ಎಸ್‌ಡಿಎ ಕೆಲಸ ಮಾಡಿದ್ರೂ ರಾಜನಂತಿರುವ ಅನಂತ; 11 ಬೆರಳಿಗೆ ಚಿನ್ನದ ಉಂಗುರ ಪತ್ತೆ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೋಧನ ಹೊಸಹಳ್ಳಿ ಗ್ರಾಮದ ಎಸ್.ಡಿಎ ಅಧಿಕಾರಿ ಅನಂತ್ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕೃತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಶಂಕೆಯ ಮೇಲೆ ಈ ದಾಳಿ ನಡೆದಿದ್ದು, ಭಾರೀ ಪ್ರಮಾಣದ ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿದೆ.

ಬೆಂಗಳೂರು ಗ್ರಾಮಾಂತರ, ಹೊಸಕೋಟೆ (ಮೇ 15): ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧದ ನಿಗಾವಹಿಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೋಧನ ಹೊಸಹಳ್ಳಿ ಗ್ರಾಮದ ಎಸ್.ಡಿಎ ಅಧಿಕಾರಿ ಅನಂತ್ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅಧಿಕೃತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಶಂಕೆಯ ಮೇಲೆ ಈ ದಾಳಿ ನಡೆದಿದೆ.
ಲೋಕಾಯುಕ್ತ 8 ಜನರ ತಂಡದಿಂದ ಪರಿಶೀಲನೆ
ಲೋಕಾಯುಕ್ತ ಎಸ್.ಪಿ. ನೇತೃತ್ವದಲ್ಲಿ 8 ಜನರ ಲೋಕಾಯುಕ್ತ ತನಿಖಾ ತಂಡ ಇಂದು ಬೆಳಿಗ್ಗೆ ಅನಂತ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಇನ್ನೂ ದಾಖಲೆ ಪರಿಶೀಲನೆ ಕಾರ್ಯ ಮುಂದುವರೆದಿದೆ. ಅಧಿಕಾರಿಗಳ ಪ್ರಾಥಮಿಕ ತಪಾಸಣೆಯಲ್ಲಿ ಭಾರೀ ಪ್ರಮಾಣದ ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿದೆ.
ಭೂ ಮಂಜೂರಾತಿ ಇಲಾಖೆಯಲ್ಲಿ ಎಸ್‌ಡಿಎ:
ಅನಂತ್ ಅವರು ಹೊಸಕೋಟೆ ತಾಲೂಕು ಕಚೇರಿಯ ಭೂ ಮಂಜೂರಾತಿ ವಿಭಾಗದಲ್ಲಿ ಎಸ್.ಡಿಎ (Second Division Assistant) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಾರ್ವಜನಿಕರಿಗೆ ಭೂ ಸಂಬಂಧಿತ ಸೇವೆ ಒದಗಿಸುವ ಈ ವಿಭಾಗದಲ್ಲಿ, ಅನೇಕ ಅರ್ಜಿದಾರರ ಮೇಲೆ ಪ್ರಭಾವ ಬೀರಬಹುದಾದ ಅಧಿಕಾರ ಹೊಂದಿದ್ದರು ಎನ್ನಲಾಗಿದೆ.
ಅನಂತ್ ಅವರ ಮೇಲೆ ಸಾರ್ವಜನಿಕರಿಂದ ಬಂದಿದ್ದ ದೂರಿನ ಆಧಾರದ ಮೇಲೆ, ಅವರು ತಮ್ಮ ಅಧಿಕೃತ ಆದಾಯಕ್ಕಿಂತ ಬಹುಪಟ್ಟು ಅಧಿಕ ಆಸ್ತಿಯನ್ನು ಹೊಂದಿದ್ದಾರೆ ಎಂಬ ಶಂಕೆಯಿಂದ ಲೋಕಾಯುಕ್ತ ದಾಳಿ ಕೈಗೊಳ್ಳಲಾಗಿದೆ. ದಾಳಿ ವೇಳೆ ಯಾವುದೇ ದಾಖಲೆ ಅಥವಾ ಆಸ್ತಿ ಸರಿಯಾದ ಮೂಲವಿಲ್ಲದೆ ಸಂಗ್ರಹಿತವಾಗಿದ್ದರೆ, ನಂತರದ ಹಂತಗಳಲ್ಲಿ ನ್ಯಾಯಾನುಗತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಲೋಕಾಯುಕ್ತ ಅಧಿಕಾರಿಗಳು ಮನೆಯಲ್ಲಿನ ದಾಖಲೆಗಳ ಪರಿಶೀಲನೆ ಮುಂದುವರೆಸಿದ್ದು, ಬ್ಯಾಂಕ್ ಖಾತೆಗಳ ವಿವರ, ಆಸ್ತಿ ದಾಖಲೆಗಳು, ಭೂಪತ್ರ, ಲಾಕರ್ ಮಾಹಿತಿ ಸೇರಿದಂತೆ ಎಲ್ಲವೂ ನಿಖರವಾಗಿ ಪರಿಶೀಲನೆಗೆ ಒಳಪಡಲಿದೆ. ಒಟ್ಟಾರೆಯಾಗಿ, ಹೊಸಕೋಟೆ ತಾಲ್ಲೂಕು ಕಚೇರಿ ಎಸ್ ಡಿ ಎ ಅನಂತ್ ಕುಮಾರ್ ನಿವಾಸದಲ್ಲಿ ಲೋಕಾ ದಾಳಿಯ ವೇಳೆ 21 ಲಕ್ಷ ಮೌಲ್ಯದ 300 ಗ್ರಾಂ ಚಿನ್ನ, ಮೂರು ಲಕ್ಷ ಮೌಲ್ಯದ 3.5 ಕೆಜಿ ಬೆಳ್ಳಿ, ₹3 ಲಕ್ಷ ನಗದು ಹಾಗೂ 3 ವಾಹನಗಳು ಪತ್ತೆಯಾಗಿವೆ.