ಗಂಗಾವತಿ ತಾಲೂಕಿನ ಹಣವಾಳ ಗ್ರಾಮದಲ್ಲಿ ನಡೆದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮೊಬೈಲ್ ನೆಟ್ವರ್ಕ್ ಮತ್ತು ಕಾಲ್ ರೆಕಾರ್ಡ್‌ಗಳ ಸಹಾಯದಿಂದ ಆರೋಪಿಗಳನ್ನು ಬಂಧಿಸಲಾಗಿದೆ.

ಕೊಪ್ಪಳ (ಮೇ.15): ಗಂಗಾವತಿ ತಾಲೂಕಿನ ಹಣವಾಳ ಗ್ರಾಮದಲ್ಲಿ ನಡೆದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮೊಬೈಲ್ ನೆಟ್ವರ್ಕ್ ಮತ್ತು ಕಾಲ್ ರೆಕಾರ್ಡ್‌ಗಳ ಸಹಾಯದಿಂದ ಆರೋಪಿಗಳನ್ನು ಬಂಧಿಸಲಾಗಿದೆ.

Add Asianetnews Kannada as a Preferred SourcegooglePreferred

ಸುರೇಶ್ (27) ಎಂಬ ಯುವಕನ ಕೊಲೆಗೆ ಕಾರಣವಾಗಿದ್ದು, ಗ್ರಾಮದ ಮಹಿಳೆಯೊಂದಿಗಿನ ಅನೈತಿಕ ಸಂಬಂಧ. ಮಧ್ಯರಾತ್ರಿ ಮಹಿಳೆಯ ಜೊತೆ ಇರುವುದನ್ನು ಆಕೆಯ ಪತಿ ಮತ್ತು ಮೈದುನ ಕಂಡಿದ್ದರು. ಇದರಿಂದ ಕೋಪಗೊಂಡ ಪತಿ ಶಿವಕುಮಾರ್, ಮೈದುನ ಮಂಜುನಾಥ್, ಜೊತೆಗೆ ಮಹೇಶ್ವರಿ ಮತ್ತು ಅಮರೇಶ್ ಎಂಬವರು ಸೇರಿ ಸುರೇಶ್‌ನನ್ನು ಕೊಲೆಗೈದಿದ್ದರು. ಕೊಲೆಯ ನಂತರ ಆರೋಪಿಗಳು ಯಾವುದೇ ಸುಳಿವು ಸಿಗದಂತೆ ಯುವಕನ ಕೈ-ಕಾಲು ಕಟ್ಟಿ, ಬಳ್ಳಾರಿ ಜಿಲ್ಲೆಯ ಕೊರೆಕೊಪ್ಪ ಸಮೀಪದ 100 ಅಡಿ ಆಳದ ಕಾಲುವೆಯ ಕಂದಕಕ್ಕೆ ಶವವನ್ನು ಎಸೆದು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರು.

ಇದನ್ನೂ ಓದಿ: Karnataka News Live: ಮದುವೆಗೆ ತಂದೆಯನ್ನೇ ಕರೆದಿಲ್ವಾ ಚೈತ್ರಾ ಕುಂದಾಪುರ? ' ಅದ್ದೂರಿ ವಿವಾಹ ಬೆನ್ನಲ್ಲೇ ತಂದೆ ಬಾಲ...

Read more at: https://kannada.asianetnews.com/state/karnataka-news-live-15th-may-2025-india-safest-city-list-published-bengaluru-no-1-sat-swa5jg

ಆದರೆ ಕೊಲೆಯಾದ ಸುರೇಶ್‌ನ ಮೊಬೈಲ್ ನೆಟ್ವರ್ಕ್ ಮತ್ತು ಕಾಲ್ ರೆಕಾರ್ಡ್‌ಗಳನ್ನು ಪರಿಶೀಲಿಸಿದ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು, ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಕೊಲೆ ಆರೋಪಿಗಳಾದ ಶಿವಕುಮಾರ್, ಮಂಜುನಾಥ್, ಮಹೇಶ್ವರಿ ಮತ್ತು ಅಮರೇಶ್‌ರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.