿ ಹೇಳಿರುವುದು, ನಿಯಮ ಮುರಿದಿರುವುದನ್ನು ಆಕ್ಷೇಪಿಸಿದ್ದಾರೆ.

Read Full Story
08:49 PM (IST) Dec 16

Karnataka News Live 16 December 2025ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?

ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಏರಿಕೆಯಾಗುತ್ತಾ ಸಾಗಿದ್ದ ಚಿನ್ನದ ಬೆಲೆಯಲ್ಲಿ ಆಗಿರುವ ಭಾರಿ ಇಳಿಕೆಯಿಂದ ಜನರು ಖರೀದಿ ಹಾಗೂ ಹೂಡಿಕೆಗೆ ಮುಂದಾಗಿದ್ದಾರೆ. ಮತ್ತೆ ಏರಿಕೆಯಾಗುವ ಮೊದಲು ಖರೀದಿಸಲು ಪ್ಲಾನ್ ಮಾಡುತ್ತಿದ್ದಾರೆ.

Read Full Story
08:32 PM (IST) Dec 16

Karnataka News Live 16 December 2025ನಾಳೆ ಅರ್ಧ ಬೆಂಗಳೂರಿಗೆ ನೀರು ಪೂರೈಕೆ ಸ್ಥಗಿತ - ಕಾವೇರಿ 5ನೇ ಹಂತದ ಪೈಪ್‌ಲೈನ್‌ನಲ್ಲಿ ಸೋರಿಕೆ!

ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಯ ಪೈಪ್‌ಲೈನ್‌ನಲ್ಲಿ ಸೋರಿಕೆ ಉಂಟಾದ ಕಾರಣ, ಬೆಂಗಳೂರು ಜಲಮಂಡಳಿ ತುರ್ತು ದುರಸ್ಥಿ ಕಾರ್ಯ ಕೈಗೆತ್ತಿಕೊಂಡಿದೆ. ಇದರ ಪರಿಣಾಮವಾಗಿ, ಡಿಸೆಂಬರ್ 17 ರಂದು ಬೆಂಗಳೂರಿನ ಹಲವು ನಿರ್ದಿಷ್ಟ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
Read Full Story
08:11 PM (IST) Dec 16

Karnataka News Live 16 December 2025ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ, ಕರ್ನಾಟಕದ ಹನೂರಿನಲ್ಲಿ ಬೃಹತ್ ಚಿನ್ನದ ನಿಕ್ಷೇಪ ಪತ್ತೆ!

ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯು ಚಾಮರಾಜನಗರ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪವನ್ನು ಪತ್ತೆಹಚ್ಚಿದೆ. ಪ್ರಾಥಮಿಕ ಹಂತದ ಸರ್ವೆಯಲ್ಲಿ ಈ ಸುಳಿವು ದೊರೆತಿದ್ದು, ನಿಕ್ಷೇಪದ ಪ್ರಮಾಣ ಮತ್ತು ಗುಣಮಟ್ಟವನ್ನು ಖಚಿತಪಡಿಸಲು ಹೆಚ್ಚಿನ ಸಂಶೋಧನೆ ನಡೆಯಲಿದೆ.

Read Full Story
08:08 PM (IST) Dec 16

Karnataka News Live 16 December 2025ಲೋಕಾಯುಕ್ತ ಬಲೆಗೆ ಬಿದ್ದ ಶಿವಮೊಗ್ಗದ ಭ್ರಷ್ಟ ತಿಮಿಂಗಲ; ಕೈತುಂಬಾ ಚಿನ್ನ, ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ರೂಪ್ಲ ನಾಯ್ಕ್ ಅವರ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ, ಚಿನ್ನಾಭರಣಗಳು ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ.
Read Full Story
07:27 PM (IST) Dec 16

Karnataka News Live 16 December 2025ಕರ್ನಾಟಕಕ್ಕೆ ಮಹಾತ್ಮ ಗಾಂಧಿ ನರೇಗಾ ಯೋಜನೆ 5 ಕೋಟಿ ಮಾನವ ದಿನ ಕಡಿತ; ಪ್ರಿಯಾಂಕ್ ಖರ್ಗೆ ಆರೋಪ

ಕೇಂದ್ರ ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ 'ನರೇಗಾ' ಯೋಜನೆಯಡಿ ಕರ್ನಾಟಕಕ್ಕೆ ನೀಡಲಾಗುತ್ತಿದ್ದ 5 ಕೋಟಿ ಮಾನವ ದಿನಗಳನ್ನು ಕಡಿತಗೊಳಿಸಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

Read Full Story
07:21 PM (IST) Dec 16

Karnataka News Live 16 December 2025ಬೆಂಗಳೂರು-ಕರಾವಳಿ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ!

