05:44 PM (IST) May 15

ರಾಜಕಾರಣದಲ್ಲಿ ವ್ಯಕ್ತಿಗಳ ವೈಭವೀಕರಣ ಸಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಭಕ್ತಿ ವ್ಯಕ್ತಿಯ ಮೇಲೆ ಬಂದರೆ ಆತ ಸರ್ವಾಧಿಕಾರಿಯಾಗುತ್ತಾನೆ. ಅಂತಹ ಸರ್ವಾಧಿಕಾರ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ ಎಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂಸತ್ತಿನ ಕೊನೆಯ ಭಾಷಣದಲ್ಲಿ ಹೇಳಿದ್ದಾರೆ.

ಪೂರ್ತಿ ಓದಿ
05:11 PM (IST) May 15

ಕಾರ್ಪೋರೆಟ್ ವಂಚನೆ ಮತ್ತು ಕ್ರಿಮಿನಲ್ ಪಿತೂರಿ: ಎಫ್ಐಆರ್‌ನಲ್ಲಿ ಮಾಜಿ ಇಡಿ ಅಧಿಕಾರಿಯ ಹೆಸರು!

ಮಹತ್ವದ ಬೆಳವಣಿಗೆಯೊಂದರಲ್ಲಿ, ಪೀಣ್ಯ ಪೊಲೀಸರು ಜಾರಿ ನಿರ್ದೇಶನಾಲಯದ (ಎನ್ಫೋರ್ಸ್‌ಮೆಂಟ್ ಡೈರೆಕ್ಟರೇಟ್ - ಇಡಿ) ಮಾಜಿ ಸಹಾಯಕ ನಿರ್ದೇಶಕರಾದ ಸೋಮಶೇಖರ್ ಎನ್ ಅವರ ವಿರುದ್ಧ ಎಫ್ಐಆರ್ (ಸಂಖ್ಯೆ: 0263/2025, ದಿನಾಂಕ: 14-05-2025) ದಾಖಲಿಸಿದ್ದಾರೆ. 

ಪೂರ್ತಿ ಓದಿ
04:23 PM (IST) May 15

ರಾಜ್ಯ ಖುಷಿಪಡೋ ಸುದ್ದಿ ಕೊಟ್ಟ ನಿರೂಪಕಿ ದಿವ್ಯಾ ವಸಂತಳ ಮತ್ತೊಂದು ಸುದ್ದಿ!

ಜ್ಯೋತಿಷಿ ಆನಂದ್ ಗುರೂಜಿಗೆ ದಿವ್ಯಾ ವಸಂತ ಗ್ಯಾಂಗ್ ಬ್ಲ್ಯಾಕ್ಮೇಲ್ ಮಾಡಿದೆ ಎನ್ನುವ ಆರೋಪದ ಮೇರೆಗೆ ಚಿಕ್ಕಜಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಶ್ಲೀಲ ವಿಡಿಯೋ ಬಿಡುಗಡೆ ಮಾಡುವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಬಂಧನ ಭೀತಿಯಿಂದ ದಿವ್ಯಾ ವಸಂತ ಮತ್ತು ಕೃಷ್ಣಮೂರ್ತಿ ನಾಪತ್ತೆಯಾಗಿದ್ದಾರೆ.

ಪೂರ್ತಿ ಓದಿ
03:28 PM (IST) May 15

ಎಸ್‌ಡಿಎ ಕೆಲಸ ಮಾಡಿದ್ರೂ ರಾಜನಂತಿರುವ ಅನಂತ; 11 ಬೆರಳಿಗೆ ಚಿನ್ನದ ಉಂಗುರ ಪತ್ತೆ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೋಧನ ಹೊಸಹಳ್ಳಿ ಗ್ರಾಮದ ಎಸ್.ಡಿಎ ಅಧಿಕಾರಿ ಅನಂತ್ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕೃತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಶಂಕೆಯ ಮೇಲೆ ಈ ದಾಳಿ ನಡೆದಿದ್ದು, ಭಾರೀ ಪ್ರಮಾಣದ ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿದೆ.