ಆರು ತಿಂಗಳ ನಂತರ, ಬೆಂಗಳೂರು-ಮಂಗಳೂರು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ಸೇವೆ ಪುನರಾರಂಭಗೊಂಡಿದೆ. ಈ ಬಾರಿ, ಪ್ರಯಾಣಿಕರು ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಸವಿಯಲು ವಿಶೇಷ 'ವಿಸ್ಟಾಡೋಮ್ ಕೋಚ್'ಗಳನ್ನು ಅಳವಡಿಸಲಾಗಿದೆ. ರೈಲು ಯಶವಂತಪುರದಿಂದ ತನ್ನ ಎಂದಿನ ಮಾರ್ಗದಲ್ಲಿ ಸಂಚರಿಸಲಿದೆ.
Read Full Story
07:16 PM (IST) Dec 16

Karnataka News Live 16 December 2025ಧುರಂಧರದಲ್ಲಿ ರಣವೀರ್ ಲುಕ್‌ ಬದಲಿಸಿದ ಟಾಪ್ ಮೇಕಪ್ ಆರ್ಟಿಸ್ಟ್, ಯಾರೀಕೆ ಪ್ರೀತಿಶೀಲ್? ದಿನವೊಂದಕ್ಕೆ ಎಷ್ಟು ವೇತನ??

ಬಾಲಿವುಡ್‌ಗೆ ಹೊಸ ಹುರುಪು ತಂದಿರುವ 'ಧುರಂಧರ್' ಚಿತ್ರದಲ್ಲಿ ರಣವೀರ್ ಸಿಂಗ್, ಹಮ್ಜಾ ಅಲಿ ಮಜಾರಿ ಎಂಬ ಗೂಢಚಾರನಾಗಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಮೇಕಪ್ ಕಲಾವಿದೆ ಪ್ರೀತಿಶೀಲ್ ಸಿಂಗ್ ಅವರು, ರಣವೀರ್‌ರ ಹಿಂದಿನ ಖಿಲ್ಜಿ ಪಾತ್ರಕ್ಕಿಂತ ಸಂಪೂರ್ಣ ಭಿನ್ನವಾದ ನೋಟ ಸೃಷ್ಟಿಸಿದ್ದಾರೆ.

Read Full Story
06:07 PM (IST) Dec 16

Karnataka News Live 16 December 2025ಉಡುಪಿ ನೀರು ಸೇದುವಾಗ ಅಮ್ಮನ ಕೈತಪ್ಪಿ ಬಾವಿಗೆ ಬಿದ್ದ ಮಗು; ತಾಯಿ ಬಾವಿಗಿಳಿಯುವಷ್ಟರಲ್ಲಿ ಮಗು ಸಾವು!

ಉಡುಪಿಯ ಕಿನ್ನಿಮೂಲ್ಕಿ ಎಂಬಲ್ಲಿ, ತಾಯಿ ನೀರು ಸೇದುತ್ತಿದ್ದಾಗ ಒಂದೂವರೆ ವರ್ಷದ ಮಗು ಆಯತಪ್ಪಿ ಬಾವಿಗೆ ಬಿದ್ದಿದೆ. ಮಗುವನ್ನು ರಕ್ಷಿಸಲು ತಾಯಿ ಕೂಡಲೇ ಬಾವಿಗಿಳಿದರೂ, ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು. ಈ ದುರ್ಘಟನೆ ಸ್ಥಳದಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ.
Read Full Story
05:27 PM (IST) Dec 16

Karnataka News Live 16 December 2025'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!

ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌, ಜನಪ್ರಿಯ ಜಾನಪದ ಭಕ್ತಿಗೀತೆ 'ಮಾದೇಶ್ವರ ದಯಬಾರದೆ'ಯನ್ನು ಹಾಡಿ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಕನ್ನಡೇತರರಾದ ಶಿವಶ್ರೀ, ತಮ್ಮ ಪತಿಯಿಂದಲೇ ಈ ಹಾಡನ್ನು ಕಲಿತು ಸ್ಪಷ್ಟವಾಗಿ ಹಾಡಿರುವುದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.
Read Full Story
05:18 PM (IST) Dec 16

Karnataka News Live 16 December 2025ರಾಜ್ಯಾದ್ಯಂತ ಎಲ್‌ಕೆಜಿ ಯಿಂದ ಪಿಯುಸಿವರೆಗೆ ಕಲಿಕಾ ಸಮಯದ ಅವಧಿ ಬದಲಾಯಿಸಿಸುವಂತೆ ಶಿಕ್ಷಣ ಇಲಾಖೆಗೆ ಮಕ್ಕಳ ಆಯೋಗ ಪತ್ರ

ರಾಜ್ಯದಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಲ್‌ಕೆಜಿ ಯಿಂದ ಪಿಯುಸಿ ವರೆಗಿನ ಶಾಲಾ ಸಮಯವನ್ನು ತಾತ್ಕಾಲಿಕವಾಗಿ ಬದಲಾಯಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ. ಚಳಿಗಾಲ ಮುಗಿಯುವವರೆಗೆ ತರಗತಿಗಳನ್ನು ಬೆಳಿಗ್ಗೆ 9.30ಕ್ಕೆ ಆರಂಭಿಸಲು ಆಯೋಗ ಸಲಹೆ ನೀಡಿದೆ.

Read Full Story
05:12 PM (IST) Dec 16

Karnataka News Live 16 December 2025ಸಣ್ಣ ಜೆರಾಕ್ಸ್ ಅಂಗಡಿ ಮಾಲೀಕನಿಂದ ₹1.6 ಲಕ್ಷ ವಸೂಲಿ; ಕಗ್ಗಲೀಪುರ PSI ಹರೀಶ್ ಸಸ್ಪೆಂಡ್

ನಕಲಿ ಆಧಾರ್ ಕಾರ್ಡ್ ತಯಾರಿಕೆಯ ಸುಳ್ಳು ಆರೋಪ ಮಾಡಿ ಕನಕಪುರದ ಜೆರಾಕ್ಸ್ ಅಂಗಡಿ ಮಾಲೀಕ ರಾಜೇಶ್ ಅವರಿಂದ ₹1.6 ಲಕ್ಷ ವಸೂಲಿ ಮಾಡಿದ್ದ ಕಗ್ಗಲೀಪುರ ಪಿಎಸ್‌ಐ ಹರೀಶ್ ಅವರನ್ನು ರಾಮನಗರ ಎಸ್.ಪಿ. ಶ್ರೀನಿವಾಸ್ ಗೌಡ ಅಮಾನತುಗೊಳಿಸಿದ್ದಾರೆ. ಗೃಹ ಸಚಿವರಿಗೆ ದೂರು ನೀಡಿದ ನಂತರ ಕ್ರಮ ಕೈಗೊಳ್ಳಲಾಗಿದೆ.

Read Full Story
04:06 PM (IST) Dec 16

Karnataka News Live 16 December 2025ಮುಡಾ ಹಗರಣದಲ್ಲಿ ಕೋರ್ಟ್ ಹೊಸ ಆದೇಶ, ಜೈಲಲ್ಲಿದ್ದ ಮಾಜಿ ಆಯುಕ್ತ ದಿನೇಶ್ ಕುಮಾರ್ ಮತ್ತೆ ಪೊಲೀಸ್‌ ಕಸ್ಟಡಿಗೆ!

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ, ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 24 ಗಂಟೆಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿದೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಕೋರಿದ್ದು, ಡಿ.18 ರಂದು ಅಂತಿಮ ತನಿಖಾ ವರದಿ ಸಲ್ಲಿಕೆಯಾಗಲಿದೆ. 