ಪೂರ್ತಿ ಓದಿ
02:09 PM (IST) May 15

ವಿಜಯಪುರ ಅಧಿಕಾರಿ ಮನೆಯಲ್ಲಿ ಕೋಟಿ ಕೋಟಿ ಆಸ್ತಿ ಪತ್ತೆ! ಕೈ ಇಟ್ಟಲ್ಲೆಲ್ಲಾ ಕಂತೆ ಕಂತೆ ನೋಟು!

ವಿಜಯಪುರ ಜಿಲ್ಲೆಯ ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಕೋಟಿಗಟ್ಟಲೆ ಅಕ್ರಮ ಆಸ್ತಿ ಪತ್ತೆಯಾಗಿದೆ. ಚಿನ್ನ, ಬೆಳ್ಳಿ, ನಗದು ಹಣ ಸೇರಿದಂತೆ ಐಷಾರಾಮಿ ವಸ್ತುಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಕೋಟಿ ಮೌಲ್ಯದ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿರುವ ಮಾಹಿತಿಯೂ ಲಭ್ಯವಾಗಿದೆ.

ಪೂರ್ತಿ ಓದಿ
12:56 PM (IST) May 15

ಕೊಪ್ಪಳ: ಕೊಲೆ ಪ್ರಕರಣ ಭೇದಿಸಿದ ಮೊಬೈಲ್ ನೆಟ್ವರ್ಕ್!

ಗಂಗಾವತಿ ತಾಲೂಕಿನ ಹಣವಾಳದಲ್ಲಿ ನಡೆದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಪೂರ್ತಿ ಓದಿ
12:44 PM (IST) May 15

ಬಹುಪತ್ನಿತ್ವದ ಕುರಿತು ಅಲಹಾಬಾದ್ ಹೈಕೋರ್ಟ್‌ನ ಮಹತ್ವದ ತೀರ್ಪು

ಮುಸ್ಲಿಂ ಪುರುಷನು ತನ್ನ ಎಲ್ಲಾ ಪತ್ನಿಯರನ್ನು ಸಮಾನವಾಗಿ ಪರಿಗಣಿಸಿದರೆ ಬಹುಪತ್ನಿತ್ವಕ್ಕೆ ಅರ್ಹ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಈ ತೀರ್ಪು ಸಂವಿಧಾನಾತ್ಮಕ ಮಿತಿಗಳಿಗೆ ಒಳಪಟ್ಟಿರುತ್ತದೆ ಮತ್ತು ಧಾರ್ಮಿಕ ಹಕ್ಕುಗಳು ಸಾರ್ವಜನಿಕ ಶಿಸ್ತು, ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಪೂರ್ತಿ ಓದಿ
11:16 AM (IST) May 15

ಮದುವೆಗೆ ತಂದೆಯನ್ನೇ ಕರೆದಿಲ್ವಾ ಚೈತ್ರಾ ಕುಂದಾಪುರ? ' ಅದ್ದೂರಿ ವಿವಾಹ ಬೆನ್ನಲ್ಲೇ ತಂದೆ ಬಾಲಕೃಷ್ಣ ನಾಯ್ಕ್ ಗಂಭೀರ ಆರೋಪ!

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಅವರ ಮದುವೆಯನ್ನು ತಂದೆ ಬಾಲಕೃಷ್ಣ ನಾಯ್ಕ್ ವಿರೋಧಿಸಿದ್ದಾರೆ. ಚೈತ್ರಾ ಮತ್ತು ಆಕೆಯ ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಪೂರ್ತಿ ಓದಿ
09:26 AM (IST) May 15

ನೂರಾರು ಕೋಟಿ ಆಸ್ತಿ ಹೊಂದಿರುವ ಮಠದ ಪಟ್ಟಕ್ಕಾಗಿ ಶ್ರೀಗಳ ಮಧ್ಯೆ ಫೈಟ್; ನಿಡಸೋಸಿ ಮಠದಲ್ಲಿ ಮಿಂಚಿನ ಬೆಳವಣಿಗೆ!