Read Full Story
03:55 PM (IST) Dec 16

Karnataka News Live 16 December 2025ಲೋಕಾಯುಕ್ತ ದಾಳಿ - ₹50 ಸಾವಿರ ಹಣ ಟಾಯ್ಲಟ್ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ ಕೃಷಿ ಅಧಿಕಾರಿ!

ಬೆಳಗಾವಿ ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜಶೇಖರ ಬಿಜಾಪುರ ಅವರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ದಾಳಿ ವೇಳೆ ಸಾಕ್ಷ್ಯ ನಾಶಪಡಿಸಲು ಹಣವನ್ನು ಟಾಯ್ಲೆಟ್ ಕಮೋಡ್‌ಗೆ ಹಾಕಿ ಫ್ಲಶ್ ಮಾಡಲು ಯತ್ನಿಸಿದ್ದು, ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಮತ್ತು ಚಿನ್ನಾಭರಣಗಳು ಪತ್ತೆಯಾಗಿವೆ.
Read Full Story
03:38 PM (IST) Dec 16

Karnataka News Live 16 December 2025ಕೊಪ್ಪಳದ ಸರ್ಕಾರಿ ಶಾಲೆಗಳ ಬಿಸಿಯೂಟದಲ್ಲಿ ಹುಳು ಪತ್ತೆ; ಸಚಿವರೇನ್ ನಿದ್ದೆ ಮಾಡ್ತಿದ್ದಾರಾ?

ಕೊಪ್ಪಳ ತಾಲೂಕಿನ ಬಿಸರಹಳ್ಳಿ ಮತ್ತು ಹೊಸಲಿಂಗಾಪುರ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳುಗಳು ಮತ್ತು ನುಶಿಗಳು ಪತ್ತೆಯಾಗಿವೆ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Read Full Story
02:53 PM (IST) Dec 16

Karnataka News Live 16 December 2025ಮೆಜೆಸ್ಟಿಲ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಬಾಲಕಿ; ದೆಹಲಿ, ಬೆಂಗಳೂರು ಸೇರಿ 2 ವರ್ಷ ವೇಶ್ಯಾವಾಟಿಕೆ ನರಕ ದರ್ಶನ!

ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಅಪ್ರಾಪ್ತ ಬಾಲಕಿಯ ರಕ್ಷಣೆಯಿಂದ, ದೆಹಲಿ ಮತ್ತು ಬೆಂಗಳೂರಿನಲ್ಲಿ ಸಕ್ರಿಯವಾಗಿದ್ದ ಮಾನವ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಜಾಲವೊಂದು ಬಯಲಾಗಿದೆ. ದೆಹಲಿ ಹಾಗೂ ಬೆಂಗಳೂರಿನ ಸ್ಪಾದಲ್ಲಿ ಬಾಲಕಿಯನ್ನು ಕೂಡಿಹಾಕಿ ದಂಧೆ ನಡೆಸಿದ್ದಾರೆ.

Read Full Story
02:44 PM (IST) Dec 16

Karnataka News Live 16 December 2025BBK 12 - ಅಯ್ಯೋ ಭಗವಂತ ಇದೇನಿದು? ಮನದಲ್ಲಿದ್ದ ಮಾತು ಬಿಚ್ಚಿಟ್ಟ ಚೈತ್ರಾ; ರಜತ್ ಶಾಕ್!

ಬಿಗ್‌ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ನಡುವೆ ತೀವ್ರ ಜಗಳ ನಡೆದಿದೆ. ಆಟದ ವೇಳೆ ರಜತ್ 'ಸುಳ್ಳಿ' ಎಂದಿದ್ದಕ್ಕೆ ಕೆರಳಿದ ಚೈತ್ರಾ, ಅವರ ಕುಟುಂಬದ ಬಗ್ಗೆ ಮಾತನಾಡಿದ್ದು, ಇದು ದೊಡ್ಡ ಮಾತಿನ ಚಕಮಕಿಗೆ ಕಾರಣವಾಯಿತು.
Read Full Story