ಬೆಳಗಾವಿ ಜಿಲ್ಲೆಯ ನಿಡಸೋಸಿ ದುರದುಂಡೇಶ್ವರ ಸಿದ್ದಸಂಸ್ಥಾನ ಮಠದ ಪಟ್ಟಕ್ಕಾಗಿ ಹಿರಿಯ ಮತ್ತು ಕಿರಿಯ ಸ್ವಾಮೀಜಿಗಳ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದೆ. ಲಿಂಗಾಯತ ಸಮಾಜದ ನಾಯಕರ ಮಧ್ಯಸ್ಥಿಕೆಯಿಂದ ಉಪವಾಸ ಸತ್ಯಾಗ್ರಹ ನಿಲ್ಲಿಸಲಾಗಿದೆ. ಮೇ 21, 2025ರಂದು ಮತ್ತೊಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಪೂರ್ತಿ ಓದಿ
08:49 AM (IST) May 15

ರಾಜ್ಯದಲ್ಲಿ ಏಕಕಾಲಕ್ಕೆ 40 ಕಡೆ ಲೋಕಾಯುಕ್ತ ದಾಳಿ; 7 ಭ್ರಷ್ಟ ಅಧಿಕಾರಿಗಳಿಗೆ ಶಾಕ್

ರಾಜ್ಯದಲ್ಲಿ ಏಕಕಾಲಕ್ಕೆ 40 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, 7 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಬೆಂಗಳೂರು, ಮಂಗಳೂರು, ಯಾದಗಿರಿ, ವಿಜಯಪುರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆದಿದ್ದು, ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಪೂರ್ತಿ ಓದಿ
08:28 AM (IST) May 15

ಬೆಂಗಳೂರು ಜನರಿಗೆ ಶಾಕಿಂಗ್ ನ್ಯೂಸ್; ಇಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆ ಸ್ಥಗಿತ!

ಬೆಂಗಳೂರಿನ ವಿವಿಧೆಡೆ ಇಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಕಡಿತವಿರುತ್ತದೆ. ಬಾಣಸವಾಡಿ - ಹೆಚ್‌ಬಿಆರ್ ಮತ್ತು ಬಾಣಸವಾಡಿ - ಐಟಿಐ ಮಾರ್ಗಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳಿಂದಾಗಿ ವಿದ್ಯುತ್ ಸ್ಥಗಿತ ಉಂಟಾಗಲಿದೆ.

ಪೂರ್ತಿ ಓದಿ

08:25 AM (IST) May 15

Bengaluru rains: ಧರೆಗುರುಳಿದ ಮರ ತೆರವು ಮಾಡದ ಬಿಬಿಎಂಪಿ

ಬೆಂಗಳೂರಿನಲ್ಲಿ ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಮರಗಳು ಧರೆಗುರುಳಿ, ಹಲವೆಡೆ ಜಲಾವೃತ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾಯಿ ಲೇಔಟ್‌ನಲ್ಲಿ ನೀರಿನಲ್ಲಿ ಚಲಿಸುತ್ತಿದ್ದ ಕಾರು ಬಾಲಕಿಗೆ ಡಿಕ್ಕಿ ಹೊಡೆದಿದೆ. ರಸ್ತೆ ಗುಂಡಿ ಸಮಸ್ಯೆಯೂ ಹೆಚ್ಚಾಗಿದೆ.

ಪೂರ್ತಿ ಓದಿ
07:30 AM (IST) May 15

ಬಿಬಿಎಂಪಿ ಯುಗ ಅಂತ್ಯ; ಇಂದಿನಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ!

ಬೆಂಗಳೂರಿನ ಆಡಳಿತ ವ್ಯವಸ್ಥೆ ಸುಧಾರಣೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಗುರುವಾರದಿಂದ ಕಾರ್ಯಾರಂಭ ಮಾಡಲಿದೆ. ಈ ಕುರಿತು ರಾಜ್ಯ ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದ್ದು, ಮುಖ್ಯ ಆಯುಕ್ತರ ನೇಮಕ ಮತ್ತು ಉನ್ನತ ಮಟ್ಟದ ಸಮಿತಿ ರಚನೆಯಾಗಲಿದೆ.

ಪೂರ್ತಿ ಓದಿ